2018ರಲ್ಲಿ ಫ್ಲಿಪ್ ಕಾರ್ಟ್ ಅನ್ನು ವಾಲ್ ಮಾರ್ಟ್ ಸಂಸ್ಥೆಗೆ ಹಸ್ತಾಂತರಿಸಿದ ಬಳಿಕ, ಬಿನ್ನಿ ಬನ್ಸಾಲ್ ಮತ್ತು ಸಚಿನ್ ಬನ್ಸಾಲ್ ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಬಹಳಷ್ಟು ಜನರು ಕುತೂಹಲ ಹೊಂದಿದ್ದರು. ಇದೀಗ, ಇ-ಕಾಮರ್ಸ್ ವಲಯಕ್ಕೆ ಬಿನ್ನಿ ಬನ್ಸಾಲ್ ಮರು ಪ್ರವೇಶವಾಗಿದೆ.
ಬೆಂಗಳೂರಿನ ಪುಟ್ಟ ಮನೆಯೊಂದರಲ್ಲಿ ಆರಂಭವಾದ ಫ್ಲಿಪ್ ಕಾರ್ಟ್ ಕಂಪೆನಿ ಇಂದು ಇ-ಕಾಮರ್ಸ್ ವಲಯದ ದೈತ್ಯ ಸಂಸ್ಥೆಯಾಗಿ ಬೆಳೆದುನಿಂತಿದೆ. ಒಂದು ಮಾಹಿತಿ ಪ್ರಕಾರ, ಭಾರತದ ಇ-ಕಾಮರ್ಸ್ ವಲಯದ ಶೇಕಡ 39ರಷ್ಟು ಪಾಲು ಫ್ಲಿಪ್ ಕಾರ್ಟ್ ನದ್ದಾಗಿದೆ ಎಂದರೆ ಇದರ ಅಗಾಧತೆ ಊಹಿಸಬಹುದು. ಆರಂಭದ ದಿನಗಳ ಆನ್ ಲೈನ್ ಪುಸ್ತಕ ಮಾರಾಟದಿಂದ ಇಂದು ಎಲ್ಲ ರೀತಿಯ ಗ್ರಾಹಕ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಇದರ ಸಾಧನೆಯ ಹಿಂದಿರುವ ಶಕ್ತಿ ಬಿನ್ನಿ ಬನ್ಸಾಲ್ ಮತ್ತು ಸಚಿನ್ ಬನ್ಸಾಲ್. ಅಪೂರ್ವ ಯಶಸ್ಸು ಗಳಿಸಿದ್ದರೂ ಫ್ಲಿಪ್ ಕಾರ್ಟ್ ಅನ್ನು 2018ರಲ್ಲಿ ಅಮೆರಿಕದ ವಾಲ್ ಮಾರ್ಟ್ ಗೆ ಮಾರಾಟ ಮಾಡಿದಾಗ ಬಹಳಷ್ಟು ಜನ ಎಲ್ಲೋ ಒಂದು ಕಡೆ ಬೇಸರ ಪಟ್ಟುಕೊಂಡಿದ್ದುದು ಸುಳ್ಳಲ್ಲ. ಜತೆಗೆ, ಇತ್ತೀಚಿನ ದಿನಗಳಲ್ಲಿ, ಇದರ ಸ್ಥಾಪಕರಾಗಿದ್ದ ಬಿನ್ನಿ ಬನ್ಸಾಲ್ ಮತ್ತು ಸಚಿನ್ ಬನ್ಸಾಲ್ ಎಲ್ಲಿ ಹೋದರು ಎನ್ನುವ ಸಂಗತಿಯೂ ಕುತೂಹಲ ಮೂಡಿಸಿತ್ತು. ಇದೀಗ, ಬಿನ್ನಿ ಬನ್ಸಾಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಿನ್ನಿ ಬನ್ಸಾಲ್, ಚಿಕ್ಕಪುಟ್ಟ ಇ-ಕಾಮರ್ಸ್ ಸಂಸ್ಥೆಗಳಿಗೆ ನೆರವಾಗುವುದಕ್ಕೋಸ್ಕರ ಆಪ್ ಡೋರ್ ಎನ್ನುವ ಸ್ಟಾರ್ಟಪ್ ಅನ್ನು ಆರಂಭಿಸಿದ್ದಾರೆ.
ಹೆಚ್ಚು ವಹಿವಾಟು ಹೊಂದಿಲ್ಲದ ಇ-ಕಾಮರ್ಸ್ (E-Commerce) ಕಂಪೆನಿಗಳಿಗೆ (Company) ಅಮೆಜಾನ್, ವಾಲ್ ಮಾರ್ಟ್, ಫ್ಲಿಪ್ ಕಾರ್ಟ್ ನಂತಹ ದೈತ್ಯ (Big) ಸಂಸ್ಥೆಗಳ ಎದುರು ಕಾರ್ಯನಿರ್ವಹಿಸಲು ಅಪಾರ ಧೈರ್ಯದೊಂದಿಗೆ ಚಾಲಾಕಿತನವೂ ಬೇಕು. ಅಷ್ಟೇ ಅಲ್ಲ, ವಿನೂತನ ಐಡಿಯಾಗಳೂ (Idea) ಬೇಕು. ಇ-ಕಾಮರ್ಸ್ ವಲಯದಲ್ಲಿ ದೊಡ್ಡ ಸಂಸ್ಥೆಗಳ ಹಿಡಿತ ಸಾಕಷ್ಟಿದ್ದರೂ ಬೆಳವಣಿಗೆಯಾಗಲು ಅವಕಾಶಗಳೂ ಹೇರಳವಾಗಿವೆ. ಆದರೆ, ಅದಕ್ಕೂ ಹಲವು ರೀತಿಯ ಸಂಪನ್ಮೂಲ (Resource), ಸವಲತ್ತುಗಳು ಬೇಕಾಗುತ್ತವೆ. ಅಂಥ ಸೌಲಭ್ಯ ಕಲ್ಪಿಸುವ ನವೋದ್ಯಮಕ್ಕೆ ಚಾಲನೆ ನೀಡುವ ಮೂಲಕ ಬಿನ್ನಿ ಬನ್ಸಾಲ್ (Binny Bansal) ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಮಾಡೋದು ಅಡುಗೆ, ಗಳಿಕೆ ಸಿನಿ ನಟಿಯರಿಗಿಂತಲೂ ಹೆಚ್ಚು! ಈಕೆಗೊಂದು ಸಲಾಂ!
ಬ್ಯುಸಿನೆಸ್ (Business) ವಲಯಕ್ಕೆ ಬೆಂಬಲ
ಫ್ಲಿಪ್ ಕಾರ್ಟ್ ಸಂಸ್ಥಾಪಕ ಬಿನ್ನಿ ಬನ್ಸಾಲ್ ಅವರ ಮೌಲ್ಯ 11661 ಕೋಟಿ ರೂಪಾಯಿ. ಇವರು ಐಐಟಿ ಪದವೀಧರರಾಗಿದ್ದು, ವಿನೂತನ ಚಿಂತನೆಗೆ ಹೆಸರುವಾಸಿ. ತಮ್ಮ ಹೊಸ ಸ್ಟಾರ್ಟಪ್ (Start up) ಮೂಲಕ ಅವರು, ಇ-ಕಾಮರ್ಸ್ ಕ್ಷೇತ್ರದ ಸಂಸ್ಥೆಗಳಿಗೆ ವಿನ್ಯಾಸ, ಪ್ರಾಡಕ್ಟ್ (Product) ಡೆವಲಪ್ ಮೆಂಟ್, ಮಾನವ ಸಂಪನ್ಮೂಲ ನಿರ್ವಹಣೆ ಸೇರಿದಂತೆ ಇನ್ನೂ ಹಲವು ರೀತಿಯ ಬೆಂಬಲ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ. ಈ ಸಂಸ್ಥೆಗಳು ತಮ್ಮ ವಲಯದಲ್ಲಿ ಉದ್ಯಮ ವಿಸ್ತರಿಸಿಕೊಳ್ಳಲು ನೆರವಾಗಲಿದ್ದಾರೆ. ಇದರಿಂದ, ದಿಗ್ಗಜ ಕಂಪೆನಿಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ನಂತಹ ಪ್ರಮುಖ ಸಂಸ್ಥೆಗಳ ನಡುವೆಯೂ ತಮ್ಮ ಕಾರ್ಯಕ್ಷೇತ್ರ ವಿಸ್ತರಿಸಿಕೊಳ್ಳಲು ಈ ಕಂಪೆನಿಗಳಿಗೆ ಸಾಧ್ಯವಾಗಲಿದೆ.
ಮರು ಎಂಟ್ರಿ (Entry)
ಬಿನ್ನಿ ಬನ್ಸಾಲ್ ಹಾಗೂ ಸಚಿನ್ ಬನ್ಸಾಲ್ ತಾವು ಸ್ಥಾಪನೆ ಮಾಡಿದ್ದ ಫ್ಲಿಪ್ ಕಾರ್ಟಿನ ಶೇ.80ರಷ್ಟು ಶೇರುಗಳನ್ನು ವಾಲ್ ಮಾರ್ಟ್ (Walmart) ಗೆ 2018ರಲ್ಲಿ ಹಸ್ತಾಂತರ ಮಾಡಿದ್ದರು. ಅದಾಗಿ 5 ವರ್ಷಗಳ ಬಳಿಕ ಈಗ ಬಿನ್ನಿ ಬನ್ಸಾಲ್ ಮತ್ತೆ ಕಂಪೆನಿ ಆರಂಭಿಸಿರುವುದು ಹೊಸ ನಿರೀಕ್ಷೆಗಳನ್ನು ಮೂಡಿಸಿದೆ. ಯಾವುದೇ ಸ್ಪರ್ಧಾತ್ಮಕ ಸಂಸ್ಥೆಗಳ ಸ್ಥಾಪನೆ ಮಾಡುವಂತಿಲ್ಲ ಎಂದು ವಾಲ್ ಮಾರ್ಟ್ ಜತೆಗೆ ಮಾಡಿಕೊಂಡಿದ್ದ ಒಪ್ಪಂದದ 5 ವರ್ಷಗಳ ಅವಧಿ 2023ಕ್ಕೆ ಮುಗಿದ ಬೆನ್ನಲ್ಲೇ ಹೊಸ (New) ಕಂಪೆನಿ ಶುರುವಾಗಿದೆ.
700 ರೂ. ಹೂಡಿ ಕೆಲಸ ಶುರುಮಾಡಿದವಳ ಗಳಿಕೆ ಈಗ ಒಂದೂವರೆ ಲಕ್ಷ !
ಮತ್ತೆ ಇ-ಕಾಮರ್ಸ್ ವಲಯಕ್ಕೆ ಬಿನ್ನಿ ಬನ್ಸಾಲ್ ಆಗಮನವಾಗಿದೆ. ಆದರೆ, ಗ್ರಾಹಕರಿಗೆ ಉತ್ಪನ್ನ ತಲುಪಿಸುವ ಸಂಸ್ಥೆಯ ಬದಲು ಬಿನ್ನಿ ಅವರ ದೃಷ್ಟಿಕೋನ ಇನ್ನಷ್ಟು ವಿಸ್ತಾರವಾದ ಮಾಧ್ಯಮದಲ್ಲಿ ಮೂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆಪ್ ಡೋರ್ (OppDoor) ವೆಬ್ ಸೈಟ್ ಪ್ರಕಾರ, ಆರಂಭಿಕವಾಗಿ ಅಮೆರಿಕ, ಕೆನಡಾ, ಮೆಕ್ಸಿಕೋ, ಇಂಗ್ಲೆಂಡ್, ಜರ್ಮನಿ, ಸಿಂಗಾಪುರ, ಜಪಾನ್ ಗಳ ಇ-ಕಾಮರ್ಸ್ ವಲಯದಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸಲಿದೆ.