ಇತ್ತೀಚೆಗೆ ಕೆಲವು ಶ್ರೀಮಂತ ಮಹಿಳೆಯರು ಕನ್ಯತ್ವ ಚಿಕಿತ್ಸೆ(ಹೈಮೆನೋಪ್ಲಾಸ್ಟಿ) ಮಾಡಿಸಿಕೊಳ್ಳುತ್ತಿದ್ದಾರೆ. ಅದು ಕನ್ಯಾಪೊರೆಯನ್ನು ಮರಳಿ ಕೂಡಿಸುವ ಒಂದು ಚಿಕಿತ್ಸೆ. ಇದು ಪುರಾಣ ಕಾಲದಲ್ಲೂ ಇತ್ತು ಅನ್ನುವುದನ್ನು ಸೂಚಿಸುವ ಕತೆಗಳಿವೆ.
ಹೈಮೆನೋಪ್ಲಾಸ್ಟಿ ಅನ್ನುವುದು ಇತ್ತೀಚೆಗೆ ಕೆಲವು ಶ್ರೀಮಂತ ಮಹಿಳೆಯರಲ್ಲಿ ಒಂದು ಖಯಾಲಿ. ಹಾಗೆಂದರೆ, ಈಗಾಗಲೇ ಸೆಕ್ಸ್ ಮತ್ತತರ ಚಟುವಟಿಕೆಗಳಿಂದಾಗಿ ಹರಿದುಹೋಗಿರುವ ಕನ್ಯಾಪೊರೆಯನ್ನು ಮತ್ತೆ ಜೋಡಿಸುವ ಒಂದು ಸಣ್ಣ ಶಸ್ತ್ರಚಿಕಿತ್ಸೆ. ಆದರೆ ಇದರ ದರ ದುಬಾರಿ. ಕೆಲವರಿಗಷ್ಟೇ ಇದು ಲಭ್ಯ. ಈಗ ಭಾರತದಲ್ಲೂ ಇದು ಕಾನೂನುಬದ್ಧ. ಈಗ ಕೆಳಗಿನ ಕತೆ ಓದಿ.
ಮಹಾಭಾರತ ಕತೆ ನಡೆಯುವುದಕ್ಕಿಂತಲೂ ಮೊದಲು, ಯಮುನಾ ನದಿ ತೀರದಲ್ಲಿ ದಾಶರಾಜ ಎಬ ಬೆಸ್ತರ ದೊರೆಯಿದ್ದ. ಈತನಿಗೆ ಯಮುನಾ ನದಿ ದಾಟಲು ಬಂದವರನ್ನು ತೆಪ್ಪದಲ್ಲಿ ನದಿ ದಾಟಿಸುವ ಕೆಲಸ. ತನಗೆ ವಯಸ್ಸಾಯ್ತೆಂದು ಮಗಳು ಮತ್ಸ್ಯಗಂಧಿಯನ್ನು ದೋಣೀ ನಡೆಸಲು ಬಿಟ್ಟಿದ್ದ. ಒಮ್ಮೆ ಮಹಾಮಹಿಮರಾದ ಕೃಷ್ಣದ್ವೈಪಾಯನ (ಪರಾಶರ) ಎಂಬ ಮಹರ್ಷಿಗಳು ನದಿಯ ಬಳಿಗೆ ಬಂದರು. ಅವರನ್ನು ಕೂರಿಸಿಕೊಂಡು ಮತ್ಸ್ಯಗಂಧಿ ನದಿಯನ್ನು ದಾಟತೊಡಗಿದಳು. ಆಕೆಯ ಚೆಲುವನ್ನು ನೋಡಿ ಪರಾಶರ ಮಹರ್ಷಿಗಳು ಉದ್ರೇಕಿತರಾದರು. ಕೂಡಲು ಬಯಸಿದರು. ಆದರೆ ಮತ್ಸ್ಯಗಂಧಿಗೆ ಭಯ. ಭಯಪಡಬೇಡ, ನಿನ್ಯ ಕನ್ಯತ್ವಕ್ಕೆ ಏನೂ ಆಗುವುದಿಲ್ಲ ಎಂದು ಪರಾಶರರು ಅಭಯ ನೀಡಿದರು. ನಂತರ ದೋಣಿಯ ಸುತ್ತ ಮಂಜಿನ ಬಲೆ ನಿರ್ಮಿಸಿ, ಆಕೆಯನ್ನು ಕೂಡಿದರು. ಅಲ್ಲಿಯೇ ಒಂದು ಮಗುವೂ ಹುಟ್ಟಿತು. ಅದಕ್ಕೆ ಪಾರಾಶರ ಅಥವಾ ವ್ಯಾಸ ಎಂದು ಹೆಸರಿಟ್ಟರು. ಮತ್ಸ್ಯಗಂಧಿಯ ಮೈಯ ಮೀನ ವಾಸನೆಯನ್ನು ತೆಗೆದು ಯೋಜನ ದೂರ ಹರಡುವ ಕಸ್ತೂರಿ ಪರಿಮಳವನ್ನು ಕೊಟ್ಟರು. ಆಕೆಯ ಕನ್ಯತ್ವ ಹಾಗೆಯೇ ಉಳಿಯಿತು.
undefined
ಬದುಕೋದಿಕ್ಕೆ ಕಾಲು ಬೇಕಿಲ್ಲ, ಛಲ ಸಾಕು ಅನ್ನುವ ಮುನೀಬಾ ಮಜಾರಿ
ಇನ್ನೊಂದು ಕತೆ ನೋಡಿ. ದುರ್ವಾಸ ಮುನಿಗಳು ಕುಂತಿಗೆ ಐದು ಮಂತ್ರಗಳನ್ನು ಕೊಡುತ್ತಾರೆ. ಆ ಮಂತ್ರಗಳನ್ನು ಪಠಿಸಿ ಯಾವ ದೇವತೆಯನ್ನು ನೆನೆದರೆ ಆ ದೇವತೆ ಬಂದು ಆಕೆಗ ಮಗು ನೀಡಿ ಹೋಗುತ್ತಾನೆ. ಹಾಗೆ ನದಿ ತೀರಕ್ಕೆ ಹೋಧ ಕುಂತಿ ಮಂತ್ರವನ್ನು ಪರೀಕ್ಷಿಸಲು ಸೂರ್ಯನ ಮೇಲೆ ಅದನ್ನು ಪ್ರಯೋಗಿಸುತ್ತಾಳೆ. ಕೂಡಲೇ ಸೂರ್ಯ ಬರುತ್ತಾನೆ. ಅಯ್ಯೋ ಬೇಡ ಬೇಡ ಎಂದು ಕುಂತಿ ಬೆದರುತ್ತಾಳೆ. ಆದರೆ ಸೂರ್ಯ ಮಂತ್ರಕ್ಕೆ ಮಣಿಯಲೇಬೇಕು, ಬೇರೆ ಉಪಾಯ ಇಲ್ಲ ಎಂದು ಹೇಳಿ ಆಕೆಯನ್ನು ಕೂಡಿ, ಅಲ್ಲೇ ಒಬ್ಬ ಮಗನನ್ನೂ ಕೊಡುತ್ತಾನೆ. ಈತನೇ ಕರ್ಣ. ಈ ವಿಷಯ ಯಾರಿಗೂ ತಿಳಿಯದೆ ಇರಲಿ, ಕುಂತಿಯ ಭಾವಿ ಪತಿಗೂ ಗೊತ್ತಾಗದೆ ಇರಲಿ ಎಂದು ಸೂರ್ಯ, ಕುಂತಿಗೆ ಆಕೆಯ ಕನ್ಯತ್ವವನ್ನು ಮರಳಿ ಕೊಡುತ್ತಾನೆ.
ಆಷಾಢ ಶುಕ್ರವಾರ ಹೀಗ್ ಮಾಡಿದರೆ ಮನೆಯಲ್ಲಿ ಐಶ್ವರ್ಯ ತುಂಬಿ ತುಳುಕುತ್ತೆ
ಇನ್ನೂ ಒಂದು ಕತೆಯಿದೆ. ಚಂದ್ರವಂಶದ ರಾಜ ಯಯಾತಿಗೆ ಶರ್ಮಿಷ್ಠೆ ಎಂಬ ಪತ್ನಿಯಲ್ಲಿ ಮಾಧವಿ ಎಂಬ ಮಗಳು ಜನಿಸುತ್ತಾಳೆ. ಈಕೆಗೆ ಹುಟ್ಟಿನಿಂದಲೇ ಒಂದು ವರವಿತ್ತು- ಅದೇನು ಅಂದರೆ ಯಾವತ್ತೂ ಕನ್ಯತ್ವ ಕೆಡದಿರಲಿ ಎಂಬ ವರ. ವಿಶ್ವಾಮಿತ್ರರ ಶಿಷ್ಯ ಗಾಲವ ಎಂಬಾತ, ವಿಶ್ವಾಮಿತ್ರರು ಕೇಳಿದ ಎಂಟುನೂರು ವಿಶೇಷ ಕುದುರೆಗಳ ಗುರುದಕ್ಷಿಣೆ ಸಲ್ಲಿಸಲಾಗದೆ ಯಯಾತಿಯ ಬಳಿಗೆ ಬಂದು ನೆರವು ಕೋರುತ್ತಾನೆ. ಆಗ ಯಯಾತಿ, ಮಾಧವಿಯನ್ನು ಅವನಿಗೆ ಕೊಟ್ಟು, ಈಕೆಯನ್ನ ಬೇಕಾದಂತೆ ಬಳಸಿಕೊಂಡು ಕುದುರೆ ಸಂಪಾದಿಸಿಕೋ ಎನ್ನುತ್ತಾನೆ. ಗಾಲವ ಮೊದಲು ಆಕೆಯನ್ನು ಇಕ್ಷ್ವಾಕು ರಾಜನಿಗೆ ಒಂದು ವರ್ಷದ ಅವಧಿಗೆ ನೀಡಿ ಅವನಿಂದ ಇನ್ನೂರು ಕುದುರೆ ಪಡೆಯುತ್ತಾನೆ. ಈ ರಾಜನಿಂದ ಮಾಧವಿಗೆ ವಸುಮಾನ ಎಂಬ ಮಗ ಜನಿಸುತ್ತಾನೆ. ಬಳಿಕ ಮತ್ತೆ ಕನ್ಯೆಯಾಗುವ ಮಾಧವಿಯನ್ನು ಗಾಲವ, ಕಾಶಿರಾಜನಿಗೆ ಒಂದು ವರ್ಷದ ಅವಧಿಗೆ ನೀಡುತ್ತಾನೆ. ಇವನಿಂದ ಮಾಧವಿಗೆ ಪ್ರತರ್ಧನ ಎಂಬ ಮಗ ಹುಟ್ಟುತ್ತಾನೆ. ಆ ಬಳಿಕ ಭೋಜರಾಜನಿಗೆ ನೀಡುತ್ತಾನೆ. ಅವನಿಂದ ಶಿಬಿ ಎಂಬ ಮಗ ಹುಟ್ಟುತ್ತಾನೆ. ಕೊನೆಯಲ್ಲಿ ಆರು ನೂರು ಕುದುರೆಗಳ ಜೊತೆಗೆ ಈಕೆಯನ್ನೂ ಗಾಲವ ವಿಶ್ವಾಮಿತ್ರನಿಗೆ ಒಪ್ಪಿಸುತ್ತಾನೆ. ಇನ್ನೂ ಇನ್ನೂರು ಕುದುರೆಗಳ ಬದಲು ವಿರ್ಶವಾಮಿತ್ರ ಮಾಧವಿಯನ್ನು ಅಡ್ಜಸ್ಟ್ ಮಾಡಿಕೊಳ್ಳುತ್ತಾನೆ. ಇಷ್ಟಾದರೂ ಮಾಧವಿಯ ಕನ್ಯತ್ವ ಕೆಡುವುದಿಲ್ಲ!
ಇಷ್ಟೆಲ್ಲ ನಿದರ್ಶನಗಳನ್ನು ನೋಡಿದರೆ ಪುರಾಣ ಕಾಲದಲ್ಲೇ ಕನ್ವತ್ವ ಸರ್ಜರಿ ಇದ್ದಿರಲೂ ಬಹುದು ಎಂಬ ಅನುಮಾನ ಬರುವುದಿಲ್ಲವೇ?
ಸೋಂಕಿನ ಭಯಾನಾ? ಹೀಗ್ ಮಾಡಿದ್ರೆ ಹೆಲ್ದಿಯಾಗಿರುತ್ತೆ ವಜೈನಾ