ಹೆಂಡತಿ (Wife) ಹಾಸಿಗೆಯಲ್ಲಿ ಸಹಕರಿಸುವುದಿಲ್ಲ, ಸುಖ ನೀಡುವುದಿಲ್ಲ ಎಂಬುದು ಹಲವರ ಗೋಳು. ಆದರೆ, ಸೆಕ್ಸ್ (Sex) ಲೈಫ್‌ನಲ್ಲಿ ಆಕೆಗೆ ಏನು ಇಷ್ಟ. ಬೆಡ್ ರೂಮ್ (Bedroom)ನಲ್ಲಿ ಆಕೆಯ ಜತೆ ಹೇಗೆ ನಡೆದುಕೊಂಡರೆ ಇಷ್ಟವಾಗುತ್ತದೆ ಎಂಬುದು ಹಲವರಿಗೆ ತಿಳಿದಲ್ಲ. ಪಲ್ಲಂಗದಾಟದಲ್ಲಿ ಪತ್ನಿಯನ್ನು ಸೆಳೆಯಲು ಹೀಗೆ ಮಾಡಿ ನೋಡಿ..
ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ಲೈಂಗಿಕ ಜೀವನವೂ ಚೆನ್ನಾಗಿರಬೇಕಾದುದು ಮುಖ್ಯ. ಇಲ್ಲವಾದರೆ ಸಣ್ಣಪುಟ್ಟ ಕಾರಣಗಳಿಗೆ ಗಂಡ-ಹೆಂಡತಿ ಮಧ್ಯೆ ವೈಮನಸ್ಸು ಮೂಡುತ್ತದೆ. ಬೆಡ್ ರೂಮ್ ಜಗಳ ಹಾದಿ-ಬೀದಿ ರಂಪಾಟವಾಗುತ್ತದೆ. ಕೊನೆಗೆ ಗಂಡ-ಹೆಂಡತಿ ಜಗಳ ಉಂಡುಮಲಗುವ ತನಕ ಎಂಬುದು ಬಿಟ್ಟು ಡೈವೋರ್ಸ್ ವರೆಗೂ ತಲುಪಿ ಪತಿ-ಪತ್ನಿ ಇಬ್ಬರೂ ದೂರವಾಗುತ್ತಾರೆ. ಹೀಗಾಗದಿರಲು ಬೆಡ್ ರೂಮ್ ಸೀಕ್ರೇಟ್‌ಗಳನ್ನು ತಿಳಿದಿರಬೇಕಾದುದು ಅಗತ್ಯವಾಗಿದೆ. ಪತ್ನಿ ಹಾಸಿಗೆಯಲ್ಲಿ ಸಹಕರಿಸುವುದಿಲ್ಲ, ಸುಖ ನೀಡುವುದಿಲ್ಲ ಎಂಬವರು ಆಕೆಯ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳು ಹಲವಾರು. ಹೀಗಾಗಿ ಪತ್ನಿಯನ್ನು ಪಲ್ಲಂಗಕ್ಕೆ ಎಳೆಯುವ ಮುನ್ನ ಸೆಕ್ಸ್ ಲೈಫ್‌ನಲ್ಲಿ ಆಕೆಗೆ ಏನು ಇಷ್ಟ. ಆಕೆಯ ಜತೆ ಹೇಗೆ ನಡೆದುಕೊಂಡರೆ ಇಷ್ಟವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾದುದು ಮುಖ್ಯವಾಗಿದೆ..
ಹುಡುಗಿಯರಿಗೆ ಸೆಕ್ಸ್‌ನಲ್ಲಿ ಏನಿಷ್ಟ..?
ಬೆಡ್ ರೂಮ್‌ನಲ್ಲಿ ಹುಡುಗಿಗೂ ಅವಳದ್ದೇ ಆದ ಆಯ್ಕೆಗಳಿಗೆ. ಪ್ರತಿ ಹುಡುಗಿಯೂ ತನ್ನ ಪುರುಷ ತನಗಾಗಿ ವಿಶೇಷವಾಗಿ ಹಾಸಿಗೆಯಲ್ಲಿ ಕೆಲವು ಕೆಲಸಗಳನ್ನು ಮಾಡಬೇಕೆಂದು ಬಯಸುತ್ತಾಳೆ. ಆ ರೀತಿ ಮಾಡುವುದರಿಂದ ಆಕೆ ಹೆಚ್ಚು ಖುಷಿಪಡುತ್ತಾಳೆ, ಸಂತೃಪ್ತಗೊಳ್ಳುತ್ತಾಳೆ, ನಿಮ್ಮೊಂದಿಗೆ ಹಾಸಿಗೆಯಲ್ಲಿ ಸಹಕರಿಸುತ್ತಾಳೆ. ಹಾಗಿದ್ರೆ ಮಹಿಳೆ, ಬೆಡ್ ರೂಮ್‌ನಲ್ಲಿ ಪುರುಷನಿಂದ ಬಯಸೋದೇನು..?
ಬೆಡ್ ರೂಮ್‌ನಲ್ಲಿ ತನ್ನನ್ನು ಮುದ್ದಾಡುವುದನ್ನು ಹುಡುಗಿ ಇಷ್ಟಪಡುತ್ತಾಳೆ. ಅದರಲ್ಲೂ ವಿಶೇಷವಾಗಿ ಲೈಂಗಿಕ ಕ್ರಿಯೆಯ ಮೊದಲು ಹಾಗೂ ಮುಗಿದ ನಂತರ ಆಕೆಯನ್ನು ಮುದ್ದಾಡುವುದು ಆಕೆಗೆ ಹೆಚ್ಚು ಇಷ್ಟವಾಗುತ್ತದೆ. ಗಂಡ ನಾಲ್ಕು ಜನರ ಎದುರು ಅಸಭ್ಯವಾಗಿ ಮಾತನಾಡುವುದು ಹುಡುಗಿಯರಿಗೆ ಇಷ್ಟವಾಗುವುದಿಲ್ಲ. ಆದರೆ, ಗಂಡ-ಹೆಂಡತಿ ಇಬ್ಬರೂ ಏಕಾಂತದಲ್ಲಿದ್ದಾಗ ಅಸಭ್ಯವಾಗಿ, ಡಬಲ್ ಮೀನಿಂಗ್‌ನಲ್ಲಿ ಮಾತನಾಡುವುದು ಅವಳಿಗೆ ಪ್ರಿಯವಾಗುತ್ತದೆ. ಕಣ್ ಹೊಡೆಯುವುದು, ಕಣ್ಸನೆ ಮಾಡುವುದನ್ನೂ ಅವಳು ಎಂಜಾಯ್ ಮಾಡುತ್ತಾಳೆ.
Sex Life: ಸಂಭೋಗಕ್ಕೂ ಮುನ್ನ ಸಂಗಾತಿ ಜೊತೆ ಈ ವಿಷ್ಯ ಮಾತನಾಡಿ
ಪತ್ನಿಯನ್ನು ಪ್ರೀತಿಯಿಂದ ಡಿಯರ್, ಬೇಬಿ, ಮುದ್ದು, ಜಾನು ಎಂದೆಲ್ಲಾ ಕರೆಯುತ್ತೀರೇನೋ ನಿಜ. ಆದರೆ ಬೆಡ್ ರೂಮ್‌ನಲ್ಲಿ ಆಕೆಯ ಹೆಸರನ್ನು ಹೇಳಿ ಕರೆಯುವುದು ಆಕೆಗೆ ರೋಮ್ಯಾಂಟಿಕ್ ಫೀಲಿಂಗ್ ತರಿಸುತ್ತದೆ. ಅದರಲ್ಲೂ ರೋಮ್ಯಾನ್ಸ್ ಮಾಡುವ ಸಂದರ್ಭದಲ್ಲಿ ಗಂಡನ ಬಾಯಲ್ಲಿ ಹೆಸರಿನ ಸಂಬೋಧನೆ ಪ್ರಿಯವೆನಿಸುತ್ತದೆ.
ಕಿಸ್ ಮಾಡುವುದನ್ನು ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ. ಹೀಗಾಗಿ ನೀವು ಕಿಸ್ ಮಾಡಿದಷ್ಟೂ ಆಕೆಯ ಖುಷಿ ಹೆಚ್ಚುತ್ತದೆ. ಹಾಗಾಗಿ ರೋಮ್ಯಾನ್ಸ್ ಮಾಡುವ ಸಂದರ್ಭದಲ್ಲಿ ಆಕೆಯನ್ನು ಕಿಸ್ ಮಾಡುತ್ತಲೇ ಇರಿ. ಇನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಸಂದರ್ಭ ಅವಸರ ಪಡದಿರಿ. ನಿಧಾನವಾಗಿ ಹಂತ ಹಂತವಾಗಿ ಅವಳನ್ನು ಖುಷಿಪಡಿಸಿ. ಇದರಿಂದ ಆಕೆಯ ಮೂಡ್ ಸಹ ಉತ್ತಮವಾಗಿ ನಿಮ್ಮೊಂದಿಗೆ ಪಲ್ಲಂಗದಲ್ಲಿ ಸಹಕರಿಸುತ್ತಾಳೆ.
ಬೆಡ್ ರೂಮ್‌ನಲ್ಲಿ ಪತ್ನಿ ಧರಿಸಿದ ನೈಟ್ ಡ್ರೆಸ್‌ಗೆ ಮೆಚ್ಚುಗೆ ಸೂಚಿಸಿ. ಒಳಉಡುಪುಗಳ ಬಣ್ಣ, ಡಿಸೈನ್ ಆಯ್ಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿ. ನೀವು ಅವಳನ್ನು ಅವಲೋಕಿಸುತ್ತಿದ್ದೀರಿ ಎಂಬ ವಿಷಯ ಮನವರಿಕೆಯಾಗಿ ವೈಯುಕ್ತಿಕವಾಗಿ ಆಕೆಗೂ ಖುಷಿ ನೀಡುತ್ತದೆ. ಹುಡುಗಿಯರು ಸುವಾಸನೆಯನ್ನು ಇಷ್ಟಪಡುತ್ತಾರೆ. ಹೀಗಾಗಿ ಸರಸ-ಸಲ್ಲಾಪದಲ್ಲಿ ತೊಡಗಿಕೊಳ್ಳುವ ಮೊದಲು ಫ್ರೆಶ್ ಆಗಿ ಸುವಾಸನೆಭರಿತ ಡಿಯೋಡ್ರೆಂಟ್ ಬಳಸಿ. ಸುವಾಸನೆ ಆಕೆಯನ್ನು ಉಲ್ಲಸಿತವಾಗಿಸಿ ನಿಮ್ಮತ್ತ ಆಸಕ್ತಿಯಿಂದ ಬರುವಂತೆ ಮಾಡುತ್ತದೆ.
SEX SECRET: ಬೆತ್ತಲಾಗುವ ಮಲಗುವ ಕೋಣೆಯಲ್ಲಿಯೂ ದಂಪತಿ ಬಚ್ಚಿಡುವ ವಿಚಾರಗಳಿವು..!
ನೀವು ಮುಗಿಸಿದ ಮಾತ್ರಕ್ಕೆ, ಅದು ಮುಗಿದಿದೆ ಎಂದು ಅರ್ಥವಲ್ಲ. ಲೈಂಗಿಕ ಕ್ರಿಯೆಯನ್ನು ಮುಗಿಸಿ ಮುಗಿಯಿತು ಎಂಬಂತೆ ಸುಮ್ಮನೆ ಸುತ್ತಿಕೊಂಡು ಮಲಗಬೇಡಿ. ಆಕೆಯ ಮನಸ್ಥಿತಿ, ತೃಪ್ತಿಯ ಬಗ್ಗೆ ಕೇಳಿ ತಿಳಿದುಕೊಳ್ಳಿ. ಆಕೆ ಇನ್ನೇನಾದರೂ ಬಯಸುತ್ತಿದ್ದಾಳ ಎಂಬುದನ್ನು ತಿಳಿದುಕೊಳ್ಳಿ. ನಂತರವಷ್ಟೇ ಪ್ರೀತಿಯಿಂದ ತಬ್ಬಿ, ಮುದ್ದಾಡಿ ಮಲಗಿ. ಇದರಿಂದ ಇಬ್ಬರ ನಡುವಿನ ಬಾಂಧವ್ಯವೂ ಗಟ್ಟಿಯಾಗುತ್ತದೆ