ನನ್ನಿಷ್ಟದ ಆಹಾರ ಸೇವಿಸಲು ಅವಕಾಶ ನೀಡದ ಗಂಡನ ಜೊತೆ ನಾನೇಕೆ ಇರಲಿ. ಹಾಗಾಗಿ ನನಗೆ ಡಿವೋರ್ಸ್ ಕೊಡಿ ಎಂದು ಮಹಿಳೆ ಕೇಳಿದ್ದಾರೆ
ಇಂದು ಸಣ್ಣ ಪುಟ್ಟ ವಿಚಾರಗಳಿಗೆ ಯುವ ಜೋಡಿಗಳು (Young Couple) ಬೇರೆಯಾಗುತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ. ಮದುವೆಯಾದ (Marriage) ಆರು ತಿಂಗಳಿಗೆ ಕೆಲವರು ಬೇರೆಯಾಗಲು ನಿರ್ಧರಿಸುತ್ತಾರೆ. ಇದೀಗ ಇಂತಹುವುದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಗಂಡ ಉಪ್ಪಿನಕಾಯಿ (Pickle) ತಿನ್ನಲು ಬಿಡಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ವಿಚ್ಚೇದನಕ್ಕೆ ಅರ್ಜಿ (Divorce Application) ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಮಹಿಳೆ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದು, ಸದ್ಯ ಡಿವೋರ್ಸ್ ವಿಷಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿವೆ. ಇದರ ಜೊತೆಗೆ ಮಹಿಳೆಗೆ ಕೆಲವರು ಸಲಹೆಗಳನ್ನು ಸಹ ನೀಡಿದ್ದಾರೆ.
ರೆಡಿಟ್‌ನಲ್ಲಿ ಮಹಿಳೆ ವಿವರವಾಗಿ ತನ್ನ ಕತೆಯನ್ನು ಬರೆದುಕೊಂಡಿದ್ದಾರೆ. ಪತಿ ಯವಾಗಲೂ ನನ್ನೊಂದಿಗೆ ಇದ್ದರೆ ಯಾವುದೇ ಸಮಸ್ಯೆ ನನಗಿಲ್ಲ. ಆದ್ರೆ ಒಬ್ಬಳೇ ಇದ್ದಾಗ ನಾನು ಸಮಸ್ಯೆ ಎದುರಿಸುತ್ತೇನೆ. ಮನೆಯಲ್ಲಿ ಹೊಸ ಡಬ್ಬಗಳ ಮುಚ್ಚಳವನ್ನು ಸಲೀಸಾಗಿ ತೆಗೆಯುತ್ತೇನೆ. ಆದ್ರೆ ಹಳೆ ಡಬ್ಬಗಳ ಮುಚ್ಚಳ ನನ್ನಿಂದ ತೆರೆಯಲು ಸಾಧ್ಯವಾಗಲ್ಲ ಎಂದಿದ್ದಾರೆ.
undefined
ಮೊದಲಿಗೆ ಉಪ್ಪಿನಕಾಯಿ ಹಾಳಾಗದಿರಲಿ ಎಂದು ಮುಚ್ಚಳ ಬಿಗಿಯಾಗಿ ಹಾಕುತ್ತೇನೆ ಎಂದು ಪತಿ ಹೇಳಿದ್ದರು. ಪತಿಯ ಮಾತನ್ನು ನಾನು ನಂಬಿದ್ದೆ. ಮನೆಯಲ್ಲಿ ಅವರಿದ್ದಾಗ ಉಪ್ಪಿನಕಾಯಿ ಮಚ್ಚಳ ತೆಗೆಯುತ್ತಾರೆ. ಕೆಲಸದ ನಿಮಿತ್ ಹೊರಗೆ ಹೋದ ಸಂದರ್ಭದಲ್ಲಿ ಉಪ್ಪಿನಕಾಯಿ ಡಬ್ಬದ ಮುಚ್ಚಳ ತೆಗೆಯೋದು ದೊಡ್ಡ ಸವಾಲಿನ ಕೆಲಸವಾಗುತ್ತದೆ. ಕೆಲವೊಮ್ಮೆ ಡಬ್ಬದ ಮುಚ್ಚಳ ತೆಗೆಯಲು ನೆರೆಹೊರೆಯವರ ಸಹಾಯ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಅತ್ತೆಗೆ ಸೊಸೆ ಮೇಲೆ ದೈಹಿಕ ಸಂಬಂಧ ಬೆಳೆಸೋ ಮನಸ್ಸು, ಕಥೆ ಕೇಳಿ ಪೊಲೀಸರೇ ದಂಗು!
ಪಕ್ಕದ್ಮನೆ ಮಹಿಳೆ ಹೇಳಿದ ಮಾತೇನು?
ಡಬ್ಬದ ಮುಚ್ಚಳ ಬಿಗಿಯಾಗಿ ಮುಚ್ಚದಿದ್ರೆ ಉಪ್ಪಿನಕಾಯಿಗೆ ಏನು ಆಗಲ್ಲ. ಅಷ್ಟು ಬಿಗಿಯಾಗಿ ಮುಚ್ಚಬೇಡಿ. ಪ್ರತಿದಿನ ಬಳಸುವ ಆಹಾರದ ಡಬ್ಬಳ ಮುಚ್ಚಿದ್ರೆ ಕಷ್ಟವಾಗುತ್ತದೆ ಎಂದು ಪತಿಗೆ ಹೇಳಿದೆ. ಆದರೂ ಅವರು ಒಪ್ಪಲಿಲ್ಲ. ಈ ಸಂಬಂಧ ಇಬ್ಬರ ನಡುವೆ ಹಲವು ಬಾರಿ ಜಗಳ ಆಗಿದೆ. ಒಮ್ಮೆ ಪತಿ ಕೆಲಸದ ವಿಷಯವಾಗಿ ಬೇರೆ ನಗರಕ್ಕೆ 10 ದಿನ ತೆರಳಿದ್ದರು. ಉಪ್ಪಿನಕಾಯಿ ಡಬ್ಬಳ ಮುಚ್ಚಳ ತೆಗೆಯಲು ಪಕ್ಕದ್ಮನೆ ಮಹಿಳೆಯ ಸಹಾಯ ಕೇಳಿದ್ದಾರೆ. ಈ ವೇಳೆ ನಿನ್ನ ಗಂಡ ಉದ್ದೇಶಪೂರ್ವಕವಾಗಿ ಮುಚ್ಚಳ ಮುಚ್ಚುತ್ತಾನೆ ಎಂದು ಪಕ್ಕದ್ಮನೆ ಮಹಿಳೆ ಹೇಳಿದ್ದಾರೆ.
ಪಕ್ಕದ್ಮನೆ ಹೆಂಗಸಿನ ಮಾತುಗಳು ಮಹಿಳೆಗೂ ನಿಜ ಅನ್ನಿಸಲಾರಂಭಿಸಿದೆ. ಇದೀಗ ನನ್ನಿಷ್ಟದ ಆಹಾರ ಸೇವಿಸಲು ಅವಕಾಶ ನೀಡದ ಗಂಡನ ಜೊತೆ ನಾನೇಕೆ ಇರಲಿ. ಹಾಗಾಗಿ ನನಗೆ ಡಿವೋರ್ಸ್ ಕೊಡಿ ಎಂದು ಮಹಿಳೆ ಕೇಳಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಇಬ್ಬರು ಒಂದೊಂದು ಪ್ರತ್ಯೇಕ ಉಪ್ಪಿನಕಾಯಿ ಡಬ್ಬ ಖರೀದಿ ಮಾಡಿದ್ರೆ ಸಮಸ್ಯೆಯೇ ಇರಲ್ಲ. ಇದಕ್ಕೆಲ್ಲಾ ಡಿವೋರ್ಸ್ ತೆಗೆದುಕೊಳ್ಳೋದು ತಪ್ಪು ಎಂದು ಸಲಹೆ ನೀಡಿದ್ದಾರೆ.