ಸಂಗಾತಿ ಒಂದಾಗಲು ಮುಹೂರ್ತ ಬೇಕಾಗಿಲ್ಲ. ಮನಸ್ಸು ಬಯಸಿದಾಗ,ಸಂತೋಷ ಇಮ್ಮಡಿಗೊಂಡಾಗ ಒಂದಾಗುವ ಸ್ವಾತಂತ್ರವಿದೆ. ಆದ್ರೆ ಕೆಲವೊಂದು ಸಮಯದ ಸಂಭೋಗ, ದೈಹಿಕ ಸುಖವನ್ನು ಹೆಚ್ಚಿಸುತ್ತದೆ.
ಸೆಕ್ಸ್ (Sex) ಒಂದು ನೈಸರ್ಗಿಕ ಕ್ರಿಯೆ. ದಾಂಪತ್ಯವನ್ನು ಗಟ್ಟಿಗೊಳಿಸಿ,ವಂಶಾಭಿವೃದ್ಧಿಗೆ ಇದು ನೆರವಾಗುತ್ತದೆ. ಸಂಭೋಗ ಸುಖ ಎಂದೂ ನೀರಸವಾಗಬಾರದು. ಬಹುತೇಕ ದಂಪತಿ (Couple )ರಾತ್ರಿ (Night)ಯ ಸಂಭೋಗಕ್ಕೆ ಆದ್ಯತೆ ನೀಡುತ್ತಾರೆ. ಎಲ್ಲ ಕೆಲಸ ಮುಗಿಸಿ ರಿಲ್ಯಾಕ್ಸ್ ಆಗಿ ಸಂಭೋಗ ಸುಖ ಆನಂದಿಸುತ್ತಾರೆ. ಆದ್ರೆ ರಾತ್ರಿಯ ಸಂಭೋಗಕ್ಕಿಂತ ಬೆಳಗಿನ (Morning )ಸೆಕ್ಸ್ ಹೆಚ್ಚು ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಬೆಳಿಗಿನ ಲೈಂಗಿಕ ಕ್ರಿಯೆ ವಿನೋದ ಮಾತ್ರವಲ್ಲ, ಆರೋಗ್ಯಕ್ಕೂ ಪ್ರಯೋಜನಕಾರಿ ಎಂಬುದು ಸಾಬೀತಾಗಿದೆ. ಬೆಳಗಿನ ಸೆಕ್ಸ್ ನ ಪ್ರಯೋಜನ ಮತ್ತು ವಿಧಾನಗಳ ಬಗ್ಗೆ ಹೇಳ್ತೆವೆ.
ಮಾರ್ನಿಂಗ್ ಸೆಕ್ಸ್ ಪ್ರಯೋಜನ : ಬೆಳಗಿನ ಸಂಭೋಗವನ್ನು ಶುಭೋದಯದ ಸೆಕ್ಸ್ ಎಂದು ಕರೆಯಬಹುದು. ಇದ್ರಿಂದ ಸಾಕಷ್ಟು ಪ್ರಯೋಜನವಿದೆ. ಆಕ್ಸಿಟೋಸಿನ್ (Oxytocin )ಮಟ್ಟ ಬೆಳಗಿನ ಸಂದರ್ಭದಲ್ಲಿ ಹೆಚ್ಚಿರುತ್ತದೆ. ಇದು ಸಂಗಾತಿ ಜೊತೆ ಉತ್ತಮ ಸಂಬಂಧ ಹೊಂದಲು ನೆರವಾಗುತ್ತದೆ.
ಒತ್ತಡ (Stress) ದೂರ : ಸೆಕ್ಸ್ ಒತ್ತಡವನ್ನು ಕಡಿಮೆ ಮಾಡುವ ಮಾರ್ಗವಾಗಿದೆ. ಬೆಳಗ್ಗೆ ಶಾರೀರಿಕ ಸಂಬಂಧ ಬೆಳೆಸುವುದ್ರಿಂದ ಮೂಡ್ ಚೆನ್ನಾಗಿರುತ್ತದೆ.ಡೋಪಮೈನ್ ಮತ್ತು ಸಿರೊಟೋನಿನ್ ಎಂಬ ಎರಡು ಹಾರ್ಮೋನು (hormone)ಗಳು ಬಿಡುಗಡೆಯಾಗುತ್ತವೆ. ಇದು ಒತ್ತಡವನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ.
ಸಂಬಂಧಗಳ ಸುಧಾರಣೆ : ಶುಭೋದಯ ಸೆಕ್ಸ್ ಸಂಗಾತಿಯೊಂದಿಗೆ ಬಾಂಧವ್ಯವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.
ಮಾರ್ನಿಂಗ್ ಸೆಕ್ಸ್ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ : ರಕ್ತ ಪರಿಚಲನೆಯು ಉತ್ತಮವಾಗಿರುತ್ತದೆ. ಬೆಳಗಿನ ಸೆಕ್ಸ್ ಒಂದು ಗಂಟೆಯಲ್ಲಿ 300 ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಮಧುಮೇಹದ ಸಾಧ್ಯತೆಯೂ ಕಡಿಮೆ. ಮೈಗ್ರೇನ್ ಮತ್ತು ಕೀಲು ನೋವಿನ ಸಮಸ್ಯೆ ದೂರವಾಗುತ್ತದೆ. ಉದ್ವೇಗ ದೂರವಾಗುತ್ತದೆ. ಮುಖಕ್ಕೆ ನೈಸರ್ಗಿಕ ಹೊಳಪು ನೀಡುತ್ತದೆ. ಕೂದಲು ಹೊಳಪನ್ನು ಹೆಚ್ಚಿಸುತ್ತವೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
Bedroom secret: ಹುಡುಗಿಯರಿಗೆ ಸೆಕ್ಸ್‌ನಲ್ಲಿ ಏನಿಷ್ಟ..?
ಮಾರ್ನಿಂಗ್ ಸೆಕ್ಸ್ ಭಂಗಿ (Morning Sex Pose) :
ಸ್ಪೂನ್ ಭಂಗಿ : ಮಹಿಳಾ ಸಂಗಾತಿ ಪುರುಷ ಸಂಗಾತಿಗೆ ಬೆನ್ನು ಹಾಕಿ ಮಲಗುವ ಭಂಗಿ. ಇದ್ರಲ್ಲಿ ನಿಧಾನ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಇದು ಮೋಜು ನೀಡುವುದು ಮಾತ್ರವಲ್ಲ ಮಹಿಳೆ ದೇಹವನ್ನು ಸ್ಪರ್ಶಿಸಿ ಆಕೆಗೆ ಹೆಚ್ಚು ಪರಾಕಾಷ್ಠೆ ನೀಡಬಹುದು.
ಡಬಲ್ ಟಚ್. ದಂಪತಿ ಎದುರು ಬದುರಿರುವ ಭಂಗಿ. ಇದು ಪರಸ್ಪರ ದೇಹದ ಭಾಗಗಳನ್ನು ಸ್ಪರ್ಶಿಸಿ ಆನಂದ ನೀಡುವಂತಹದ್ದು. ಇದಕ್ಕೆ ವೈಬ್ರೇಟರ್ ಕೂಡ ಬಳಸಬಹುದು.
ಹೈ ಹಿಪ್ಸ್ : ಮಹಿಳಾ ಸಂಗಾತಿ ಸೊಂಟದ ಕೆಳಗೆ ದಿಂಬಿಟ್ಟು ಮಲಗುವ ಭಂಗಿ. ಇದ್ರಲ್ಲಿ ಹೆಚ್ಚು ಆನಂದ ಸಿಗುತ್ತದೆ.
ಲೆಗ್ ಲಾಕ್ ಭಂಗಿ : ಲೆಗ್ ಲಾಕ್ ಭಂಗಿಯಲ್ಲಿ ಇಬ್ಬರು ಪರಸ್ಪರ ಎದುರು ಬದುರಾಗಿರ್ತಾರೆ.ಇಬ್ಬರು ಹೆಚ್ಚು ಹತ್ತಿರಕ್ಕೆ ಬರುವಂತ ಭಂಗಿ ಇದು.
ಸೈಡ್ ಬೈ ಸೈಡ್ ಭಂಗಿ : ಇದರಲ್ಲಿಯೂ ಕೂಡ ಇಬ್ಬರು ಒಂದೇ ದಿಕ್ಕಿನಲ್ಲಿ ಮಗಲಬೇಕು. ಈ ಎಲ್ಲ ಭಂಗಿಗಳು ಬೆಳಗಿನ ಇಂಟರ್ಕೋರ್ಸ್ ಸುಖವನ್ನು ಹೆಚ್ಚಿಸುತ್ತವೆ.
ಮಾರ್ನಿಂಗ್ ಸೆಕ್ಸ್ ಗೆ ಸಲಹೆಗಳು :
ಮಾರ್ನಿಂಗ್ ಸೆಕ್ಸ್ ಗೆ ಮೊದಲು ಕೆಲವು ವಿಶೇಷ ಸೂಚನೆಗಳನ್ನು ಪಾಲಿಸಬೇಕು. ಮಾರ್ನಿಂಗ್ ಸೆಕ್ಸ್ ಆನಂದಿಸಲು ಬಯಸಿದರೆ ದಿನಕ್ಕಿಂತ ಬೇಗ ಏಳಬೇಕಾಗುತ್ತದೆ. ಇಲ್ಲವಾದಲ್ಲ ಆತುರ ನಿಮ್ಮ ಸುಖವನ್ನು ಹಾಳು ಮಾಡಬಹುದು.
ಬೆಳಿಗ್ಗೆ ಎದ್ದಾಗ ಬಾಯಲ್ಲಿ ವಾಸನೆ ಬರುತ್ತದೆ. ಇದು ಕೆಲವರಿಗೆ ಹಿಂಸೆಯಾಗುತ್ತದೆ. ಹಾಗಾಗಿ ಲೈಂಗಿಕ ಕ್ರಿಯೆಗೆ ಮುನ್ನ ಬ್ರೆಷ್ ಮಾಡುವುದು ಒಳ್ಳೆಯದು. ಹಾಗೆ ಬೆಳಿಗ್ಗೆ ಎಲ್ಲರ ಮೂಡ್ ಒಂದೇ ರೀತಿಯಲ್ಲಿ ಇರುವುದಿಲ್ಲ. ಪುರುಷರು ಬಹುಬೇಗ ಇದಕ್ಕೆ ಸಿದ್ಧರಾಗಬಹುದು. ಮಹಿಳೆಯರಿಗೆ ಲೈಂಗಿಕ ಭಾವನೆಯುಂಟಾಗಲು ಕೆಲ ಸಮಯ ಹಿಡಿಯುತ್ತದೆ. ಅದಕ್ಕೆ ಸಮಯ ನೀಡಿದಲ್ಲಿ ಮಾತ್ರ ಶಾರೀರಿಕದ ಸುಖ ದುಪ್ಪಟ್ಟಾಗಲು ಸಾಧ್ಯ.