ಕೆಲವೊಂದು ಮ್ಯಾಟ್ರಿಮೋನಿಯಲ್ ಆಡ್‌ಗಳು ತುಂಬಾ ವಿಚಿತ್ರವಾಗಿರುತ್ತವೆ. ಇಂಜಿನಿಯರ್ ವರನೇ ಬೇಕು, ವೆಜಿಟೇರಿಯನ್ಸ್ ವರನೇ ಆಗಬೇಕು, ಹೌಸ್‌ವೈಫ್ ಆಗಿದ್ದರೆ ಸಾಕು ಮೊದಲಾದ ಕಂಡೀಷನ್ಸ್ ಇಟ್ಕೊಂಡು ವಧು-ವರರು ಬೇಕೆಂಬ ಜಾಹೀರಾತು ನೀಡುತ್ತಾರೆ. ಆದ್ರೆ ಇದೆಲ್ಲಕಿಂತ ವಿಭಿನ್ನವಾಗಿ ಇಲ್ಲೊಬ್ಬ ಯುವತಿ ನೀಡಿರೋ ವರ ಬೇಕೆಂಬ ಜಾಹೀರಾತು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಈಗ ಮದುವೆ ವಿಧಾನದಲ್ಲಿ ಹಲವಾರು ಬದಲಾವಣೆಯಾಗಿದೆ. ಜಾತಕ ಹಿಡಿದು ಮನೆ ಮನೆಗೆ ಹೋಗ್ತಿದ್ದ ಕಾಲ ಈಗಿಲ್ಲ. ಆನ್‌ಲೈನ್‌ನಲ್ಲಿಯೇ ಸಂಗಾತಿಯನ್ನು ಹುಡುಕಿಕೊಳ್ಳಬಹುದು. ಹೀಗೆ ಸಂಗಾತಿಯನ್ನು ಹುಡುಕಿಕೊಳ್ಳಲು, ಜನರ ಅನುಕೂಲಕ್ಕಾಗಿ ಅನೇಕ ಮ್ಯಾಟ್ರಿಮೋನಿಯಲ್ ಸೈಟ್‌ಗಳು ಸಹ ಇವೆ. ಈ ಮ್ಯಾಟ್ರಿಮೋನಿಯಲ್ಲಿ ಜನರು ತಮ್ಮೆಲ್ಲ ಮಾಹಿತಿಯನ್ನು ಅಪ್ಲೋಡ್ ಮಾಡ್ತಾರೆ. ನಂತ್ರ ತಮಗೆ ಮ್ಯಾಚ್ ಆಗುವ ಸಂಗಾತಿಯನ್ನು ಹುಡುಕಿಕೊಳ್ತಾರೆ. ಪರಿಪೂರ್ಣ ಜೀವನ ಸಂಗಾತಿಯನ್ನು ಹುಡುಕಲು ಮ್ಯಾಟ್ರಿಮೋನಿಯಲ್ ಸೈಟ್ ಸಹಾಯ ಮಾಡುತ್ತದೆ. ಇಷ್ಟೇ ಅಲ್ಲದೆ ಯಾವ ರೀತಿಯ, ಯಾವ ಎಜುಕೇಶನ್, ಜಾಬ್, ಹಾಬೀಸ್ ಇರುವ ಹುಡುಗ ಬೇಕು, ಯಾವ ರಾಜ್ಯದವರು ಆಗಿರಬೇಕು ಎಂಬೆಲ್ಲಾ ಆಯ್ಕೆಯನ್ನು ಮಾಡಿಕೊಳ್ಳಲು ಅವಕಾಶವಿದೆ.
ಆದ್ರೆ ಕೆಲವೊಂದು ಮ್ಯಾಟ್ರಿಮೋನಿಯಲ್ ಆಡ್‌ಗಳು ತುಂಬಾ ವಿಚಿತ್ರ (Weird)ವಾಗಿರುತ್ತವೆ. ಇಂಜಿನಿಯರ್ ವರನೇ ಬೇಕು, ವೆಜಿಟೇರಿಯನ್ಸ್ ವರನೇ ಆಗಬೇಕು, ಹೌಸ್‌ವೈಫ್ ಆಗಿದ್ದರೆ ಸಾಕು ಮೊದಲಾದ ಕಂಡೀಷನ್ಸ್ ಇಟ್ಕೊಂಡು ವಧು-ವರರು (Bride-groom) ಬೇಕೆಂಬ ಜಾಹೀರಾತು ನೀಡುತ್ತಾರೆ. ಆದ್ರೆ ಇದೆಲ್ಲಕಿಂತ ವಿಭಿನ್ನವಾಗಿ ಇಲ್ಲೊಬ್ಬ ಯುವತಿ (Girl) ನೀಡಿರೋ ವರ ಬೇಕೆಂಬ ಜಾಹೀರಾತು (Advertisement) ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
14 ಹುಡುಗರ ಜೊತೆ ಚಾಟಿಂಗ್, ಯಾರನ್ನು ಮದ್ವೆಯಾಗ್ಲಿ, ಹೆಲ್ಪ್ ಮಾಡಿ ಪ್ಲೀಸ್ ಅಂತಿದ್ದಾಳೆ ಯುವತಿ!
ಲೈಫ್, ರಿಲೇಶನ್ ಶಿಪ್ ಬಗ್ಗೆ ವೀಡಿಯೋ ಮಾಡೋ ಹುಡ್ಗ ಬೇಕು
ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಕಪಲ್ಸ್ ವೀಡಿಯೋಗೆ ಹೆಚ್ಚು ಡಿಮ್ಯಾಂಡ್ ಇದೆ. ಕಪಲ್ಸ್ ವೀಡಿಯೋ, ಕಪಲ್ಸ್ ಕಾಮಿಡಿ, ಕಪಲ್ಸ್ ಟ್ರಾವೆಲ್ ವ್ಲಾಗ್ ಹೆಚ್ಚು ಬೇಗ ವೈರಲ್ ಆಗುತ್ತವೆ. ಹೆಚ್ಚಿನ ಲೈಕ್ಸ್, ಕಾಮೆಂಟ್‌ಗಳನ್ನು ಗಳಿಸುತ್ತವೆ. ಮದುವೆಯಾಗಿ ಲೈಫ್, ರಿಲೇಶನ್ ಶಿಪ್ ಬಗ್ಗೆ ವೀಡಿಯೋ ಮಾಡ್ತಾನೆ ಲಕ್ಷಗಟ್ಟಲೆ ಗಳಿಸುವವರಿದ್ದಾರೆ. ಇಂಥಾ ಕಪಲ್ಸ್ ಬೇಗ ಫೇಮಸ್ ಸಹ ಆಗುತ್ತಾರೆ. ಹೀಗಾಗಿಯೇ ಇಲ್ಲೊಬ್ಬಳು ಯುವತಿ, ರೀಲ್ಸ್ ಮಾಡೋ ಹುಡುಗನೇ ಬೇಕು ಅನ್ನೋ ಜಾಹೀರಾತು ನೀಡಿದ್ದಾಳೆ.
ರಿಯಾ ಎಂಬ ಸೋಷಿಯಲ್ ಇನ್‌ಫ್ಲುಯೆನ್ಸರ್ ಪೋಸ್ಟ್ ಮಾಡಿದ ಇತ್ತೀಚಿನ ಮ್ಯಾಟ್ರಿಮೋನಿಯಲ್ ಜಾಹೀರಾತು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ಡಿಜಿಟಲ್ ಯುಗದಲ್ಲಿ ಜನರು ತಮ್ಮ ಪರಿಪೂರ್ಣ ಹೊಂದಾಣಿಕೆಯನ್ನು ಕಂಡುಕೊಳ್ಳಲು ಏನೆಲ್ಲಾ ಮಾಡುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಪೋಸ್ಟ್‌ನಲ್ಲಿ ಯುವತಿ ತಾನು ಕ್ಯಾಮರಾ ಶೈ ಇಲ್ಲದ ಹುಡುಗನನ್ನು ಹುಡುಕುತ್ತಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಮಾತ್ರವಲ್ಲದೆ ಲೈಫ್, ರಿಲೇಶನ್‌ಶಿಪ್, ಡ್ಯಾನ್ಸ್ ರೀಲ್ಸ್ ಮಾಡಲು ಹಿಂಜರಿಯದಂಥವನು ಆಗಿರಬೇಕು ಎಂದು ತಿಳಿಸಿದ್ದಾಳೆ.
ಯಾರಾದರೂ ನನ್ನನ್ನು ಅಪ್ರೋಚ್ ಮಾಡುವ ಮೊದಲು Amazon miniTVy 'Half Love Half Arranged' ವೀಕ್ಷಿಸಬೇಕೆಂದು ಆಕೆ ಒತ್ತಾಯಿಸಿದ್ದಾಳೆ. ಜೊತೆಗೆ, ಆಕೆಯನ್ನು ಮದುವೆಯಾಗುವ ಹುಡು ಸಾಮಾಜಿಕ ಮಾಧ್ಯಮ ವಿಷಯವನ್ನು ಸಂಪಾದಿಸಲು ಪ್ರೀಮಿಯರ್ ಪ್ರೊ ಅನ್ನು ಬಳಸುವಲ್ಲಿ ಪರಿಣತಿ ಹೊಂದಿರಬೇಕು ಎಂದು ಸ್ಪಷ್ಟಪಡಿಸಿದ್ದಾಳೆ.
Matrimonial Ad: ವರ ಬೇಕಾಗಿದ್ದಾನೆ, ಸಾಫ್ಟ್‌ವೇರ್ ಇಂಜಿನಿಯರ್ಸ್ ದಯವಿಟ್ಟು ಕಾಲ್ ಮಾಡ್ಬೇಡಿ !
ಈ ಮ್ಯಾಟ್ರಿಮೋನಿಯಲ್ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಬಹುಬೇಗನೇ ವೈರಲ್ ಆಗಿದೆ. ನೆಟ್ಟಿಗರು ಈ ರೀತಿಯೂ ವರನನ್ನು ಹುಡುಕುತ್ತಾರೆಯೇ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು, 'ಇವರು ಜೀವನ ಸಂಗಾತಿಯನ್ನು ಹುಡುಕುತ್ತಿದ್ದಾರೆಯೇ ಅಥವಾ ಯಾವುದೋ ಪೋಸ್ಟ್‌ಗೆ ಉದ್ಯೋಗಿಯನ್ನು ಹುಡುಕುತ್ತಿದ್ದಾರೆಯೇ' ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಮ್ಯಾಟ್ರಿಮೋನಿ ಆಡ್ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿರೋದಂತೂ ನಿಜ.
probably the WILDEST matrimonial ad ever 💀😂 pic.twitter.com/kIMWGhJlW0
— Aayushi Gupta (@Aaayushiiiiiii)