ಆಕಾಶ್ ಮಗ ಕಾಲ ಬುಡವೇ ಬಿದ್ದರೂ ಎತ್ತದ ಇಶಾ ಅಂಬಾನಿಗೆ ನೆಟ್ಟಿಗರ ಕ್ಲಾಸ್!

By Roopa Hegde  |  First Published Jul 16, 2024, 12:58 PM IST

ಅಂಬಾನಿ ಮನೆ ಮದುವೆ ಸಮಾರಂಭ ಮುಗಿದಂತಿದೆ. ಕೊನೆ ದಿನ ನಡೆದ ಪರಿಚಯ ಕಾರ್ಯಕ್ರಮದಲ್ಲಿ ಪೃಥ್ವಿ ಅಂಬಾನಿ ವಿಡಿಯೋ ಹೈಲೈಟ್ ಆಗಿದೆ. ಕಾಲು ಜಾರಿ ಪೃಥ್ವಿ ಬಿದ್ದಾಗ ಅಲ್ಲಿದ್ದವರ ರಿಯಾಕ್ಷನ್ ನೆಟ್ಟಿಗರ ಕಣ್ಣು ಕುಕ್ಕಿದೆ. 
 


ಎಲ್ಲರಿಗೂ ಗೊತ್ತಿರೋ ಹಾಗೆ ಅಂಬಾನಿ ಎರಡನೇ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹದ ಸಂಭ್ರಮ ತಕ್ಕ ಮಟ್ಟಿಗೆ ಮುಗಿದಿದೆ. ಇನ್ನೂ ದೇವಸ್ಥಾನ, ಪೂಜೆ ಅಂತ ವಿಸಿಟ್ ಮಾಡ್ತಿರೋ ವೀಡಿಯೋ ಹರಿದಾಡುತ್ತಲೇ ಇದೆ. ಈ ಮಧ್ಯೆ ಮುಕೇಶ್ ಅಂಬಾನಿ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಪಾಪರಾಜಿಗಳು ಹಾಗೂ ಮೀಡಿಯಾ ಪ್ರತಿನಿಧಿಗಳಿಗೆ ಧನ್ಯವಾದ ಹೇಳುವ ಸರಳ ಕಾರ್ಯಕ್ರಮವೊಂದನ್ನು ಅಂಬಾನಿ ಕುಟುಂಬ ಹಮ್ಮಿಕೊಂಡಿತ್ತು. 

ಇದರಲ್ಲಿ ಮುಕೇಶ್-ನೀತಾ ಅಂಬಾನಿ (Ambani) ದಂಪತಿ, ಮೊದಲ ಮಗ-ಸೊಸೆ, ಮಗಳು ಅಳಿಯ ಸೇರಿ ಕುಟುಂಬ (Family) ದವರು ಉಪಸ್ಥಿತರಿದ್ದರು. ಅಂಬಾನಿ ಕುಟುಂಬದ ಪರಿಚಯ ಮೀಡಿಯಾದವರಿಗೆ ಮಾತ್ರವಲ್ಲ, ಭಾರತ (India) ಕ್ಕೇ ಇದೆ ಅಂದರೂ ತಪ್ಪಿಲ್ಲ. ಆದರೂ, ಪ್ರತಿಯೊಬ್ಬ ಸದಸ್ಯರನ್ನೂ ಸರಳವಾಗಿ ಪರಿಚಯಿಸಿದ ನೀತಾ, ತನ್ನ ಹಿರಿಯ ಮಗ ಆಕಾಶ್ ಅಂಬಾನಿಯ ಮಗ ಪೃಥ್ವಿಯನ್ನೂ ಸಭೆಗೆ ಪರಿಚಯಿಸುತ್ತಾರೆ. 

Tap to resize

Latest Videos

ತವರು ಮನೆಯಿಂದ ಸೊಸೆಯ ವಿದಾಯದ ವೇಳೆ ಮಾವ ಮುಕೇಶ್​ ಅಂಬಾನಿ ಕಣ್ಣೀರು: ವಿಡಿಯೋ ವೈರಲ್​

ಅವಸರದಲ್ಲಿ ಸ್ಟೇಜ್ ಮೇಲೆ ಎಲ್ಲ ಮಕ್ಕಳಂತೆ ಓಡಿ ಬಂದ ಪೃಥ್ವಿ, ಕಾಲು ಜಾರಿ ಇಶಾ ಅಂಬಾನಿ ಕಾಲ ಬುಡುದಲ್ಲಿಯೇ ಬೀಳುತ್ತಾನೆ. ಏಷ್ಯಾದ ನಂಬರ ಒನ್ ಸಿರಿವಂತನ ಮಗ ಬಿದ್ದಾಗ ಕುಟುಂಬದ ಯಾವ ಸದಸ್ಯರೂ ಆತಂಕಗೊಳ್ಳಲಿಲ್ಲ. ಯಾವುದೇ ನಖರಾ ತೋರಲಿಲ್ಲ. ಅಯ್ಯೋ ಆಗಬಾರದ್ದು ಆಯಿತು ಎನ್ನುವಂತೆ ಆತಂಕ ತೋರಲಿಲ್ಲ. ಎಲ್ಲರೂ ಕೂಲ್ ಆಗಿಯೇ ಪ್ರತಿಕ್ರಿಯಿಸಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. 

ಆದರೆ, ಪೃಥ್ವಿ ಬಿದ್ದಿದ್ದು ಇಶಾ ಅಂಬಾನಿ ಕಾಲ ಬುಡವೇ. ಅದಕ್ಕೆ ತುಸು ನಕ್ಕ ಹಾಗೆ ಮಾಡಿ, ಯಾವುದೇ ರಿಯಾಕ್ಟ್ ತೋರದ ಮುಕೇಶ್-ನೀತಾ ಏಕೈಕ ಮಗಳ ಮೇಲೆ ಮಾತ್ರ ಕೆಲವು ನೆಟ್ಟಿಗರು ತುಸು ಕೋಪಿಸಿಕೊಂಡಂತೆ ಕಾಣಿಸುತ್ತಿದೆ. ಈಗೆಕೆ ಸ್ವಲ್ಪ ಕೊಬ್ಬು ಹೆಚ್ಚೆಂದು ಕಮೆಂಟ್ ಮಾಡಿದ್ದಾರೆ. ಈ ಕುಟುಂಬದಲ್ಲಿ ಹುಟ್ಟಿದ ಮಕ್ಕಳು ಎಷ್ಟು ಅದೃಷ್ಟ ಮಾಡಿರುತ್ತಾರೆಂದು ಎಲ್ಲರೂ ಕಮೆಂಟ್ ಮಾಡಿದ್ದಾರೆ. ಬಿದ್ದ ಮಕ್ಕಳು ಹೇಗೆ ಏಳ್ಬೇಕು ಎಂಬುದನ್ನು ಅಂಬಾನಿ ಕುಟುಂಬ ಕಲಿಸಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಬಿದ್ದು ಏನೂ ಆಗೇ ಇಲ್ಲ ಎನ್ನುವಂತೆ ಎದ್ದು ನಿಲ್ಲುವ ಪೃಥ್ವಿ ಮೈಕ್ ಹಿಡಿದ  ಜೈ ಶ್ರೀಕೃಷ್ಣ ಎನ್ನುವ ಮೂಲಕ ಮತ್ತಷ್ಟೂ ಅಲ್ಲಿ ನೆರೆದ ಎಲ್ಲರನ್ನು ಬೆರಗುಗೊಳಿಸುತ್ತಾನೆ. ಅಂಬಾನಿ ಕುಟುಂಬ ಎಷ್ಟು ಸಂಸ್ಕಾರ ಕಲಿಸಿದೆ ಅಂತ ನೆಟ್ಟಿಗರು ಮಾತನಾಡಿ ಕೊಳ್ತಿದ್ದಾರೆ. ರಾಧಿಕಾ ಬಿಟ್ರೆ ಮತ್ತ್ಯಾರೂ ಇಲ್ಲಿ ಆ್ಯಕ್ಟಿವ್ ಇದ್ದಂತೆ ಕಾಣ್ತಿಲ್ಲ. ನಾಲ್ಕೈದು ತಿಂಗಳಿಂದ ಮದುವೆ ತಯಾರಿ, ಈಗ 15 ದಿನಗಳಿಂದ ಒಂದಾದ್ಮೇಲೆ ಒಂದು ಸಮಾರಂಭದಲ್ಲಿ ಬ್ಯುಸಿಯಾಗಿ ಎಲ್ಲರೂ ಸುಸ್ತಾದಂತಿದೆ. ಅಮ್ಮ ಶ್ಲೋಕಾ ಮಾತ್ರ ಮಗನನ್ನು ಎತ್ತಲು ಮುಂದೆ ಬಂದಿದ್ದು, ಬಿಟ್ರೆ ಮತ್ತೆಲ್ಲರೂ ಸುಸ್ತಾದಂತಿದೆ ಎಂದು ನೆಟ್ಟಿಗರು ಹೇಳ್ತಿದ್ದಾರೆ. 

ಜುಲೈ ಒಂದರಿಂದ ರಾಧಿಕಾ – ಅನಂತ್ ಮದುವೆ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿತ್ತು. ಜುಲೈ 12ರಂದು ರಾಧಿಕಾ, ಅನಂತ್ ಕೈ ಹಿಡಿದಿದ್ದು, ಅದಾದ್ಮೇಲೆ ಆಶೀರ್ವಾದ, ಆರತಕ್ಷತೆ, ಸೇರಿದಂತೆ ಮತ್ತೊಂದಿಷ್ಟು ಕಾರ್ಯಕ್ರಮ ನಡೆದಿವೆ. ನಿನ್ನೆ ಮುಂಬೈನಲ್ಲಿ ರಿಸೆಪ್ಷನ್ ನಡೆದಿದ್ದು, ನಟ ಅಕ್ಷಯ್ ಕುಮಾರ್ ಸೇರಿ ಅನೇಕ ನಟರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಮದುವೆ ಬಳಿಕ 10 ಸಾವಿರ ಅತಿಥಿಗಳನ್ನು ಗಂಟೆಗಟ್ಟಲೆ ನಿಂತೇ ಗೌರವಿಸಿದ ಅಂಬಾನಿ ಕುಟುಂಬ!

ಸಾಮಾಜಿಕ ಜಾಲತಾಣದಲ್ಲಿ ಅಂಬಾನಿ ಮನೆ ಮದುವೆ ವಿಡಿಯೋ, ಫೋಟೋಗಳೇ ಹರಿದಾಡುತ್ತಿವೆ. ಮುಖೇಶ್ ಅಂಬಾನಿ ಮದುವೆಗೆ ಎಷ್ಟು ಖರ್ಚು ಮಾಡಿದ್ರು ಎಂಬುದರಿಂದ ಹಿಡಿದು, ಅವರ ಡ್ರೆಸ್, ಮೇಕಪ್, ಸೆಲೆಬ್ರಿಟಿಗಳು ಅವರಿಗೆ ನೀಡಿದ ಉಡುಗೊರೆ ಎಲ್ಲವೂ ಈಗ ಚರ್ಚೆಯ ವಿಷ್ಯವೇ ಆಗಿದೆ. ಹಾಗೆಯೇ ಅಂಬಾನಿ ಮದುವೆಗೆ ಯಾರು ಹೋಗಿಲ್ಲ, ಯಾರಿಗೆ ಆಹ್ವಾನ ಬಂದಿಲ್ಲ ಎಂಬ ಬಗ್ಗೆಯೂ ಜನರು ಚರ್ಚೆ ನಡೆಸುತ್ತಿದ್ದಾರೆ. 

click me!