ಮದ್ವೆ ಆಗಲೇಬೇಕಾ? ಹೆಣ್ಣು ಬೇಕೇ ಬೇಕಾ? ನಟ ರವಿಚಂದ್ರನ್ ಅದ್ಭುತ ಮಾತು ಕೇಳಿ... ​

Published : Apr 20, 2025, 01:16 PM ISTUpdated : Apr 20, 2025, 07:04 PM IST
ಮದ್ವೆ ಆಗಲೇಬೇಕಾ? ಹೆಣ್ಣು ಬೇಕೇ ಬೇಕಾ? ನಟ ರವಿಚಂದ್ರನ್ ಅದ್ಭುತ ಮಾತು ಕೇಳಿ... ​

ಸಾರಾಂಶ

ಭರ್ಜರಿ ಬ್ಯಾಚುಲರ್ಸ್‌ನಲ್ಲಿ ರವಿಚಂದ್ರನ್‌ ಮದುವೆಯ ಮಹತ್ವ ಸಾರಿದ್ದಾರೆ. ಜೀವನದಲ್ಲಿ ಸಂಗಾತಿಯ ಅಗತ್ಯ, ಭಾವನೆಗಳ ಹಂಚಿಕೆ, ಕುಟುಂಬದ ಬೆಂಬಲ, ಹೆಣ್ಣಿನ ಮಹತ್ವ, ಅತ್ತೆ-ಸೊಸೆಯ ಬಾಂಧವ್ಯದ ಬಗ್ಗೆ ವಿವರಿಸಿದ್ದಾರೆ. ಮಕ್ಕಳ ಕನಸುಗಳಿಗೆ ಬೆಂಬಲ ನೀಡಬೇಕೆಂದು ಕಿವಿಮಾತು ಹೇಳಿದ್ದಾರೆ. ತಮ್ಮ ಶಾಲಾ ದಿನಗಳ ಅನುಭವ ಹಂಚಿಕೊಂಡಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ʻಭರ್ಜರಿ ಬ್ಯಾಚುಲರ್ಸ್‌ ಕನ್ನಡ ಸೀಸನ್‌ 2’ ರಿಯಾಲಿಟಿ ಶೋನ ಈ ಬಾರಿಯ ಹೈಲೈಟ್​ ಆಗಿರೋದು ಕ್ರೇಜಿಸ್ಟಾರ್​  ರವಿಚಂದ್ರನ್​. ಕೆಲವೊಂದು ರಿಯಾಲಿಟಿ ಷೋಗಳಲ್ಲಿ ಡಬಲ್​  ಮೀನಿಂಗ್​ಗಳು ಜಾಸ್ತಿಯಾಗ್ತಿವೆ ಎಂದು ನೋವಿನಿಂದ ನುಡಿದಿರುವ ರವಿಚಂದ್ರನ್​ ಅವರು, ಇದೇ ವೇದಿಕೆಯಲ್ಲಿ ಹಲವು ಬದುಕಿನ ಪಾಠಗಳನ್ನೂ ಮಾಡುವುದು ಉಂಟು. ಇದೀಗ ಮದುವೆಯೆನ್ನುವ ಅರ್ಥದ ಬಗ್ಗೆ ನಟ ಸುಂದರವಾಗಿ ಬಣ್ಣಿಸಿದ್ದು, ಎಲ್ಲರಿಂದಲೂ ವ್ಹಾರೆವ್ಹಾ ಎನ್ನಿಸಿಕೊಳ್ಳುತ್ತಿದ್ದಾರೆ. ಮದುವೆ ಎನ್ನುವ ಕಾನ್ಸೆಪ್ಟೇ ಬೇರೆಯ ರೂಪ ಪಡೆಯುತ್ತಿರುವ ಈ ಸಂದರ್ಭಗಳಲ್ಲಿ, ಸಂಬಂಧಗಳಿಗೆ ಬೆಲೆಯೇ ಇಲ್ಲವೇನೋ ಎನ್ನಿಸುವ ಸ್ಥಿತಿ ಇರುವ ಈ ಕಾಲಘಟ್ಟದಲ್ಲಿ ರವಿಮಾಮಾ ಮಾತಿಗೆ ಎಲ್ಲರೂ ಚಪ್ಪಾಳೆ ತಟ್ಟಿದ್ದಾರೆ. 
 
ʻಸರ್ಪ್ರೈಸ್‌ ಟು ಬ್ಯಾಚುಲರ್ಸ್‌ʼ ಎನ್ನುವ ರೌಂಡ್‌ನಲ್ಲಿ ಮದುವೆಯ ಬಗ್ಗೆ ಪ್ರಸ್ತಾಪ ಆಗಿದೆ. ಏಂಜಲ್‌ಗಳ ಸರ್ಪ್ರೈಸ್‌ ನೋಡಿ ಬ್ಯಾಚುಲರ್ಸ್‌ ಭಾವುಕರಾಗಿದ್ದಾರೆ.  ಅಭಿಜ್ಞಾ ಭಟ್ ಅವರಿಗೆ ಮದುವೆ ಯಾಕೆ ಆಗಬೇಕು ಎಂದು ಈ ಸಂದರ್ಭದಲ್ಲಿ ರವಿಚಂದ್ರನ್​ ವಿವರಿಸಿದ್ದಾರೆ.  ಆ್ಯಂಕರ್​ ನಿರಂಜನ್‌ ದೇಶಪಾಂಡೆ ಅವರು, “ಸೂರ್ಯ ಮದುವೆ ಆಗಬೇಕಾ ಅಥವಾ ಬೇಡ್ವಾ. ಮದುವೆ ಆದರೆ ಯಾಕೆ ಆಗಬೇಕು ಸರ್”‌ ಎಂದು ಪ್ರಶ್ನಿಸಿದಾಗ ಅದಕ್ಕೆ ಉತ್ತರವಾಗಿ ರವಿಚಂದ್ರನ್‌ ಮದುವೆಯ ಪಾಠ ಮಾಡಿದ್ದಾರೆ.  “ಮದುವೆ ಯಾಕಾಗಬೇಕು  ಎನ್ನುವುದಕ್ಕೆ  ಮೊದಲ ಉತ್ತರ ನಿಮ್ಮ  ಜೀವನದಲ್ಲಿ ಒಂದು ಕಂಪಾನಿಯನ್‌ ಬೇಕು. ನಿಮ್ಮ ಫೀಲಿಂಗ್ಸ್‌ ಅನ್ನು ಶೇರ್‌ ಮಾಡಿಕೊಳ್ಳಲು ಒಬ್ಬ ಸಂಗಾತಿ ಬೇಕು. ನೀವು ಕೆಲಸಗಾರನನ್ನು ಹುಡುಕುತ್ತೀರಾ, ನಿಮಗೆ ಸರ್ವೆಂಟ್ಸ್‌ ಬೇಕು. ಇಲ್ಲ ನಿಮ್ಮ ಖರ್ಚುಗಳನ್ನು ನಿಭಾಯಿಸಲು ಹುಡುಗ ಬೇಕು ಅಂತೀರಾ. ಅದು ಅಲ್ಲ ಬೇಕಿರುವುದು, ನಿಮ್ಮ ಫೀಲಿಂಗ್ಸ್‌ ಮತ್ತು ನಿಮ್ಮ ಯೋಚನೆಗಳನ್ನು ಹಂಚಿಕೊಳ್ಳಲು ನಿಮಗೆ ಕಂಪಾನಿಯನ್‌ ಬೇಕು” ಎನ್ನುವ ಮೂಲಕ ಮದುವೆಯ ಕಾನ್ಸೆಪ್ಟ್​ ಅನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ.

ರಿಯಾಲಿಟಿ ಷೋಗಳಲ್ಲಿ ಕಾಮಿಡಿ ಹೆಸ್ರಲ್ಲಿ ಡಬಲ್​ ಮೀನಿಂಗ್​! ಅಸಮಾಧಾನ ಹೊರಹಾಕಿದ ರವಿಚಂದ್ರನ್​ ಹೇಳಿದ್ದೇನು?
 
ಇದೇ ವೇಳೆ ಹೆಣ್ಣೊಬ್ಬಳು ಜೀವನದಲ್ಲಿ ಎಷ್ಟು ಮುಖ್ಯ ಎನ್ನುವ ಬಗ್ಗೆಯೂ ಸುಂದರವಾದ ಉದಾಹರಣೆಗಳನ್ನು ನೀಡುವ ಮೂಲಕ ನಟ ಮತ್ತೊಮ್ಮೆ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. “ಸಂಜೆ ಮನೆಗೆ ಹೋದಾಗ ನಮಗೆ ಅಂತ ತಾಯಿ ಕಾಯ್ತಿರುತ್ತಾರೆ. ಅವರಿಗೆ ವಯಸ್ಸಾಗುತ್ತದೆ, ಆಗ ಅವರಿಗೂ ಒಂದು ಕಂಪನಿ ಬೇಕು ಅಲ್ವಾ. ಉದಾಹರಣೆಗೆ ನನ್ನ ಹೆಂಡತಿ ನನ್ನ ತಾಯಿಗೆ ಕಂಪೆನಿ ಕೊಡುತ್ತಿರುತ್ತಾಳೆ. ಅಡುಗೆ ಸೇರಿದಂತೆ ಹಲವು ವಿಚಾರಗಳಿಗೆ ಸಪೋರ್ಟ್‌ ಮಾಡುತ್ತಿರುತ್ತಾರೆ. ಆ ವೇಳೆ ಹಲವು ಪಾಠಗಳನ್ನು ಹೇಳಿ ಕೊಡುತ್ತಾರೆ. ನನ್ನ ಹೆಂಡತಿಗೆ ಅಡುಗೆ ಮಾಡುವುದಕ್ಕೆ ಬರುತ್ತಿರಲಿಲ್ಲ. ಈಗ ಚೆನ್ನಾಗಿ ಅಡುಗೆ ಮಾಡುತ್ತಾಳೆ. ಅಡುಗೆ ಮಾಡಲು ಹೇಳಿಕೊಟ್ಟಿದ್ದು ನನ್ನ ತಾಯಿ. ಒಂದು ಹೆಣ್ಣು ಮನೆಯೊಳಗೆ ಕಾಲಿಟ್ಟರೆ, ಮನೆಗೆ ಲಕ್ಷ್ಮೀ ಬಂದಂತೆ” ಎನ್ನುವ ಮೂಲಕ ಮದುವೆ ಮಾತ್ರವಲ್ಲದೇ ಅತ್ತೆ-ಸೊಸೆಯ ಬಾಂಧವ್ಯ ಹೇಗಿರಬೇಕು ಎನ್ನುವುದನ್ನೂ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.
 
ಇದೇ ಷೋನದಲ್ಲಿ ಈ ಹಿಂದೆ ನಟ, ಮಕ್ಕಳನ್ನು ಬೆಳೆಸುವ ಬಗೆಯನ್ನು ಹೇಳಿದ್ದರು. ಮಕ್ಕಳ ಬಗ್ಗೆ ನಾವು ಯಾವತ್ತೂ ಕನಸು ಕಾಣಬಾರದು. ಅವರ ಕನಸಿನ ಜೊತೆ ನಾವು ನಿಲ್ಲಬೇಕು. ಓದುವ ಟೈಮ್‌ನಲ್ಲಿ ನೀವು ಓದಿದರೆ ಜೀವನ ಪೂರ್ತಿ ಆಟಾಡಬಹುದು. ಈಗ ಆಟಾಡಿದರೆ, ಜೀವನ ಪೂರ್ತಿ ನಿಮ್ಮನ್ನ ಆಟಾಡಿಸುತ್ತದೆ ಎಂದಿರುವ ನಟ,  ನಾನು ಆರನೇ ಕ್ಲಾಸ್ ಫೇಲ್. ಪುಸ್ತಕ ಮುಟ್ಟಲ್ಲ ಎಂದು ಶಪತ ಮಾಡಿದೆ. 7ನೇ ಕ್ಲಾಸ್​ನಲ್ಲಿ ಇದ್ದಾಗ ಟೀಚರ್ ಬಂದು ನನಗೆ ಪ್ರಶ್ನೆ ಕೇಳಿದರು. ನನಗೆ ಉತ್ತರ ಬರಲ್ಲ ಎಂದು ಅವರಿಗೆ ಗೊತ್ತಿತ್ತು. ಆದರೂ ನನಗೆ ಪ್ರಶ್ನೆ ಮಾಡುತ್ತಿದ್ದರು. ಮೊದಲ ಎರಡು ದಿನ ಬೈಸಿಕೊಂಡೆ. ಆ ಬಳಿಕ ಮೂರನೇ ದಿನ ನಾನೇ ಬೆಂಚ್ ಮೇಲೆ ಎದ್ದು ನಿಂತುಕೊಂಡೆ. ಅಂದು ನಿಂತವನು ಇಂದು ಇಲ್ಲಿ ಬಂದು ನಿಂತುಕೊಂಡಿದ್ದೇನೆ’ ಎಂದಿದ್ದರು.  

ಗುಳಿಕೆನ್ನೆ ಚೆಲುವೆ ರಚಿತಾ ಮದ್ವೆ ಫಿಕ್ಸ್​ ಆಗೋಯ್ತು? ರವಿಮಾಮಾ ಮಾತಿಗೆ ಹುಡುಗರ ಹಾರ್ಟ್​ ಬ್ರೇಕಾಗೋಯ್ತು!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!