
ಬದೌನ್: ಕೆಲ ದಿನಗಳ ಹಿಂದಷ್ಟೇ ಅಲಿಘರ್‌ನಲ್ಲಿ ಮಹಿಳೆಯೊಬ್ಬಳು ತನ್ನ ಭಾವಿ ಅಳಿಯನ ಜೊತೆ ಓಡಿ ಹೋದಂತಹ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಮಹಿಳೆಯೊಬ್ಬಳು ತನ್ನ ಮಗಳ ಮಾವನ ಜೊತೆ (ಮಗಳ ಗಂಡನ ಅಪ್ಪ) ಓಡಿ ಹೋದಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದ ಬದೌನ್‌ನಲ್ಲಿ ನಡೆದಿದೆ. ಹೀಗೆ ಮಗಳ ಮಾವನ ಜೊತೆ ಓಡಿ ಹೋದ ಮಹಿಳೆಯನ್ನು 43 ವರ್ಷದ ಮಮತಾ ಎಂದು ಗುರುತಿಸಲಾಗಿದೆ. ಹಾಗೆಯೇ ಆಕೆಯ ಮಗಳ ಮಾವನನ್ನು ಶೈಲೇಂದ್ರ ಅಲಿಯಾಸ್ ಬಿಲ್ಲು ಎಂದು ಗುರುತಿಸಲಾಗಿದೆ.
ಮಹಿಳೆಯ ಪತಿ ಸುನೀಲ್ ಕುಮಾರ್, ತಿಂಗಳಿಗೆ ಎರಡು ಬಾರಿ ಮಾತ್ರ ಮನೆಗೆ ಬರುತ್ತಿದ್ದರಂತೆ ಮತ್ತು ಅವರ ಅನುಪಸ್ಥಿತಿಯಲ್ಲಿ ಪತ್ನಿ ಮಮತಾ ತಮ್ಮ ಮಗಳ ಮಾವನನ್ನು ಮನೆಗೆ ಆಹ್ವಾನಿಸುತ್ತಿದ್ದರು. ಹೀಗಾಗಿ ತನ್ನ ಮಗನ ಅತ್ತೆ ಮನೆಗೆ ಆಗಾಗ ಶೈಲೇಂದ್ರ ಭೇಟಿ ನೀಡುತ್ತಿದ್ದು, ಇಬ್ಬರ ಮಧ್ಯೆ ಪ್ರೇಮ ಸಂಬಂಧ ಬೆಳೆದಿದೆ ನಂತರ ಇಬ್ಬರೂ ಮನೆಬಿಟ್ಟು ಓಡಿಹೋಗಿದ್ದಾರೆ. 43 ವರ್ಷದ ಮಮತಾಗೆ ಒಟ್ಟು ನಾಲ್ವರು ಮಕ್ಕಳಿದ್ದು, ಅವರಲ್ಲಿ ಒಬ್ಬರು ಮಗಳಿಗೆ 2022ರಲ್ಲಿ ಮದುವೆಯೂ ಆಗಿದೆ. ಮಗಳ ಮದುವೆಯ ನಂತರ ಮನೆಗೆ ಬರುತ್ತಿದ್ದ ಮಗಳ ಮಾವ 46 ವರ್ಷದ ಶೈಲೇಂದ್ರ ಜೊತೆ ಈ ಮಹಿಳೆಗೆ ಅತೀಯಾದ ಆತ್ಮೀಯತೆ ಬೆಳೆದಿದೆ. ಆದರೆ ತಮ್ಮ ಈ ಅನೈತಿಕ ಪ್ರೇಮ ಸಂಬಂಧಕ್ಕೆ ಕುಟುಂಬದಿಂದ ವಿರೋಧ ಎದುರಾಗುತ್ತದೆ ಎಂಬ ಅರಿವಿದ್ದ ಇಬ್ಬರು ಮನೆಬಿಟ್ಟು ಓಡಿ ಹೋಗಿದ್ದಾರೆ.
ಭಾವಿ ಅಳಿಯನ ಜೊತೆ ಓಡಿ ಹೋದ ಅತ್ತೆ ಪೊಲೀಸರಿಗೆ ಶರಣು: ಠಾಣೆಯಲ್ಲಿ ಆಕೆ ಹೇಳಿದ್ದೇನು?
ಮಹಿಳೆಯ ಗಂಡ ಟ್ರಕ್ ಚಾಲಕನಾಗಿದ್ದು, ಕೇವಲ ತಿಂಗಳಿಗೊಮ್ಮೆಯೂ ಎರಡು ಬಾರಿಯೋ ಮನೆಗೆ ಬರುತ್ತಿದ್ದ, ಈ ದೀರ್ಘಾವಧಿಯಲ್ಲಿ ಆತ ನಿರಂತರವಾಗಿ ಮನೆಗೆ ಹಣ ಕಳುಹಿಸುತ್ತಿದ್ದ, ಆದರೆ ಮಮತಾ ಆತನಿಲ್ಲದ ವೇಳೆ ತನ್ನ ಬೀಗನೂ ಆಗಿದ್ದ ಶೈಲೇಂದ್ರನನ್ನು ಮನೆಗೆ ಕರೆಸುತ್ತಿದ್ದಳು. ನಾನು ಟ್ರಕ್ ಓಡಿಸುತ್ತೇನೆ ಮತ್ತು ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ಮನೆಗೆ ಬರುತ್ತೇನೆ. ನಾನು ಸಮಯಕ್ಕೆ ಸರಿಯಾಗಿ ಹಣ ಕಳುಹಿಸುತ್ತಿದ್ದೆ, ಆದರೆ ನನ್ನ ಹೆಂಡತಿ ಮಮತಾ ನನ್ನ ಬೀಗನನ್ನು (ಮಗಳ ಮಾವ) ಮನೆಗೆ ಕರೆದು ಸಂಬಂಧ ಬೆಳೆಸುತ್ತಿದ್ದಳು. ಈಗ, ಅವಳು ಅವನೊಂದಿಗೆ ಓಡಿಹೋಗಿ, ಆಭರಣ ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಅವರ ಮಗ ಸಚಿನ್ ಮಾತನಾಡಿ, ತನ್ನ ತಂದೆ ಮನೆಯಲ್ಲಿ ವಿರಳವಾಗಿ ಇರುತ್ತಿದ್ದರು, ಈ ವೇಳೆ ಪ್ರತಿ ಮೂರು ದಿನಕ್ಕೊಮ್ಮೆ, ಅಮ್ಮ ಅವನನ್ನು (ಶೈಲೇಂದ್ರ) ಮನೆಗೆ ಕರೆದು ನಮ್ಮನ್ನು ಬೇರೆ ಕೋಣೆಗೆ ಕಳುಹಿಸುತ್ತಿದ್ದರು. ಈಗ ಅವಳು ಅವನೊಂದಿಗೆ ಟೆಂಪೋದಲ್ಲಿ ಓಡಿಹೋಗಿದ್ದಾಳೆ ಎಂದು ಹೇಳಿದ್ದಾನೆ. ಆ ಮಹಿಳೆಯ ನೆರೆಮನೆಯವರಾದ ಅವಧೇಶ್ ಕುಮಾರ್ ಕೂಡ ಕುಟುಂಬದ ಹೇಳಿಕೆಗಳನ್ನು ದೃಢಪಡಿಸಿದ್ದಾರೆ. ಸುನೀಲ್ ಕುಮಾರ್ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮನೆಗೆ ಬರುತ್ತಿದ್ದರು. ಅವರು ಇಲ್ಲದಿದ್ದಾಗ, ಮಮತಾ ಆಗಾಗ್ಗೆ ಶೈಲೇಂದ್ರಗೆ ಕರೆ ಮಾಡುತ್ತಿದ್ದರು. ಅವರು ಸಂಬಂಧಿಯಾಗಿದ್ದರಿಂದ ಯಾರಿಗೂ ಏನೂ ಅನುಮಾನ ಬರುತ್ತಿರಲಿಲ್ಲ ಎಂದು ನೆರೆಮನೆಯವರಾದ ಅವಧೇಶ್ ಕುಮಾರ್ ಹೇಳಿದ್ದಾರೆ. ನೆರೆಹೊರೆಯವರ ಪ್ರಕಾರ, ಶೈಲೇಂದ್ರ ಮಧ್ಯರಾತ್ರಿಯ ಸುಮಾರಿಗೆ ಬಂದು ಬೆಳಗ್ಗೆ ಬೇಗನೆ ಮನೆಯಿಂದ ಹೋಗುತ್ತಿದ್ದ. ಘಟನೆಗೆ ಸಂಬಂಧಿಸಿದಂತೆ ಸುನಿಲ್ ಕುಮಾರ್ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶೈಲೇಂದ್ರ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ.
ಮದುವೆಗೆ ಕೆಲವೇ ದಿನಗಳಿರುವಾಗ ಭಾವಿ ಅಳಿಯನ ಜೊತೆ ಓಡಿ ಹೋದ ಅತ್ತೆ
ದೂರು ನೀಡುವ ವಿಚಾರವನ್ನು ಖಚಿತಪಡಿಸಿದ ದಾತಗಂಜ್ ವೃತ್ತ ಅಧಿಕಾರಿ ಕೆ.ಕೆ. ತಿವಾರಿ, ಮಹಿಳೆಯೊಬ್ಬರು ತನ್ನ ಸಮಾಧಿ (ಮಗಳ ಮಾವ) ಜೊತೆ ಹೋಗಿದ್ದಾರೆ ಎಂದು ಹೇಳುವ ದೂರು ಬಂದಿದೆ. ಸೂಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.