
ನವದೆಹಲಿ (ಜ.26): ಚರ್ಮರೋಗದ ಕಾರಣದಿಂದಾಗಿ ತೀವ್ರವಾಗಿ ಕೂದಲು ಉದುರಿದ್ದ ಪರಿಣಾಮ ತನ್ನ ಪತಿ ನನಗೆ ವಿಚ್ಛೇದನ ನೀಡಿದ್ದಾರೆ ಎಂದು ಚೀನಾದ ಮಹಿಳೆಯೊಬ್ಬಳು ಆರೋಪಿಸಿದ್ದಾರೆ. ಈ ಪ್ರಕರಣ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಿಂಪತಿಗೆ ಹಾಗೂ ಪತಿಯ ವಿರುದ್ಧ ಕೋಪವನ್ನು ಹುಟ್ಟುಹಾಕಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. 36 ವರ್ಷದ ಮಹಿಳೆಯನ್ನು ಲಿ ಎನ್ನುವ ಸರ್‌ನೇಮ್‌ನಿಂದ ಗುರುತಿಸಲಾಗಿದ್ದು, ಅವರು ಹೆನಾನ್ ಪ್ರಾಂತ್ಯದ ಶಾಂಗ್ಕಿಯುನಲ್ಲಿ ವಾಸಿಸುತ್ತಿದ್ದಾರೆ.
ಎರಡು ವರ್ಷದ ಹಿಂದೆ ನನಗೆ ಅನಾರೋಗ್ಯ ಬಾಧಿಸಿತು. ಅಂದಿನಿಂದಲೂ ಪತಿ ನನ್ನು ತಿರಸ್ಕಾರ ಭಾವದಿಂದ ನೋಡಲು ಪ್ರಾರಂಭಿಸಿದ ಎಂದು ಅವರು ಹೇಳಿದ್ದಾರೆ. "ನಾನು ಕುಟುಂಬಕ್ಕಾಗಿ ನನ್ನನ್ನು ಅರ್ಪಿಸಿಕೊಂಡಿದ್ದೇನೆ. ನಾನು ನಮ್ಮ ಮಗುವನ್ನು ನೋಡಿಕೊಂಡಿದ್ದೇನೆ, ಬಟ್ಟೆ ಒಗೆಯುತ್ತೇನೆ, ಆಹಾರ ತಯಾರಿಸುತ್ತೇನೆ ಮತ್ತು ಇತರ ಮನೆಕೆಲಸಗಳನ್ನು ಮಾಡುತ್ತೇನೆ" ಎಂದು ಲಿ ಹೆನಾನ್ ಟಿವಿಗೆ ತಿಳಿಸಿದ್ದಾರೆ. ಇಷ್ಟೆಲ್ಲಾ ಮಾಡಿದರೂ, ನನ್ನ ಪತಿ ನನ್ನ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸಲಿಲ್ಲ ಎಂದು ಹೇಳಿದ್ದಾರೆ.
ನಾನು ಹೆಚ್ಚು ನಂಬಿದ್ದ ಹಾಗೂ ಅವಲಂಬಿತವಾದ ವ್ಯಕ್ತಿಯಿಂದ ನಿರ್ಲಕ್ಷ್ಯಕ್ಕೆ ಒಳಗಾದ ನಂತರ ನನಗೆ ಬೆಂಬಲದ ನಿರೀಕ್ಷೆ ಇತ್ತು. ಅದಕ್ಕಾಗಿ ನಾನು ಮಾಧ್ಯಮದ ಎದುರು ಹೋಗಿದ್ದೆ ಎಂದಿದ್ದಾರೆ.
ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಲೀಗೆ ವಿಟಿಲಿಗೋ ಎನ್ನುವ ಕಾಯಿಲೆ ಇದೆ ಎಂದಿದ್ದಾರೆ. ಇದರಿಂದಾಗಿ ಕೂದಲು ಉದುರುವ ಮುನ್ನ ಬೂದು ಬಣ್ಣಕ್ಕೆ ತಿರುಗುತ್ತದೆ. ಆಕೆಯ ನೋಟದಲ್ಲಿ ಆದ ಬದಲಾವಣೆಯಿಂದ ನೆರೆಹೊರೆಯ ಮಕ್ಕಳಿಂದ ಅಪಹಾಸ್ಯಕ್ಕೆ ಕಾರಣವಾಯಿತು. ಇದರ ಬೆನ್ನಲ್ಲಿಯೇ ಗಂಡ ಕೂಡ ಅವಮಾನ ಮಾಡಲು ಆರಂಭಿಸಿದ ಎಂದು ಮಹಿಳೆ ಹೇಳಿದ್ದಾರೆ.
ನನ್ನ ಪತಿ ಕುಟುಂಬದ ಸಮಾರಂಭಗಳ ಹಾಗೂ ಸೋಶಿಯಲ್ ಕಾರ್ಯಕ್ರಮಗಳಲ್ಲಿ ನನ್ನನ್ನು ಮಾತನಾಡಿಸುವುದನ್ನೇ ನಿಲ್ಲಿಸಿದ್ದ. ಆತ ಸೋತ ಮುಖಭಾವದಲ್ಲಿ ಇರಲಿ ನಾನೇ ಕಾರಣ ಎಂದು ಹೇಳಿದ್ದ. ವರದಿಯ ಪ್ರಕಾರ, ಆಕೆಯ ಪತಿ ಎಂದಿಗೂ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ. ಆರೋಗ್ಯ ಹೇಗಿದೆ ಎಂದೂ ಕೂಡ ವಿಚಾರಿಸಿರಲಿಲ್ಲ ಎಂದಿದ್ದಾರೆ. ಅಲ್ಲದೆ, ಚಿಕಿತ್ಸೆಗೆ ಒಂದು ರೂಪಾಯಿ ಹಣವನ್ನು ಕೂಡ ಆತ ನೀಡಿಲ್ಲ ಎಂದಿದ್ದಾರೆ.
'ನಾನು ಸೋತ ಮುಖಭಾವದಲ್ಲಿ ಇರಲು ನೀನೇ ಕಾರಣ' ಎಂದು ಆತ ನನಗೆ ಹೇಳಿದ್ದ ಎಂದು ಲೀ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅವನ ವರ್ತನೆಯಿಂದಾಗಿ ತಾನು ಹೆಚ್ಚು ಹೆಚ್ಚು ಹತಾಶೆಗೊಳ್ಳುತ್ತಿದ್ದೆ ಮತ್ತು ಆಗಾಗ್ಗೆ ದಿಗ್ಭ್ರಮೆಗೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ. 16 ವರ್ಷಗಳ ದಾಂಪತ್ಯದ ನಂತರ, ವಿಚ್ಛೇದನದ ಪ್ರಸ್ತಾಪವನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅವಳು ಹೇಳಿದಳು. ಅವರ ಮಗುವಿನ ಕಸ್ಟಡಿಯನ್ನು ಅವಳಿಗೆ ನೀಡಲಾಗಿದ್ದು, SCMP ಪ್ರಕಾರ, ಪತಿ ತನ್ನ ಆರೋಪಗಳಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ ಎಂದು ಲೀ ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.