ಗಂಡ ಇಬ್ಬರೂ ಹೆಣ್ಣು ಮಕ್ಕಳಿದ್ದರೂ, ವಿವಾಹಿತನ ಜೊತೆ ಪ್ರೇಮ ಸಂಬಂಧದಲ್ಲಿದ್ದು, ತನ್ನ ಮದುವೆಯಾಗುವಂತೆ ಪೀಡಿಸುತ್ತಿದ್ದ ಮಹಿಳೆಯನ್ನು ಪ್ರೇಮಿಯೇ ಕೊಲೆ ಮಾಡಿದ್ದಾನೆ.
ವಿರಾರ್: ಆಕೆಗೆ 32 ಆತನಿಗೆ 38... ಈಕೆಗೆ ಮದ್ವೆಯಾಗಿ ಇಬ್ಬರು ಹೆಣ್ಣು ಮಕ್ಕಳಿದ್ದರು, ಗಂಡನೂ ಇದ್ದ ಆದರೆ ಅದೆಂಥಾ ಚಟವೋ ಏನೋ ವಿವಾಹಿತ ಆಟೋ ಚಾಲಕನ ಮೋಹಕ್ಕೆ ಬಿದ್ದಿದ್ದಲ್ಲದೇ ಆತನ ಬಳಿ ಪತ್ನಿಗೆ ವಿಚ್ಛೇದನ ನೀಡಿ ತನ್ನ ಮದುವೆಯಾಗುವಂತೆ ಹೇಳಿದಳು. ಈಕೆಯ ಹಾವಳಿ ತಡೆಯಲಾಗದೇ ಆತ ತಾನು ಮದುವೆಯಾಗಿದ್ದ ಪತ್ನಿಯನ್ನು ಬಿಟ್ಟು ಬರಲಾರದೇ ಈಕೆಯ ಕಿರುಕುಳವನ್ನು ಸಹಿಸಲಾಗದೇ ಆಕೆಯನ್ನು ಕೊಂದೇ ಬಿಟ್ಟಿದ್ದಾನೆ. ಮಹಾರಾಷ್ಟ್ರದ ಪಾಲ್‌ಘರ್ ಜಿಲ್ಲೆಯ ಕರಾವಳಿ ನಗರಿ ವಿರಾರ್‌ನಲ್ಲಿ ಈ ಅಸಹ್ಯವಾದ ಘಟನೆ ನಡೆದಿದೆ.
ಕೊಲೆಯಾದ ಎರಡು ಮಕ್ಕಳ ತಾಯಿಯನ್ನು 32 ವರ್ಷದ ಧನಶ್ರೀ ಅಂಬದಾಸ್ಕರ್ ಎಂದು ಗುರುತಿಸಲಾಗಿದೆ. ಶೇಖರ್ ಕದಂ ಎಂಬಾತನೇ ಕೊಲೆಗಾರ, ಘಟನೆಗೆ ಸಂಬಂಧಿಸಿದಂತೆ ವಿರಾರ್ ಪೊಲೀಸರು ಆರೋಪಿ ಶೇಖರ್ ಕದಂನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜೆಜೆ ಹಾಸ್ಪಿಟಲ್‌ಗೆ ಕಳುಹಿಸಲಾಗಿದೆ.
undefined
ಮಂಡ್ಯ: ಅನೈತಿಕ ಸಂಬಂಧ ಶಂಕೆ, 80 ವರ್ಷದ ದೊಡ್ಡಮ್ಮನನ್ನೇ ಕೊಂದ ಮಗ..!
ಅಂಗ್ಲ ಮಾಧ್ಯಮ ಮಿಡ್‌ಡೇ ವರದಿಯ ಪ್ರಕಾರ, ಧನಶ್ರೀ ಎರಡು ಹೆಣ್ಣು ಮಕ್ಕಳ ತಾಯಿಯಾಗಿದ್ದು, ಶೇಖರ್ ಕದಂನನ್ನು ಮದ್ವೆಯಾಗಲು ಬಯಸಿದ್ದಳು. ಕೊಲೆಯಾದ ದಿನ ಆಕೆ ಆತನಿಗೆ 16 ಬಾರಿ ಕರೆ ಮಾಡಿದ್ದ ಆಕೆ ಆತನಿಗೆ ತನ್ನನ್ನು ಭೇಟಿಯಾಗುವಂತೆ ಒತ್ತಾಯಿಸಿದ್ದಳು. ಆದರೆ ಆರೋಪಿ ಶೇಖರ್ ಕದಂ ಹೇಳುವಂತೆ ಧನಶ್ರೀ ತನ್ನನ್ನು ಮದುವೆಯಾಗುವುದಕ್ಕಾಗಿ ತನ್ನ ಪತ್ನಿಗೆ ವಿಚ್ಚೇದನ ನೀಡುವಂತೆ ಒತ್ತಾಯಿಸುತ್ತಿದ್ದಳು. ಆದರೆ ಆತನಿಗೆ ಈ ಅಕ್ರಮ ಸಂಬಂಧಕ್ಕಾಗಿ ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು ಬರುವ ಮನಸ್ಸಿರಲಿಲ್ಲ ಎನ್ನಲಾಗಿದೆ.
ವಿವಾಹಿತರಾಗಿದ್ದ ಇವರ ಭೇಟಿ ಸಾಮಾನ್ಯವಾಗಿ ಯಾವಾಗಲೂ ಮಧ್ಯಾಹ್ನ ನಂತರ ಧನಶ್ರೀ ಮನೆಯಲ್ಲಿ ಮಕ್ಕಳು ಶಾಲೆಗೆ ಹೋದ ಸಮಯದಲ್ಲಿ ಮನೆಯಲ್ಲಿ ಇಲ್ಲದಿರುವ ಸಮಯದಲ್ಲೇ ನಡೆಯುತ್ತಿತ್ತು. ಘಟನೆ ನಡೆದ ದಿನ ಧನಶ್ರೀ ನಿರಂತರವಾಗಿ ಕದಂಗೆ ಕರೆ ಮಾಡಿದ್ದಾಳೆ. ಈ ವೇಳೆ ನಿರಂತರ ಕರೆಯಿಂದ ಸಿಟ್ಟಿಗೆದ್ದ ಆತ ಸೀದಾ ಆಕೆಯ ಮನೆಗೆ ಹೋಗಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಕಿತ್ತಾಟ ಶುರುವಾಗಿದೆ. ಇದು ಆಕೆಯ ಮೇಲೆ ಹಲ್ಲೆ ನಡೆಸುವುದಕ್ಕೆ ಕಾರಣವಾಗಿದೆ. ಹೊಡೆದಾಟದ ವೇಳೆ ಧನಶ್ರಿ ನೆಲದ ಮೇಲೆ ಬಿದ್ದಿದ್ದು, ಕದಂ ಈ ವೇಳೆ ನರೆಮನೆಯವರ ಸಹಾಯ ಕೇಳಿದ್ದಾನೆ. ಈ ವೇಳೆ ನರೆಮನೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ.
ನೆರೆಮನೆಯವರ ಕರೆಯಂತೆ ಸ್ಥಳಕ್ಕೆ ಬಂದ ವೈದ್ಯ ಗುಲಾಬ್ ದೇಶ್‌ಮುಖ್, ಪ್ರಜ್ಞಾಶೂನ್ಯಳಾಗಿ ಬಿದ್ದಿದ್ದ ಧನಶ್ರೀಗೆ ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ಆಕೆಯ ಸ್ಥಿತಿ ಸ್ಥಿರವಾಗಿಯೇ ಇತ್ತು ಅಲ್ಲದೇ ವೈದ್ಯರು ಆಕೆಯನ್ನು ಕ್ಲಿನಿಕ್‌ಗೆ ಕರೆತರುವಂತೆ ಹೇಳಿದ್ದಾರೆ. ಇದಾದ ನಂತರ ಸಂಜೆ ವೇಳೆಗೆ ಮತ್ತೆ ವೈದ್ಯ ದೇಶ್‌ಮುಖ್‌ಗೆ ಕದಂ ಕರೆ ಮಾಡಿದ್ದು, ಧನಶ್ರೀ ಮತ್ತೆ ಅಸ್ವಸ್ಥಳಾಗಿದ್ದಾಳೆ ಎಂದು ಹೇಳಿದ್ದಾನೆ. ಈ ವೇಳೆ ವೈದ್ಯರು ನರ್ಸ್‌ನನ್ನು ಕಳುಹಿಸಿದ್ದಾರೆ. ಅಷ್ಟರಲ್ಲಾಗಲೇ ಆಕೆಯ ಸ್ಥಿತಿ ಗಂಭೀರವಾಗಿದ್ದು ಆಕೆ ಪ್ರಾಣಬಿಟ್ಟಿದ್ದಾಳೆ ಎಂದು ವೈದ್ಯರು ನೀಡಿದ ಹೇಳಿಕೆಯನ್ನು ವಿರಾರ್ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಅಕ್ರಮ ಸಂಬಂಧ ಶಂಕೆ, ಪತ್ನಿಯ ಗುಪ್ತಾಂಗಕ್ಕೆ ಕಬ್ಬಿಣ ಚೈನ್‌ನಿಂದ ಬೀಗ ಹಾಕಿದ ಪತಿ!
ಇತ್ತ ಧನಶ್ರೀ ಪತಿ ರೂಪೇಶ್ ಅಂಬದಾಸ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕದಂ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾನೆ. ಆತ ಆಟೋ ಚಾಲಕನಾಗಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿ ಕೊಲೆ ಪ್ರಕರಣ ದಾಖಲಾಗಿದೆ. ಅಲ್ಲದೇ ವಸೈ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಒಟ್ಟಿನಲ್ಲಿ ಅಕ್ರಮ ಸಂಬಂಧವೊಂದು ಕೊಲೆಯಲ್ಲಿ ಅಂತ್ಯವಾಗಿದೆ.