ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ರೂ ಅಭಿಮಾನಿಗಳಿದ್ದಾರೆ. ಮುಂಬೈನಲ್ಲಿ ಇರುವ ಮನೆಯ ಮುಂದೆಯೂ ದಿನವೂ ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಖ ನೋಡುವುದಕ್ಕಾಗಿ ಮನೆ ಮುಂದೆ ಅಲೆದಾಡುತ್ತಿರುತ್ತಾರೆ. ಆದರೆ ಮನೆಯಲ್ಲಿ ಮಾತ್ರ ಶಾರುಖ್ ಖಾನ್ ಆಟ ಏನೂ ನಡೆಯೋದೆ ಇಲ್ವಂತೆ
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ರೂ ಅಭಿಮಾನಿಗಳಿದ್ದಾರೆ. ಮುಂಬೈನಲ್ಲಿ ಇರುವ ಮನೆಯ ಮುಂದೆಯೂ ದಿನವೂ ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಖ ನೋಡುವುದಕ್ಕಾಗಿ ಮನೆ ಮುಂದೆ ಅಲೆದಾಡುತ್ತಿರುತ್ತಾರೆ. ಆದರೆ ಮನೆಯಲ್ಲಿ ಮಾತ್ರ ಶಾರುಖ್ ಖಾನ್ ಆಟ ಏನೂ ನಡೆಯೋದೆ ಇಲ್ವಂತೆ ಇಲ್ಲೇನಿದ್ದರೂ ಎಲ್ಲಾ ಪತ್ನಿಯ ಅಣತಿಯಂತೆ ನಡೆಯಬೇಕು. 1991ರ ಆಕ್ಟೋಬರ್ 25 ರಂದು ಮದುವೆಯಾದ ಶಾರುಖ್ ಖಾನ್ ಗೌರಿ ಖಾನ್ ಜೋಡಿ ಮದುವಯಾಗಿ ಇಂದಿಗೆ 32 ವರ್ಷಗಳೇ ಕಳೆದರೂ ಪತ್ನಿ ಗೌರಿ ಖಾನ್ ಮನೆಯಲ್ಲಿ ಹಾಕಿರುವ ಕೆಲ ರೂಲ್ಸ್‌ಗಳಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ, ಇಂದಿಗೂ ಅದೇ ರೂಲ್ಸ್ ಫಾಲೋ ಮಾಡ್ತಾರೆ ಶಾರುಖ್ ಖಾನ್. ಪತ್ನಿ ಹಾಕಿರುವ ಈ ರೂಲ್ಸ್ ಬ್ರೇಕ್ ಮಾಡುವ ಧೈರ್ಯ ಮಾಡಿಲ್ಲ ಜವಾನ್ ನಟ.
ಹಾಗಾದರೆ ಆರ ರೂಲ್ಸ್ ಯಾವುದು? ಸಿನಿಮಾದ ಕೆಲಸಗಳನ್ನು ಮನೆಯವರೆಗೂ ತೆಗೆದುಕೊಂಡು ಬರಬಾರದು ಎಂಬುದು. ಮನೆಯ ಕೆಲಸ ಮನೆಗೆ ಹೊರಗಿನ ಕೆಲಸ ಹೊರಗೆ ಎರಡನ್ನು ಎಲ್ಲು ಮಿಕ್ಸ್ ಮಾಡಬಾರದು ಎಂಬುದು ಗೌರಿ ಖಾನ್ ರೂಲ್ಸ್ ಒಂದು ವೇಳೆ ಸಿನಿಮಾ ಕೆಲಸವನ್ನು ಮನೆಗೆ ತಂದಿದ್ದೆ ಆದರಲ್ಲಿ ಮನೆಯಲ್ಲಿರುವ ಟಿವಿ ಒಡೆದು ಹೋಗುವುದು ಪಕ್ಕಾ ಎಂದು ಪತಿ ಶಾರುಖ್ ಖಾನ್‌ಗೆ ಎಚ್ಚರಿಸಿದ್ದರಂತೆ ಗೌರಿ ಖಾನ್, ಅಲ್ಲದೇ ಸಿನಿಮಾ ಸ್ಕ್ರಿಫ್ಟ್‌ಗಳನ್ನು ಮನೆಗೆ ಹೊತ್ತು ತಂದರೂ ಅವೆಲ್ಲವೂ ಸೀದಾ ಕಿಟಕಿ ಮೂಲಕ ಹೊರಗೆ ಹೋಗುವುದು ಎಂದಿದ್ದರಂತೆ ಬಾದ್‌ಷಾನ ಪತ್ನಿ.
ಇತಿಹಾಸ ಸೃಷ್ಟಿಸಿದ ಶಾರುಖ್ ಡಂಕಿ: ಯುರೋಪ್‌ನ ಅತಿದೊಡ್ಡ ಥಿಯೇಟರ್ನಲ್ಲಿ ಬಿಡುಗಡೆ- ವಿಡಿಯೋ ವೈರಲ್
ಸಿನಿಮಾವನ್ನೇ ಬದುಕಾಗಿಸಿರುವ ನಟನ ಪತ್ನಿ ಆದರೂ ಗೌರಿ ಖಾನ್‌ಗೆ ಮಾತ್ರ ಸಿನಿಮಾದಲ್ಲಿನ ನಟನೆಯಲ್ಲಾಗಲಿ ಸಿನಿಮಾದ ಮೇಲಾಗಲಿ ಅಂತ ಪ್ರೀತಿಯೇನಿಲ್ಲ, ಶಾರುಖ್ ಜೊತೆಗಿನ ಮದ್ವೆಯಾಗಿ ಹಲವು ವರ್ಷಗಳ ನಂತರ ನೀಡಿದ ಹಳೆಯ ಸಂದರ್ಶನವೊಂದರಲ್ಲಿ ಸಿನಿಮಾ ಬಗ್ಗೆ ಮಾತನಾಡಿದ ಗೌರಿ ಖಾನ್, ಸಿನಿಮಾವೊಂದು ಅತ್ಯಂತ ಕೆಟ್ಟ ವೃತ್ತಿ ಎಂದು ಹೇಳಿದ್ದರು. ನನಗೆ ಎಂಥಹದ್ದೇ ದೊಡ್ಡ ಆಫರ್ ನೀಡಿದರು ಸಿನಿಮಾದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದಿದ್ದರು.
ಅಲ್ಲದೇ ಸಿನಿಮಾ ಕೆಲಸ ಮುಗಿಸಿ ಮನೆಗೆ ಬರುವ ಗಂಡನಿಗೂ ಕೆಲ ನಿಯಮಗಳನ್ನು ತಾನು ಜಾರಿಗೆ ತಂದಿದ್ದಾಗಿ ಹೇಳಿಕೊಂಡಿದ್ದರು ಗೌರಿ ಖಾನ್. 1994ರ ಸಂದರ್ಶನವೊಂದರಲ್ಲಿ ಮಾತನಾಡಿದ ಗೌರಿ ಖಾನ್, ನಾವು ಆತನ ಕೆಲಸದ ಬಗ್ಗೆ ಮನೆಯಲ್ಲಿ ಚರ್ಚೆಯನ್ನೇ ಮಾಡುವುದಿಲ್ಲ. ಅಲ್ಲದೇ ಶಾರುಖ್ ಖಾನ್ ಮನೆಯಲ್ಲಿ ಹಿಂದಿ ಸಿನಿಮಾ ನೋಡುವುದಕ್ಕೆ ಟಿವಿ ಏನಾದರೂ ಹಾಕಿದರೆ ನಾನು ಟಿವಿಯನ್ನೇ ಒಡೆದು ಹಾಕುವೆ ಅಷ್ಟೇ, ಒಂದು ವೇಳೆ ಸಿನಿಮಾದ ಸ್ಕ್ರಿಪ್ಟ್ ಮನೆಗೆ ತಂದರೆ ಅದು ನೇರವಾಗಿ ಕಿಟಿಕಿ ಮೂಲಕ ಹೊರಗೆ ಹೋಗುವುದು. ಈ ಎಲ್ಲಾ ಕೆಲಸಕ್ಕೂ ಅವರಿಗೆ ಸಿನಿಮಾ ಸೆಟ್‌ನಲ್ಲೇ ಸಮಯವಿದೆ ಎಂದು ಹೇಳಿದ್ದರು ಗೌರಿ ಖಾನ್.
ಕುತೂಹಲ ಮೂಡಿಸಿದ ಶಾರುಖ್ ದೀಪಿಕಾ ಹೊಸ ಪ್ರೊಮೋ: ಪಠಾಣ್ 2 ಅಲ್ವಂತೆ! ಹಾಗಿದ್ರೆ ಇದೇನು?
ಈ ನಿಯಮವನ್ನು ಇಂದಿಗೂ ಪಾಲಿಸಲಾಗುತ್ತದೆ ಇದಕ್ಕೆ ಸಾಕ್ಷ್ಯವೆಂಬಂತೆ ಸಿನಿಮಾ ನಿರ್ಮಾಪಕರು ಗೌರಿ ಖಾನ್ ಮನೆಯಲ್ಲಿ ಇಲ್ಲದಾಗ ಮಾತ್ರ ಶಾರುಖ್ ಖಾನ್ ಮನೆಯವರೆಗೆ ಪಾದ ಬೆಳೆಸುತ್ತಾರಂತೆ. ಆದರೆ ನಂತರದಲ್ಲಿ ನಟ ತಮ್ಮ ಕಚೇರಿಯನ್ನು ಮನೆಯಲ್ಲೇ ಮುಂಭಾಗದಲ್ಲಿ ನಿರ್ಮಾಣ ಮಾಡಿದ್ದರು. ಆದರೆ ಇದಕ್ಕೆ ಮಾತ್ರ ಗೌರಿ ಖಾನ್ ವಿರೋಧವಿರಲಿಲ್ಲ.
ದೆಹಲಿಯಲ್ಲಿ ಪಂಜಾಬಿ ಕುಟುಂಬಕ್ಕೆ ಸೇರಿದವರಾದ ಗೌರಿಖಾನ್ ಅವರು ಶಾರುಖ್ ಖಾನ್ ವಿವಾಹದ ನಂತರವಷ್ಟೇ ಮುಂಬೈಗೆ ಶಿಫ್ಟ್ ಆಗಿದ್ದರು. ಆರಂಭದ ದಿನಗಳಲ್ಲಿ ಅವರಿಗೆ ಈ ಮಾಯಾನಗರಿಯಲ್ಲಿ ಹೊಂದಿಕೊಳ್ಳುವುದೇ ಕಷ್ಟವಾಗಿತ್ತಂತೆ. ನಾನು ಬಾಂಬೆಯನ್ನು ಬಹಳವಾಗಿ ದ್ವೇಷಿಸುತ್ತಿದೆ. ಇಲ್ಲಿ ನನಗೆ ಯಾರು ಹೆಚ್ಚಿನ ಸ್ನೇಹಿತರಿರಲಿಲ್ಲ. ಇಲ್ಲಿಗೆ ಬಂದ ನಂತರ ನಾನು ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿದೆ. ಆದರೆ ಬರುಬರುತ್ತಾ ಮುಂಬೈನಲ್ಲಿ ಫನ್ ಮಾಡುವುದಕ್ಕೆ ಶುರು ಮಾಡಿದೆ ಎಂದು ಹೇಳಿಕೊಂಡಿದ್ದಾರೆ ಗೌರಿ.
ಪ್ರಸ್ತುತ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುವ ಶಾರುಖ್ ಖಾನ್ ಅವರು ಬಾಲಿವುಡ್ ನಟರ ಹಲವು ಮನೆ ಕಚೇರಿಗಳಿಗೆ ಇಂಟೀರಿಯರ್ ಡಿಸೈನ್ ಮಾಡಿದ್ದಾರೆ. ಅಲ್ಲದೇ ಶಾರುಖ್ ಖಾನ್ ಪ್ರಾಡಕ್ಷನ್ ಹೌಸ್ ರೆಡ್ ಚಿಲ್ಲಿಸ್‌ನ ಸಹ ಸಂಸ್ಥಾಪಕರಾಗಿಯೂ ಕೆಲಸ ಮಾಡ್ತಿದ್ದಾರೆ.