ಈಗ ಪೊಲೀಸ್ ಪೇದೆಯೊಬ್ಬರು ಕೋತಿಯೊಂದಕ್ಕೆ ಮಾವಿನ ಹಣ್ಣು ತಿನ್ನಿಸುತ್ತಿರುವ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಉತ್ತರಪ್ರದೇಶ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಣ್ಣುಗಳ ರಾಜ ಎಂದು ಕರೆಸಿಕೊಳ್ಳುವ ಮಾವಿನ ಹಣ್ಣನ್ನು ಇಷ್ಟಪಡದ ಜನರಿಲ್ಲ. ಬೇಸಿಗೆಯ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲಾ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಅದರಲ್ಲೂ ಪ್ರತಿಯೊಬ್ಬರಿಗೂ ಬಲು ಪ್ರಿಯವಾದ ಹಣ್ಣು ಮಾವು ಇದನ್ನು ಇಷ್ಟಪಡದ ಜನರಿಲ್ಲ. ಹಾಗೆಯೇ ಕೋತಿಗಳು ಕೂಡ ಮಾವನ್ನು ಬಲು ಇಷ್ಟಪಟ್ಟು ತಿನ್ನುತ್ತವೆ. ಈಗ ಪೊಲೀಸ್ ಪೇದೆಯೊಬ್ಬರು ಕೋತಿಯೊಂದಕ್ಕೆ ಮಾವಿನ ಹಣ್ಣು ತಿನ್ನಿಸುತ್ತಿರುವ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಉತ್ತರಪ್ರದೇಶ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
17 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಒಬ್ಬ ಕಾನ್ಸ್‌ಟೇಬಲ್ ಪೊಲೀಸ್ ವಾಹನದಲ್ಲಿ ಕುಳಿತು ಕೋತಿಗಳಿಗೆ ಮಾವಿನ ಹಣ್ಣನ್ನು ಕತ್ತರಿಸಿ ತುಂಡುಗಳಾಗಿ ಮಾಡಿ ಬಳಿ ಕೋತಿಗಳಿಗೆ ಒಂದೊಂದೇ ತುಂಡುಗಳನ್ನು ನೀಡುವುದನ್ನು ಕಾಣಬಹುದು. ಈ ವೇಳೆ ಕೋತಿಯ ಬೆನ್ನಿನ ಮೇಲೆ ಅದರ ಮರಿ ಇದ್ದು ಅದು ಆತನನ್ನೇ ನೋಡುತ್ತಿದ್ದರೆ ತಾಯಿ ಕೋತಿ ಹಣ್ಣಿಗಾಗಿ ಕೈ ಚಾಚುತ್ತಿದೆ. ಈ ವೇಳೆ ಪೇದೆ ಕೋತಿಗಳಿಗೆ ಹಣ್ಣುಗಳನ್ನು ನೀಡುತ್ತಾರೆ.
ತಾಯಿಯರಿಬ್ಬರ ಅಪೂರ್ವ ಸಮ್ಮಿಲನ... ಮನುಷ್ಯರಲ್ಲೂ ಇಲ್ಲದ ಅನುಬಂಧವಿದು: ವಿಡಿಯೋ
UP 112, सबके ‘Mon-key’ समझे..
Well Done Constable Mohit, PRV1388 Shahjahapur for making good deeds an 'Aam Baat' pic.twitter.com/z2UM8CjhVB
ಈ ವಿಡಿಯೋವನ್ನು 40,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಪೊಲೀಸ್ ಪೇದೆಯ ಕರುಣಾಭರಿತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೀಡಿಯೊ ಕುರಿತು ಪ್ರತಿಕ್ರಿಯಿಸಿದ ಟ್ವಿಟರ್ ಬಳಕೆದಾರರು ಮಾನವೀಯತೆಯು ಒಳಗಿನಿಂದ ಬರುತ್ತದೆ. ಎಲ್ಲಾ ಜೀವಿಗಳ ಮೇಲೆ ಪ್ರೀತಿಯನ್ನು ತೋರಿಸಿ ಇದು ಮಾನವೀಯತೆ ಎಂದು ಕಾಮೆಂಟ್ ಮಾಡಿದ್ದಾರೆ. ಆದಾಗ್ಯೂ, ಕೆಲವು ಜನರು ಮಂಗಗಳಿಗೆ ಆಹಾರವನ್ನು ನೀಡುವುದನ್ನು ತಪ್ಪಿಸಬೇಕು ಏಕೆಂದರೆ ಅವು ಕೆಲವೊಮ್ಮೆ ಮನುಷ್ಯರ ಮೇಲೆ ದಾಳಿ ಮಾಡುತ್ತವೆ ಎಂದು ಬರೆದಿದ್ದಾರೆ.
ಗಾಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ತಾಯಿ ಕೋತಿ: ವಿಡಿಯೋ ವೈರಲ್
ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಪೊಲೀಸ್ ಒಬ್ಬರು ನೀರಾಡಿಕೆಯಿಂದ ಬಳಲಿ ಬೆಂಡಾಗಿದ್ದ ಕೋತಿಯೊಂದಕ್ಕೆ ನೀರುಣಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೋತಿಗೆ ಪೊಲೀಸ್ ಸಿಬ್ಬಂದಿ ನೀರು ಕುಡಿಸುತ್ತಿರುವ ದೃಶ್ಯ ಸೆರೆಯಾಗಿದ್ದು, ಮುಂಬೈ-ಅಹಮದಾಬಾದ್ (Mumbai-Ahmedabad route) ಮಾರ್ಗದ ಮಲ್ಶೇಜ್ ಘಾಟ್‌ನಲ್ಲಿ (Malshej ghat). ಇಲ್ಲಿ ಸೇವೆಯಲ್ಲಿರುವ ಟ್ರಾಫಿಕ್ ಪೊಲೀಸರು ಹತ್ತಿರದ ಕಾಡುಗಳಿಂದ ರಸ್ತೆಯಲ್ಲಿ ಸಾಗುವ ಪ್ರಾಣಿಗಳಿಗೆ ನೀಡಲು ಹಲವಾರು ನೀರಿನ ಬಾಟಲಿಗಳನ್ನು ಒಯ್ಯುತ್ತಿರುವುದು ಕಂಡು ಬರುತ್ತಿದೆ.
ವೀಡಿಯೊದಲ್ಲಿ ಕಾಣಿಸುವಂತೆ ಪೋಲೀಸ್ ಅಧಿಕಾರಿಯೊಬ್ಬರು ಕೋತಿಗೆ (Monkey) ನೀರು ಕುಡಿಯಲು ಬಾಟಲಿಯನ್ನು ಕೈಯಲ್ಲಿ ಹಿಡಿದಿರುವುದನ್ನು ಕಾಣಬಹುದು. StreetDogsofBombay ಎಂಬ ಇನ್‌ಸ್ಟಾಗ್ರಾಮ್ ಪುಟದಿಂದ ಈ ವಿಡಿಯೋ ಪೋಸ್ಟ್ ಆಗಿದೆ. 'ಧ್ವನಿಯಿಲ್ಲದ ಶಿಶುಗಳ ಕಡೆಗೆ ದಯೆ ಮತ್ತು ಕರುಣೆಗಾಗಿ ಮಹಾರಾಷ್ಟ್ರ ಪೊಲೀಸರಿಗೆ ಸೆಲ್ಯೂಟ್, ಬೇಸಿಗೆಯ ಬಿಸಿಯು ಹೆಚ್ಚುತ್ತಿದೆ ಮತ್ತು ಧ್ವನಿಯಿಲ್ಲದ ಶಿಶುಗಳು ನೀರಿಗಾಗಿ ಹುಡುಕುತ್ತಿದ್ದಾರೆ ಆದ್ದರಿಂದ ದಯವಿಟ್ಟು ನಿಮ್ಮ ಮನೆಯ ಹೊರಗೆ ನೀರಿನ ಬಟ್ಟಲುಗಳನ್ನು ಇರಿಸಿ ಮತ್ತು ದಾಹದಿಂದ ಅವುಗಳನ್ನು ರಕ್ಷಿಸಿ' ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಬಿರು ಬೇಸಿಗೆಯಲ್ಲಿ ಬುದ್ಧಿವಂತ ಪ್ರಾಣಿ ಎನಿಸಿರುವ ಮನುಷ್ಯರೇನೋ ಶುದ್ಧ ನೀರನ್ನು ಎಲ್ಲಿಂದಾದರು ತಂದು ಕುಡಿಯುತ್ತಾರೆ. ಆದರೆ ಪ್ರಾಣಿ ಪಕ್ಷಿಗಳು ಏನು ಮಾಡಬೇಕು. ಬೇಸಿಗೆಯಲ್ಲಿ ಸರಿಯಾದ ನೀರು ಸಿಗದೆ ಬಿಸಿಲಿನ ದಾಹ ತಾಳಲಾಗದೇ ಅನೇಕ ಸಣ್ಣಪುಟ್ಟ ಪಕ್ಷಿಗಳು ತಮ್ಮ ಪ್ರಾಣವನ್ನೇ ಬಿಡುತ್ತವೆ. ಈ ಕಾರಣಕ್ಕೆ ಬೇಸಿಗೆಯಲ್ಲಿ ಮನೆಯ ಮಹಡಿಗಳಲ್ಲಿ ಅಂಗಳದಲ್ಲಿ ಅಲಲ್ಲಿ ನೀರು ಇಟ್ಟು ಜೀವ ಸಂಕುಲದ ವೈವಿಧ್ಯತೆಗೆ ಸಾಕ್ಷಿಯಾಗಿರುವ ಪ್ರಾಣಿ ಪಕ್ಷಿಗಳಿಗೂ ಬದುಕಲು ಅವಕಾಶ ನೀಡಿ ಎಂದು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಪರಿಸರ ಪ್ರೇಮಿಗಳು ಕರೆ ನೀಡುತ್ತಾರೆ.