ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ನಟಿ ಮಲೈಕಾ ಅರೋರಾ ಮಾಜಿ ಪತಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್ ಅವರು ತನ್ನ ಗೆಳತಿ ಶುರಾ ಖಾನ್ ಜೊತೆ 2ನೇ ಮದುವೆಯಾಗಿದ್ದು, ಈಗ ಅವರು ತಮ್ಮ ಮನದರಸಿಗೆ ಹರೆಯದ ಹುಡುಗನಂತೆ ಮೊಣಕಾಲೂರಿ ಪ್ರೇಮ ನಿವೇದನೆ ಮಾಡಿರುವ ವೀಡಿಯೋವೊಂದು ವೈರಲ್ ಆಗಿದೆ.
ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ನಟಿ ಮಲೈಕಾ ಅರೋರಾ ಮಾಜಿ ಪತಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್ ಅವರು ತನ್ನ ಗೆಳತಿ ಶುರಾ ಖಾನ್ ಜೊತೆ 2ನೇ ಮದುವೆಯಾಗಿದ್ದು, ಬಹುತೇಕರಿಗೆ ಗೊತ್ತು. ಈಗ ಅವರು ತಮ್ಮ ಮನದರಸಿಗೆ ಹರೆಯದ ಹುಡುಗನಂತೆ ಮೊಣಕಾಲೂರಿ ಪ್ರೇಮ ನಿವೇದನೆ ಮಾಡಿರುವ ವೀಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಪ್ರಸ್ತುತ ಅರ್ಬಾಜ್ ಖಾನ್ ಹಾಗೂ ಶುರಾ ಖಾನ್ ಅವರು ಬಾಲಿವುಡ್‌ನ ನವಜೋಡಿಗಳಾಗಿದ್ದು, ಕಳೆದ ವಾರವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮುಂಬೈನಲ್ಲಿ ಅರ್ಪಿತಾ ಖಾನ್ ಅವರ ನಿವಾಸದಲ್ಲಿ ಈ ಮದುವೆ ಕುಟುಂಬದವರು, ಸ್ನೇಹಿತರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ನಡೆದಿತ್ತು. ಇದಾಗಿ ವಾರದ ಬಳಿಕ ಈಗ ಶುರಾ ಖಾನ್ ಅವರು ಅರ್ಬಾಜ್ ಖಾನ್ ಅವರು ಪ್ರೇಮ ನಿವೇದನೆ ಮಾಡುತ್ತಿರುವ ವೀಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅರ್ಬಾಜ್ ಖಾನ್ ಹೊಸ ಪತ್ನಿ ನೋಡಿ ಆಂಟಿ ಹೀಗೆ ಮಾಡೋದಾ? ವೈರಲ್ ವಿಡಿಯೋಗೆ ಬಿದ್ದೂ ಬಿದ್ದೂ ನಗ್ತಿರೋ ನೆಟ್ಟಿಗರು!
ಈ ವೀಡಿಯೋದಲ್ಲಿ ಕಾಣುವಂತೆ ನಟ ಅರ್ಬಾಜ್ ಖಾನ್ ಅವರು ತನ್ನ ಹರೆಯದ ಮಗ, ತಂಗಿ ಅರ್ಪಿತಾ ಖಾನ್ ಹಾಗೂ ಸ್ನೇಹಿತರ ಎದುರು ತನ್ನ ಸಂಗಾತಿ ಶುರಾ ಖಾನ್‌ಗೆ ಪ್ರೇಮ ನಿವೇದನೆ ಮಾಡಿ ತಬ್ಬಿಕೊಂಡಿದ್ದಾರೆ. ಈ ವೇಳೆ ಜೊತೆಯಲ್ಲಿ ಮಗ ಅರ್ಹಾನ್ ಹಾಗೂ ಸ್ನೇಹಿತರು ಅರ್ಬಾಜ್ ಖಾನ್‌ಗೆ ಪ್ರೋತ್ಸಾಹಿಸುವುದನ್ನು ಕಾಣಬಹುದಾಗಿದೆ.
ಇಲ್ಲಿ ಅರ್ಪಿತಾ ಹೂಗುಚ್ಚವೊಂದನ್ನು ಸೋದರ ಅರ್ಬಾಜ್‌ಗೆ ನೀಡಿ ಅತ್ತಿಗೆಗೆ ಪ್ರೇಮ ನಿವೇದನೆ ಮಾಡುವಂತೆ ಹೇಳುತ್ತಾಳೆ. ಅದರಂತೆ ಅರ್ಬಾಜ್ ತನ್ನ ಪ್ರೀತಿಯ ಕುಟುಂಬದೆದುರು ಶುರಾ ಖಾನ್‌ಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಈ ವಿಡಿಯೋ ಶೇರ್ ಮಾಡಿರುವ ಶುರಾ ಖಾನ್ ಅವರು, ಡಿಸೆಂಬರ್ 19ರಂದು ಯೆಸ್ ಎಂದು ಹೇಳಿ, ಡಿಸೆಂಬರ್ 24 ರಂದು ಮದುವೆಯಾಗುವವರೆಗೆ ಬಹಳ ವೇಗವಾಗಿ ನಡೆದು ಹೋಗಿದೆ ಎಂದು ಬರೆದುಕೊಂಡಿದ್ದಾರೆ.
ಅಪ್ಪನ ವಯಸ್ಸಿನವ ಜೊತೆ ಮದ್ವೆಯಾಗಿ ಈಗ್ಯಾಕೆ ಮುಖ ಮುಚ್ಕೊತ್ಯಾ? ಅರ್ಬಾಜ್ ಪತ್ನಿ ಸಕತ್ ಟ್ರೋಲ್
ಈ ವಿಡಿಯೋ ನೋಡಿದ ಅಭಿಮಾನಿಗಳು ಕೂಡ ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಬಹಳ ಸುಂದರವಾಗಿದೆ. ನಿಮ್ಮ ಸಂಬಂಧವನ್ನು ದೇವರು ಆಶೀರ್ವದಿಸಲಿ ಹಾಗೂ ರಕ್ಷಣೆ ಮಾಡಲಿ ಎಂದು ಕಾಮೆಂಟ್ ಮಾಡಿದ್ದಾರೆ ಅಭಿಮಾನಿ. ಮತ್ತೆ ಅನೇಕ ಅಭಿಮಾನಿಗಳು ರೆಡ್ ಹಾರ್ಟ್ ಇಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ. ಈ ಜೋಡಿ ನಿನ್ನೆಯಷ್ಟೇ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ವೀಡಿಯೋವೊಂದು ವೈರಲ್ ಆಗಿತ್ತು.