ಹುಡುಗಿಯರು ಬಿಡಿ, ಹುಡುಗರು Break Up ನಿರ್ಧಾರಕ್ಕೆ ಬರೋದೇಕೆ?

Published : Jun 15, 2022, 05:18 PM IST
ಹುಡುಗಿಯರು ಬಿಡಿ, ಹುಡುಗರು Break Up ನಿರ್ಧಾರಕ್ಕೆ ಬರೋದೇಕೆ?

ಸಾರಾಂಶ

ಹುಡುಗಿಯರು ಮಾತ್ರವಲ್ಲ ಹುಡುರೂ ಬ್ರೇಕ್ ಅಪ್ ಮಾಡಿಕೊಳ್ತಾರೆ. ಹುಡುಗ್ರ ಈ ನಿರ್ಧಾರಕ್ಕೆ ಕುಟುಂಬ ಮಾತ್ರ ಕಾರಣವಾಗಿರೋದಿಲ್ಲ. ಹುಡುಗಿಯರ ಕೆಲ ಸ್ವಭಾವದಿಂದ ಬೇಸತ್ತ ಹುಡುಗ್ರು ದಾರಿ ತುಳಿಯುತ್ತಾರೆ.  

ಪ್ರೀತಿ (Love) ಯಿಂದ ಹೊಟ್ಟೆ ತುಂಬೋದಿಲ್ಲ ಎಂಬ ಮಾತನ್ನು ನೀವು ಕೇಳಿರ್ಬಹುದು. ಹಾಗೆ ಈ ಪ್ರೀತಿಯಿಂದ ಮಾತ್ರ ಸಂಸಾರ ಸುಖಮಯವಾಗಿ ನಡೆಯಲು ಸಾಧ್ಯವಿಲ್ಲ. ಪ್ರೀತಿ ಜೊತೆ ಗೌರವ (Respect), ವಿಶ್ವಾಸ ಮತ್ತು ಬಹಳ ಮುಖ್ಯ. ಪ್ರೀತಿಸುವ ವೇಳೆ ಹುಡುಗ್ರು, ತಮ್ಮ ಹುಡುಗಿಗೆ ಅನೇಕ ಭರವಸೆಗಳನ್ನು ನೀಡ್ತಾರೆ. ಜೀವನ (Life) ಪರ್ಯಂತ ನಿನ್ನ ಜೊತೆಗೆ ಇರ್ತೇನೆ ಎನ್ನುತ್ತಾರೆ. ಆದ್ರೆ ಕೆಲ ಸಮಯ ಕಳೆದಂತೆ ಹುಡುಗ್ರೇ ಹುಡುಗಿಯಿಂದ ದೂರವಾಗಲು ಪ್ರಯತ್ನಿಸುತ್ತಾರೆ. ಸಾಮಾನ್ಯವಾಗಿ ಇದಕ್ಕೆ ಕುಟುಂಬ ಕಾರಣ ಎಂದು ನಾವು ಭಾವಿಸ್ತೇವೆ. ಅದು ತಪ್ಪು. ಬರೀ ಕುಟುಂಬ ಮಾತ್ರವಲ್ಲ, ಹುಡುಗಿಯರ ಕೆಲ ಅಭ್ಯಾಸಗಳು ಕೂಡ ಹುಡುಗ್ರು ಅವರಿಂದ ದೂರವಾಗಲು ಕಾರಣವಾಗುತ್ತದೆ. ಇಂದು ಹುಡುಗಿಯರ ಯಾವ ಸ್ವಭಾವ ಹುಡುಗರನ್ನು ದೂರ ಹೋಗಲು ಪ್ರೇರೇಪಿಸುತ್ತದೆ ಎಂಬುದನ್ನು ನೋಡೋಣ.

ಹೊಗಳಿಕೆ (Prasing) : ಹೊಗಳಿಕೆ ಮಾತನ್ನು ಪ್ರತಿಯೊಬ್ಬರೂ ಕೇಳಲು ಇಷ್ಟಪಡ್ತಾರೆ. ಹೊಗಳಿಕೆಗೆ ವಯಸ್ಸಿನ ಮಿತಿಯಿಲ್ಲ. ಇಡೀ ದಿನ ಪ್ರಶಂಸೆ ಮಾಡ್ಬೇಕೆಂದೇನಿಲ್ಲ. ಸಂಗಾತಿ ಒಳ್ಳೆಯ ಕೆಲಸ ಮಾಡಿದಾಗ ಮೆಚ್ಚುಗೆ ಮಾತನಾಡುವುದು ಅತ್ಯಗತ್ಯ. ಹುಡುಗ್ರಿಗೂ ಹೊಗಳಿಕೆ ಮಾತು ಕೇಳಲು ಹಿತವೆನಿಸುತ್ತದೆ. ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಪ್ರಶಂಸೆ ಬಯಸ್ತಾರೆ. ಆದ್ರೆ ಹುಡುಗಿಯರು ಅದ್ರಲ್ಲಿ ಕೊರತೆ ಹುಡುಕುತ್ತಾರೆಯೇ ಹೊರತು ಮೆಚ್ಚುಗೆ ಮಾತನಾಡುವುದಿಲ್ಲ. ಇದ್ರಿಂದ ಹುಡುಗರಿಗೆ ಕೀಳರಿಮೆ ಶುರುವಾಗುತ್ತದೆ. ತಾನು ಯಾರಿಗೂ ಅರ್ಹನಲ್ಲ ಎಂದು ಅವರು ಭಾವಿಸಲು ಶುರು ಮಾಡ್ತಾರೆ. ಇದೇ ಕಾರಣಕ್ಕೆ ಹುಡುಗಿಯಿಂದ ದೂರವಿರಲು ಬಯಸ್ತಾರೆ. ನಿಮ್ಮ ಹುಡುಗ ನಿಮ್ಮ ಜೊತೆಗಿರಬೇಕೆಂದ್ರೆ ಅವರು ಮಾಡುವ ಸಣ್ಣಪುಟ್ಟ ಕೆಲಸಗಳನ್ನು ಹೊಗಳಿ. ಅವರಿಗೆ ಮುಂದೆ ಮಾಡುವ ಕೆಲಸಕ್ಕೆ ಪ್ರೋತ್ಸಾಹ ನೀಡಿ.

ಉಸಿರುಗಟ್ಟಿದ ಅನುಭವ (Suffocation Feeling): ಡಾಮಿನೇಟ್ ನೇಚರ್ (Dominating nature) ಸ್ವಭಾವದ ಮಹಿಳೆ ನೀವಾಗಿದ್ದರೆ ಇಂದೇ ನಿಮ್ಮ ಸ್ವಭಾವದಲ್ಲಿ ಬದಲಾವಣೆ ತನ್ನಿ. ಪುರುಷರು ಇಂಥ ನಡವಳಿಕೆಯನ್ನು ಇಷ್ಟಪಡುವುದಿಲ್ಲ. ಪ್ರತಿಯೊಬ್ಬರೂ ತಮ್ಮಿಷ್ಟದಂತೆ ಬದುಕಲು ಇಷ್ಟಪಡ್ತಾರೆ. ಹುಡುಗರ ಮೇಲೆ ಸದಾ ಒತ್ತಡ ಹೇರುತ್ತಿದ್ದರೆ ಅವರಿಗೆ ಕಿರಿಕಿರಿಯಾಗುತ್ತದೆ. ಆರಂಭದಲ್ಲಿ ನಿಮ್ಮ ಈ ಒತ್ತಡವನ್ನು ಅವರು ಪ್ರೀತಿ (Love) ಎಂದು ಭಾವಿಸ್ತಾರೆ. ಆದ್ರೆ ಇದೇ ಪುನರಾವರ್ತನೆಯಾದ್ರೆ ಅವರಿಗೆ ಉಸಿರುಗಟ್ಟಿದ ಅನುಭವವಾಗುತ್ತದೆ. ಅವರನ್ನು ಮನೆಯಲ್ಲಿ ಬಂಧಿ ಮಾಡುವುದು, ಸ್ನೇಹಿತರ ಜೊತೆ ಹೊರಗೆ ಹೋಗಲು ಬಿಡದಿರುವುದು ಸೇರಿದಂತೆ ಅವರ ಜವಾಬ್ದಾರಿ ಬಗ್ಗೆ ಪದೇ ಪದೇ ಹೇಳಿ ಒತ್ತಡ ಹೇರುವುದು ಅವರಿಗೆ ಇಷ್ಟವಾಗುವುದಿಲ್ಲ. ಸಂಬಂಧದಲ್ಲಿರುವುದರ ಮಹತ್ವವನ್ನು ಹುಡುಗಿಯಾದವಳು ಅರ್ಥಮಾಡಿಕೊಳ್ಳಬೇಕು. ಕೆಲವೊಂದಕ್ಕೆ ಮಿತಿ ಹಾಕಬಹುದು. ಆದರೆ ಅವರ ಜೀವನವನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ. ಇದು ಪುರುಷರಿಗೆ ಇಷ್ಟವಾಗುವುದಿಲ್ಲ. ಅಂಥ ಮಹಿಳೆಯರ ಜೊತೆ ಅವರು ಹೆಚ್ಚು ದಿನ ಬಾಳ್ವೆ ಮಾಡುವುದಿಲ್ಲ.

ಬೆಡ್‌ ಪಕ್ಕ ಮೊಬೈಲ್ ಇಟ್ರೆ ಸೆಕ್ಸ್ ಲೈಫ್‌ ಸರಿಯಾಗಿರಲ್ಲ..! ನೀವೂ ಹೀಗೆ ಮಾಡ್ತಿದ್ದೀರಾ ?

ಪ್ರೀತಿ (Love): ಸಂಬಂಧ ಒಂದು ಹಂತಕ್ಕೆ ಬಂದ್ಮೇಲೆ ಹುಡುಗಿಯರು ಪ್ರೀತಿ ವ್ಯಕ್ತಪಡಿಸುವುದನ್ನು ಬಿಟ್ಟು ಬಿಡ್ತಾರೆ. ಪುರುಷರೇ ಪ್ರೀತಿ ತೋರಿಸಬೇಕೆಂಬ ಭಾವನೆಯಲ್ಲಿರ್ತಾರೆ. ಪ್ರತಿ ಬಾರಿ ಅವರೇ ಹತ್ತಿರ ಬರಲಿ ಎಂದು ಬಯಸ್ತಾರೆ. ಇದು ತಪ್ಪು. ಪುರುಷರು ಕೂಡ ಸಂಗಾತಿಯಿಂದ ಪ್ರೀತಿ ಬಯಸ್ತಾರೆ. ಮನಸ್ಸಿನಲ್ಲಿ ಪ್ರೀತಿಯಿದ್ದರೆ ಸಾಲದು. ಅದನ್ನು ತೋರಿಸ್ಬೇಕು. ಸಂಗಾತಿ ಸ್ಪೇಷಲ್ ಎಂಬುದನ್ನು ವ್ಯಕ್ತಪಡಿಸಬೇಕು. ಪ್ರೀತಿ ವ್ಯಕ್ತಪಡಿಸದಿರುವ ಹುಡುಗಿಯಿಂದ ಸಂಗಾತಿ ದೂರವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಸೆಕ್ಸ್ ಬಳಿಕ ಮೂತ್ರವಿಸರ್ಜನೆ ಮಾಡಿದ್ರೆ ಪ್ರೆಗ್ನೆಂಟ್ ಆಗೋಲ್ವಾ?

ಕಾರಣವಿಲ್ಲದೆ ಜಗಳ (Clash) : ಕೆಲ ಮಹಿಳೆಯರು ಚಿಕ್ಕ ವಿಷ್ಯಕ್ಕೆ ಗಲಾಟೆ ಮಾಡ್ತಾರೆ. ಸಂಗಾತಿಯನ್ನು ಅನುಮಾನಿಸ್ತಾರೆ. ಪ್ರತಿ ದಿನ ಮನೆಯಲ್ಲಿ ಗಲಾಟೆ ನಡೆಯುತ್ತಿರುತ್ತದೆ. ಪುರುಷರು ಸ್ವಲ್ಪ ಶಾಂತವಾಗಿರಲು ಬಯಸ್ತಾರೆ. ಆದ್ರೆ ಸದಾ ಮನೆಯಲ್ಲಿ ಜಗಳವಿದ್ದರೆ ಅವರಿಗೆ ಇದು ಕಿರಿಕಿರಿ ಎನ್ನಿಸುತ್ತದೆ. ಸಂಬಂಧ ದುರ್ಬಲವಾಗಲು ಕಾರಣವಾಗುತ್ತದೆ. ಇದೇ ಕಾರಣಕ್ಕೆ ಸಂಗಾತಿ ತೊರೆಯಲು ಅವರು ನಿರ್ಧರಿಸುತ್ತಾರೆ. 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌