ಯಾಕೋ ಯಾರೂ ನನ್ನನ್ನು ಪ್ರೀತಿಸ್ತಿಲ್ಲ ಅನಿಸ್ತಾ ಇದ್ಯಾ? ಈ ಸೈನಿದ್ದರೆ ಅದು ಹೌದು!

By Suvarna News  |  First Published Oct 28, 2023, 12:57 PM IST

ಮನೆಯ ಹಿರಿಯರು, ಪಾಲಕರು ಅಥವಾ ಒಡಹುಟ್ಟಿದವರ ಜತೆ ಕೆಲವರಿಗೆ ಹೆಚ್ಚಿನ ಒಡನಾಟವಿರುವುದಿಲ್ಲ. ಪರಸ್ಪರ ಸೌಹಾರ್ದ ಸಂಬಂಧ ಮೇಲ್ನೋಟಕ್ಕೆ ಕಂಡುಬರುವುದಿಲ್ಲ. ಇದರರ್ಥ ಅವರು ನಿಮ್ಮನ್ನು ಪ್ರೀತಿಸುವುದಿಲ್ಲ ಎಂದಲ್ಲ. ಅವರು ನಿಮ್ಮ ಕುರಿತು ಪ್ರೀತಿ, ಕಾಳಜಿ ಹೊಂದಿರುವುದನ್ನು ಕೆಲವು ವರ್ತನೆಗಳ ಮೂಲಕ ತಿಳಿದುಕೊಳ್ಳಬಹುದು.


ಕುಟುಂಬಗಳು ನಮ್ಮ ನೆಮ್ಮದಿಯ ಮೂಲವಾಗಿವೆ. ಕುಟುಂಬ ವ್ಯವಸ್ಥೆ ಅತ್ಯಂತ ಸಂಕೀರ್ಣವಾದುದೂ ಹೌದು. ನಾವು ನಮ್ಮ ಕುಟುಂಬವನ್ನು ಅದೆಷ್ಟು ಪ್ರೀತಿಸಿದರೂ ತೋರ್ಪಡಿಸಿಕೊಳ್ಳಲು ಹಿಂಜರಿಯುತ್ತೇವೆ. ಸ್ವಾರ್ಥಕ್ಕಾಗಿ ಕುಟುಂಬದ ಹಿತವನ್ನು ಮರೆಯುವವರೂ ಇದ್ದಾರೆ. ಅಷ್ಟೇ ಏಕೆ? ಕೆಲವರಿಗೆ ಕುಟುಂಬವೇ ಬೇಡ. ಹಿರಿಯರು, ಸಹೋದರಿ-ಸಹೋದರರನ್ನು ದೂರ ಮಾಡಿಕೊಳ್ಳುವವರೂ ಇದ್ದಾರೆ. ಒಡಹುಟ್ಟಿದವರಲ್ಲಿ ಪರಸ್ಪರದ ಎಷ್ಟೇ ವಿರೋಧಾಭಾಸವಿದ್ದರೂ ಅಷ್ಟೇ ಪ್ರೀತಿಯೂ ಇರುತ್ತದೆ ಎನ್ನುವುದು ಸುಳ್ಳಲ್ಲ. ಹಲವಾರು ಕಾರಣಗಳಿಂದ ಒಡಹುಟ್ಟಿದವರಿಂದ ದೂರವಿದ್ದರೂ ಆಂತರ್ಯದಲ್ಲಿ ಮಮಕಾರ ಇರುವುದು ಸಾಮಾನ್ಯ. ನಾವು ಹೇಗೆ ನಮ್ಮ ಪ್ರೀತಿಯನ್ನು ತೋರ್ಪಡಿಸಿಕೊಳ್ಳಲು ಹಿಂದೇಟು ಹಾಕುತ್ತೇವೆಯೋ, ಹಾಗೆಯೇ, ನಮ್ಮವರೂ ಸಹ ನಮ್ಮ ಮೇಲಿರುವ ತಮ್ಮ ಪ್ರೀತಿಯನ್ನು ತೋರ್ಪಡಿಸಿಕೊಳ್ಳುವುದಿಲ್ಲ. ಎಷ್ಟೋ ಬಾರಿ, ಇಂತಹ ವರ್ತನೆಗಳೇ ತಪ್ಪು ತಿಳಿವಳಿಕೆಗೆ ಕಾರಣವಾಗುತ್ತವೆ. ಕುಟುಂಬಸ್ಥರು ನಮ್ಮನ್ನು ಪ್ರೀತಿಸುತ್ತಿಲ್ಲ ಎನ್ನುವ ಭಾವನೆಗೆ ಕಾರಣವಾಗುತ್ತವೆ. ಅವರು ತಮ್ಮ ಕಾಳಜಿಯನ್ನು ವಿಭಿನ್ನವಾಗಿ ತೋರ್ಪಡಿಸುವುದರಿಂದ ಅದು ನಮಗೆ ಅರ್ಥವಾಗದೆ ಇರಬಹುದು ಅಥವಾ ಅವರು ನಿಜಕ್ಕೂ ತಮ್ಮ ಕಾಳಜಿ, ಪ್ರೀತಿಯನ್ನು ತೋರಿಸಿಕೊಳ್ಳದೇ ಇರಬಹುದು. ಆದರೆ, ಕೆಲವು ವರ್ತನೆಗಳು ಅವರು ನಮ್ಮ ಮೇಲೆ ಪ್ರೀತಿ ಹೊಂದಿದ್ದಾರೆ ಎನ್ನುವುದನ್ನು ಸೂಚಿಸುತ್ತವೆ.

•    ನಿಮ್ಮ ಬಗ್ಗೆ ಪರಿಶೀಲನೆ (Check)
ಸಂಬಂಧಿಗಳು (Relations) ನಿಮ್ಮ ಜತೆ ಆಪ್ತರಾಗಿಲ್ಲದೇ ಇರಬಹುದು. ದೈನಂದಿನ ವ್ಯವಹಾರಗಳಲ್ಲಿ ಅವರ ಪಾತ್ರವಿಲ್ಲದೇ ಹೋಗಬಹುದು. ಆದರೆ, ಅವರು ನಿಮ್ಮ ಬಗ್ಗೆ ವಿಚಾರಿಸುತ್ತಲೇ ಇರುತ್ತಾರೆ. ನಿರಂತರವಾಗಿ ನಿಮ್ಮ ಬಗ್ಗೆ ಗಮನವಿಡುತ್ತಾರೆ. ನೀವು ಅವರೊಂದಿಗೆ ಸಂಪರ್ಕದಲ್ಲಿ (Connect) ಇರದೇ ಹೋದರೂ ನಿಮಗೆ ಫೋನ್‌ ಕಾಲ್‌ ಮಾಡಬಹುದು. ನಿಮ್ಮ ಆಪ್ತರ ಬಳಿ ನಿಮ್ಮ ಬಗ್ಗೆ ವಿಚಾರಿಸಿಕೊಳ್ಳಬಹುದು. ಈ ವರ್ತನೆ (Behaviour) ಅವರು ನಿಮ್ಮ ಬಗ್ಗೆ ಪ್ರೀತಿ (Love) ಹೊಂದಿದ್ದಾರೆ ಎನ್ನುವುದನ್ನು ತಿಳಿಸುತ್ತದೆ. ನೀವು ಕ್ಷೇಮವಾಗಿರಲಿ (Well being) ಎಂದು ಬಯಸುತ್ತಾರೆ. 

Tap to resize

Latest Videos

ನಿಮ್ಮ ರಿಲೇಶನ್‌ಶಿಪ್‌ನಲ್ಲೂ ಹೀಗೆಲ್ಲಾ ಆಗ್ತಿದ್ಯಾ? ದೂರ ಇರೋದು ಬೆಸ್ಟ್

•    ನಿಮ್ಮ ಕುರಿತ ವಿಚಾರಗಳ ಬಗ್ಗೆ ನೆನಪು (Memory)
ನಿಮ್ಮ ಪಾಲಕರು (Parents) ಅಥವಾ ಒಡಹುಟ್ಟಿದವರಿಗೆ ನಿಮಗೆ ಯಾವ ಆಹಾರ ಇಷ್ಟ, ಯಾವ ರೀತಿಯ ಊಟ (Meal) ಇಷ್ಟ ಎನ್ನುವುದು ನೆನಪಿದ್ದರೆ ಅದು ಸಹ ಖಂಡಿತವಾಗಿ ನಿಮ್ಮ ಕುರಿತಾದ ಪ್ರೀತಿಯನ್ನು ತೋರ್ಪಡಿಸುತ್ತದೆ. ಬಾಲ್ಯಕಾಲದ ಘಟನೆಗಳನ್ನು ನೆನಪಿಟ್ಟುಕೊಂಡಿರುತ್ತಾರೆ, ನಿಮ್ಮ ಕುರಿತಾದ ಚಿಕ್ಕಪುಟ್ಟ ಸಂಗತಿಗಳನ್ನು ಮರೆಯುವುದಿಲ್ಲ.

•    ನಿಮಗಾಗಿ ಸಮಯ (Time)
ನೀವು ಅವರಿಗಾಗಿ ಏನು ಮಾಡದಿದ್ದರೂ ಅವರು ನಿಮಗಾಗಿ ಸಮಯ ಮಾಡಿಕೊಳ್ಳುತ್ತಾರೆ. ನಿಮಗೆ ಫೋನ್‌ ಮಾಡುತ್ತಾರೆ, ಎಷ್ಟೇ ಬ್ಯುಸಿಯಾಗಿದ್ದರೂ (Busy) ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಅವರು ಬಾಯಿಬಿಟ್ಟು ನಿಮ್ಮ ಕುರಿತು ಪ್ರೀತಿಯನ್ನು ವ್ಯಕ್ತಪಡಿಸದೇ ಇದ್ದರೂ ಅವರ ವರ್ತನೆಯಲ್ಲೇ ನೀವು ಅರ್ಥ ಮಾಡಿಕೊಳ್ಳಬೇಕು. 

•    ಸಹಾಯದ ಆಫರ್‌ (Offer)
ನೀವು ಯಾವುದಾದರೂ ಕೆಲಸವನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ  ಸಹಾಯ (Help) ಮಾಡುವ ಬಗ್ಗೆ ಅವರು ನಿಮ್ಮನ್ನು ಕೇಳಿರಬಹುದು. ಒಂದೊಮ್ಮೆ ಹಣಕಾಸಿನ (Financial) ಸಹಾಯ ಮಾಡಲು ಸಾಧ್ಯವಾಗದೇ ಇದ್ದರೂ ಭಾವನಾತ್ಮಕ (Emotional) ಬೆಂಬಲ ನೀಡಬಹುದು. ಅಥವಾ ದೈಹಿಕವಾಗಿ ಹಾಜರಿದ್ದು ನಿಮಗೆ ಜತೆಯಾಗಿರಬಹುದು. ಇವೆಲ್ಲ ಅವರ ಪ್ರೀತಿಯನ್ನು ಸೂಚಿಸುವ ಕ್ರಿಯೆಗಳು.

ಪುರುಷರು ಮಹಿಳೆಯರಿಗೆ ಯಾವತ್ತೂ ಈ ವಿಷ್ಯಗಳನ್ನ ಹೇಳೋದೆ ಇಲ್ಲ!

•    ನಿಮ್ಮ ತಪ್ಪು (Mistakes) ಬಗ್ಗೆ ತಿಳಿವಳಿಕೆ ಮೂಡಿಸುವ ಯತ್ನ
ನೀವೊಮ್ಮೆ ತಪ್ಪು ಮಾಡಿದ್ದರೆ ಅದನ್ನು ನೇರವಾಗಿ ನಿಮ್ಮ ಬಳಿಯೇ ಹೇಳುವುದು ಅತ್ಯುತ್ತಮ ವಿಧಾನ. ನಿಮ್ಮನ್ನು ನಿಜಕ್ಕೂ ಇಷ್ಟಪಡುವ ಜನ ಇದನ್ನೇ ಮಾಡುತ್ತಾರೆ. ನಿಮ್ಮ ತಪ್ಪುಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಯತ್ನಿಸುವುದು ಹಾಗೂ ಮುಂದೆ ಇಂತಹ ತಪ್ಪುಗಳಾಗದಂತೆ ನಿಮ್ಮಂದ ಖಾತರಿ (Guarantee)  ಪಡೆಯುವ ಪ್ರಯತ್ನ ಮಾಡಬಹುದು. 

•    ಹಂಚಿಕೊಳ್ಳುವುದು (Sharing)
ನೀವು ಅವರ ಬಗ್ಗೆ ಹೆಚ್ಚಿನ ಆದರ ತೋರದಿದ್ದರೂ ಅವರು ನಿಮ್ಮೊಂದಿಗೆ ಹಳೆಯ ನೆನಪುಗಳನ್ನು ಹಂಚಿಕೊಳ್ಳಬಹುದು. ಆಹಾರ (Food), ಭಾವನೆಗಳನ್ನು ಹಂಚಿಕೊಳ್ಳಲು ಇಷ್ಟಪಡಬಹುದು. ನಿಮ್ಮೊಂದಿಗೆ ಕುಳಿತು ಹಳೆಯ ಕತೆಗಳನ್ನು (Old Stories) ಹೇಳಬಹುದು. 

•    ನೀವು ಏನನ್ನುತ್ತೀರಿ?
ಕುಟುಂಬದ ವಿಚಾರಗಳ ಬಗ್ಗೆ ನೀವು ಏನನ್ನುತ್ತೀರಿ ಎನ್ನುವುದನ್ನು ವಿಚಾರಿಸಬಹುದು. ನಿರ್ದಿಷ್ಟ ಸಂಗತಿಗಳ ಬಗ್ಗೆ ನಿಮ್ಮ ಅಭಿಪ್ರಾಯ (Opinion) ಕೇಳಬಹುದು. ನಿಮ್ಮ ಒಡಹುಟ್ಟಿದವರು, ಪಾಲಕರು ಅಥವಾ ಯಾವುದೇ ಹಿರಿಯರು ನಿಮ್ಮ ಇಷ್ಟಾನಿಷ್ಟಗಳನ್ನು ಕೇಳುತ್ತಾರೆ ಎಂದರೆ ಅದರಷ್ಟು ಅದೃಷ್ಟ (Luck) ಬೇರೊಂದಿಲ್ಲ ಎನ್ನಬಹುದು, ಏಕೆಂದರೆ, ಅವರು ಖಂಡಿತವಾಗಿ ನಿಮ್ಮನ್ನು ಅವರ ಜೀವನದಲ್ಲಿ ಪರಿಗಣಿಸುತ್ತಾರೆ.

click me!