ಆನ್ ಸ್ಕ್ರೀನ್ ಜೋಡಿ ಆಫ್ ಸ್ಕ್ರೀನ್ ನಲ್ಲೂ ಜೋಡಿಯಾದ್ರೆ ಅಭಿಮಾನಿಗಳಿಗೆ ಅದೇನೋ ಖುಷಿ. ಸ್ಯಾಂಡಲ್ವುಡ್, ಬಾಲಿವುಡ್ ನಲ್ಲಿ ಇಂಥ ಜೋಡಿಗಳ ಸಂಖ್ಯೆ ಸಾಕಷ್ಟಿದೆ. ಆದ್ರೆ ಇನ್ನೊಂದು ಸೂಪರ್ ಸ್ಟಾರ್ ಜೋಡಿ, ರಿಯಲ್ ಲೈಫ್ ನಲ್ಲಿ ದಂಪತಿಯಾಗುವ ಅವಕಾಶ ತಪ್ಪಿದ್ದು ಹೇಗೆ ಗೊತ್ತಾ?
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ನಡುವೆ ಯಾವಾಗಲೂ ನಿಕಟ ಸ್ನೇಹವಿತ್ತು. ಇಬ್ಬರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಆದ್ರೆ ರಜನಿಕಾಂತ್ ಒಂದು ಆಸೆ ಮಾತ್ರ ಕೊನೆಗೂ ಈಡೇರಲಿಲ್ಲ. ಎಲ್ಲ ಅಂದುಕೊಂಡಂತೆ ಆಗಿದ್ರೆ ಬಾಲಿವುಡ್ ಸುಂದರ ನಟಿ, ಕೋಟ್ಯಾಂತರ ಅಭಿಮಾನಿಗಳ ಕನಸಿನ ರಾಣಿ ಶ್ರೀದೇವಿಯನ್ನು ರಜನಿಕಾಂತ್ ಕೈ ಹಿಡಿಯುತ್ತಿದ್ದರೇನೋ. ಆದ್ರೆ ಅದ್ಯಾವುದೂ ಈಡೇರಲಿಲ್ಲ. ಹಾಗಂತ ರಜನಿಕಾಂತ್ ಬೇಸರಗೊಂಡು ಶ್ರೀದೇವಿ ಸ್ನೇಹ ಮುರಿದುಕೊಳ್ಳಲಿಲ್ಲ. ಅವರಿಂದ ದೂರವಾಗ್ಲಿಲ್ಲ.
ರಜನಿಕಾಂತ್ (Rajanikanth) ಹಾಗೂ ಶ್ರೀದೇವಿ ಉತ್ತಮ ಸ್ನೇಹಿತರಾಗೆ ಮುಂದುವರೆದಿದ್ರು. ರಜನಿಕಾಂತ್ ತಮ್ಮ ವೈಯಕ್ತಿಕ ಫೋನ್ ನಂಬರನ್ನು ಯಾರಿಗೂ ನೀಡಿರಲಿಲ್ಲ. ಕೆಲವೇ ಕೆಲವು ಮಂದಿ ಬಳಿ ಈ ನಂಬರ್ ಇತ್ತು. ಅದ್ರಲ್ಲಿ ಶ್ರೀದೇವಿ ಕೂಡ ಸೇರಿದ್ರು. ಶ್ರೀದೇವಿ (Sridevi), ರಜನಿಕಾಂತ್ ಅವರ ಆಪ್ತರಲ್ಲಿ ಒಬ್ಬರಾಗಿದ್ರ ಅನ್ನೋದನ್ನು ನೀವು ಇದ್ರಿಂದ ಊಹಿಸಬಹುದು.
ಭಾವಿ ಸೊಸೆ ರಾಧಿಕಾಗೆ ದುಬೈನಲ್ಲಿ 640 ಕೋಟಿ ಮೌಲ್ಯದ ವಿಲ್ಲಾ ಉಡುಗೊರೆ ನೀಡಿದ ನೀತಾ ಅಂಬಾನಿ; ಇಲ್ಲಿವೆ ಫೋಟೋಸ್
ರಜನಿಕಾಂತ್ ಅನೇಕ ನಟಿಯರೊಂದಿಗೆ ನಟಿಸಿದ್ದಾರೆ. ಆದ್ರೆ ಶ್ರೀದೇವಿಯೊಂದಿಗಿನ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಸಾಕಷ್ಟು ಪ್ರಸಿದ್ಧವಾಗಿತ್ತು. ಇಬ್ಬರೂ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಸುಮಾರು 19 ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಒಂದೆಡೆ ಇಬ್ಬರೂ ಒಟ್ಟಿಗೆ ಸಿನಿಮಾ (Movie) ಮಾಡುತ್ತಿದ್ದರೆ ಮತ್ತೊಂದೆಡೆ ಶ್ರೀದೇವಿ ಮೇಲೆ ರಜನಿಕಾಂತ್ ಪ್ರೀತಿ ಹೆಚ್ಚಾಗುತ್ತಲೇ ಇತ್ತು. ರಜನಿಕಾಂತ್ ಶ್ರೀದೇವಿಯನ್ನು ಪ್ರೀತಿ ಮಾಡ್ತಿದ್ದ ವಿಷ್ಯ ಎಲ್ಲರಿಗೂ ತಿಳಿದಿರಲಿಲ್ಲ.
ಶ್ರೀದೇವಿ 13ನೇ ವಯಸ್ಸಿನಲ್ಲಿ ರಜನಿಕಾಂತ್ ಜೊತೆ ಮೊದಲ ಚಿತ್ರದಲ್ಲಿ ನಟಿಸಿದ್ದರು. ಆಗ ರಜನಿಕಾಂತ್ ವಯಸ್ಸು 25 ವರ್ಷ. ಈ ಚಿತ್ರದಲ್ಲಿ ರಜನಿಕಾಂತ್ ಎರಡನೇ ಅಮ್ಮನ ಪಾತ್ರದಲ್ಲಿ ಶ್ರೀದೇವಿ ಕಾಣಿಸಿಕೊಂಡಿದ್ದರು. ಶ್ರೀದೇವಿ ಅಮ್ಮನಿಗೆ ರಜನಿಕಾಂತ್ ಆಪ್ತರಾಗಿದ್ದ ಕಾರಣ, ಇಬ್ಬರ ಮಧ್ಯೆ ಸ್ನೇಹ ಮತ್ತಷ್ಟು ಬಲಗೊಂಡಿತ್ತು. ಶ್ರೀದೇವಿಗಿಂತ ದೊಡ್ಡವರಾಗಿದ್ದ ರಜನಿಕಾಂತ್, ನಟಿಗೆ ರಕ್ಷಣೆ ನೀಡುವ ಜವಾಬ್ದಾರಿಯನ್ನೂ ಹೊತ್ತಿದ್ದರು. ಒಂದು ಸಮಯದಲ್ಲಿ ಶ್ರೀದೇವಿಗೆ ಮದುವೆ ಮಾಡುವಂತೆ ಅವರ ಅಮ್ಮನಿಗೆ ರಜನಿಕಾಂತ್ ಸಲಹೆ ಕೂಡ ನೀಡಿದ್ದರು. ಆಗ ಶ್ರೀದೇವಿ ವಯಸ್ಸು ಕೇವಲ 16 ಎಂಬುದು ನೆನಪಿರಲಿ.
ಇಬ್ಬರೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಇಬ್ಬರ ಮಧ್ಯೆ ಆನ್ ಸ್ಕ್ರೀನ್ ಮಾತ್ರವಲ್ಲ ಆಫ್ ಸ್ಕ್ರೀನ್ ಕೆಮೆಸ್ಟ್ರಿ ಚೆನ್ನಾಗಿತ್ತು. ಸುರಸುಂದರಿ ಶ್ರೀದೇವಿ ಪ್ರೀತಿಯಲ್ಲಿ ರಜನಿಕಾಂತ್ ಬಿದ್ದಿದ್ದು ಅವರ ಆಪ್ತ ಮಿತ್ರರಿಗೆ ತಿಳಿದಿತ್ತು. ಆದ್ರೆ ರಜನಿ ಬಗ್ಗೆ ಶ್ರೀದೇವಿ ಭಾವನೆ ಏನಿತ್ತು ಎಂಬುದು ಯಾರಿಗೂ ತಿಳಿದಿರಲಿಲ್ಲ.
ರೇಖಾ ಹಣೆಯಲ್ಲಿರುವುದು ಅಮಿತಾಭ್ ಹೆಸರಿನ ಕುಂಕುಮ; ಮದುವೆ ಆಗದಿರಲು ಕಾರಣವೇನು?
ಮದುವೆ ಪ್ರಪೋಸ್ ಫೇಲ್ ಆಗಿದ್ದು ಹೇಗೆ? : ಶ್ರೀದೇವಿಯನ್ನು ಪ್ರೀತಿಸುತ್ತಿದ್ದ ರಜನಿ ಒಂದು ದಿನ ಪ್ರಪೋಸ್ ಮಾಡುವ ನಿರ್ಧಾರಕ್ಕೆ ಬಂದಿದ್ರು. ಅದೇ ಕಾರಣಕ್ಕೆ ಶ್ರೀದೇವಿ ಮನೆಗೆ ಹೊರಟು ನಿಂತ್ರು. ಗೃಹಪ್ರವೇಶ ಕಾರ್ಯಕ್ರಮದ ಸಮಯದಲ್ಲಿ ಶ್ರೀದೇವಿ ಮನೆಗೆ ಹೋಗಿದ್ದ ರಜನಿಕಾಂತ್ ಗೆ ಕೆ. ಬಾಲಚಂದರ್ ಸಾಥ್ ನೀಡಿದ್ರು. ಆ ಸಮಯದಲ್ಲಿ ಶ್ರೀದೇವಿ ಮುಂದೆ ರಜನಿ ಮದುವೆ ಪ್ರಸ್ತಾಪ ಮಾಡ್ತಿದ್ರೆನೋ ಆದ್ರೆ ಆ ಸಮಯದಲ್ಲಿ ಎಲ್ಲ ಯಡವಟ್ಟಾಯ್ತು. ರಜನಿ, ಶ್ರೀದೇವಿ ಮನೆಗೆ ಹೋದಾಗ್ಲೇ ಕರೆಂಟ್ ಹೋಯ್ತು. ಶುಭ ಕೆಲಸಕ್ಕೆ ಮುಂದಾಗಿದ್ದ ರಜನಿಕಾಂತ್, ಕರೆಂಟ್ ಹೋಗಿದ್ದನ್ನು ಅಪಶಕುನ ಎಂದುಕೊಂಡ್ರು. ಈ ಸಮಯದಲ್ಲಿ ಮದುವೆ ಪ್ರಪೋಸ್ ಇಡೋದು ಸೂಕ್ತವಲ್ಲ ಎಂದು ಭಾವಿಸಿದ ಅವರು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ವಾಪಸ್ ಆದ್ರು. ಆ ನಂತ್ರ ಎಂದೂ ರಜನಿಕಾಂತ್ ಶ್ರೀದೇವಿಗೆ ಪ್ರಪೋಸ್ ಮಾಡಿದ ವರದಿಯಿಲ್ಲ. ಆದ್ರೆ ಇಬ್ಬರೂ ಬೆಸ್ಟ್ ಫ್ರೆಂಡ್ ಆಗಿಯೇ ಮುಂದುವರೆದಿದ್ದು ಮಾತ್ರ ಎಲ್ಲರಿಗೂ ತಿಳಿದ ವಿಷ್ಯ.