#Feelfree: ಗರ್ಭಿಣಿಯರು ಸೆಕ್ಸ್ ಮಾಡಬಹುದಾ?

By Suvarna NewsFirst Published Jul 4, 2020, 3:41 PM IST
Highlights

‌ ಗರ್ಭ ಧರಿಸಿದ ಮೇಲೂ ಅವಳಿಗೆ ಲೈಂಗಿಕ ಬಯಕೆಗಳಿವೆ.‌ ಹಸ್ತಮೈಥುನ ಮಾಡುವ ಮೂಲಕ ಲೈಂಗಿಕ ಬಯಕೆಗಳನ್ನು ತೀರಿಸಿಕೊಳ್ಳುತ್ತಿದ್ದಾಳೆ. ಸೆಕ್ಸ್ ಮಾಡುವುದರಲ್ಲೂ ಉತ್ಸುಕತೆ ತೋರುತ್ತಿದ್ದಾಳೆ. ಈ ಟೈಮ್‌ನಲ್ಲಿ ಸೆಕ್ಸ್ ಮಾಡೋದು ಸೇಫಾ?

ಪ್ರಶ್ನೆ- ನನ್ನ ಪತ್ನಿ ಗರ್ಭಿಣಿ. ಐದು ತಿಂಗಳು ತುಂಬಿವೆ.‌ ಗರ್ಭ ಧರಿಸಿದ ಮೇಲೂ ಅವಳಿಗೆ ಲೈಂಗಿಕ ಬಯಕೆಗಳಿವೆ.‌ ಹಸ್ತಮೈಥುನ ಮಾಡುವ ಮೂಲಕ ಲೈಂಗಿಕ ಬಯಕೆಗಳನ್ನು ತೀರಿಸಿಕೊಳ್ಳುತ್ತಿದ್ದಾಳೆ. ಸೆಕ್ಸ್ ಮಾಡುವುದರಲ್ಲೂ ಉತ್ಸುಕತೆ ತೋರುತ್ತಿದ್ದಾಳೆ. ಈ ಟೈಮ್‌ನಲ್ಲಿ ಸೆಕ್ಸ್ ಮಾಡೋದು ಸೇಫಾ? ಇದರಿಂದ ಮಗುವಿನ‌ ಮೇಲೆ ದುಷ್ಪರಿಣಾಮವಾಗುವ‌ ಸಾಧ್ಯತೆ ಇದೆಯಾ?

ಉತ್ತರ - ಸಾಮಾನ್ಯವಾಗಿ ಗರ್ಭ ಧರಿಸಿದ ಆರಂಭದ ಎರಡು ತಿಂಗಳು ಸೆಕ್ಸ್ ಮಾಡಬೇಡಿ.‌ ಕೊನೆಯ ತಿಂಗಳನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಸೆಕ್ಸ್ ಮಾಡಬಹುದು. ಆದರೆ ಕೆಳಹೊಟ್ಟೆಯ ಮೇಲೆ ಅತೀ ಭಾರ ಹಾಕುವುದು ಬೇಡ. ಇಬ್ಬರೂ ಒಂದು ಮಗ್ಗಲಿಗೆ ಮಲಗಿ ಸೆಕ್ಸ್ ನಡೆಸಲು ಯತ್ನಿಸಬಹುದು. ಇಂಥ ಸಮಯದಲ್ಲಿ ಪತ್ನಿ ಕೆಳಗಿರುವ ಆಸನಕ್ಕಿಂತ ಪತ್ನಿ ಮೇಲಿರುವ ಹಾಗೂ ಪತಿ ಕೆಳಗಿರುವ ಆಸನಗಳು ಸೆಕ್ಸ್‌ಗೆ ಸೂಕ್ತ. ಹಾಗೆಯೇ ಈ ಸಂದರ್ಭ ಗಂಡ ಹೆಂಡತಿ ಇಬ್ಬರೂ ಗುಪ್ತಾಂಗಗಳ ಹೈಜಿನ್  ಕಾಯ್ದುಕೊಳ್ಳೋದು ಬಲುಮುಖ್ಯ. ಸೆಕ್ಸ್ ಮಾಡಿದ ಕೂಡಲೇ ಆಕೆ ತನ್ನ ಜನನಾಂಗಗಳನ್ನು ತೊಳೆದುಕೊಳ್ಳಬೇಕು. ಹೈಜಿನ್ ಇಲ್ಲದಿದ್ದರೆ ಜನನಾಂಗಕ್ಕೆ ಸೋಂಕು ತಗುಲಿದರೆ ಭ್ರೂಣಕ್ಕೆ ಅಪಾಯವಾಗುವ ಸಾಧ್ಯತೆ ಇದೆ. 

ಗರ್ಭ ಧರಿಸಿದ ಮಾತ್ರಕ್ಕೆ ಆಕೆಗೆ ಲೈಂಗಿಕ‌ ಬಯಕೆಗಳು ಇರುವುದಿಲ್ಲ ಎಂಬುದು ತಪ್ಪು ಕಲ್ಪನೆ. ಗರ್ಭ ಧರಿಸಿದ ಕೊನೆಯ ಹಂತದವರೆಗೂ ಸೆಕ್ಸ್ ಬಯಕೆ ಹೆಚ್ಚಿನವರಿಗೆ ಇದ್ದೇ ಇರುತ್ತದೆ. ಜೊತೆಗೆ ಈ ಸಂದರ್ಭದಲ್ಲಿ ನಿಯಮಿತವಾಗಿ ಸೆಕ್ಸ್ ಮಾಡುತ್ತಿದ್ದರೆ ಹೆರಿಗೆ ಸಲೀಸಾಗಿ ಆಗುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ಇದಕ್ಕಿನ್ನೂ ಸೂಕ್ತ ಪುರಾವೆ ಸಿಕ್ಕಿಲ್ಲ. 

ನಾಲ್ಕು ಮಕ್ಕಳನ್ನು ಹೆತ್ತೂ ಕನ್ಯತ್ವ ಉಳಿಸಿಕೊಂಡ ಹೆಣ್ಣಿವಳು! 

ಪ್ರಶ್ನೆ- ನನಗೆ ಮುಷ್ಠಿ ಮೈಥುನ‌ ಅಭ್ಯಾಸ ಇದೆ.‌ ಚಿಕ್ಕ ವಯಸ್ಸಿಂದ ಇಲ್ಲಿಯವರೆಗೂ ಮಾಡಿಕೊಂಡು ಬಂದಿದ್ದೇನೆ. ಆದರೆ ಇತ್ತೀಚೆಗೆ ಮುಷ್ಟಿ ‌ಮೈಥುನ‌ ಮಾಡಿದರೆ ಜನನಾಂಗದಲ್ಲಿ ನೋವು ಬರುತ್ತಿದೆ. ನನಗೆ ಕ್ಯಾನ್ಸರ್ ಬಗ್ಗೆ ತುಂಬ ಭಯವಿದೆ. ಇದೇನಾದ್ರೂ ಕ್ಯಾನ್ಸರ್ ಲಕ್ಷಣ ಆಗಿರಬಹುದಾ? 

ಈ ಹಾಟ್‌ ಯುವತಿಯ ನಗ್ನ ಯೋಗ ಈಗ ಭಾರಿ ಟ್ರೆಂಡ್ ! 

ಉತ್ತರ- ಮುಷ್ಟಿ ಮೈಥುನ ನೇರ ಸೆಕ್ಸ್‌ನ ಹಾಗೆ ಅಲ್ಲ. ನೇರ ಸೆಕ್ಸ್‌ನಲ್ಲಿ ಯೋನಿ ಮೃದುವಾಗಿರುವುದರಿಂದ ಶಿಶ್ನಕ್ಕೆ ಏಟು ಆಗುವುದಿಲ್ಲ. ಆದರೆ ಮುಷ್ಟಿ ಮೈಥುನದ ವೇಳೆ ನೀವು ತುಂಬ ಬಿಗಿಯಾಗಿ ಮುಷ್ಟಿಯನ್ನು ಬಿಗಿದುಕೊಂಡಿದ್ದರೆ ಶಿಶ್ನಕ್ಕೆ ನೋವಾಗುವ ಸಾಧ್ಯತೆಗಳಿವೆ. ಹೀಗಾಗಿ ಅಂಥ ಸಂದರ್ಭದಲ್ಲಿ ಮುಷ್ಟಿಯನ್ನು ಬಿಗಿ ಮಾಡಬಾರದು. ಕೆಲವೊಮ್ಮೆ ಅತಿಯಾಗಿ ಉದ್ರಿಕ್ತಗೊಂಡ ಶಿಶ್ನವನ್ನು ತಪ್ಪು ರೀತಿಯಲ್ಲಿ ಸ್ಪರ್ಶಿಸಿದಾಗಲೂ ಹೊಡೆತ ಬೀಳುವ ಸಾಧ್ಯತೆ ಇದೆ. ಅಥವಾ ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಹಸ್ತಮೈಥುನ ಮಾಡಿಕೊಂಡರೂ ನೋವು ಉಂಟಾಗುವ ಸಾದ್ಯತೆ ಇದೆ. ಆದರೂ ಒಮ್ಮೆ ವೈದ್ಯರಲ್ಲಿ ನಿಮ್ಮ ಸಮಸ್ಯೆ ತೋರಿಸುವುದು ಒಳಿತು. ಬೇರೆ ಲಕ್ಷಣಗಳನ್ನು ನೀವು ಸ್ಪಷ್ಟವಾಗಿ ಹೇಳದ ಕಾರಣ ಸಮಸ್ಯೆಯ ಬಗ್ಗೆ ನಿಖರತೆ ಸಿಗುತ್ತಿಲ್ಲ.

ಪ್ರಶ್ನೆ - ನನಗೆ ಕಳೆದ ಕೆಲವು ದಿನಗಳಿಂದ ಸೆಕ್ಸ್ ಬಗ್ಗೆ ಆಸಕ್ತಿಯೆ ಬರುತ್ತಿಲ್ಲ. ಪತ್ನಿಯ ಒತ್ತಾಯಕ್ಕೆ ಲೈಂಗಿಕತೆಯಲ್ಲಿ‌ ತೊಡಗಿಸಿಕೊಂಡರೂ ಬಹಳ‌ ಹೊತ್ತಿನ‌ ಮೇಲೆ ವೀರ್ಯ ಹೊರಬರುತ್ತೆ. ಇದಕ್ಕೆ ವಯಾಗ್ರ ಸೇವಿಸುವುದು ಸೂಕ್ತವೇ?

ಸೋಂಕಿನ ಭಯಾನಾ? ಹೀಗ್ ಮಾಡಿದ್ರೆ ಹೆಲ್ದಿಯಾಗಿರುತ್ತೆ ವಜೈನಾ 

ಉತ್ತರ - ಎಷ್ಟೋ ಸಲ‌ ಆಹಾರ, ಜೀವನ‌ ಕ್ರಮದಿಂದಾಗಿ ಸೆಕ್ಸ್ ಸೇರಿದಂತೆ ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುತ್ತೇವೆ. ನಿತ್ಯವೂ ವ್ಯಾಯಾಮ, ಪೌಷ್ಟಿಕಾಂಶ ಇರುವ ಆಹಾರ ಸೇವಿಸಿ. ಬೆಳ್ಳುಳ್ಳಿ, ಈರುಳ್ಳಿ ಹೆಚ್ಚೆಚ್ಚು ಬಳಸಿ. ಲೈಂಗಿಕತೆ  ಹೆಚ್ಚಿಸಿಕೊಳ್ಳವ ಎಕ್ಸರ್ ಸೈಸ್ ಗಳು ಆನ್ ಲೈನ್ ನಲ್ಲಿವೆ. ನೋಡಿ ಪ್ರಾಕ್ಟೀಸ್ ಮಾಡಿ. ರೊಮ್ಯಾಂಟಿಕ್ ಆಗಿರುವ ಸಿನಿಮಾ ನೋಡಿ. ಆದರೂ ನಿರಾಸಕ್ತಿ ಇದೆ ಎಂದಾದರೆ ವೈದ್ಯರನ್ನು ಸಂಪರ್ಕಿಸಿ.‌ ವಯಾಗ್ರ ಸೇವನೆ ಒಳ್ಳೆಯದಲ್ಲ.

click me!