50ರ ಇಳಿ ಸಂಜೆಯಲ್ಲಿ ಒಂಟಿಯಾಗುವೆ ಎಂದು ಊಹೆಯೂ ಮಾಡಿರಲಿಲ್ಲ: ಮಿಲಿಂದಾ ಗೇಟ್ಸ್

By Anusha Kb  |  First Published Jul 16, 2024, 3:13 PM IST

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಅವರ ಮಾಜಿ ಪತ್ನಿ ಮಿಲಿಂದಾ ಬಿಲ್‌ಗೇಟ್ಸ್‌ ಅವರು ತಮ್ಮ 50ರ ಹರೆಯದಲ್ಲಿ ವಿಚ್ಚೇದಿತಳಾಗಿ ಏಕಾಂಗಿಯಾದ ನೋವಿನ ಕ್ಷಣಗಳನ್ನು ಪಾಡ್‌ಕಸ್ಟ್ ವೇಳೆ ಹಂಚಿಕೊಂಡಿದ್ದು, ಇದು ನನ್ನ ಜೀವನದ ಬಹಳ ಕಷ್ಟದ ಸಮಯ ಎಂದು ಹೇಳಿಕೊಂಡಿದ್ದಾರೆ.


ಎಲ್ಲರ ಬದುಕಿನಲ್ಲಿಯೂ ಕಷ್ಟಸುಖಗಳಿರುತ್ತವೆ. ಶ್ರೀಮಂತರೇ ಇರಬಹುದು, ಮಧ್ಯಮ, ಬಡವರ್ಗವೇ ಇರಬಹುದು. ಆದರೆ ಬದುಕಿನಲ್ಲಿ ಏಳುಬೀಳುಗಳು ಸಾಮಾನ್ಯ. ಕಾರಣಗಳು ಮಾತ್ರ ವಿಭಿನ್ನ ಆದರೆ ನೋವು ನಲಿವು ಎಲ್ಲರಿಗೂ ಒಂದೇ ಜೀವನವನ್ನೂ ನಾವು ಹೀಗೆ ಇರಬೇಕು ಎಂದು ಬಯಸಬಹುದು. ಆದರೆ ಅದೂ ನಾವಂದುಕೊಂಡಂತೆಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ವಿಶ್ವದ ಶ್ರೀಮಂತ ಉದ್ಯಮಿ ಕೊಡುಗೈ ದಾನಿ ಬಿಲ್‌ಗೇಟ್ಸ್ ಅವರ ಮಾಜಿ ಪತ್ನಿ ಮಿಲಿಂದಾ ಬಿಲ್‌ಗೇಟ್ಸ್‌ ಅವರು ತಮ್ಮ 50ರ ಹರೆಯದಲ್ಲಿ ವಿಚ್ಚೇದಿತಳಾಗಿ ಏಕಾಂಗಿಯಾದ ನೋವಿನ ಕ್ಷಣಗಳನ್ನು ಪಾಡ್‌ಕಸ್ಟ್ ವೇಳೆ ಹಂಚಿಕೊಂಡಿದ್ದು, ಇದು ನನ್ನ ಜೀವನದ ಬಹಳ ಕಷ್ಟದ ಸಮಯ ಎಂದು ಹೇಳಿಕೊಂಡಿದ್ದಾರೆ.

ಮದುವೆ ಎಂದರೆ ಅದು ಕೇವಲ ಸಂಬಂಧವಲ್ಲ, ಅದೊಂದು ದೀರ್ಘಾಕಾಲದ ಕನಸು ಕಲ್ಪನೆ ಗುರಿಗಳ ಇನ್‌ವೆಸ್ಟ್‌ಮೆಂಟ್‌, ಒಬ್ಬರ ಜೊತೆಗೂಡಿ ನಾವು, ನಮ್ಮ ಸಮಯ ಹಣ ಜೀವನ ಎಲ್ಲವನ್ನೂ ಒಬ್ಬರೊಂದಿಗೆ ಹೂಡಿಕೆ ಮಾಡಿ, ಉತ್ತಮ ಫಲದ ನಿರೀಕ್ಷೆಯಲ್ಲಿರುತ್ತೇವೆ. ಇಬ್ಬರ ಕನಸುಗಳನ್ನು ಜೊತೆ ಜೊತೆಯಾಗಿ ಈಡೇರಿಸುವುದರ ಜೊತೆಗೆ ಸಾಯುವವರೆಗೆ ಜೊತೆಯಾಗಿರಬೇಕು ಲೋಕ ಮೆಚ್ಚುವಂತೆ ಬಾಳಬೇಕು.  ಇಳಿವಯಸ್ಸಿನಲ್ಲಿ ಜೊತೆ ಜೊತೆಯಾಗಿ ಸಾಗಬೇಕು ಎಂಬ ಕನಸು ಕಲ್ಪನೆಯಲ್ಲೇ ಬಹುತೇಕರು ಮದುವೆ ಎಂಬ ಬದುಕಿನ ಹೊಸ ಪುಟಕ್ಕೆ ಕಾಲಿಡುತ್ತಾರೆ.  ಆದರೆ ಹಲವು ದಶಕಗಳ ಕಾಲ ಜೊತೆಗಿದ್ದು, ಇನ್ನೇನು ಇಳಿವಯಸ್ಸಿಗೆ ಜಾರುವ ಸಮಯಕ್ಕೆ ಜೀವದ ಗೆಳೆಯ ದೂರಾದರೆ ಹೇಗಿರುತ್ತದೆ ಹೇಳಿ? ಇದೇ ಸ್ಥಿತಿ ಇಂದು ಮಿಲಿಂದಾ ಫ್ರೆಂಚ್ ಗೇಟ್ ಅವರದ್ದು.

Tap to resize

Latest Videos

ಬಿಲ್‌ ಗೇಟ್ಸ್ ಜೊತೆ ವಿಚ್ಛೇದನದ ಮೂರು ವರ್ಷಗಳ ಬಳಿಕ ಗೇಟ್ಸ್ ಫೌಂಡೇಶನ್‌ಗೂ ಮಿಲಿಂದಾ ಗೇಟ್ಸ್ ರಾಜೀನಾಮೆ

ಈ ವಿಚಾರವನ್ನು ಅವರು ಬಹಳ ನೋವಿನಿಂದ ಹೇಳಿಕೊಂಡಿದ್ದು, ಕಣ್ಣಾಲಿಗಳನ್ನು ತೇವಗೊಳಿಸುತ್ತದೆ. ಮಿಲಿಂದಾ ಫ್ರೆಂಚ್‌ ಗೇಟ್‌ ಹಾಗೂ ಉದ್ಯಮಿ ಬಿಲ್‌ಗೇಟ್ಸ್‌  2021ರಲ್ಲಿ ತಮ್ಮ 27 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ್ದರು. ಈಗ ಫಾಡ್‌ಕಾಸ್ಟ್ ಜೊತೆ ಈ ಬಗ್ಗೆ ಮಾತನಾಡಿರುವ ಗೇಟ್ಸ್‌, ಅದು ನಾನು ನನ್ನ ಬದುಕಿನಲ್ಲಿ ನಾನು ಅನುಭವಿಸಿದ ಅತ್ಯಂತ ಕಷ್ಟಕರವಾದ ಸಮಯವಾಗಿತ್ತು. ನಾನು ಇಡೀ ಜೀವನಪೂರ್ತಿ ಜೊತೆಗಿರುವ ಯೋಚನೆಯಲ್ಲಿ ಮದುವೆಯಾಗಿದ್ದೆ. ನಾನು ಮದುವೆಯಾಗಿ ಕನಿಷ್ಟ 50 ವರ್ಷಗಳನ್ನು ಕಳೆಯುತ್ತೇನೆ ಎಂದು ಭಾವಿಸಿದ್ದೆ. ಆದರೆ ಸಾಕಷ್ಟು ಕೆಲಸಗಳ ನಡುವೆಯೂ ಸಮಾಲೋಚನೆಯ ಹೊರತಾಗಿಯೂ ನಾನು ಹೊಂದಿದ್ದ ಜಗತ್ತು ನಿಜವಾಗಿಯೂ ಈಗ ಅಸ್ತಿತ್ವದಲ್ಲಿ ಇಲ್ಲ ಎಂಬುದು ಹಠಾತ್ ತಿಳಿಯುತ್ತಿದ್ದಂತೆ, ನನಗೆ ಮುಂದೆ ಹೋಗಲು ಸಾಧ್ಯವಾಗಲಿಲ್ಲ ಎಂದು ಮಿಲಿಂದಾ ನೋವು ಹಂಚಿಕೊಂಡಿದ್ದಾರೆ. 

ಅಲ್ಲಿ ಸಾಕಷ್ಟು ನಂಬಿಕೆ ಇರಲಿಲ್ಲ, ಇದು ನಾನು ಬಯಸಿದ ವಿಚಾರವಾಗಿರಲಿಲ್ಲ, ಏಕೆಂದರೆ ನಾನು ನನ್ನ 50ರ ದಶಕದಲ್ಲಿ ವಿಚ್ಛೇದನ ಪಡೆದು ಒಂಟಿಯಾಗುವೆ ಎಂದು ಯೋಚನೆಯೂ ಮಾಡಿರಲಿಲ್ಲ ಎಂದು ಮಿಲಿಂದಾ ಹೇಳಿಕೊಂಡಿದ್ದಾರೆ. ಮಿಲಿಂದಾ ಗೇಟ್ಸ್ ಅವರು 12.5 ಮಿಲಿಯನ್ ಡಾಲರ್‌ ಪಡೆದು ಗೇಟ್ಸ್ ಫೌಂಡೇಶನ್‌ನಿಂದ ಹೊರ ಬಿದ್ದಿದ್ದು, ಈ ಹಣವನ್ನು ಅವರು ಮಹಿಳೆಯರು ಹಾಗೂ ಕುಟುಂಬಕ್ಕೆ ಸಂಬಂಧಿಸಿದ ತನ್ನದೇ ಚಾರಿಟಿ ಕಾರ್ಯಗಳಿಗೆ ಬಳಸಲಿದ್ದಾರೆ. ಡಿವೋರ್ಸ್ ಪಡೆಯುವುದು ನನ್ನ ಸಮಸ್ಯೆಯಾಗಿರಲಿಲ್ಲ, ಆದರೆ ಅದು ನನಗೆ ಆಗುತ್ತದೆ ಎಂದು ನನಗೆ  ಗೊತ್ತಿರಲಿಲ್ಲ,  ಇದು ಬಹಳ ಸವಾಲಿನ ವಿಚಾರವಾಗಿತ್ತು. ನಾನು ನನ್ನ ಇಡೀ ಜೀವನದಲ್ಲಿ ನಾನು ಎಂದಿಗೂ ಅಳಲಿಲ್ಲ, ಮತ್ತು ಆದರೆ ನಾನು ಸಾಕಷ್ಟು ಪ್ರಾರ್ಥನೆ ಮಾಡಿದ್ದೆ. ನನಗಾಗಿ, ನನ್ನ ಕುಟುಂಬಕ್ಕಾಗಿ, ನನ್ನ ಸಾಧನೆಗಾಗಿ ನಾನು ಪ್ರಾರ್ಥಿಸಿದ್ದೆ ಎಂದು ಮಿಲಿಂದಾ ಗೇಟ್ಸ್ ಹೇಳಿಕೊಂಡಿದ್ದಾರೆ. 

ಬಿಲ್ ಗೇಟ್ಸ್ ಗರ್ಲ್‌ಫ್ರೆಂಡ್ ಪೌಲಾ ಹರ್ಡ್ ಈ ದೊಡ್ಡ ಕಂಪನಿಯ ಸಿಇಒ ಪತ್ನಿ!

ಅಲ್ಲದೇ ಡಿವೋರ್ಸ್ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಇದು ಸಾರ್ವಜನಿಕರಿಗೆ ತಿಳಿಯದಿರಲಿ ಎಂದು ನಾನು ಪ್ರಾರ್ಥಿಸಿದೆ. ನನಗೆ ನನ್ನ ಕಷ್ಟದ ದಿನಗಳಲ್ಲೂ ಜೊತೆಗೆ ಮಾತನಾಡಬಲ್ಲ ಉತ್ತಮ ಸ್ನೇಹಿತರಿದ್ದಾರೆ. ಆದರೆ ಈ ರೀತಿ ಬೇರೆ ಯಾವ ಕುಟುಂಬಕ್ಕೂ ಆಗದಿರಲಿ ಎಂದು ನಾನು ಬಯಸುತ್ತೇನೆ ಎಂದು ಮಿಲಿಂದಾ ನೋವಿನಿಂದ ನುಡಿದಿದ್ದಾರೆ. 

click me!