ಗಂಡನನ್ನು ಬಿಟ್ಟು ನಾಯಿಯನ್ನೇ ಮುದ್ದು ಮಾಡ್ತಾಳಂತೆ ಹೆಂಡ್ತಿ! ಯಾಕಮ್ಮಾ ಹೀಗೆ ?

Published : Jan 13, 2023, 03:56 PM IST
ಗಂಡನನ್ನು ಬಿಟ್ಟು ನಾಯಿಯನ್ನೇ ಮುದ್ದು ಮಾಡ್ತಾಳಂತೆ ಹೆಂಡ್ತಿ! ಯಾಕಮ್ಮಾ ಹೀಗೆ ?

ಸಾರಾಂಶ

ವಿವಾಹೇತರ ಸಂಬಂಧವನ್ನು ಇಟ್ಟುಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ತುಂಬಾ ಸಾಮಾನ್ಯವಾಗಿದೆ. ಹೆಂಡತಿಗೆ ಪರಪುರುಷನ ಮೇಲೆ ಒಲವಾದರೆ, ಗಂಡನಿಗೆ ಮತ್ತೊಬ್ಬಳ ಮೇಲೆಯೇ ಕಣ್ಣು. ಇಷ್ಟಕ್ಕೂ ಗಂಡಸರು ಯಾಕೆ ಹೆಂಡತಿಗೆ ಕೈ ಕೊಟ್ಟು ಬೇರೆ ಸಂಬಂಧ ಇಟ್ಟುಕೊಳ್ಳುತ್ತಾರೆ ?

ಗಂಡ-ಹೆಂಡತಿ ಪ್ರೀತಿ, ನಂಬಿಕೆಯಿಂದ ಅನುಸರಿಸಿಕೊಂಡು ಹೋದರಷ್ಟೇ ಅದು ಸುಂದರ ದಾಂಪತ್ಯ ಜೀವನವಾಗುತ್ತದೆ. ಇಲ್ಲದಿದ್ದರೆ ಇಬ್ಬರ ನಡುವೆ ವಿರಸ ಬಂದು ಮ್ಯಾರೀಡ್ ಲೈಫ್‌ ಡಿವೋರ್ಸ್‌ನಲ್ಲಿ ಕೊನೆಗೊಳ್ಳುತ್ತದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಗಂಡ-ಹೆಂಡತಿ ವಿವಾಹೇತರ ಸಂಬಂಧಗಳನ್ನು ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಇದಕ್ಕೇನು ಕಾರಣ ? ಅದರಲ್ಲೂ ಗಂಡಸರು ಯಾಕೆ ಹೆಂಡತಿಗೆ ಕೈ ಕೊಟ್ಟು ಬೇರೆ ಸಂಬಂಧ ಇಟ್ಟುಕೊಳ್ಳುತ್ತಾರೆ. ಇಲ್ಲಿ ಕೆಲ ಗಂಡಸರು ತಾವು ಹೆಂಡತಿಯನ್ನು ಬಿಟ್ಟು ಬೇರೆ ಮಹಿಳೆಯರ ಜೊತೆ ಸಂಬಂಧ ಇಟ್ಟುಕೊಳ್ಳಲು ಕಾರಣವೇನು ಎಂಬುದನ್ನು ತಿಳಿಸಿದ್ದಾರೆ. .

ಯಾವಾಗಲೂ ಗಿಫ್ಟ್‌ ಕೇಳ್ತಾಳೆ ಹೆಂಡ್ತಿ
ನನ್ನ ಹೆಂಡತಿ (Wife)ಯಲ್ಲಿ ನಾನು ನೋಡುವ ಕೆಲವು ಅಂಶಗಳ ಕೊರತೆಯನ್ನು ಅರಿತುಕೊಂಡೆ. ನಮ್ಮ ಮದುವೆಗೆ ಮುಂಚೆ ನಾವು ರಿಸೆಪ್ಷನ್ ಶಾಪಿಂಗ್ ಹೋಗಿದ್ದೆವು ಎಂದು ನನಗೆ ನೆನಪಿದೆ. ಅವಳು ಒಂದು ಉಡುಪನ್ನು ಆರಿಸಿಕೊಂಡಳು ಮತ್ತು ನಾನು ಅವಳಿಗೆ ಅದನ್ನು ಖರೀದಿಸಿ ಕೊಡಲು ತುಂಬಾ ಸಂತೋಷಪಟ್ಟೆ. ಹಣ ಕೊಡಲು ಕ್ಯಾಶ್ ಕೌಂಟರ್ ಗೆ ಹೋದ ನಾನು ಬೆಲೆ ಕೇಳಿ ಬೆಚ್ಚಿ ಬಿದ್ದೆ. ಸೀರೆಯ ಬೆಲೆ 45 ಸಾವಿರ ರೂ.  ಆಗಿತ್ತು. ನಾನು ಮುಗುಳ್ನಕ್ಕು ಅವಳಿಗಾಗಿ ಖರೀದಿಸಿದೆ. ಅವಳು ಇಲ್ಲಿಯವರೆಗೆ ಅದನ್ನು ಎರಡು ಬಾರಿ ಮಾತ್ರ ಧರಿಸಿದ್ದಾಳೆ. ಅವಳ ಹೆಚ್ಚಿನ ಸೀರೆಗಳು ತುಂಬಾ ಬೆಲೆಬಾಳುವವು, ನಾನು ಅವುಗಳನ್ನು ಖರೀದಿಸಲು ಸಾಕಷ್ಟು ದುಡ್ಡು ಖರ್ಚು ಮಾಡಿದ್ದೇನೆ. ಮೊದಲ್ಲೆಲ್ಲಾ ಇದು ಏನೂ ಅನಿಸುತ್ತಿರಲ್ಲಿಲ್ಲ. ಆದ್ರೆ ಈಗೀಗ ಹೆಂಡ್ತಿ (Wife) ಯಾವಾಗಲೂ ಇಂಥಾ ಗಿಫ್ಟ್ ಕೇಳುತ್ತಿರುವುದು ಹಿಂಸೆಯೆನಿಸುತ್ತದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಮದ್ವೆಯಾದ ಮೇಲೆ ಮಹಿಳೆಯರ ಕೆಲಸದ ಕನಸೇ ನುಚ್ಚು ನೂರಾಗುತ್ತಾ?
 
ಹೆಂಡತಿ ನನಗಿಂತ ಹೆಚ್ಚು ನಾಯಿಯನ್ನು ಪ್ರೀತಿಸುತ್ತಾಳೆ
ನಾವು ಮದುವೆಯಾಗಿದ್ದೇವೆ. ನಮ್ಮ ಹನಿಮೂನ್‌ನಲ್ಲಿ, ಅವಳು ನನಗಿಂತ ನಾಯಿ (Dog)ಯನ್ನು ಹೆಚ್ಚು ಇಷ್ಟಪಡುತ್ತಾಳೆ ಎಂದು ಹೇಳಿದಳು, ಮಾತ್ರವಲ್ಲ ನಾನು ಅವಳನ್ನು ಮದುವೆ (Marriage)ಯಾಗಿ ಅವಳ ಜೀವನವನ್ನು ಹಾಳುಮಾಡಿದೆ ಮತ್ತು ಅವಳ ವೃತ್ತಿ ಜೀವನವನ್ನು ಅರ್ಧಕ್ಕೆ ಮೊಟಕುಗೊಳಿಸಿದೆ ಎಂಬ ಆರೋಪ ಮಾಡಿದಳು. ನಂತರ ಇದು ಸಾಮಾನ್ಯವಾಯಿತು. ಕ್ರಮೇಣ ನಾನು ಅವಳ ಮೇಲಿನ ಆಸಕ್ತಿ ಕಳೆದುಕೊಂಡೆ. ಪಾರ್ಟಿಯಲ್ಲಿ ನನ್ನ ಜೂನಿಯರ್‌ನ್ನು ಭೇಟಿಯಾದೆ ಮತ್ತು ಆಕೆಯ ಜೊತೆಯ ಪ್ರೀತಿ (Love)ಯಲ್ಲಿ ಬಿದ್ದೆ ಎಂದು ಇನ್ನೊಬ್ಬರು ತಿಳಿಸಿದರು.

ಮದುವೆ ನಂತರವೂ ಪ್ರಿಯಕರನನ್ನು ಮರೆಯಲ್ಲಿಲ್ಲ
ನಮ್ಮದು ಅರೇಂಜ್ಡ್ ಮ್ಯಾರೇಜ್. 3 ವಾರಗಳ ನಂತರ ಅವಳು ಗಂಭೀರವಾದ ಹಿಂದಿನ ಸಂಬಂಧ (Relationship)ವನ್ನು ಹೊಂದಿದ್ದಾಳೆಂದು ನಾನು ಕಂಡುಕೊಂಡೆ. ಅವಳು ಇನ್ನೂ ಆತನನ್ನು ಪ್ರೀತಿಸುತ್ತಿದ್ದಳು. ನಮ್ಮ ಕುಟುಂಬದಲ್ಲಿ ವಿಚ್ಛೇದನವು ಪ್ರಶ್ನೆಯಿಲ್ಲದ ಕಾರಣ, ನಾನು ಬೇರೆಡೆ ಪ್ರೀತಿಯನ್ನು ಹುಡುಕಲು ಪ್ರಾರಂಭಿಸಿದೆ. ನಾನು ಈಗ ನಾನು ನನ್ನ ಹಳೆಯ ಸ್ನೇಹಿತೆಯೊಂದಿಗೆ ವಿವಾಹೇತರ ಸಂಬಂಧದಲ್ಲಿದ್ದೇನೆ. ಮೊದಲಿಗೆ, ನಾನು ನನ್ನ ಹೆಂಡತಿಗೆ ಹೇಳಲು ಬಯಸಿದ್ದೆ. ಆದರೆ ಆಕೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಕಾರಣ ನನಗೆ ಹೇಳಬೇಕು ಅನ್ನುವುದು ಸಹ ಅನಿವಾರ್ಯವೆನಿಸುತ್ತಿಲ್ಲ ಎಂದು ಹೆಂಡತಿಯಿಂದ ದೂರವಾದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಮದ್ವೆಯಾಗೋಕೆ ಇಷ್ಟವಿಲ್ಲ, ಅಪ್ಪ-ಅಮ್ಮನ ಕಾಟ ತಡೆಯೋಕಾಗ್ತಿಲ್ಲಾ, ನಿಮ್ದೂ ಇದೇ ಸಮಸ್ಯೆನಾ ?

ಹೆಂಡತಿ ನೋಡಲು ಸುಂದರವಾಗಿದ್ದಾಳೆ, ಬುದ್ಧಿವಂತೆಯಲ್ಲ
ನಮ್ಮದು ಪ್ರೇಮ ವಿವಾಹವಾಗಿತ್ತು. ನಾವು 6-7 ತಿಂಗಳ ಕಾಲ ಡೇಟಿಂಗ್ ಮಾಡಿದೆವು, ನಂತರ ಮದುವೆಯಾದೆವು. ನಾನು ಆಕೆ ರಾಜಕೀಯ, ಪುಸ್ತಕಗಳು ಮತ್ತು ಜಗತ್ತಿನ ಸಮಸ್ಯೆಯ ಕುರಿತು ಚರ್ಚಿಸುವ ಬುದ್ಧಿವಂತ ಮಹಿಳೆ ಎಂದು ಭಾವಿಸಿದ್ದೆ. ಆದರೆ ಅವಳು ನೋಡಲು ಮಾತ್ರ ಸುಂದರವಾಗಿದ್ದಾಳೆ. ಯಾವುದೇ ವಿಚಾರ ಶಕ್ತಿಯನ್ನು ಹೊಂದಿಲ್ಲ. ಹೀಗಾಗಿ ನಾನು ಸಂಪೂರ್ಣವಾಗಿ ವಿಭಿನ್ನ ಮಹಿಳೆಯನ್ನು ಮದುವೆಯಾದ ಅನುಭವವಾಗುತ್ತಿದೆ. ಹೀಗಾಗಿ ನಾನು ಆಫೀಸಿನಲ್ಲಿ ಮತ್ತೊಬ್ಬ ಮಹಿಳೆಯನ್ನು ಭೇಟಿಯಾದೆ ಮತ್ತು ಇಬ್ಬರ ಮನಸ್ಥಿತಿಯೂ ಉತ್ತಮವಾಗಿತ್ತು. ಹೀಗಾಗಿ ನಾವಿಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದೆವು. ಹೆಂಡತಿಯಲ್ಲಿ ಯಾವುದೇ ವಿಷಯವನ್ನು ಚರ್ಚಿಸಲು ಸಾಧ್ಯವಾಗದ ಕಾರಣ ನನಗೆ ಹೊಸ ವ್ಯಕ್ತಿಯ ಸಾಂಗತ್ಯ ಖುಷಿ ನೀಡಿತು ಎಂದು ಇನ್ನೊಬ್ಬ ವ್ಯಕ್ತಿ ಹೇಳಿದ್ದಾರೆ.

ಹೆಂಡತಿ ಸನ್ಯಾಸತ್ವವನ್ನು ಇಷ್ಟಪಡುತ್ತಾಳೆ
ನನ್ನ ಹೆಂಡತಿ ಮೊದಲ್ಲೆಲ್ಲಾ ತುಂಬಾ ಚೆನ್ನಾಗಿರುವ ವ್ಯಕ್ತಿತ್ವ (Personality)ವನ್ನು ಹೊಂದಿದ್ದಳು. ಆದರೆ ಆಕೆಗೆ ಗರ್ಭಪಾತವಾದ ನಂತರ ಹೆಚ್ಚು ಧಾರ್ಮಿಕತೆಯನ್ನು ನೆಚ್ಚಿಕೊಂಡಿದ್ದಾಳೆ. ಸಂಸಾರ ಇದೆ ಎಂಬುದನ್ನು ಮರೆತುಬಿಟ್ಟಳು. ತಿಂಗಳುಗಟ್ಟಲೆ ಸೆಕ್ಸ್ ಇರಲಿಲ್ಲ, ನಾನು ಚಿಕಿತ್ಸೆಯನ್ನು ಸಹ ಸೂಚಿಸಿದೆ. ಆದರೆ ಅವಳ ಸಂಬಂಧಿಯೊಬ್ಬರು ಕೆಲವು ಆಧ್ಯಾತ್ಮಿಕ ಪ್ರವಚನಗಳನ್ನು ಸೂಚಿಸಿದರು. ಅವಳು ಈಗ ಮನೆಯಲ್ಲಿಯೇ ಇಲ್ಲ. ನಾನು ಅದನ್ನು ನಿಭಾಯಿಸಲು ಸಾಧ್ಯವಾಗದಿದ್ದಾಗ ನನ್ನ ಪೋಷಕರು ಮಧ್ಯಪ್ರವೇಶಿಸಲು ಬಯಸಿದ್ದರು. ಆದರೆ ಅದು ಸಹ ಸಾಧ್ಯವಾಗಲ್ಲಿಲ್ಲ. ನಾನು ಅನಿವಾರ್ಯವಾಗಿ ಹೆಂಡತಿಯಿಂದ ಬೇರೆಯಾಗಬೇಕಾಯಿತು ಎಂದು ಮತ್ತೊಬ್ಬ ವ್ಯಕ್ತಿ ತಿಳಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Chanakya Niti: ಈ ವಿಷ್ಯದಲ್ಲಿ ಮಹಿಳೆಯರು ಪುರುಷರಿಗಿಂತ ಉತ್ತಮರು, ಅವರಂತೆ ಯಾರೂ ಇಲ್ಲ
37ರ ಪತ್ನಿಯ ಜೊತೆ 92ರ ಹರೆಯದಲ್ಲಿ ಮಗುವಿಗೆ ತಂದೆಯಾದ ವೈದ್ಯ