
ಪ್ರತಿಯೊಬ್ಬರ ಜೀವನದಲ್ಲೂ ಮೊದಲ ಹೀರೋ ತಂದೆ (Father). ತಾಯಿ (Mother) ಯ ಪ್ರೀತಿ (Love) ಜೊತೆ ಅಪ್ಪನ ಮಾರ್ಗದರ್ಶನ ಬಹಳ ಮುಖ್ಯವಾಗುತ್ತದೆ. ತಂದೆಯಿಲ್ಲದ ಜೀವನ ಅಪೂರ್ಣ. ತಂದೆಯಾದವರು ಮಕ್ಕಳಿಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿರ್ತಾರೆ. ಎಲ್ಲೂ ತಂದೆ ಮನಸ್ಸು ಬಿಚ್ಚಿ ತನ್ನ ನೋವು, ದುಃಖಗಳನ್ನು ಹೇಳಿಕೊಂಡಿರೋದಿಲ್ಲ. ಮನಸ್ಸಿನಲ್ಲಿ ಸಾವಿರಾರು ನೋವಿದ್ದರೂ ಮಕ್ಕಳ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಜೀವನ ಸವೆಸ್ತಾರೆ. ಮಕ್ಕಳು ಕೂಡ ತಂದೆಯನ್ನು ಅಪಾರವಾಗಿ ಪ್ರೀತಿಸ್ತಾರೆ. ಆದ್ರೆ ಕೆಲ ಮಕ್ಕಳು ತಮ್ಮ ಪ್ರೀತಿಯನ್ನು ತಂದೆ ಮುಂದೆ ಎಂದೂ ಹೇಳಿರೋದಿಲ್ಲ. ನಿಮ್ಮ ತಂದೆಗೆ ವಿಶೇಷ ಭಾವನೆ ಮೂಡಿಸಲು, ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳಲು ಫಾದರ್ಸ್ ಡೇ (Fathers Day) ಗಿಂತ ಉತ್ತಮ ಅವಕಾಶ ಇಲ್ಲ. ಜೂನ್ 19 ರಂದು ಅಂದರೆ ಭಾನುವಾರದಂದು ಪ್ರಪಂಚದಾದ್ಯಂತ ತಂದೆಯ ದಿನವನ್ನು ಆಚರಿಸಲಾಗುತ್ತದೆ. ನೀವು ಈ ದಿನವನ್ನು ವಿಶೇಷವಾಗಿ ಆಚರಿಸಬಹುದು. ಕುಟುಂಬದವರ ಜೊತೆ ವಿಶೇಷವಾಗಿ ತಂದೆ ಜೊತೆ ಸಮಯ ಕಳೆಯಿರಿ. ಈ ಸಂದರ್ಭದಲ್ಲಿ ಅಪ್ಪನಿಗೆ ಉಡುಗೊರೆ (Gift) ನೀಡಲು ಮರೆಯದಿರಿ. ಮಕ್ಕಳು, ತಂದೆಗೆ ಯಾವೆಲ್ಲ ಉಡುಗೊರೆ ನೀಡ್ಬಹುದು ಎಂಬುದನ್ನು ನಾವಿಂದು ಹೇಳ್ತೇವೆ.
ಫಾದರ್ಸ್ ಡೇ ದಿನ ನೀಡಿ ಈ ಗಿಫ್ಟ್ :
ಕಾಫಿ ಮಗ್ (Coffee Mug) : ಪ್ರತಿಯೊಬ್ಬರೂ ತಮ್ಮದೇ ಆದ ವೈಯಕ್ತಿಕ ಮಗ್ ಹೊಂದಿರುತ್ತಾರೆ. ಅದರಲ್ಲಿ ಅವರು ಚಹಾ ಅಥವಾ ಕಾಫಿ ಕುಡಿಯುತ್ತಾರೆ. ನಿಮ್ಮಪ್ಪ ಕೂಡ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ಹೊಂದಿದ್ದರೆ ನೀವು ಅವರಿಗೆ ಕಾಫಿ ಮಗ್ ನೀಡಬಹುದು. ಪ್ಲೇನ್ ಮಗ್ ನೀಡುವ ಬದಲು ತಂದೆ ಫೋಟೋ ಇರುವ ಅಥವಾ ತಂದೆ ಹಾಗೂ ನಿಮ್ಮ ಫೋಟೋ ಇರುವ ಇಲ್ಲವೆ ತಂದೆಗೆ ಇಷ್ಟವಾದ ವ್ಯಕ್ತಿಯ ಫೋಟೋ ಇರುವ ಮಗ್ ನೀಡಿ. ಇದ್ರಿಂದ ಅಪ್ಪನ ಖುಷಿ ದುಪ್ಪಟ್ಟಾಗುತ್ತದೆ.
ಬೆಡ್ ಪಕ್ಕ ಮೊಬೈಲ್ ಇಟ್ರೆ ಸೆಕ್ಸ್ ಲೈಫ್ ಸರಿಯಾಗಿರಲ್ಲ..! ನೀವೂ ಹೀಗೆ ಮಾಡ್ತಿದ್ದೀರಾ ?
ಶರ್ಟ್ (Shirt), ಬಟ್ಟೆ : ನಿಮ್ಮ ತಂದೆಗೆ ಇಷ್ಟವಾಗುವ ಬಟ್ಟೆಯನ್ನು ನೀವು ಖರೀದಿ ಮಾಡ್ಬಹುದು. ಟೀ ಶರ್ಟ್ ಆಗ್ಲೇ ಬೇಕು ಅಂದೇನಿಲ್ಲ. ತಂದೆ ಹೆಚ್ಚು ಧರಿಸುವ ಬಟ್ಟೆಯನ್ನು ನೀವು ಅವರಿಗೆ ಉಡುಗೊರೆಯಾಗಿ ನೀಡ್ಬಹುದು. ಬಟ್ಟೆ ಖರೀದಿ ವೇಳೆ ಬಣ್ಣದ ಬಗ್ಗೆಯೂ ಗಮನ ನೀಡಿ.
ಪಾದರಕ್ಷೆಗಳು (Slippers) : ನಿಮ್ಮ ಅಗತ್ಯತೆ ಪೂರೈಸುವ ಭರದಲ್ಲಿ ತಂದೆ ತಮ್ಮ ಅಗತ್ಯತೆ ಮರೆತಿರುತ್ತಾರೆ. ಅನೇಕ ಪಾಲಕರು ಚಪ್ಪಲಿ ಖರೀದಿ ಮಾಡಿ ವರ್ಷಗಳೇ ಕಳೆದಿರುತ್ತವೆ. ಹರಿದ ಚಪ್ಪಲಿಗೆ ಹೊಲಿಗೆ ಹಾಕಿ ಧರಿಸುತ್ತಿರುತ್ತಾರೆ. ಫಾದರ್ಸ್ ಡೇ ದಿನದಂದು ಅವರಿಗೆ ನೀವು ಚಪ್ಪಲಿಯನ್ನು ಉಡುಗೊರೆಯಾಗಿ ನೀಡಬಹುದು.
ಡೈರಿ (Dairy) : ನಿಮ್ಮ ತಂದೆ ಕಚೇರಿಗೆ ಹೋಗುವವರಾಗಿದ್ದರೆ ಅವರಿಗೆ ಡೈರಿ ಮತ್ತು ಪೆನ್ನು ಅಗತ್ಯವಿರುತ್ತದೆ. ನೀವು ತಂದೆಯ ದಿನದಂದು ಅಪ್ಪನಿಗೆ ಡೈರಿ ಮತ್ತು ಪೆನ್ನು ಉಡುಗೊರೆಯಾಗಿ ನೀಡಬಹುದು. ನೀವು ಡೈರಿ ಮತ್ತು ಪೆನ್‌ನಲ್ಲಿ ನಿಮ್ಮ ತಂದೆಯ ಹೆಸರನ್ನು ಸಹ ಬರೆಯಬಹುದು.
Relationship Tips: ಸಂಗಾತಿಗೆ ಮೋಸ ಮಾಡಿದ್ರಾ? ಹೀಗೆ ಕ್ಷಮೆ ಕೇಳ್ಬೋದು
ಕೀಚೈನ್ (Keychain) ಮತ್ತು ಹೆಲ್ಮೆಟ್ : ಪ್ರತಿಯೊಬ್ಬರೂ ಸ್ಕೂಟಿ, ಕಾರು ಅಥವಾ ಬೈಕು ಇದ್ರಲ್ಲಿ ಒಂದನ್ನು ಓಡಿಸ್ತಾರೆ. ನಿಮ್ಮ ತಂದೆ ಬಳಿ ಯಾವ ವಾಹನವಿದೆಯೋ ಅದಕ್ಕೆ ತಕ್ಕಂತೆ ನೀವು ಕೀ ಚೈನ್ ನೀಡಬಹುದು. ವಾಹನ ಚಲಾಯಿಸುವಾಗ ಸದಾ ನಿಮ್ಮನ್ನು ಅವರು ನೆನಪಿಸಿಕೊಳ್ತಾರೆ. ಕೀ ಚೈನ್ ಜೊತೆ ನೀವು ಹೆಲ್ಮೆಟ್ ಕೂಡ ಉಡುಗೊರೆಯಾಗಿ ನೀಡ್ಬಹುದು. ಹೆಲ್ಮೆಟ್ ಅಪಘಾತ ತಡೆಯುತ್ತದೆ. ತಂದೆ ಬೈಕ್ ಅಥವಾ ಸ್ಕೂಟಿ ಚಲಾಯಿಸುತ್ತಿದ್ದರೆ ನೀವು ಕೀ ಚೈನ್ ಬದಲು ಸುರಕ್ಷಿತ ಹೆಲ್ಮೆಟ್ ನೀಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.