ಸಾಂಗತ್ಯ ಚೆನ್ನಾಗಿದ್ದರೆ ಮಾತ್ರ ಬದುಕು ಸುಂದರವೆನಿಸುತ್ತದೆ. ಸಂಬಂಧ ಚೆನ್ನಾಗಿರಬೇಕು ಎಂದರೆ ನಿರಂತರವಾಗಿ ಪಾಠಗಳನ್ನು ಕಲಿಯುತ್ತಿರಬೇಕು. ಬದುಕೇ ಹೀಗೆ, ಕಲಿಕೆ ನಿರಂತರ. ಆದರೆ, ಸಂಬಂಧದಲ್ಲಿ ಖುಷಿ ಇರಬೇಕು ಎಂದರೆ, ಗಂಡು-ಹೆಣ್ಣು ಇಬ್ಬರೂ ಮೂರು ಮುಖ್ಯ ಅಂಶಗಳನ್ನು ಕಲಿತುಕೊಳ್ಳಬಾರದು!
“ಸಂಬಂಧದಲ್ಲಿ ಹೇಗಿರಬೇಕು, ಏನು ಬೇಕೆಂದು ಯಾವತ್ತೂ ಬಾಯಿಬಿಟ್ಟು ಹೇಳುತ್ತಿರಬೇಕಾ? ಪದೇ ಪದೆ ಅದೇ ಕೆಲಸ ಮಾಡುತ್ತಿರಬೇಕಾ? ಹತ್ತು ವರ್ಷಗಳಿಂದ ಜತೆಗಿದ್ದೇವೆ, ನನಗೆ ಏನು ಇಷ್ಟವೆಂದು ಅವರಿಗೆ ತಿಳಿದಿಲ್ಲವಾ?ʼ ಎನ್ನುವ ದೂರು ದಂಪತಿಗಳಲ್ಲಿ ಪರಸ್ಪರ ಸಾಮಾನ್ಯ. ಒಂದು ದಿನವೂ ಜಗಳವಾಡದ ದಿನಗಳಿಲ್ಲ ಎಂದು ಸಾಕಷ್ಟು ದಂಪತಿಗಳು ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ. ವಿವಾಹವಾದ ಕೆಲವು ವರ್ಷಗಳಲ್ಲಿ ಕೆಲ ಜೋಡಿಗಳು ಚಿಕ್ಕ ವಿಚಾರಕ್ಕೂ ಜಿದ್ದಿಗೆ ಬಿದ್ದವರಂತೆ ವಾದ ಮಾಡುತ್ತಾರೆ. ಹೊರಗಿನವರಿಗೆ ಇಷ್ಟು ಚಿಕ್ಕ ಅಂಶಕ್ಕೆ ಇವರೇಕೆ ಇಷ್ಟು ಕಿತ್ತಾಡಬೇಕು ಎಂದೆನಿಸುವಷ್ಟು ಬೋರಾಗುತ್ತಾರೆ. ಅಷ್ಟೇ ಅಲ್ಲ, ಸಂಗಾತಿ ತಮ್ಮನ್ನು ಪ್ರೀತಿಸುತ್ತಿಲ್ಲ, ಅವರಿಗೆ ಅವರದ್ದೇ ಸ್ವಾರ್ಥ ಹೆಚ್ಚು ಎನ್ನುವ ತೀರ್ಮಾನಕ್ಕೆ ಇಬ್ಬರೂ ಬಂದುಬಿಡುತ್ತಾರೆ. ನೀವು ಸಹ ಇಂಥದ್ದೇ ವಿಚಾರಗಳಲ್ಲಿ ಮನಸ್ಸು ಕೆಡಿಸಿಕೊಂಡಿರುವವರಾಗಿದ್ದರೆ ಕೆಲವು ಅಂಶಗಳನ್ನು ಮನದಟ್ಟು ಮಾಡಿಕೊಳ್ಳುವುದು ಮುಖ್ಯ. ಕೆಲವು ವಿಚಾರಗಳ ಕುರಿತು ಅನಗತ್ಯ ಚಿಂತನೆ ಮಾಡುವ ಅಭ್ಯಾಸವನ್ನು ಇಂದಿನಿಂದಲೇ ಬಿಟ್ಟುಬಿಟ್ಟರೆ ಸಂಬಂಧ ಸಹ್ಯವೆನಿಸುತ್ತದೆ. ಮುಖ್ಯವಾಗಿ, ಮೂರು ಅಂಶಗಳನ್ನು ಎಂದಿಗೂ ಕಲಿತುಕೊಳ್ಳಬಾರದು ಹಾಗೂ ಅನುಸರಿಸಬಾರದು.
ಕಲಿತುಕೊಳ್ಳಬಾರದ (Unlearn) ಮೊದಲ ಪಾಠ
• ಸಂಗಾತಿ (Partner) ನನ್ನನ್ನು ಪ್ರೀತಿಸೋದಿಲ್ಲ!
ಯಾವುದೇ ಸಂಬಂಧದಲ್ಲಿ ತಮ್ಮ ಬೇಡಿಕೆ (Request) ಅಥವಾ ಭಾವನೆಗಳಿಗೆ (Feelings) ಸಂಗಾತಿ ತಕ್ಷಣ ಸ್ಪಂದಿಸದಿದ್ದರೆ (React) ಅವರು ತಮ್ಮನ್ನು ಪ್ರೀತಿಸುವುದಿಲ್ಲ, ಅವರಿಗೆ ತಮ್ಮ ಬಗ್ಗೆ ಕೇರ್ (Care) ಇಲ್ಲ, ಅವರಿಗೆ ತಾವು ಬೇಕಾಗಿಯೇ ಇಲ್ಲ ಎಂದು ಪದೇ ಪದೆ ಅಂದುಕೊಳ್ಳುವುದು ಹಲವರ ರೂಢಿ. ಇದು ಒಳ್ಳೆಯದಲ್ಲ. ತಕ್ಷಣ ಸ್ಪಂದಿಸುವುದು ನಿಮ್ಮ ಸಂಗಾತಿಯ ಅಭ್ಯಾಸವಾಗಿರಲಿಕ್ಕಿಲ್ಲ. ಜತೆಗೆ, ನೀವೂ ತಾಳ್ಮೆಯನ್ನು (Patience) ರೂಢಿಸಿಕೊಳ್ಳುವ ಮೂಲಕ ಸಂಬಂಧವನ್ನು ಉತ್ತಪಡಿಸಿಕೊಳ್ಳಲು ಯತ್ನಿಸಬೇಕು. ನಿಮ್ಮ ವೈವಾಹಿಕ ಜೀವನದ (Married Life) ಮೇಲೆ ಪರಿಣಾಮ ಬೀರುವ ವಿಷಕಾರಿ (Toxic) ವಿಚಾರಧಾರೆಯನ್ನು ದೂರವಿಡಲೇಬೇಕು. ಒಂದೊಮ್ಮೆ ನಿಗದಿತ ಸಮಯದ ಅವಧಿಯಲ್ಲಿ ಈಡೇರಿಸಬೇಕಾದ ಬೇಡಿಕೆ ನಿಮ್ಮದಾಗಿದ್ದರೆ ಅದನ್ನು ಸ್ಪಷ್ಟವಾಗಿ ಸಂಗಾತಿಗೆ ತಿಳಿಸಬೇಕು. ಹಠಕ್ಕೆ ಬೀಳುವವರಂತೆ ಮಾಡಬೇಕಾಗಿಲ್ಲ. ಎಷ್ಟೋ ಬಾರಿ, ಮಾತುಕತೆಯಲ್ಲಿ ಸ್ಪಷ್ಟತೆ ಇಲ್ಲದೆ ಅವರು ಅದರ ಬಗೆಗೆ ಗಮನ ನೀಡಿರುವುದಿಲ್ಲ ಎನ್ನುವುದು ಅರಿವಿರಲಿ.
ಗಂಡಸರು ಹೀಗ್ ಹೇಳ್ತಾರೆ ಅಂದ್ರೆ ನಿಮ್ಮ ಮೇಲಿದೆ ಕಾಳಜಿ ಎಂದರ್ಥ!
ಕಲಿಯಬಾರದ ಎರಡನೇ ಪಾಠ
• ನೀವು ಹೇಳದೆಯೇ ಅವರಿಗೆ ಅರಿವಾಗುತ್ತದೆ! (He/She Knows everything without talk)
ಸಂಬಂಧದಲ್ಲಿ (Relation) ಇದರಷ್ಟು ಭ್ರಮೆಯ ಅಂಶ ಬೇರೊಂದಿಲ್ಲ. ಯಾರೊಬ್ಬರಿಗೂ ನಾವು ಬಾಯಿಬಿಟ್ಟು ಹೇಳದ ಹೊರತು ನಮ್ಮ ಅಗತ್ಯಗಳ ಬಗ್ಗೆ ಅರಿವು ಆಗುವುದಿಲ್ಲ. ಕೆಲವೊಮ್ಮೆ ಪರಿಸ್ಥಿತಿಗೆ ಅನುಗುಣವಾಗಿ ಅರ್ಥವಾಗಬಹುದೇ ವಿನಾ ಎಲ್ಲವೂ ಅರ್ಥವಾಗುವುದಿಲ್ಲ. ಹೀಗಾಗಿ, ಸಂಬಂಧವನ್ನು ಚೆಂದ ಮಾಡಿಕೊಳ್ಳಬೇಕು ಎಂದಾದರೆ, ಸ್ಪಷ್ಟವಾದ ಸಂವಹನ (Clear Communication) ಅಗತ್ಯ. ಇಲ್ಲಿ ಊಹೆಗಳಿಗೆ (Assume) ಅರ್ಥವಿಲ್ಲ. ಸಂಗಾತಿಯ ಸ್ವಭಾವ ಅರಿತ ಮಾತ್ರಕ್ಕೆ ಅವರ ತಲೆಯಲ್ಲಿ ಯಾವ ವಿಚಾರ ಓಡುತ್ತಿದೆ ಎಂದು ಅರಿಯುವುದು ಸುಲಭವಲ್ಲ. ಬಾಯಿಬಿಟ್ಟು ಹೇಳದೆಯೇ ಅವರಿಂದ ನಿರೀಕ್ಷೆ (Expectation) ಮಾಡುವುದು ತಪ್ಪು. ಈ ಗುಣ ನಿಮ್ಮಲ್ಲಿದ್ದರೆ ಅನರ್ಥವೇ ಹೆಚ್ಚು. ಸಂಗಾತಿಯ ಬಗ್ಗೆ ತಪ್ಪು ತಿಳಿವಳಿಕೆ ಮೂಡುವುದಕ್ಕೆ ಇದು ಕಾರಣವಾಗುತ್ತದೆ. ಅಧ್ಯಯನಗಳ ಪ್ರಕಾರ, ಕ್ರಿಯಾತ್ಮಕವಾದ ಸಂವಹನ ಹೊಂದಿರುವ ದಂಪತಿಗಳಲ್ಲಿ (Couple) ವಾಗ್ವಾದ ಕಡಿಮೆ. ಸಂಗಾತಿಗಳಲ್ಲಿ ಗೌರವಯುತ (Respectful) ಮಾತುಕತೆ ಅಗತ್ಯ.
Personality Tips: ಕೆಲವರನ್ನ ಬದಲಾಯ್ಸೋಕೆ ಸಾಧ್ಯನೇ ಇಲ್ಲ, ಅದ್ಯಾಕೆ ಗೊತ್ತಾ?
ಕಲಿಯಬಾರದ ಮೂರನೇ ಪಾಠ
• ಹೊಂದಾಣಿಕೆ (Compatible) ಎಂದರೆ ಭಿನ್ನಾಭಿಪ್ರಾಯವೇ ಇರೋದಿಲ್ಲ!
ಇದು ಸಹ ಸಂಬಂಧದಲ್ಲಿ ವಿಷಬೀಜವನ್ನೇ ಬಿತ್ತುವ ಚಿಂತನೆ. ಸಾಮಾನ್ಯವಾಗಿ ನಾವು ಅಂದುಕೊಳ್ಳುವುದೇನೆಂದರೆ, ದಂಪತಿ ಬಹಳ ವರ್ಷದಿಂದ ಖುಷಿಯಾಗಿ, ಚೆನ್ನಾಗಿ ಸಂಸಾರ ಮಾಡುತ್ತಿದ್ದಾರೆ ಎಂದರೆ ಅವರು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಹಾಗೂ ಅವರಲ್ಲಿ ಭಿನ್ನಾಭಿಪ್ರಾಯಗಳೇ (Difference) ಇಲ್ಲ ಎಂದು. ಇದು ತಪ್ಪು ಕಲ್ಪನೆ. ಇತ್ತೀಚಿನ ಅಧ್ಯಯನ ಹೇಳುವಂತೆ ಭಿನ್ನಾಭಿಪ್ರಾಯಗಳನ್ನು ಕೇವಲ ನೆಗೆಟಿವ್ (Negative) ಆಗಿ ತೆಗೆದುಕೊಳ್ಳಬೇಕಾಗಿಲ್ಲ. ಇದು ಸಂಬಂಧಕ್ಕೆ ಪೂರಕವೂ ಆಗಬಹುದು. ಎರಡು ವಿಭಿನ್ನ ಧೋರಣೆಯವರು ಸೇರಿದಾಗ ಬದುಕು ಇನ್ನಷ್ಟು ಕ್ರಿಯಾಶೀಲವಾಗಬಹುದು.