ಮಗಳಿಗೆ ಮದುವೆ ಮಾಡೋದು ಸುಲಭವಲ್ಲ. ಅಳಿಯನ ಬಗ್ಗೆ ಎಲ್ಲ ರೀತಿಯಲ್ಲೂ ಪರೀಕ್ಷೆ ಮಾಡೋದು ಅನಿವಾರ್ಯ. ಸೋಶಿಯಲ್ ಮೀಡಿಯಾದಲ್ಲಿ ತಂದೆ ಕೇಳಿದ ಪ್ರೂಫ್ ವೈರಲ್ ಆಗಿದೆ.
ಈಗಿನ ದಿನಗಳಲ್ಲಿ ಮದುವೆ (Marriage) ಆಗೋದೇ ಕಷ್ಟ ಎನ್ನುವಂತಾಗಿದೆ. ಆದ ಮದುವೆಯೂ ವರ್ಷ, ಎರಡು ವರ್ಷಕ್ಕೆ ಅಂತ್ಯವಾಗುತ್ತೆ. ಅನೇಕರು ಮೋಸ ಮಾಡಿ ಮದುವೆ ಆಗ್ತಿದ್ದಾರೆ. ಹೆಣ್ಣು ಹೆತ್ತವರು, ತಮ್ಮ ಮಗಳ ಸುಖ- ಸಂತೋಷಕ್ಕಾಗಿ ಸಾಕಷ್ಟು ಕಷ್ಟಪಟ್ಟು ಹುಡುಗನನ್ನು ಹುಡುಕ್ತಿದ್ದಾರೆ. ಅವರ ಡಿಮ್ಯಾಂಡ್ ಜಾಸ್ತಿ ಆಗಿದೆ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರ್ತಿವೆ. ಲವ್ ಮ್ಯಾರೇಜ್ ನಲ್ಲಿ ಅಳಿಯನ್ನು ಹುಡುಕುವ ತ್ರಾಸು ತಂದೆ – ತಾಯಿಗಿಲ್ಲ. ಆದ್ರೆ ಅರೆಂಜ್ಡ್ ಮ್ಯಾರೇಜ್ ನಲ್ಲಿ ಎಲ್ಲ ಜವಾಬ್ದಾರಿ ಅಪ್ಪ – ಅಮ್ಮನ ಮೇಲೆ ಇರೋದ್ರಿಂದ ಅಳಿಯನಾಗುವನ ಪೂರ್ವಾಪರ ಕೇಳ್ತಾರೆ. ಹಿಂದಿನ ಕಾಲ ಈಗಿಲ್ಲ. ಈಗ ಹುಡುಗನ ಸಂಬಳ, ಕೆಲ್ಸ ಎಲ್ಲವನ್ನು ಸರಿಯಾಗಿ ತಿಳಿದುಕೊಳ್ಳುವ ಅನಿವಾರ್ಯತೆ ಇದೆ. ಈ ಮಧ್ಯೆ ಮಹಿಳೆಯೊಬ್ಬಳ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. ಆಕೆ ಅರೆಂಜ್ಡ್ ಮ್ಯಾರೇಜ್ ಬಗ್ಗೆ ಕೇಳಿದ ಪ್ರಶ್ನೆಯ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.
@333maheshwariii (ಸಾಕ್ಷಿ ಮಹೇಶ್ವರಿ) ಹೆಸರಿನ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಳ್ಳಲಾಗಿದೆ. ಅರೆಂಜ್ಡ್ ಮ್ಯಾರೇಜ್ ದಿನ ಕಳೆದಂತೆ ವಿಚಿತ್ರವಾಗ್ತಿದೆ. ಹುಡುಗಿ ತಂದೆ ನನ್ನ ಸೋದರ ಸಂಬಂಧಿಯಿಂದ ಸ್ಯಾಲರಿ ಸ್ಲಿಪ್ ಕೇಳಿದ್ದಾನೆ. ಇದು ಸಾಮಾನ್ಯವ ಎಂದು ಪೋಸ್ಟ್ ಹಾಕಿದ್ದಾಳೆ. ಈ ಎಕ್ಸ್ ಪೋಸ್ಟ್ 3.5 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದೆ. ಒಂದೂವರೆ ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. 4 ಸಾವಿರಕ್ಕೂ ಹೆಚ್ಚು ಬಳಕೆದಾರರು ಇಷ್ಟಪಟ್ಟಿದ್ದಾರೆ.
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿನ ಮುಂದೆ 'ಚಿ' ಮತ್ತು 'ಸೌ' ಏಕಿರುತ್ತದೆ?
ಈ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ತಂದೆ ಮಾಡಿದ್ದ ಸರಿ ಎಂದಿದ್ದಾರೆ. ಮತ್ತೆ ಕೆಲವರು ಇದು ಅತಿಯಾಯ್ತು ಎಂದಿದ್ದಾರೆ. ಇದು ಅರೆಂಜ್ಡ್ ಮ್ಯಾರೇಜ್ ಅಲ್ಲ, ಸಂದರ್ಶನ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮೊದಲನೇ ಸುತ್ತಿನಲ್ಲಿ ಸ್ಯಾಲರಿ ಸ್ಲಿಪ್ ಕೇಳ್ತಾರೆ. ಎರಡನೇ ಸುತ್ತಿನಲ್ಲಿ ಬ್ಯಾಂಕ್ ಸ್ಟೇಟ್ ಮೆಂಟ್ ಹಾಗೂ ಸಿಬಿಲ್ ಸ್ಕೋರ್ ಕೇಳ್ತಾರೆ ಎಂದು ಕಮೆಂಟ್ ಹಾಕಿದ್ದಾರೆ.
ಮತ್ತೊಬ್ಬರು, ಇದು ವಿಚಿತ್ರ ಎನ್ನಿಸಿದ್ರೂ ಅವರ ವಿಧಾನ ಸರಿಯಾಗಿದೆ ಎಂದಿದ್ದಾರೆ. ಹಿಂದೆ ಮದುವೆಗೆ ದಲ್ಲಾಳಿಗಳು ಇರ್ತಾ ಇದ್ರು. ಅವರನ್ನು ಎರಡೂ ಪಕ್ಷಗಳು ಸಂಪೂರ್ಣ ನಂಬ್ತಾ ಇದ್ವು. ಆದ್ರೀಗ ಅವರ ಸಂಖ್ಯೆ ಕಡಿಮೆ ಆಗಿದೆ. ಇದ್ರೂ ಅವರನ್ನು ನಂಬೋದು ಕಷ್ಟ. ಹಾಗಾಗಿ ಮಕ್ಕಳ ಸುರಕ್ಷತೆಗೆ ಪಾಲಕರು ಬೇರೆ ದಾರಿ ಹುಡುಕಿಕೊಂಡಿದ್ದಾರೆ. ಅದ್ರಲ್ಲೂ ಹುಡುಗಿ ತಂದೆ, ಮಗಳ ಮದುವೆ ಎಂಬ ದೊಡ್ಡ ಜವಾಬ್ದಾರಿ ನಿಭಾಯಿಸುತ್ತಾನೆ. ಅದ್ರಲ್ಲಿ ಆತಂಕ, ಭಯ, ಒತ್ತಡ ಇದ್ದೇ ಇರುತ್ತೆ. ಯಾವುದೇ ಕಾರಣಕ್ಕೂ ರಿಸ್ಕ್ ತೆಗೆದುಕೊಳ್ಳಲು ಆತ ಬಯಸುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಮಿಡ್ಲ್ ಕ್ಲಾಸ್ ಜನರಿಗೆ ಗುಡ್ ನ್ಯೂಸ್: 'ಮೊದ್ಲು ಮದ್ವೆಯಾಗಿ, ಆಮೇಲೆ ಹಣ
ಈ ಸ್ಥಿತಿಯಲ್ಲಿ ನೀವಿದ್ದರೂ ನೀವು ಇದನ್ನೇ ಮಾಡ್ತಾ ಇದ್ರಿ. ಯಾವುದೇ ಪಾಲಕರೂ ತಮ್ಮ ಮಗಳನ್ನು ನಿರುದ್ಯೋಗಿಗೆ ಮದುವೆ ಮಾಡಲು ಬಯಸುವುದಿಲ್ಲ. ಈಗಿನ ದಿನಗಳಲ್ಲಿ ಇದು ಸಾಮಾನ್ಯ ಸಂಗತಿಯಾಗಿದೆ ಎಂದಿದ್ದಾರೆ. ಈಗ ಪಾಲಕರು ಮಾತ್ರವಲ್ಲ ಹುಡುಗಿಯರು ಕೂಡ ಸಿಬಿಲ್ ಸ್ಕೋರ್ ಕೇಳ್ತಿದ್ದಾರೆ. ಈಗಿನ ದಿನಗಳಲ್ಲಿ ಇದು ಮಾಮೂಲಿ ಎಂದು ಕಮೆಂಟ್ ಮಾಡಿದ್ದಾರೆ. ಇದ್ರಲ್ಲಿ ಟೆನ್ಷನ್ ವಿಷ್ಯ ಏನಿದೆ? ಸ್ಯಾಲರಿ ಸ್ಲಿಪ್ ತೋರಿಸಿದ್ರೆ ಏನಾಗುತ್ತೆ ಅಂತ ಮತ್ತೆ ಕೆಲವರು ಪ್ರಶ್ನೆ ಕೇಳಿದ್ದಾರೆ. ಮತ್ತೆ ಕೆಲವರು, ಇದನ್ನು ನೇರವಾಗಿ ಹೇಳದೆ, ಪರೋಕ್ಷವಾಗಿ ಚೆಕ್ ಮಾಡಿಸಬಹುದು ಎಂದಿದ್ದಾರೆ. ಈಗಿನ ದಿನಗಳಲ್ಲಿ ಪಾಲಕರು, ಹುಡುಗ ಕೆಲಸ ಮಾಡುವ ಕಚೇರಿಗೆ ಬಂದು ಆತನ ಕೆಲಸವನ್ನು ಪರೀಕ್ಷೆ ಮಾಡ್ತಾರೆ. ಇದ್ರಲ್ಲಿ ವಿಶೇಷ ಇಲ್ಲ ಎಂಬ ಕಮೆಂಟ್ ಹೆಚ್ಚಾಗಿ ಬಂದಿದೆ.
Arrange marriage are getting weird day by day. Girl's father asked my cousin for his salary slip. Is it normal ?
— Sakshi (@333maheshwariii)