ತಾಯಿ ಮತ್ತು ಮಕ್ಕಳ ನಡುವಿನ ಬಂಧವನ್ನು ಎಲ್ಲರೂ ಯಾವಾಗಲೂ ಕೊಂಡಾಡುತ್ತಾರೆ. ಆದರೆ ತಂದೆ ಮತ್ತು ಮಗಳ ಬಂಧ ಇದೆಲ್ಲಕ್ಕಿಂತಲೂ ಅದ್ಭುತವಾದುದು. ಇತ್ತೀಚಿಗೆ ವೈರಲ್ ಆದ ವೀಡಿಯೋವೊಂದು ಇದು ಅಕ್ಷರಶಃ ನಿಜವೆಂಬುದನ್ನು ಸಾಬೀತುಪಡಿಸಿದೆ.
ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ಪೂಜನೀಯ ಸ್ಥಾನವಿದೆ. ಮನೆಯಲ್ಲಿ ಮೊದಲ ಮಗು ಹೆಣ್ಣು ಹುಟ್ಟಿದರೆ ಮನೆ ಬೆಳಗಿದಂತೆಯೇ ಎಂದು ಅಂದಕೊಳ್ಳುತ್ತಾರೆ. ಭಾಗ್ಯಲಕ್ಷ್ಮಿ ಮನೆ ತುಂಬಿದಂತೆ ಎಂದು ಹಿಗ್ಗುತ್ತಾರೆ. ಹೆಣ್ಣು ಮಕ್ಕಳು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿರುವ ಮಧ್ಯೆಯೂ ಕುಟುಂಬದಲ್ಲಿ ಆಕೆಗಿರುವ ಅಪಾಯ ಗೌರವ ಕಿಂಚಿತ್ತೂ ಕಡಿಮೆಯಾಗಿಲ್ಲ. ಅದರಲ್ಲೂ ಅಪ್ಪನ ಪಾಲಿಗೆ ಮಗಳೆಂದರೆ ಒಂಚೂರು ಹೆಚ್ಚೇ ವಾತ್ಸಲ್ಯ. ಯಾವಾಗಲೂ ಪತ್ನಿ ಗಂಡು ಮಗುವಿಗೆ ಹಂಬಲಿಸದರೆ, ಗಂಡ ಹೆಣ್ಣು ಮಗುವಾಗಲಿ ಎಂದು ಬೇಡಿಕೊಳ್ಳುವುದನ್ನು ನೋಡಬಹುದು.
ಅಪ್ಪ-ಮಗಳ ಬಾಂಧವ್ಯದ ಸುಂದರ ವೀಡಿಯೋ ವೈರಲ್
ಹೆಣ್ಣು ಮಗಳಾಗಿ ಹುಟ್ಟಿದರೆ ಗಂಡಸರ ಪಾಲಿಗೆ ತಾಯಿಯೊಬ್ಬಳು ಮತ್ತೆ ಹುಟ್ಟಿದಂತೆ. ಆಕೆ ತಾಯಿಯಷ್ಟೇ ಪ್ರೀತಿ, ವಾತ್ಸಲ್ಯ, ಮಮಕಾರ, ಕಾಳಜಿ ಎಲ್ಲವನ್ನೂ ನೀಡುತ್ತಾಳೆ. ತಂದೆಯ ನಗುವಿನಲ್ಲಿ ಖುಷಿ ಕಾಣುತ್ತಾಳೆ. ತಂದೆಯ (Father) ಸೋಲಿಗೆ ಕಣ್ಣೀರಾಗುತ್ತಾಳೆ. ಕಷ್ಟಕ್ಕೆ ಹೆಗಲಾಗಿ ಸಾಂತ್ವನ ನೀಡುತ್ತಾಳೆ. ಹೀಗಾಗಿಯೇ ಬಹುತೇಕ ಅಪ್ಪಂದಿರಿಗೆ ಹೆಣ್ಣುಮಕ್ಕಳು (Daughter) ಅಚ್ಚುಮೆಚ್ಚು. ಹೆಣ್ಣು ಮಕ್ಕಳ ಪಾಲಿಗೆ ತಂದೆಯೇ ಸರ್ವಸ್ವ. ಡ್ಯಾಡೀಸ್ ಗರ್ಲ್, ಪಾಪ ಕಿ ಪರಿ ಇಂಥಾ ಅಪ್ಪಂದಿರ ಅತಿಯಾದ ಮುದ್ದಿನ ಮಕ್ಕಳು. ಹೆಣ್ಣುಮಕ್ಕಳನ್ನು ಹೆಗಲೇರಿಸಿ ಊರು ಸುತ್ತುವುದರಿಂದ ತೊಡಗಿ, ಊಟ-ಪಾಠ, ಹಠ, ಜಗಳ, ತುಂಟತನ ಎಲ್ಲದರ ಜೊತೆಗೂ ಅಪ್ಪಂದಿರು ಇರುತ್ತಾರೆ. ಮಕ್ಕಳ ಸಣ್ಣಪುಟ್ಟ ಗೆಲುವಿಗಾಗಿಯೂ ಸಾಕಷ್ಟು ಶ್ರಮ ವಹಿಸುತ್ತಾರೆ. ಅಂಥಹದ್ದೇ ವೀಡಿಯೋವೊಂದು ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ.
ಬದುಕಿಲ್ಲ ಎಂದು ಭಾವಿಸಿದ್ದ ಅಪ್ಪನನ್ನು ಹುಡುಕಿದ ಮಗಳು: ಬೇರೆ ದೇಶದಲ್ಲಿದ್ರೂ ಅಪ್ಪ ಮರಳಿ ಸಿಕ್ಕ ಕತೆ
ತಂದೆ ಮತ್ತು ಮಗಳ ನಡುವಿನ ಬಾಂಧವ್ಯವು ಸುಂದರ ಮತ್ತು ಹೃದಯಸ್ಪರ್ಶಿಯಾಗಿದೆ ಎಂಬುದನ್ನು ಈ ವೀಡಿಯೋದಲ್ಲಿ ನೋಡಬಹುದು. ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿರೋ ಈ ವೀಡಿಯೋ ಕ್ಲಿಪ್‌ನಲ್ಲಿ, ತಂದೆಯೊಬ್ಬರು ತಮ್ಮ ಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಮಗಳ ನೃತ್ಯಕ್ಕೆ (Dance) ಸಹಾಯ ಮಾಡುತ್ತಿರುವುದನ್ನು ನೋಡಬಹುದು.
ಫಾದರ್ ಆಫ್ ದಿ ಇಯರ್ ಎಂದು ಶ್ಲಾಘಿಸಿದ ನೆಟ್ಟಿಗರು
ಮಗಳು ತನ್ನ ಡ್ಯಾನ್ಸ್ ಗ್ರೂಪ್‌ನೊಂದಿಗೆ ವೇದಿಕೆಯಲ್ಲಿದ್ದಾಗ ಸಭಿಕರ ನಡುವೆ ಕುಳಿತ ತಂದೆ, ಮಗಳಿಗೆ ಡ್ಯಾನ್ಸ್ ಸ್ಟೆಪ್ಸ್‌ಗಳನ್ನು ಹೇಳಿಕೊಡುತ್ತಾರೆ. ಮಗಳು ಮತ್ತು ತಂಡವು ದಲೇರ್ ಮೆಹಂದಿಯವರ ಸಾಂಪ್ರದಾಯಿಕ ಗೀತೆ 'ತುನಕ್ ತುನಕ್'ಗೆ ನೃತ್ಯ ಮಾಡುತ್ತಿದ್ದರು. ಮಗಳು ಡ್ಯಾನ್ಸ್ ಮಾಡುವಾಗ ತಂದೆಯನ್ನೇ ನೋಡುತ್ತಿರುತ್ತಾಳೆ. ತಂದೆ ಹಾವಭಾವಗಳ ಮೂಲಕ ಮಗಳಿಗೆ ಡ್ಯಾನ್ಸ್ ಸ್ಟೆಪ್ಸ್‌ಗಳನ್ನು ನೆನಪಿಸುತ್ತಾರೆ. ಈ ಕ್ಲಿಪ್ ಅನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ' #FatherOfTheYear ಪ್ರಶಸ್ತಿಯು ಇವರಿಗೆ ಹೋಗುತ್ತದೆ' ಎಂದು ಫೋಟೋಗೆ ಶೀರ್ಷಿಕೆ (Title) ನೀಡಿದ್ದಾರೆ.
ಅನೇಕರು ಈ ಡ್ಯಾನ್ಸ್ ವೀಡಿಯೊಗೆ ಕಾಮೆಂಟ್ ಮಾಡಿದ್ದಾರೆ. ತಂದೆ ಮತ್ತು ಮಗಳ ನಡುವಿನ ಬಾಂಧವ್ಯವನ್ನು ಅಮೂಲ್ಯ ಎಂದು ಕರೆದಿದ್ದಾರೆ. ಇನ್ನೊಬ್ಬರು 'ತಂದೆ ಯಾವಾಗಲೂ ತಮ್ಮ ಮಗಳಿಗೆ ಅತ್ಯುತ್ತಮ ಚೀರ್ಲೀಡರ್' ಎಂದಿದ್ದಾರೆ. 'ಅಪ್ಪಂದಿರು ಯಾವಾಗಲೂ ಮಕ್ಕಳ ಚಿಕ್ಕ ಸಾಧನೆಗಳಲ್ಲಿ ಖುಷಿಯನ್ನು ಕಂಡುಕೊಳ್ಳುತ್ತಾರೆ. 16 ವರ್ಷಗಳ ಹಿಂದೆ ನಾನು ನನ್ನ ಅಪ್ಪನನ್ನು ಕಳೆದುಕೊಂಡಿದ್ದೇನೆ, ಆದರೆ ಇವತ್ತಿಗೂ ಅಪ್ಪ ನನ್ನನ್ನು ಎಲ್ಲಿಂದಲೋ ನೋಡುತ್ತಿದ್ದಾರೆ ಎಂದು ನಾನು ನಂಬುತ್ತೇನೆ' ಎಂದು ಇನ್ನೊಬ್ಬರು ತಿಳಿಸಿದ್ದಾರೆ.
ಮಗಳಿದ್ದರೆ ನಿನ್ನಂಥ ಮಗಳಿರಬೇಕು! ಲಾಲುಗೆ ಕಿಡ್ನಿ ಕೊಟ್ಟ ಮಗಳಿಗೊಂದು ಚಪ್ಪಾಳೆ
'ತಂದೆಯ ಸಮರ್ಪಣಾ ಭಾವ, ನಿಜವಾಗಲೂ ಅದ್ಭುತ ಶುಭವಾಗಲಿ' ಎಂದು ಇನ್ನೊಬ್ಬರು ಕಾಮೆಂಟಿಸಿದ್ದಾರೆ. 'ಸೂಪರ್ ಕ್ಯೂಟ್,ಎಲ್ಲಾ ಮಕ್ಕಳು ತಮ್ಮ ಪೋಷಕರಿಂದ ತುಂಬಾ ಪ್ರೀತಿಯನ್ನು ಪಡೆಯಲಿ"' ಎಂದು ಮೂರನೇ ವ್ಯಕ್ತಿ ಬರೆದಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ 227 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
And the Award goes to... 😅 pic.twitter.com/iqDyp4Fqkr
— Dipanshu Kabra (@ipskabra)