ಇದೇನಿದು ರಿಯಾಲಿಟಿ ಷೋನೋ ಅಥ್ವಾ ಪೋ*..? ಅಣ್ಣಯ್ಯ ಸೀರಿಯಲ್​​ ಪಾರುಗೆ ಇದೆಂಥ ಅವಸ್ಥೆ?

Published : Apr 20, 2025, 03:53 PM ISTUpdated : Apr 20, 2025, 07:02 PM IST
ಇದೇನಿದು ರಿಯಾಲಿಟಿ ಷೋನೋ ಅಥ್ವಾ ಪೋ*..? ಅಣ್ಣಯ್ಯ ಸೀರಿಯಲ್​​ ಪಾರುಗೆ ಇದೆಂಥ ಅವಸ್ಥೆ?

ಸಾರಾಂಶ

ರಿಯಾಲಿಟಿ ಷೋಗಳಲ್ಲಿ ಅಶ್ಲೀಲತೆ ಮಿತಿಮೀರುತ್ತಿದೆ. ಡಬಲ್ ಮೀನಿಂಗ್ ಸಂಭಾಷಣೆ, ಅಸಭ್ಯ ಕಾರ್ಯಗಳು ಸಾಮಾನ್ಯವಾಗುತ್ತಿವೆ. ನಟಿ ನಿಶಾ ರವಿಕೃಷ್ಣನ್ ಅವಮಾನಕರ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಟೀಕೆಗೆ ಗುರಿಯಾಗಿದೆ. ತೀರ್ಪುಗಾರರು, ನಿರೂಪಕರು ಇಂತಹ ಅಶ್ಲೀಲತೆಯನ್ನು ಖಂಡಿಸದಿರುವುದು ಚಿಂತಾಜನಕ. ದಯವಿಟ್ಟು ಕನ್ನಡದಲ್ಲಿ ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಡಿ ಎಂದು ವೀಕ್ಷಕರು ಮನವಿ ಮಾಡುತ್ತಿದ್ದಾರೆ.

ರಿಯಾಲಿಟಿ ಷೋ ಹೆಸರಿನಲ್ಲಿ ಇಂದು ಅಸಭ್ಯ, ಅಶ್ಲೀಲತೆ ಎಲ್ಲೆ ಮೀರುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಬಿಗ್​ಬಾಸ್​ನಂಥ ಷೋನಲ್ಲಿ ಎಗ್ಗಿಲ್ಲದೇ ಅಶ್ಲೀಲತೆ ಪ್ರದರ್ಶಿಸುತ್ತಿರುವುದು, ಅದನ್ನು ಬೈದುಕೊಳ್ಳುತ್ತಲೇ ಜನರು ಆನಂದಿಸುತ್ತಾ 24 ಗಂಟೆ ಬೇಕಿದ್ದರೆ ನೋಡುವುದೂ ಹೊಸ ವಿಷಯವೇನಲ್ಲ. ರಿಯಾಲಿಟಿ ಷೋಗಳಲ್ಲಿ ಡಬಲ್​ ಮೀನಿಂಗ್​ಗಳದ್ದೇ ಅಬ್ಬರ. ಅದರಲ್ಲಿಯೂ ಕೆಲವು ಆ್ಯಂಕರ್​ಗಳು ಡಬಲ್​ ಮೀನಿಂಗ್​ಗಳನ್ನೇ ಹೇಳುವುದು ವಾಡಿಕೆ. ಅದನ್ನು ಕೇಳಿ ಮಹದಾನಂದ ಎನ್ನುವಂತೆ ಅಲ್ಲಿಗೆ ಬಂದಿರುವ ಸೆಲೆಬ್ರಿಟಿ ತೀರ್ಪುಗಾರರು ಕೂಗುವುದು ಏನು, ನಗುವುದು ಏನು... ಅಬ್ಬಬ್ಬಾ ಎನ್ನಿಸುವಂತಿರುತ್ತದೆ. ಇಂಥ ಷೋಗಳಲ್ಲಿನ ಡಬಲ್​  ಮೀನಿಂಗ್​ ಕುರಿತು ಮೊನ್ನೆಯಷ್ಟೇ ರಿಯಾಲಿಟಿ ಷೋ ಒಂದರಲ್ಲಿ ತೀರ್ಪುಗಾರರೂ  ಆಗಿರುವ ಕ್ರೇಜಿಸ್ಟಾರ್​ ರವಿಚಂದ್ರನ್​ ನೋವಿನಿಂದ ನುಡಿದಿದ್ದರು. ನಾನು ಭರ್ಜರಿ ಬ್ಯಾಚುಲರ್ಸ್ ರೀತಿಯ ಶೋ ಮಾಡುತ್ತಿರುತ್ತೇನೆ. ಬೆಳಿಗ್ಗೆ 10 ಗಂಟೆಗೆ ಶೋ ಶೂಟಿಂಗ್ ಆರಂಭ ಆದರೆ, ರಾತ್ರಿ 11 ಗಂಟೆಗವರೆಗೂ ಶೋ ಶೂಟ್ ನಡೆಯುತ್ತದೆ. ಅಲ್ಲಲ್ಲಿ ಬೋರ್ ಹೊಡೆಯುತ್ತೆ, ತುಂಬಾ ಸಿಟ್ಟು ಬರುತ್ತದೆ. ಡಬಲ್ ಮೀನಿಂಗ್ ಜಾಸ್ತಿ ಮಾಡ್ತಾರೆ ಇದು ಬೇಕಿತ್ತಾ ಎನಿಸುತ್ತದೆ ಎಂದು ತಮ್ಮ ಮನಸಿನ ಮಾತನ್ನು ಹೊರಹಾಕಿದ್ದರು.

ಇದೀಗ ತೆಲಗು ರಿಯಾಲಿಟಿ ಷೋ ಒಂದರಲ್ಲಿ ಪಾರು, ಅಣ್ಣಯ್ಯ ಸೀರಿಯಲ್​ ಖ್ಯಾತಿಯ ನಟಿ ನಿಶಾ ರವಿಕೃಷ್ಣನ್ ಭಾರಿ ಮುಜುಗರ ಅನುಭವಿಸಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಸೀರಿಯಲ್​ ಚಾಂಪಿಯನ್​ಷಿಪ್​ ಹೆಸರಿನ ರಿಯಾಲಿಟಿ ಷೋ ಇದಾಗಿದೆ. ಇದರಲ್ಲಿ ಈಕೆಯ ಸಹ ಸ್ಪರ್ಧಿಯ ತುಟಿಗೆ ಲಿಪ್​ಸ್ಟಿಕ್​  ಇಡಲಾಗಿದೆ. ಆತ ಬಂದು ನಟಿಯ ಮುಖಕ್ಕೆ ಎಲ್ಲೆಂದರಲ್ಲಿ ಕಿಸ್​  ಕೊಡಬೇಕು. ಅದರ ಮಾರ್ಕ್​ ನಟಿಯ ಮುಖದ ಮೇಲೆ ಬರಬೇಕು! ಇದು ಸ್ಪರ್ಧೆಯ ನಿಯಮ!!! ಸಹ ಸ್ಪರ್ಧಿಗೆ ಏನು, ಸಿಕ್ಕಿದ್ದೇ ಚಾನ್ಸ್​ ಎಂದು ಕಿಸ್​ ಕೊಡುತ್ತಲೇ ಹೋದರೆ, ನಟಿ ನಿಶಾ ಮುಖ ಮಾತ್ರ ನೋವಿನಿಂದ ಕೂಡಿರುವುದನ್ನು ನೋಡಬಹುದಾಗಿದೆ. ಅಲ್ಲಿದ್ದ ಜನರು ಮಾತ್ರ ಇದನ್ನು ಸಕತ್​ ಎಂಜಾಯ್​ ಮಾಡುತ್ತಾ ಚಪ್ಪಾಳೆ ತಟ್ಟುತ್ತಿದ್ದಾರೆ. ಅಲ್ಲಿರುವ ಆ್ಯಂಕರ್​ ಕೂಡ ಬಾಯಿ ಚಪ್ಪರಿಸಿಕೊಂಡು ಇದನ್ನು ನೋಡುತ್ತಿದ್ದರುವುದು ಕೂಡ ವಿಡಿಯೋದಲ್ಲಿ ನೋಡಬಹುದು.

ರಿಯಾಲಿಟಿ ಷೋಗಳಲ್ಲಿ ಕಾಮಿಡಿ ಹೆಸ್ರಲ್ಲಿ ಡಬಲ್​ ಮೀನಿಂಗ್​! ಅಸಮಾಧಾನ ಹೊರಹಾಕಿದ ರವಿಚಂದ್ರನ್​ ಹೇಳಿದ್ದೇನು?

ಇದರ ವಿಡಿಯೋ ವೈರಲ್​ ಆಗುತ್ತಲೇ ಸಿಕ್ಕಾಪಟ್ಟೆ ಕೆಟ್ಟ ಕಮೆಂಟ್ಸ್​ ಸುರಿಮಳೆಯಾಗಿದೆ. ಇಲ್ಲಿ ರಿಯಾಲಿಟಿ ಷೋಗಿಂತಲೂ ಹೆಚ್ಚಾಗಿ ನಟಿಯನ್ನು ಬೈದವರೇ ಹೆಚ್ಚು. ಇಷ್ಟು ಅಸಭ್ಯ, ಅಶ್ಲೀಲ ಎನ್ನಿಸುತ್ತಿರುವಾಗ ನಿಶಾ ಯಾಕೆ ಅದನ್ನು ವಿರೋಧಿಸಿಲ್ಲ, ಅವರು ಮುಜುಗರ ಅನುಭವಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ, ಇದರ ಹೊರತಾಗಿಯೂ ಆಕೆ ಹಾಗೆ ಮಾಡಿದ್ದು ಸರಿಯಲ್ಲ, ಸ್ಪರ್ಧೆಯಾದರೇನು, ಇಂಥದ್ದೆಲ್ಲಾ ನನಗೆ ಆಗಿಬರಲ್ಲ ಎಂದೇ ಹೇಳಬೇಕಿತ್ತು ಎಂದು ಗರಂ ಆಗುತ್ತಿದ್ದಾರೆ. ಇಂಥ ಟಾಸ್ಕ್​ ಕೊಟ್ಟಾಗ ಅಲ್ಲಿದ್ದ ತೀರ್ಪುಗಾರರಿಂದ ಹಿಡಿದು ಯಾರೊಬ್ಬರೂ ಇದು ಬೇಡ ಎಂದು ಹೇಳದ ಮನಸ್ಥಿತಿಯರವರು ಇದ್ದ ಮೇಲೆ ಅಶ್ಲೀಲತೆ  ರಾರಾಜಿಸದೇ ಇನ್ನೇನಾಗುತ್ತದೆ ಎನ್ನುವುದು ಹಲವರ ಪ್ರಶ್ನೆ.

ತೀರ್ಪುಗಾರರ ಸ್ಥಾನದಲ್ಲಿ ಕುಳಿತವರು ಸಿನಿಮಾ ರಂಗದ ಸೆಲೆಬ್ರಿಟಿಗಳೇ  ಆಗಿರುತ್ತಾರೆ. ಇವರಿಗೆ ಇಂಥದ್ದೆಲ್ಲಾ ಸಿನಿಮಾಗಳಲ್ಲಿ ಮಾಮೂಲಾಗಿರಬಹುದು. ಹಾಗೆಂದು ಟಿವಿಗಳಲ್ಲಿ ಬರುವ ಇಂಥ ರಿಯಾಲಿಟಿ ಷೋಗಳಲ್ಲಿ ಅಸಭ್ಯ ವರ್ತನೆ ಬಂದರೆ ಖಂಡಿಸುವವರು ಇಲ್ಲವೇ ಎನ್ನುವುದು ಪ್ರಶ್ನೆ. ಒಂದು ಭಾಷೆಯಲ್ಲಿ ಇಂಥ ಟಾಸ್ಕ್​ ಪಾಪ್ಯುಲರ್​ ಆದರೆ, ಅದನ್ನು ಬೇರೆ ಭಾಷೆಯವರು ಅಳವಡಿಸಿಕೊಳ್ಳಲು ಹೆಚ್ಚೇನೂ ಸಮಯವಿಲ್ಲ ಬಿಡಿ. ಇನ್ನು ಸ್ಪರ್ಧೆ ಗೆಲ್ಲುವ ಭರದಲ್ಲಿ ಏನು ಬೇಕಾದರೂ ಮಾಡಲು ಹೇಸದ ಕೆಲವು ಸ್ಪರ್ಧಿಗಳು, ಅದನ್ನು ನೋಡಿ ಬಾಯಿ ಚಪ್ಪರಿಸುವ ತೀರ್ಪುಗಾರರು, ಕಿರುಚಾಟ-ಬೊಬ್ಬೆಯಿಡುತ್ತಾ ಇಂಥ ದೃಶ್ಯಗಳನ್ನು ಉತ್ತೇಜಿಸುವ ಆ್ಯಂಕರ್​ಗಳು ಇದ್ದೇ ಇರುತ್ತಾರೆ ಎಂಬುದಾಗಿ ಹಲವಾರು ಕಮೆಂಟಿಗರು ಗರಂ ಆಗಿದ್ದಾರೆ. ದಯವಿಟ್ಟು ಇದನ್ನು ಕನ್ನಡದಲ್ಲಿ ತರಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಯಾರ‍್ಯಾರನ್ನೋ ನನ್​ ಗಂಡ ಮಾಡ್ಬೇಡಿ ಪ್ಲೀಸ್​... ಅವ್ರು ಅಕಾಯ್ ಅಲ್ಲ: ವೈಷ್ಣವಿ ಗೌಡ ಬೇಸರ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?