ತಲೆಯಲ್ಲಿ ಎರಡು ಸುಳಿಯಿದ್ದರೆ ಎರಡು ಮದುವೆಯಾಗುತ್ತೆ ಅನ್ನೋದು ನಿಜಾನ?

By Vinutha Perla  |  First Published Jan 1, 2024, 11:50 AM IST

ತಲೆಯಲ್ಲಿ ಎರಡು ಸುಳಿ ಕಂಡರೆ ಸಾಕು ಹಿರಿಯರು ಅವರಿಗೆ ಎರಡು ಮದುವೆ ಆಗುತ್ತೆ ಅಂತ ಹೇಳುತ್ತಾರೆ. ಕೆಲವರು ಇದನ್ನು ನಿಜವೆಂದು ನಂಬಿದರೆ, ಇನ್ನು ಕೆಲವರು ಅದನ್ನು ಸುಳ್ಳು ಎಂದು ನಿರಾಕರಿಸುತ್ತಾರೆ. ಇದರ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ನೋಡೋಣ. 


ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ತಲೆಯಲ್ಲಿ ಒಂದು ಸುಳಿಯಿರುತ್ತದೆ. ಇದಲ್ಲದೆ ತಲೆಯಲ್ಲಿ ಎರಡು ಸುಳಿಯಿದ್ದರೆ ಅದನ್ನು ಅಶುಭ ಎಂದೇ ಪರಿಗಣಿಸಲಾಗುತ್ತದೆ. ಕೆಲವೊಬ್ಬರು ಇದು ಕೆಟ್ಟ ಸೂಚನೆ ಎಂದು ಹೇಳುತ್ತಾರೆ. ಹೆಚ್ಚಿನವರು ನೆತ್ತಿಯ ಮೇಲೆ ಎರಡು ಸುಳಿ ಹೊಂದಿರುತ್ತಾರೆ. ಕೆಲವರಿಗೆ ಒಂದೇ ಒಂದು ಸುಳಿ ಇರುತ್ತದೆ. ಆದರೆ ತಲೆಯಲ್ಲಿ ಎರಡು ಸುಳಿಯಿದ್ದರೆ ಅವರು ಎರಡು ಮದುವೆಯಾಗುತ್ತಾರೆ ಎಂದು ಹಲವರು ಲೇವಡಿ ಮಾಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಈ ಮಾತು ಹೆಚ್ಚಾಗಿ ಕೇಳಿ ಬರುತ್ತದೆ. ಕೆಲವರು ಇದನ್ನು ನಿಜವೆಂದು ನಂಬಿದರೆ, ಇನ್ನು ಕೆಲವರು ಅದನ್ನು ಸುಳ್ಳು ಎಂದು ನಿರಾಕರಿಸುತ್ತಾರೆ. ಇದರ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ನೋಡೋಣ. 

ಸಾಮಾನ್ಯವಾಗಿ ಗಂಡು ಮತ್ತು ಹೆಣ್ಣು ಇಬ್ಬರಿಗೂ ಎರಡು ಸುಳಿ ಇರುತ್ತದೆ. ಆದರೆ ಹೆಚ್ಚಾಗಿ ಪುರುಷರಿಗೆ ಎರಡು ಮದುವೆಗಳ ಬಗ್ಗೆ ಲೇವಡಿ ಮಾಡುತ್ತಾರೆ. ಹುಡುಗಿಯರು ಉದ್ದ ಕೂದಲನ್ನು ಹೊಂದಿರುವುದರಿಂದ ಸುರುಳಿಗಳು ಗೋಚರಿಸುವುದಿಲ್ಲ. ಈ ಸಂಗತಿಯ ಹೊರತಾಗಿ, ತಲೆಯಲ್ಲಿ ಎರಡು ಸುಳಿಗಳ ರಚನೆಗೆ ಕಾರಣವೇನು? 

Tap to resize

Latest Videos

Kajal For Babies: ಮಗುವಿಗೆ ಕಾಡಿಗೆ ಹಚ್ಚಿದ್ರೆ ದೃಷ್ಟಿಯಾಗಲ್ಲ ಅನ್ನೋದು ನಿಜಾನ ?

ತಲೆಯಲ್ಲಿ ಎರಡು ಸುಳಿಗೆ ಜೆನೆಟಿಕ್ಸ್ ಕೂಡಾ ಕಾರಣ
ಅಧ್ಯಯನದ ಪ್ರಕಾರ, ಪ್ರಪಂಚದಾದ್ಯಂತ ಕೇವಲ 5% ಜನರು ಮಾತ್ರ ತಲೆಯಲ್ಲಿ ಎರಡು ಸುಳಿಯನ್ನು ಹೊಂದಿರುತ್ತಾರೆ. ವಾಸ್ತವವಾಗಿ, ಎರಡು ಸುಳಿಗಳ ರೂಪುಗೊಳ್ಳುವಿಕೆಯ ರಚನೆಯಲ್ಲಿ ಜೆನೆಟಿಕ್ಸ್ ಕೂಡಾ ಒಂದು ಅಂಶವಾಗಿದೆ ಎಂದು ವಿಜ್ಞಾನವು (Science) ಹೇಳುತ್ತದೆ. ಅದೇನೆಂದರೆ, ಕುಟುಂಬದಲ್ಲಿ ಹಿಂದಿನ ತಲೆಮಾರಿನಲ್ಲಿ ಯಾರಿಗಾದರೂ ತಲೆಯಲ್ಲಿ ಎರಡು ಸುಳಿ (Double crown)ಯಿದ್ದರೆ ಹೀಗಾಗುವ ಸಾಧ್ಯತೆ ಇದೆ ಎನ್ನುತ್ತದೆ ವಿಜ್ಞಾನ. 

ಗ್ರಾಮೀಣ ಪ್ರದೇಶಗಳಲ್ಲಿ ಎರಡು ಸುಳಿಗಳನ್ನು ಹೊಂದಿರುವ ಜನರು ಎರಡು ಬಾರಿ ಮದುವೆಯಾಗುತ್ತಾರೆ ಎಂದು ನಂಬಲು ಒಂದು ಕಾರಣವಿದೆ. ಊರುಗಳಲ್ಲಿ ಕೆಲವು ಮದುವೆಗಳು ನಿಶ್ಚಿತಾರ್ಥದವರೆಗೂ ಬಂದು ನಿಲ್ಲುತ್ತವೆ. ಅದರ ನಂತರ, ಅವರು ಮತ್ತೆ ಮದುವೆಯಾಗುತ್ತಾರೆ. ಇದನ್ನು ಎರಡು ಮದುವೆ ಎಂದು ಪರಿಗಣಿಸಲಾಗುತ್ತದೆ. ಆದರೆ.. ಈ ಎರಡು ಮದುವೆಗಳಿಗೂ ಒಂದಕ್ಕೊಂದು ಸಂಬಂಧವಿಲ್ಲ. 

Human Sacrifice In Kerala: ಸುಶಿಕ್ಷಿತ ಕೇರಳದ ದೇವಸ್ಥಾನದಲ್ಲಿ ಎರಡು ಮಹಿಳೆಯರ ಬಲಿ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಸುಳಿಯ ಅರ್ಥವೇನು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ.. ತಲೆಯಲ್ಲಿ ಎರಡು ಸುಳಿಗಳನ್ನು ಹೊಂದಿರುವವರು ಉತ್ತಮ ಗುಣಗಳನ್ನು ಹೊಂದಿರುತ್ತಾರೆ. ಅಂದರೆ ಅವರಿಗೆ ತಾಳ್ಮೆ ಜಾಸ್ತಿ. ಎಲ್ಲರಿಗೂ ಸಹಾಯ ಮಾಡುವ ಮನೋಭಾವವನ್ನು ಹೊಂದಿರುತ್ತಾರೆ. ಅದಲ್ಲದೆ ತಲೆಯಲ್ಲಿ ಎರಡು ಸುಳಿಯಿರುವವರದ್ದು ಪ್ರೀತಿಯ ಗುಣ. ಅಲ್ಲದೆ ಅವರು ದಯಾ ಗುಣವನ್ನು ಸಹ ಹೊಂದಿದ್ದಾರೆ. 

click me!