85 ವರ್ಷದ ವೃದ್ಧನನ್ನು ಮದ್ವೆಯಾದ 24 ವರ್ಷದ ಯುವತಿ, ಇಬ್ಬರ ನಡ್ವೆ 61 ವರ್ಷ ಅಂತರ !

Published : Feb 08, 2023, 09:38 AM IST
 85 ವರ್ಷದ ವೃದ್ಧನನ್ನು ಮದ್ವೆಯಾದ 24 ವರ್ಷದ ಯುವತಿ, ಇಬ್ಬರ ನಡ್ವೆ 61 ವರ್ಷ ಅಂತರ !

ಸಾರಾಂಶ

ಮದ್ವೆಯಾಗೋಕೆ ವಯಸ್ಸಿನ ಅಡ್ಡಿಯಿಲ್ಲ. ಏಜ್ ಗ್ಯಾಪ್ ಕೂಡಾ ಅಷ್ಟೊಂದು ಇಂಪಾರ್ಟೆಂಟ್‌ ಆಗಲ್ಲ ಅಂತೆಲ್ಲಾ ಹೇಳ್ತಾರೆ. ಆದ್ರೆ ಹತ್ತು, ಇಪ್ಪತ್ತು ವರ್ಷದ ಗ್ಯಾಪ್ ಇರೋದೇನು ಸರಿ. ಆದ್ರೆ ಇಲ್ಲೊಂದು ಜೋಡಿ ಮಧ್ಯೆ ಭರ್ತಿ 61 ವರ್ಷ ಏಜ್ ಗ್ಯಾಪ್ ಇದೆ. 24 ವರ್ಷದ ಯುವತಿ, 85 ವರ್ಷದ ವೃದ್ಧನನ್ನು ಮದ್ವೆಯಾಗಿದ್ದಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹಿಂದಿನ ಕಾಲದಲ್ಲಿ ಮದುವೆ ಅಂದರೆ ಹೀಗೇ ಇರಬೇಕು ಅನ್ನೋ ಅಲಿಖಿತ ನಿಯಮವಿತ್ತು. ಗಂಡು-ಹೆಣ್ಣಿನ ಮಧ್ಯೆ, ವಯಸ್ಸು, ಇಬ್ಬರ ನಡುವಿನ ವಯಸ್ಸಿನ ಅಂತರ ಎಲ್ಲವನ್ನೂ ಗಮನಿಸಿಕೊಳ್ಳುತ್ತಿದ್ದರು. ಆದರೆ ಈಗ ಹಾಗಿಲ್ಲ. ಗಂಡು-ಹೆಣ್ಣೇ ಮದ್ವೆಯಾಗ್ಬೇಕು ಅಂತಾನೂ ಇಲ್ಲ. ವಯಸ್ಸಿನ ಅಂತರವನ್ನಂತೂ ನೋಡೋದೆ ಇಲ್ಲ. ಹುಡುಗಿ ತನಗಿಂತ ಕಿರಿಯವನನ್ನು ಹುಡುಗನೂ ತನಗಿಂತ ಅದೆಷ್ಟೋ ಹಿರಿಯವಳನ್ನು ಮದುವೆ (Marriage)ಯಾಗುವುದು ಸಾಮಾನ್ಯವಾಗಿದೆ. ಆದರೆ, ಮದುವೆ ವಿಚಾರದಲ್ಲಿ ಗಂಡು ಹೆಣ್ಣಿನ ಒಪ್ಪಿಗೆ, ಎರಡು ಕುಟುಂಬಗಳ ನಡುವಿನ ಒಡನಾಟಕ್ಕಿಂತ ಮೊದಲು ನೋಡುವುದು ವಯಸ್ಸಿನ ಅಂತರ. ಕೆಲವರು ವಯಸ್ಸಿನ ಅಂತರಕ್ಕೆ (Age gap) ಒಪ್ಪಿಗೆ ಇದ್ದರೆ, ಇನ್ನು ಕೆಲವರು ವಯಸ್ಸಿನ ಅಂತರ ಹೆಚ್ಚು ಬೇಡವೆಂದು ಹೇಳುತ್ತಾರೆ. ಇದು ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಆದ್ರೆ ಕಾಲ ಬದಲಾಗಿದೆ. ಚಿತ್ರ-ವಿಚಿತ್ರ ರೀತಿಯ ಮದುವೆಗಳು ಈಗ ನಡೆಯುತ್ತವೆ. ಅಜ್ಜಿ ಮೊಮ್ಮಗನ ವಯಸ್ಸಿನವಳನ್ನು ಮದುವೆಯಾಗುವುದು, ತಾಯಿ ಮಗನ ವಯಸ್ಸಿನವನನ್ನು ಮದುವೆಯಾಗುವುದು, ತಂದೆ, ಮಗಳ ವಯಸ್ಸಿನವಳನ್ನು ಮದುವೆಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಹಾಗೆಯೇ ಇಲ್ಲೊಬ್ಬ 24ರ ಯುವತಿ 85ರ ವ್ಯಕ್ತಿಯನ್ನು ಮದ್ವೆಯಾಗಿದ್ದಾಳೆ. ಇದೀಗ ಈ ಜೋಡಿಯ ಫೋಟೋಗಳು ವೈರಲ್ ಆಗಿವೆ.

'ಪಾಕಿಸ್ತಾನದ ಮೊಗ್ಗಿನ ಮನಸು..' 52 ವರ್ಷದ ಶಿಕ್ಷಕನಿಗೆ ಮನಸ್ಸು ಕೊಟ್ಟ 20 ವರ್ಷದ ವಿದ್ಯಾರ್ಥಿನಿ!

ತನ್ನ ಅಜ್ಜನಿಗಿಂತಲೂ ಹಿರಿಯ ವ್ಯಕ್ತಿಯನ್ನು ಮದ್ವೆಯಾದ ಯುವತಿ
ವಯಸ್ಸಿನಲ್ಲಿ ತನ್ನ ಅಜ್ಜನಿಗಿಂತ ಹಿರಿಯ 85ರ ವ್ಯಕ್ತಿಯನ್ನು  24 ವರ್ಷದ ಯುವತಿ ಮದ್ವೆಯಾಗಿದ್ದಾಳೆ. ಬಟ್ಟೆ ತೊಳೆಯುವ ಕೆಲಸ ಮಾಡುತ್ತಿದ್ದ ಮಿರಾಕಲ್ ಪೋಗ್​ಳನ್ನು ಚಾರ್ಲ್ಸ್​ ಪೋಗ್ 2019ರಲ್ಲಿ ಭೇಟಿಯಾಗಿದ್ದರು. ಭೇಟಿ ಸ್ನೇಹಕ್ಕೆ ತಿರುಗಿ ಬಳಿಕ ಗೆಳೆತನ ಪ್ರೀತಿಗೆ (Love) ತಿರುಗಿದೆ. ಈ ಇಬ್ಬರು ಮದುವೆಯಾಗುವ ಮೂಲಕ ಗಮನಸೆಳೆದಿದ್ದಾರೆ. ಮದುವೆಯಾದ ವಧು ಹಾಗೂ ವರನ ನಡುವೆ 61 ವರ್ಷ ಅಂತರವಿದೆ. ಆದರೂ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ.

'ಮೊದಲ ಬಾರಿಗೆ ನಾವಿಬ್ಬರೂ ಭೇಟಿಯಾದಾಗ ಇಬ್ಬರಲ್ಲೂ ಯಾವುದೇ ರೀತಿಯ ಭಾವನೆ ಇರಲ್ಲಿಲ್ಲ. ಆದರೆ ಚಾರ್ಲ್ಸ್‌ ದಿನ ಕಳೆದಂತೆ ನನಗೆ ಹತ್ತಿರವಾದರು. ಅವರು ಜೊತೆಗಿದ್ದರೆ ನಾನು ಖುಷಿಯಾಗಿರುತ್ತೇನೆ ಎಂದು ನನಗೆ ಅನಿಸಿತು. ಹಾಗಾಗಿ ವಯಸ್ಸಿನ ಅಂತರವನ್ನು ಮರೆತು ಮದುವೆಯಾದೆ' ಎಂದು ಮಿರಾಕಲ್ ಹೇಳಿದ್ದಾರೆ. ಯುವತಿ ಮಿರಾಕಲ್‌ನ ಅಜ್ಜ (Grandfather)ನಿಗಿಂತಲೂ ಆಕೆಯ ಗಂಡ ಚಾರ್ಲ್ಸ್ ಹಿರಿಯವನೆಂದು ತಿಳಿದುಬಂದಿದೆ.

ಗಂಡ ಹೆಂಡತಿ ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ?

ಐವಿಎಫ್ ಮಾದರಿಯಲ್ಲಿ ಮಕ್ಕಳನ್ನು ಮಾಡಿಕೊಳ್ಳಲು ದಂಪತಿ ನಿರ್ಧಾರ
ಮಿಸ್ಸಿಸ್ಸಿಪ್ಪಿಯ ಸ್ಟಾರ್ಕ್‌ವಿಲ್ಲೆಯ  24 ವರ್ಷದ ಮಿರಾಕಲ್ ಪೋಗ್,ಅವರು 2019 ರಲ್ಲಿ ಲಾಂಡರೆಟ್‌ನಲ್ಲಿ ಕೆಲಸ ಮಾಡುತ್ತಿದ್ದಾಗ 85 ವರ್ಷದ ಚಾರ್ಲ್ಸ್ ಪೋಗ್, ಅವರನ್ನು ಭೇಟಿಯಾದರು. ನಿವೃತ್ತ ರಿಯಲ್ ಎಸ್ಟೇಟ್ ಏಜೆಂಟ್ ಚಾರ್ಲ್ಸ್ ಅಂತಿಮವಾಗಿ ಅವರು ಭೇಟಿಯಾದ ಒಂದು ವರ್ಷದ ನಂತರ ನರ್ಸ್‌ಗೆ ತಮ್ಮ ಭಾವನೆ (Feeings)ಗಳನ್ನು ಒಪ್ಪಿಕೊಳ್ಳಲು ನಿರ್ಧರಿಸಿದರು ಮತ್ತು ಅವರು ಫೆಬ್ರವರಿ 2020 ರಲ್ಲಿ ಪ್ರಸ್ತಾಪಿಸಿದರು. ಚಾರ್ಲ್ಸ್‌ಗೆ ಯಾವುದೇ ಮಕ್ಕಳಿಲ್ಲ ಮತ್ತು ಚಾರ್ಲ್ಸ್ ಹೊಸ ಪೀಳಿಗೆಯನ್ನು ಬಿಟ್ಟು ಹೋಗುವುದನ್ನು ಖಚಿತಪಡಿಸಿಕೊಳ್ಳಲು ಕುಟುಂಬವನ್ನು ಪ್ರಾರಂಭಿಸುವ ಭರವಸೆಯಲ್ಲಿ ದಂಪತಿಗಳು ಐವಿಎಫ್ ಮಾದರಿಯಲ್ಲಿ ಮಕ್ಕಳನ್ನು (Children) ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಮಿರಾಕಲ್ ಹೇಳುವ ಪ್ರಕಾರ ಆಕೆಯ ತಾಯಿ ತಮಿಕಾ ಫಿಲಿಪ್ಸ್,  ಮತ್ತು ಅಜ್ಜ ಜೋ ಬ್ರೌನ್ ಚಾರ್ಲ್ಸ್‌ ಮಿರಾಕಲ್‌ನ್ನು ನೋಡಿಕೊಳ್ಳುವುದನ್ನು ಗಮನಿಸಿ ಮದುವೆಗೆ ಒಪ್ಪಿಗೆ ಸೂಚಿಸಿದರು. ಆದರೆ ಆಕೆಯ ತಂದೆ ಕರೀಮ್ ಫಿಲಿಪ್ಸ್‌ಗೆ ಈ ಮದುವೆ ಸುತಾರಂ ಇಷ್ಟವಿರಲ್ಲಿಲ್ಲ ಎಂದು ತಿಳಿದುಬಂದಿದೆ. ಕೊನೆಗೆ ಮಗಳ ಖುಷಿಯನ್ನು ಕಂಡು ಕರೀಮ್‌ ಸಹ ಮದುವೆಗೆ ಒಪ್ಪಿಗೆ ಸೂಚಿಸಿದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?