ಮುದ್ದಾಗಿ ಬೆಳೆಸಿದ ಮಗನನ್ನೇ ಮದುವೆಯಾದ 53 ವರ್ಷದ ತಾಯಿ!

Published : Oct 27, 2023, 07:57 PM ISTUpdated : Oct 27, 2023, 07:58 PM IST
ಮುದ್ದಾಗಿ ಬೆಳೆಸಿದ ಮಗನನ್ನೇ ಮದುವೆಯಾದ 53 ವರ್ಷದ ತಾಯಿ!

ಸಾರಾಂಶ

ಪ್ರೀತಿಯಿಂದ ಬೆಳೆಸಿದ ಮಗನನ್ನೇ ತಾಯಿಯೊಬ್ಬರು ಮದುವೆಯಾಗಿದ್ದಾರೆ. ರಷ್ಯಾದ ಈ ಘಟನೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡಿಂಗ್‌ನಲ್ಲಿದೆ. ನಮ್ಮಿಬ್ಬರ ಯೋಚನೆಗಳು ಹೆಚ್ಚೂ ಕಡಿಮೆ ಒಂದೇ ಆಗಿರುವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿರುವುದಾಗಿ ತಾಯಿ ತಿಳಿಸಿದ್ದಾಳೆ.  

ನವದೆಹಲಿ (ಅ.27): ಪ್ರೀತಿ ಅನ್ನೋದು ಜಗತ್ತಿನ ಬ್ಯೂಟಿಫುಲ್‌ ಫೀಲಿಂಗ್‌. ಯಾರಿಗೆ ಬೇಕಾದ್ರೂ ಯಾವಾಗ ಬೇಕಾದರೂ ಆಗಬಹುದು. ಆದರೆ, ರಷ್ಯಾದಲ್ಲಿ ತಾಯಿಯೊಬ್ಬಳು ತನ್ನ ಮಗನಿಂದಲೇ ಇಂಥ ಪ್ರೀತಿಯನ್ನು ಪಡೆದುಕೊಂಡಿದ್ದಾಳೆ. ತಾಯಿ-ಮಗನ ಸಂಬಂಧಕ್ಕೆ ಭಾರತದಲ್ಲಿ ಎಷ್ಟು ಪೂಜ್ಯ ಸ್ಥಾನವಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ, ದೂರದ ರಷ್ಯಾದಲ್ಲಿ ತಾಯಿಯೊಬ್ಬಳು ತಾನು ಬೆಳೆಸಿದ ಮಗನನ್ನೇ ವಿವಾಹವಾಗಿದ್ದಾಳೆ. ಈ ಮದುವೆ ಈಗ ರಷ್ಯಾದಲ್ಲಿ ಸಾಕಷ್ಟು ಸುದ್ದಿಯಾಗಿದೆ. ತನಗಿಂತ 31 ವರ್ಷ ಕಿರಿಯವನಾದ ಮಲ ಮಗನನ್ನು ಮದುವೆಯಾಗಿದ್ದಾಳೆ.  53 ವರ್ಷದ ಸಂಗೀತಗಾರ್ತಿಯಾಗಿರುವವ ಅಸಿಲು ಚಿಜೆವ್ಸ್ಕಯಾ ಮಿಂಗಾಲಿಮ್ ತನ್ನ 22 ವರ್ಷದ ಮಲಮಗ ಡೇನಿಯಲ್ ಚಿಜೆವ್ಸ್ಕಿಯನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ರಷ್ಯಾದ ಮಕ್ಕಳ ಕಲ್ಯಾಣ ಇಲಾಖೆ ಕೂಡ ಈ ಮದುವೆಗೆ ಅಚ್ಚರಿ ವ್ಯಕ್ತಪಡಿಸಿದೆ. ರಷ್ಯಾದ ರಿಪಬ್ಲಿಕ್ ಆಫ್ ಟಾಟರ್ಸ್ತಾನ್‌ನ ಕಜಾನ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ದಂಪತಿಗಳು ಪರಸ್ಪರ ಒಟ್ಟಾಗಿ ಬಾಳುವುದಾಗಿ ಹಾಗೂ ಸಾಯುವವರೆಗೂ ಜೊತೆಯಾಗಿಯೇ ಇರುವುದಾಗಿ ಪ್ರಮಾಣ ಮಾಡಿ ಮದುವೆಯಾಗಿದ್ದಾರೆ.

ಸ್ಥಳೀಯ ಮಾಧ್ಯಮಗಳಿಂದ ಪಡೆದ ಮಾಹಿತಿಯನ್ನು ನಂಬುವುದಾದರೆ, ಮಿಂಗಲಿಮ್ ಅವರು ಡೇನಿಯಲ್‌ಗೆ 13 ವರ್ಷವಾಗಿದ್ದಾಗಿನಿಂದಲೂ ಆತನನ್ನು ಸಾಕಿ ಬೆಳೆಸಿದ್ದಾಳೆ. ಅನಾಥಾಶ್ರಮದಲ್ಲಿ ಸಿಕ್ಕಿದ್ದ ಡೇನಿಯಲ್‌ನನ್ನು ಮಗನ ರೀತಿಯಲ್ಲಿ ದತ್ತು ಪಡೆದು ಸಾಕಿದ್ದಳು.  ತನ್ನ ಮನೆಯಲ್ಲಿಯೇ ಮಿಂಗಲಿಮ್ ಡೇನಿಯಲ್‌ಗೆ ಸಂಗೀತ ಕಲಿಸುತ್ತಿದ್ದರು ಮತ್ತು ಆ ಸಮಯದಲ್ಲಿ ಅವರು ಕೇವಲ 13 ವರ್ಷ ವಯಸ್ಸಿನವರಾಗಿದ್ದರು ಎಂದು ಹೇಳಲಾಗಿದೆ.

ಆದರೆ, ಮಗನನ್ನೇ ಮದುವೆಯಾದ ಬಳಿಕ ಮಿಂಗಲಿಮ್‌ಗೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ರಷ್ಯಾದ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಿಂಗಲಿಮ್‌ ಇದ್ದ ಮನೆಯನ್ನು ಸೀಜ್‌ ಮಾಡಿದ್ದು, ಮಿಂಗಲಿಮ್‌ ಈಗಾಗಲೇ ದತ್ತು ಪಡೆದಿದ್ದ ಐದಕ್ಕೂ ಅಧಿಕ ಮಕ್ಕಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ನಾಲ್ವರು ಹೆಣ್ಣು ಮಕ್ಕಳಾಗಿದ್ದರೆ, ಇನ್ನೊಂದು ಗಂಡು ಮಗುವಾಗಿದೆ. ಮಿಂಗಲಿಮ್‌ ತಾನು ಬೆಳೆಸಿದ್ದ ಮಗನನ್ನೇ ಮದುವೆಯಾಗಿರುವ ಕಾರಣ ಅವರ ಉದ್ದೇಶ ಇಲ್ಲಿ ಅರ್ಥವಾಗಿದೆ. ಹಾಗಾಗಿ ಈ ಮಕ್ಕಳನ್ನು ಅವರು ಸರಿಯಾದ ರೀತಿಯಲ್ಲಿ ಬೆಳೆಸುವ ಸಾಧ್ಯತೆ ಕಡಿಮೆ ಎನ್ನುವ ಸಂಶಯ ನಮಗೆ ಬಂದಿದೆ ಎಂದು ತಿಳಿಸಿದ್ದಾರೆ.

ಡೇನಿಯಲ್‌ನನ್ನು ಮನೆಗೆ ನಾನು ಕರೆತಂದಾಗಲೇ ಆತನೊಂದಿಗೆ ರೊಮಾಂಟಿಕ್‌ ಸಂಬಂಧ ಬೆಳೆದಿತ್ತು ಎಂದು ಮಿಂಗಲಿಮ್‌ ಹೇಳಿದ್ದಾರೆ. ನಮ್ಮ ರಿಲೇಷನ್‌ಷಿಪ್‌ ಅತ್ಯಂತ ಪರ್ಫೆಕ್ಟ್‌. ನಾವಿಬ್ಬರೂ ಬೇರೆ ಬೇರೆಯಾಗಿ ಬದುಕೋದಕ್ಕೆ ಸಾಧ್ಯವೇ ಇಲ್ಲ. ಇನ್ನು ನಮ್ಮಿಬ್ಬರ ಯೋಚನೆಗಳು ಕೂಡ ಉತ್ತಮವಾಗಿ ಹೊಂದಿಕೆ ಆಗುತ್ತದೆ ಎಂದಿದ್ದಾರೆ.

ಪತ್ನಿಯಿಂದ ಅತೀವ ಹಿಂಸೆ, ಶಿಖರ್‌ ಧವನ್‌ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ ದೆಹಲಿ ಕೋರ್ಟ್‌!

ಟಾಟರ್ಸ್ತಾನ್ ಟಿವಿ ಸ್ಟೇಷನ್‌ಗಾಗಿ ಚಲನಚಿತ್ರ ಯೋಜನೆಯ ಸಮಯದಲ್ಲಿ ಅನಾಥಾಶ್ರದಲ್ಲಿ ಡೇನಿಯಲ್‌ನನ್ನು ಭೇಟಿಯಾದ ನಂತರ ಮಿಂಗಾಲಿಮ್ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಪ್ರಾರಂಭಿಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರಸ್ತುತ, ಮಿಂಗಾಲಿಮ್ ಟಾಟರ್ಸ್ತಾನ್‌ನಿಂದ ಹೊರಡಲು ತೀರ್ಮಾನ ಮಾಡಿದ್ದಾರೆ. ತನ್ನ ಹೊಸ ಪತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಲು  ಬಯಸಿರುವ ಮಿಂಗಲಿಮ್‌, ಮಾಸ್ಕೋಗೆ ತೆರಳಿ ತನ್ನ ಐವರು ಇತರ ಮಕ್ಕಳೊಂದಿಗೆ ವಾಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಪತಿ ನಿಧನರಾಗಿ ಎರಡು ವರ್ಷಕ್ಕೆ ಮತ್ತೊಂದು ಮದುವೆಗೆ ಸಿದ್ಧರಾದ್ರಾ ಈ ನಟಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?