ಗಂಡ ಅತಿಯಾಗಿ ಪ್ರೀತಿಸ್ತಾನೆ, ಜಗಳಾನೇ ಆಡಲ್ಲ..ಡಿವೋರ್ಸ್ ಬೇಕು ಅಂತಿದ್ದಾಳೆ ಪತ್ನಿ!

By Vinutha PerlaFirst Published Jan 13, 2023, 11:59 AM IST
Highlights

ಹುಡುಗೀರು ಸಾಮಾನ್ಯವಾಗಿ ಗಂಡ ತನ್ನನ್ನು ಅತಿಯಾಗಿ ಪ್ರೀತಿಸಬೇಕು, ಮುದ್ದಿಸಬೇಕು ಅಂತೆಲ್ಲಾ ಬಯಸ್ತಾರೆ. ತನಗಾಗಿ ಹೆಚ್ಚು ಸಮಯ ಕೊಡದಿದ್ದರೆ ಹೆಂಡ್ತೀರ ಮುನೀಸು ಮುಗಿಯೋದೆ ಇಲ್ಲ. ಇಂಥಾ ಮಹಿಳಾ ಮಣಿಗಳ ಮಧ್ಯೆ ಇಲ್ಲೊಬ್ಬಾಕೆ ಗಂಡ ಅತಿಯಾಗಿ ಪ್ರೀತಿಸ್ತಾನೆ ಅಂತ ಡೈವೋರ್ಸೇ ಕೊಟ್ಬಿಟ್ಟಿದ್ದಾಳೆ.

ಅತಿಯಾದರೆ ಅಮೃತವೂ ವಿಷ ಅಂತಾರಲ್ಲ. ಆಕೆಯ ಪಾಲಿಗೆ ಪಾಪ ಹಾಗೆಯೇ ಆಗಿದೆ. ಗಂಡ ಅತಿಯಾಗಿ ಪ್ರೀತಿಸ್ತಿದ್ದಾನೆ ಅನ್ನೋದೆ ಆಕೆಗೆ ಇರಿಟೇಟ್ ಮಾಡ್ತಿದೆಯಂತೆ. ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯ ನಿವಾಸಿಯಾಗಿರುವ ಮಹಿಳೆಯೊಬ್ಬಳು ಹೀಗೊಂದು ಗೋಳನ್ನು ಹೇಳ್ಕೊಂಡಿದ್ದಾಳೆ. ನನ್ನ ಗಂಡ ನನ್ನನ್ನು ಪ್ರೀತಿ ಮಾಡಲ್ಲ ಬರೀ ಜಗಳವಾಡುತ್ತಾನೆ ಎಂದು ಪತ್ನಿಯರು ದೂರುವ ಬಗ್ಗೆ ಕೇಳಿರುತ್ತೇವೆ. ಆದರಿಲ್ಲೊಂದು ಪೂರ್ತಿ ಉಲ್ಟಾಕೇಸು. ಹೆಚ್ಚು ಪ್ರೀತಿಸುವ ಗಂಡ ಸಿಗಬೇಕೆಂದು ಹುಡುಗೀರು ಬಯಸುವ ನಡುವೆ ಮದುವೆಯಾದ 18 ತಿಂಗಳುಗಳ ಬಳಿಕ ಉತ್ತರ ಪ್ರದೇಶದ ಮಹಿಳೆಯೊಬ್ಬಳು ಗಂಡ ತನ್ನನ್ನು ಜಾಸ್ತಿ ಪ್ರೀತಿಸುತ್ತಾನೆ ಹಾಗೂ ನನ್ನೊಂದಿಗೆ ಜಗಳವೇ ಆಡುವುದಿಲ್ಲ ಎಂಬ ವಿಲಕ್ಷಣ ಕಾರಣಕ್ಕೆ ಗಂಡನಿಂದ ಬೇರ್ಪಡಬೇಕು ಎಂದು ಶರಿಯಾ ಧರ್ಮಗುರುಗಳನ್ನು ಸಂಪರ್ಕಿಸಿದ್ದಾಳೆ. 

ಗಂಡ ಅತಿಯಾಗಿ ಪ್ರೀತಿಸ್ತಾನೆ ಅನ್ನೋದೆ ಕಿರಿಕಿರಿ
ದಾಂಪತ್ಯ (Married life) ನಡೆಯೋದೆ ಪ್ರೀತಿ, ವಿಶ್ವಾಸ, ನಂಬಿಕೆಯಿಂದ. ಯಾವಾಗಲೂ ಜಗಳವಾಗ್ತಾ ಇದ್ರೆ ಗಂಡ-ಹೆಂಡತಿ (Husband-wife) ಇಬ್ಬರೂ ನೆಮ್ಮದಿಯಿಂದಿರಲು ಸಾಧ್ಯವಾಗುವುದಿಲ್ಲ. ಇಬ್ಬರು ನಡುವೆ ಅತಿಯಾದ ಪ್ರೀತಿಯಿದ್ದರೆ ದಾಂಪತ್ಯ ಸುಗಮವಾಗಿ ಸಾಗುತ್ತದೆ. ಆದರೆ ಉತ್ತರಪ್ರದೇಶದ ಈ ಮಹಿಳೆಗೆ (Woman) ಗಂಡ ಅತಿಯಾಗಿ ಪ್ರೀತಿ (Love) ಮಾಡುವುದೇ ಇಷ್ಟವಾಗುತ್ತಿಲ್ಲವಂತೆ. ಆತ ಜಗಳವೇ ಮಾಡುತ್ತಿಲ್ಲವೆಂದು ಡಿವೋರ್ಸ್‌ ಪಡೆಯಲು ಯತ್ನಿಸಿದ್ದಾಳೆ. ಆದರೆ ಶರಿಯಾ ಧರ್ಮಗುರುಗಳು, ಇದಕ್ಕೆಲ್ಲಾ ಡೈವೋ​ರ್ಸ್‌ ಕೊಡಲಾಗದು ಎಂದು ತಿರಸ್ಕರಿಸಿದ್ದಾರಂತೆ. ಹಾಗಿದ್ರೆ ಸಮಸ್ಯೆ ಬಗೆಹರಿಸಿ ಎಂದು ಅಕೆ ಮನವಿ (Request) ಮಾಡಿದ್ದಾಳಂತೆ.

ಥೂ ಇದೆಂಥಾ ನರಕ, ಗಂಡನ ಜೊತೆ ಮಾತ್ರವಲ್ಲ ದಿನಾ ಮೈದುನನ ಜೊತೆನೂ ಮಲಗ್ಬೇಕಂತೆ !

ಗಂಡ ಜಗಳವಾಡೋದೆ ಇಲ್ಲ ಎಂದು ದೂರು ನೀಡಿದ ಪತ್ನಿ
ಆಕೆ ತನ್ನ ಪತಿಗೆ ವಿಚ್ಛೇದನ ನೀಡಲು ಬಯಸಿದ ಕಾರಣ ನ್ಯಾಯಾಲಯವನ್ನು ಗೊಂದಲಕ್ಕೀಡುಮಾಡಿತು. ಮಹಿಳೆ ತನ್ನ ಪತಿ ತನ್ನನ್ನು ಅತಿಯಾಗಿ  ಪ್ರೀತಿಸುತ್ತಿರುವುದರಿಂದ ತಾನು ಹತಾಶಳಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ದಂಪತಿಗಳು ತಮ್ಮ ಮದುವೆಯ ಮೊದಲ 18 ತಿಂಗಳುಗಳಲ್ಲಿ ಜಗಳವಾಡಲಿಲ್ಲ ಎಂದು ವರದಿಯಾಗಿದೆ, ಅದಕ್ಕಾಗಿಯೇ ಮಹಿಳೆ ಬೇಸತ್ತಿದ್ದಾಳೆ. 'ಅವನು ತನ್ನ ಮನೆಕೆಲಸಗಳಲ್ಲಿ ಮತ್ತು ಅಡುಗೆಯಲ್ಲಿ ಸಹಾಯ ಮಾಡುತ್ತಾನೆ. ಅವನು ಎಂದಿಗೂ ನನ್ನ ಮೇಲೆ ಕೂಗಾಡುವುದಿಲ್ಲ ಅಥವಾ ಅವನು ನನ್ನನ್ನು ನಿರಾಶೆಗೊಳಿಸಿಲ್ಲ. ಅಂತಹ ವಾತಾವರಣದಲ್ಲಿ ನಾನು ಉಸಿರುಗಟ್ಟಿದ್ದೇನೆ' ಎಂದು ಮಹಿಳೆ ಹೇಳಿದ್ದಾಳೆ.

ಗಂಡ ಯಾವಾಗಲೂ ನಾನು ತಪ್ಪು ಮಾಡಿದಾಗ ಕ್ಷಮಿಸುತ್ತಾನೆ. ಅವನೊಂದಿಗೆ ಜಗಳವಾಡಲು ಬಯಸಿದಾಗಲ್ಲೆಲ್ಲಾ ಪ್ರೀತಿಯಿಂದ ಮಾತನಾಡುತ್ತಾನೆ ಎಂದು ಮಹಿಳೆ ತಿಳಿಸಿದ್ದಾಳೆ. ಕೊನೆಯಲ್ಲಿ ಮಹಿಳೆ ನನ್ನ ದಾಂಪತ್ಯ ಜೀವನ ಹೀಗಿರಬೇಕೆಂದು ನಾನು ಬಯಸಿರಲ್ಲಿಲ್ಲ. ಹೀಗಾಗಿ ಡಿವೋರ್ಸ್ ನೀಡುವಂತೆ ನ್ಯಾಯಾಲಯದಲ್ಲಿ ಕೇಳಿಕೊಂಡಳು. ಆದರೆ ವಿಚ್ಛೇದನ (Divorce) ನೀಡಲು ಇದು ಕ್ಷುಲ್ಲಕ ಕಾರಣವೆಂದು ಹೇಳಿ ಮುಖಂಡರು ಡಿವೋರ್ಸ್‌ಗೆ ವಿರೋಧ ವ್ಯಕ್ತಪಡಿಸಿದರು.

ಇದೆಂಥಾ ವಿಚಿತ್ರ, ತನ್ನನ್ನೇ ತಾನು ಮದ್ವೆಯಾದ ಯುವತಿ ಈಗ ಡಿವೋರ್ಸ್ ಬೇಕು ಅಂತಿದ್ದಾಳೆ !

ನಂತರ ಆಕೆ ಸ್ಥಳೀಯ ಪಂಚಾಯತ್‌ಗೆ ದೂರನ್ನು ನೀಡಿದಳು. ಆದರೆ ಅಲ್ಲಿ ಸಹ ದೂರನ್ನು ಸ್ವೀಕರಿಸಲು ನಿರಾಕರಿಸಲಾಯಿತು.  ಪತಿ ತಾನು ಮಹಿಳೆಗೆ ಎಂದಿಗೂ ಅನ್ಯಾಯ ಮಾಡಿಲ್ಲ ಮತ್ತು ಪರಿಪೂರ್ಣ ಪತಿ ಆಗಬೇಕೆಂದು ಬಯಸಿದ್ದಾಗಿ ಹೇಳಿಕೊಂಡಿದ್ದಾನೆ.

ಮದ್ವೆಯಾದ ಒಂದೇ ಗಂಟೆಯೊಳಗೆ ಡಿವೋರ್ಸ್ ಆಯ್ತು
ಉತ್ತರ ಪ್ರದೇಶದ ಸಂಭಾಲ್‌ನ ಅಸ್ಮೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಥಾ ವಿಚಿತ್ರ ಘಟನೆಯೊಂದು ನಡೆದಿದೆ. ಅಸ್ಮೋಲಿ ಪ್ರದೇಶದ ಹಳ್ಳಿಯೊಂದರಲ್ಲಿ ಯುವಕನೊಬ್ಬನ ಮದುವೆ ನಿಶ್ಚಯವಾಗಿತ್ತು. ಮದುವೆಗೆ ದಿನಾಂಕವೂ ನಿಗದಿಯಾಗಿ ಅದ್ಧೂರಿಯಾಗಿ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ವರ-ವಧು (Groom-Bride) ಹಾಗೂ ಮನೆ ಮಂದಿ, ಸಂಬಂಧಿಕರು ಎಲ್ಲರೂ ರೆಡಿಯಾಗಿದ್ದರು. ಮದುವೆಯೂ ಧಾಂ ಧೂಂ ಎಂದು ನಡೆದೇ ಹೋಯಿತು. ಆದರೆ ಇದೆಲ್ಲದರ ಮಧ್ಯೆ ದೊಡ್ಡ ಹೈಡ್ರಾಮಾವೇ ನಡೆದು ಹೋಯ್ತು. ವರನ ಮೊದಲನೇ ಪತ್ನಿ ಮದುವೆಗೆ ವಿರೋಧ ವ್ಯಕ್ತಪಡಿಸಿದಳು. ಹುಡುಗಿಯನ್ನು ಬಿಟ್ಟುಬಿಡುವಂತೆ ಒತ್ತಾಯಿಸಿದಳು. ಇದರಿಂದ ವರ, ತಕ್ಷಣಕ್ಕೇ ಎಂದರೆ ಮದುವೆಯಾದ ಒಂದೇ ಗಂಟೆಯಲ್ಲಿ ವಧುವಿಗೆ ಡೈವೋರ್ಸ್ ನೀಡಬೇಕಾಯಿತು.

click me!