ಕೇಳಿದ್ದು  ರೆಡ್, ಗಂಡ ತಂದಿದ್ದು ಕಡು ಕೆಂಪು ಲಿಪ್‌ಸ್ಟಿಕ್... ಕೋಪಗೊಂಡ ಪತ್ನಿ ಮಾಡಿದ್ದೇನು?

Published : Jul 16, 2024, 02:43 PM IST
ಕೇಳಿದ್ದು  ರೆಡ್, ಗಂಡ ತಂದಿದ್ದು ಕಡು ಕೆಂಪು ಲಿಪ್‌ಸ್ಟಿಕ್... ಕೋಪಗೊಂಡ ಪತ್ನಿ ಮಾಡಿದ್ದೇನು?

ಸಾರಾಂಶ

ಪತಿ-ಪತ್ನಿ ನಡುವೆ ಸಣ್ಣ ಪುಟ್ಟ ಜಗಳ ಆಗುತ್ತಿರುತ್ತಾರೆ. ಹೇಳಿ ಕಳುಹಿಸಿದ್ದ ಬಣ್ಣದ ಲಿಪ್‌ಸ್ಟಿಕ್ ತರದ ಗಂಡನಿಗೆ ಪತ್ನಿ ಶಾಕ್ ಕೊಟ್ಟಿದ್ದಾಳೆ.  

ಆಗ್ರಾ: ಉತ್ತರ ಪ್ರದೇಶನ ಆಗ್ರಾ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಲಿಪ್‌ಸ್ಟಿಕ್ ವಿಚಾರಕ್ಕೆ ದಂಪತಿ ಮಧ್ಯೆ ಮನಸ್ತಾಪ ಉಂಟಾಗಿದೆ. ಗಂಡನಿಗೆ ಕೆಂಪು ಬಣ್ಣದ ಲಿಪ್‌ಸ್ಟಿಕ್ ತರೋಕೆ ಪತ್ನಿ ಹೇಳಿದ್ದಾಳೆ. ಆದ್ರೆ ಗಂಡ ಬೇರೆ ಬಣ್ಣದ ಲಿಪ್‌ಸ್ಟಿಕ್ ತಂದಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ತಂದಿರೋ ಲಿಪ್‌ಸ್ಟಿಕ್ ಬದಲಾಯಿಸಿಕೊಂಡು ಬರುವಂತೆ ಹೇಳಿದ್ದಾಳೆ. ಆದ್ರೆ ಗಂಡ, ಬಣ್ಣದಲ್ಲಿ ಹೆಚ್ಚು ವ್ಯತ್ಯಾಸ ಇಲ್ಲ. ಅದನ್ನೇ ಬಳಸುವಂತೆ ಹೇಳಿದ್ದಕ್ಕೆ ಕೋಪಗೊಂಡ ಪತ್ನಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಆರು ತಿಂಗಳ ಹಿಂದೆ ಮದುವೆಯಾಗಿತ್ತು!

ಆರು ತಿಂಗಳ ಹಿಂದೆ ಈ ಜೋಡಿಯ ಮದುವೆಯಾಗಿತ್ತು. ಯುವಕ ಮಥುರಾ ಮೂಲದವನಾಗಿದ್ದು, ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದನು. ತನ್ನಿಷ್ಟದ ಬಣ್ಣದ ಲಿಪ್‌ಸ್ಟಿಕ್ ತರದ ಗಂಡನ ವಿರುದ್ಧವೇ ಮಹಿಳೆ ದೂರು ದಾಖಲಿಸಿದ್ದಾರೆ. ಆರಂಭದಲ್ಲಿ ಇಬ್ಬರ ನಡುವೆ ಸಣ್ಣ ಜಗಳ ನಡೆದಿತ್ತು. ಯಾವಾಗ ಗಂಡ ತಂದಿರೋ ಲಿಪ್‌ಸ್ಟಿಕ್ ಬಳಸುವಂತೆ ಆದೇಶ ಮಾಡಿದಾಗ ಪತ್ನಿ ಕೋಪಗೊಂಡಿದ್ದಳು. ನಂತರ ಪೊಲೀಸರು ಇಬ್ಬರನ್ನು ಕುಟುಂಬ ಸಲಹಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇಬ್ಬರ ಜಗಳದ ವಿಷಯ ಕೇಳಿ ಕುಟುಂಬ ಸಲಹಾ ಕೇಂದ್ರದ ಸಿಬ್ಬಂದಿ ಶಾಕ್ ಆಗಿದ್ದಾರೆ.

ಪ್ರೀತಿಸಿ ಮದುವೆಯಾದ ಕುಟುಂಬದಲ್ಲಿ ಗಂಡ ಸಾವು; ಮಗನನ್ನು ನೇಣು ಬಿಗಿದು, ತಾನೂ ಆತ್ಮಹತ್ಯೆಗೆ ಶರಣಾದ ತಾಯಿ!

ಈ ಒಂದು ಕಾರಣದಿಂದ ದಂಪತಿ ಬೇರೆಯಾಗುವ ನಿರ್ಣಯಕ್ಕೂ ಬಂದಿದ್ದರು. ಪತ್ನಿಗೆ ಕೆಂಪು ಬಣ್ಣದ (crimson red) ಲಿಪ್‌ಸ್ಟಿಕ್ ಅಂದ್ರೆ ತುಂಬಾ ಇಷ್ಟವಂತೆ. ಹಾಗಾಗಿ ಗಂಡನಿಗೆ ಸರಿಯಾಗಿ ಬಣ್ಣ ಹೇಳಿ ಅಂಗಡಿಗೆ ಕಳುಹಿಸಿದ್ದಳು. ಆದ್ರೆ ಪತಿ ಕನ್ಫ್ಯೂಸ್ ಮಾಡಿಕೊಂಡು ಕಡು ಕೆಂಪು (maroon color) ಲಿಪ್‌ಸ್ಟಿಕ್ ತಂದಿರೋದು ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ. ಗಂಡ ಲಿಪ್‌ಸ್ಟಿಕ್ ಹಿಂದಿರುಗಿಲು ಒಪ್ಪದಿದ್ದಾಗ ಪತ್ನಿ ಮಥುರಾಯಿಂದ ಆಗ್ರಾಗೆ ತೆರಳಿದ್ದಾಳೆ.

ಮನಸ್ತಾಪ ಮರೆತು ಒಂದಾದ ಜೋಡಿ 

ಕುಟುಂಬ ಸಲಹಾ ಕೇಂದ್ರದ ಸಿಬ್ಬಂದಿ ಇಬ್ಬರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಜೊತೆಯಾಗಿ ಬಾಳೋದಾಗಿ ಹೇಳಿ ಗಂಡನ ಜೊತೆ ಯುವತಿ ಮಥುರಾಗೆ ತೆರಳಿದ್ದಾರೆ. ಪ್ರಕರಣದ ಮಾಹಿತಿ ನೀಡಿರುವ ಅಧಿಕಾರಿಗಳು ಇಬ್ಬರ ಗುರುತನ್ನು ಬಹಿರಂಗಪಡಿಸಿಲ್ಲ.

Tumakuru: ನ್ಯಾಯಾಧೀಶರ ಬುದ್ಧಿಮಾತಿಗೆ ತಲೆತೂಗಿದ ದಂಪತಿಗಳು: ಡಿವೋರ್ಸ್‌ನಿಂದ ದೂರ ಸರಿದ 18 ಜೋಡಿಗಳು!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!