
ವಿವಾಹವಾದ ನಂತರ ಒಂದು ಎರಡು ದೇಹ ಒಂದು ಉಸಿರು ಎಂಬಂತೆ ಅನೇಕರಿರುತ್ತಾರೆ. ಒಬ್ಬರ ಮೇಲೆ ಒಬ್ಬರಿಗೆ ಸಂಪೂರ್ಣ ಹಕ್ಕಿರುತ್ತದೆ. ದೈಹಿಕವಾಗಿ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಒಬ್ಬರನ್ನು ಒಬ್ಬರು ಅವಲಂಬಿಸಿರುತ್ತಾರೆ. ಹಾಗೂ ಜೀವನದ ಪ್ರತಿ ಪ್ಲಾನ್‌ಗಳನ್ನು ಜೊತೆಯಾಗಿಯೇ ಮಾಡುತ್ತಾರೆ. ಇದಕ್ಕಾಗಿಯೇ ಪತ್ನಿಯನ್ನು ಅರ್ಧಾಂಗಿ ಎಂದು ಹೇಳುತ್ತಾರೆ. ಅದರೆ ಇಲ್ಲೊಬ್ಬಳು ಪತ್ನಿ ಗಂಡನಿಗೆ ಜೊತೆಗೆ ಮಲಗಬೇಕಾದರೆ ಹಣ ನೀಡಬೇಕು ಎಂದು ಹೇಳಿದ್ದು, ಇದರಿಂದ ಸಿಟ್ಟಾದ ಗಂಡ ಆಕೆಯಿಂದ ವಿಚ್ಛೇದನ ಪಡೆಯುವುದಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾಳೆ. ಹೌದು ಚೀನಾದಲ್ಲಿ ಇಂತಹ ಘಟನೆಯೊಂದು ನಡೆದಿದ್ದು, ಈ ವಿಚಾರವೀಗ ಸಾಮಾಜಿಕ ಜಾತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಮೊದಲ ರಾತ್ರಿಯಿಂದಲೇ ಪತ್ನಿ ದೈಹಿಕ ಸಂಬಂಧ ನಡೆಸುವುದಕ್ಕೆ ಹಣ ನೀಡುವಂತೆ ಕೇಳಿದ್ದಾಳೆ ಎಂದು ಗಂಡ ಆರೋಪಿಸಿದ್ದಾನೆ.
ತನ್ನ ಪತ್ನಿ ಮೊದಲ ರಾತ್ರಿಯಿಂದಲೇ ತನ್ನ ಜೊತೆ ದೈಹಿಕ ಸಂಬಂಧ ಬೆಳೆಸುವುದಕ್ಕೆ ಹಣ ಕೇಳಿದ ನಂತರ ತಾನು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾಗಿ ಹೇಳಿದ್ದಾರೆ.. ಅಲ್ಲಿನ ಮಾಧ್ಯಮವಾದ ಸೌತ್ ಚೀನಾ ಪೋಸ್ಟ್ ವರದಿ ಪ್ರಕಾರ, ಈ ದಂಪತಿಯನ್ನು ಹಾವೋ ಹಾಗೂ ಕ್ಸುವಾನ್ ಎಂದು ಗುರುತಿಸಲಾಗಿದೆ. 2014ರಲ್ಲೇ ಇವರ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರತಿಯೊಂದಕ್ಕೂ ಹಣ ಕೇಳುವ ಪತ್ನಿ ಕ್ಸುವಾನ್ ವಿರುದ್ಧ 2021ರಲ್ಲಿ ಪತಿ ಹಾವೋ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪ್ರತಿ ಬಾರಿಯೂ ದೈಹಿಕ ಸಂಬಂಧ ಬೆಳೆಸುವುದಕ್ಕೆ ಪತ್ನಿ 15 ಯುಎಸ್ ಡಾಲರ್ ಮೊತ್ತಕ್ಕೆ ಅಂದರೆ ಸುಮಾರು 1200 ರೂಪಾಯಿಗೆ ಪತ್ನಿ ಬೇಡಿಕೆ ಇಡುತ್ತಿದ್ದಾಳೆ. ಕೆಲವೊಮ್ಮೆ ಮಾತನಾಡುವುದಕ್ಕೂ ಆಕೆ ಹಣ ಕೇಳುತ್ತಾಳೆ ಎಂದು ಗಂಡ ಆರೋಪ ಮಾಡಿದ್ದಾನೆ.
ಆದರೆ ನಂತರದಲ್ಲಿ ಕ್ಸುವಾನ್ ತಾನು ತನ್ನ ಸಂಸಾರ ಸರಿಯಾಗಿ ಸಾಗುವುದಕ್ಕೆ ಕೆಲಸ ಮಾಡುವುದಾಗಿ ಭರವಸೆ ನೀಡಿದ ನಂತರ ಹಾವೋ ಆಕೆಯ ಹೆಸರಿನಲ್ಲಿ ಆಸ್ತಿಯನ್ನು ಕೂಡ ನೋಂದಣಿ ಮಾಡಿಸಿದ್ದರು. ಆದರೆ ದಂಪತಿಯ ಸಂಬಂಧ ಸುಧಾರಿಸುವ ಬದಲು ನಂತರವೂ ಕೂಡ ಹಳಸುತ್ತಲೇ ಹೋಯಿತು. ಹೀಗಾಗಿ ಗಂಡ ಹಾವೋ ಈ ವರ್ಷ ಮತ್ತೆ ತನ್ನ ಪತ್ನಿ ವಿರುದ್ಧ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಕಳೆದೆರಡು ವರ್ಷಗಳಿಂದ ತಮ್ಮ ನಡುವೆ ಮಾತುಕತೆಯೇ ಇಲ್ಲ ಎಂದು ಹೇಳಿದ್ದಾರೆ. ಅಗತ್ಯ ಇದ್ದಾಗ ಮೆಸೇಜಿಂಗ್ ಅಪ್ ಮೂಲಕ ಅಷ್ಟೇ ಮಾತುಕತೆ ನಡೆಸುತ್ತಿದ್ದೇವೆ ಎಂದು ಪತಿ ಹಾವೋ ಹೇಳಿದ್ದಾರೆ. ಅಲ್ಲದೇ ತನ್ನ ಪತ್ನಿ ಆಕೆಯ ಸಂಬಂಧಿಕರ ಬಳಿ ತಾನು ಬಹಳ ದಪ್ಪ ಇದ್ದೇನೆ ಹಾಗೂ ಅಸಮರ್ಥ ಎಂದು ಹೇಳಿದ್ದಾಗಿ ಅ ವ್ಯಕ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಕ್ಕಳು ತಮ್ಮಿಷ್ಟದಂತ ಮದುವೆಯಾದರೆ ಇಡೀ ಕುಟುಂಬಕ್ಕೆ ಬಹಿಷ್ಕಾರದ ಶಿಕ್ಷೆ: ನಿರ್ಧಾರ ಕೈಗೊಂಡ ಗ್ರಾಮ
ತಮ್ಮ ವಿವಾಹವನ್ನು ಉಳಿಸಿಕೊಳ್ಳುವುದಕ್ಕಾಗಿ ಈ ಜೋಡಿ ಹಲವು ಬಾರಿ ಕೌನ್ಸೆಲಿಂಗ್ ಕೂಡ ನಡೆಸಿದ್ದು, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಹಾವೋ ಹೇಳಿದ್ದಾರೆ. ನಂತರ ದಂಪತಿಗಳ ಸಂಬಂಧವು ಬಹಳ ಕೆಟ್ಟಿದ್ದರಿಂದ ಅದನ್ನು ಸರಿಪಡಿಸಲು ಸಾಧ್ಯವಿಲ್ಲವೆಂದು ಕಂಡುಕೊಂಡ ನ್ಯಾಯಾಲಯವು ಅವರಿಗೆ ವಿಚ್ಛೇದನವನ್ನು ನೀಡಿದೆ. ಆದರೆ ಪತ್ನಿಗೆ ವಿಚ್ಛೇದನ ಇಷ್ಟವಿರಲಿಲ್ಲ, ಹೀಗಾಗಿ ಉನ್ನತ ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಿದ್ದರು. ಆದರೆ ಹಾವೋ ಅದೃಷ್ಟ ಚೆನ್ನಾಗಿತ್ತೇನೋ ಉನ್ನತ ನ್ಯಾಯಾಲಯವು ಆಕೆಯ ಮನವಿಯನ್ನು ತಿರಸ್ಕರಿಸಿದೆ.
ಇದನ್ನೂ ಓದಿ: ಗಂಡನ ಕಾರಿನಲ್ಲಿ ಗೋಮಾಂಸ ತುಂಬಿಸಿ ಭಜರಂಗದಳಕ್ಕೆ ಮಾಹಿತಿ ನೀಡಿದ ಪತ್ನಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.