ರಾಷ್ಟ್ರ ರಾಜಧಾನಿಗೆ ಬಂದ ರಾಷ್ಟ್ರ ಪಕ್ಷಿ: ನವಿಲು ನೋಡಿ ಬೆರಗಾದ ದೆಹಲಿಗರು

Published : Jun 06, 2022, 12:16 PM IST
ರಾಷ್ಟ್ರ ರಾಜಧಾನಿಗೆ ಬಂದ ರಾಷ್ಟ್ರ ಪಕ್ಷಿ: ನವಿಲು ನೋಡಿ ಬೆರಗಾದ ದೆಹಲಿಗರು

ಸಾರಾಂಶ

ರಾಷ್ಟ್ರ ಪಕ್ಷಿಗಳು ರಾಷ್ಟ್ರ ರಾಜಧಾನಿಯಲ್ಲಿ ಕಾಣಿಸಿಕೊಳ್ಳುವುದು ಬಲು ಅಪರೂಪ. ಅದಾಗ್ಯೂ ಸುಂದರವಾದ ಗಂಡು ನವಿಲೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಣಿಸಿಕೊಂಡು ನೋಡುಗರಿಗೆ ಅಚ್ಚರಿ ಮೂಡಿಸಿದೆ.

ರಾಷ್ಟ್ರ ಪಕ್ಷಿಗಳು ರಾಷ್ಟ್ರ ರಾಜಧಾನಿಯಲ್ಲಿ ಕಾಣಿಸಿಕೊಳ್ಳುವುದು ಬಲು ಅಪರೂಪ. ಅದಾಗ್ಯೂ ಸುಂದರವಾದ ಗಂಡು ನವಿಲೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಣಿಸಿಕೊಂಡು ನೋಡುಗರಿಗೆ ಅಚ್ಚರಿ ಮೂಡಿಸಿದೆ. ಕಟ್ಟಡಗಳ ಮಧ್ಯೆ ಈ ರಾಷ್ಟ್ರ ಪಕ್ಷಿ ಮನೆಯ ಒಂದು ಬಾಲ್ಕನಿಯಿಂದ ಮತ್ತೊಂದು ಬಾಲ್ಕನಿಗೆ ಹಾರುತ್ತಿದೆ. ನಗರದಲ್ಲಿ ಅಪರೂಪವಾಗಿ ಕಾಣ ಸಿಕ್ಕ ನವಿಲನ್ನು ನೋಡಿ ಜನ ಅಚ್ಚರಿಗೊಂಡಿದ್ದಾರೆ.

ಹಲವು ಬಣ್ಣಗಳ ಸುಂದರವಾದ ಗರಿಗಳನ್ನು ಗೆದರಿ ನವಿಲು (peacock) ಒಂದೆಡೆಯಿಂದ ಮತ್ತೊಂದೆಡೆಗೆ ಹಾರಿ ಬಾಲ್ಕನಿಗೆ ಬಂದು ಕೂರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. safarnamabynidhi ಎಂಬ ಇನ್ಸ್ಟಾ ಖಾತೆಯಿಂದ ವಿಡಿಯೋ ಪೋಸ್ಟ್ ಆಗಿದೆ. ವಿಡಿಯೋದ ಹಿನ್ನೆಲೆಯಲ್ಲಿ ಅಮಿತಾಬ್‌ ಬಚ್ಚನ್ (Amitabh Bachchan) ನಟನೆಯ ಸಿಲ್‌ಸಿಲಾ (Silsila) ಸಿನಿಮಾದ ಲತಾ ಮಂಗೇಶ್ಕರ್ (Lata Mangeshkar) ಹಾಗೂ ಕಿಶೋರ್ ಕುಮಾರ್ (Kishore Kumar) ಅವರು ಹಾಡಿರುವ ದೆಖಾ ಏಕ್ ಕಾಬ್‌ (Dekha Ek Khwab) ಹಾಡು ಕೇಳಿ ಬರುತ್ತಿದೆ. ಟ್ರಾವೆಲ್ ಬ್ಲಾಗರ್ ಒಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಎಂತಹ ಅಪರೂಪದ ಕ್ಷಣ ದೆಹಲಿಯಂತಹ ನಗರದಲ್ಲಿ ನವಿಲು ಈ ನವಿಲನ್ನು ನಾನು ಸುಮಾರು ಒಂದು ದಶಕದಿಂದ ನೋಡುತ್ತಿದ್ದೇನೆ. ಅವುಗಳು ತುಂಬಾ ಸೊಗಸಾಗಿವೆ ಎಂದು ಬರೆದಿದ್ದಾರೆ.

 

ಅಪರೂಪದ ಬಿಳಿ ನವಿಲು ಪತ್ತೆ : ವಿಡಿಯೋ ವೈರಲ್


ನಾನು ಕಳೆದ 10 ವರ್ಷ ಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ. ಪ್ರತಿ ವರ್ಷ ಮೇ ತಿಂಗಳ ಕೊನೆಯಲ್ಲಿ ಇಲ್ಲಿಗೆ ಬರುವ ಈ ನವಿಲು ಆಕ್ಟೋಬರ್ ವರೆಗೆ ಇಲ್ಲಿಯೇ ನೆಲೆಸಿರುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ಹೇಳಿದಂತೆ ಈ ನವಿಲು ದೆಹಲಿಯ ವಿಕಾಶ್‌ಪುರಿ ಪ್ರದೇಶದಲ್ಲಿ (Vikaspuri area)ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಇನ್ಸ್ಟಾದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

'ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಿಕ್ಕ ನವಿಲಿನ ಮೊಟ್ಟೆ'

ಕಾಡುಗಳೆಲ್ಲಾ ನಾಶವಾಗಿ ಪಟ್ಟಣಗಳು ಬೆಳೆಯುತ್ತಿರುವುದರಿಂದ ಕಾಡು ಪ್ರಾಣಿಗಳು ಪಕ್ಷಿಗಳು ಈಗ ನಗರಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷಗಳು ಕಾಡಂಚಿನ ಗ್ರಾಮಗಳಲ್ಲಿ ಸಾಮಾನ್ಯವಾಗಿದೆ. ಕಾಡು ಪ್ರಾಣಿಗಳಾದ ಆನೆ, ಚಿರತೆ ಹುಲಿಗಳು ನಗರಗಳಿಗೆ ದಾಂಗುಡಿ ಇಟ್ಟು ಸಾಕು ಪ್ರಾಣಿಗಳನ್ನು ಹೊತ್ತೊಯ್ಯುತ್ತಿರುವುದು ಬೆಳೆದ ಬೆಳೆಯನ್ನು ಹಾಳು ಮಾಡುವುದು ಸಾಮಾನ್ಯವಾಗಿ ಕೇಳಿ ಬರುತ್ತಿದೆ. 

ಪ್ರಾಣಿ ಪಕ್ಷಿಗಳ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ನಾವು ಈಗಾಗಲೇ ನೋಡಿದ್ದೇವೆ. ಮನುಷ್ಯನೊಂದಿಗೆ ಕೆಲವು ಪ್ರಾಣಿಗಳು ಅವಿನಾಭಾವ ಸಂಬಂಧವನ್ನು ಹೊಂದಿರುತ್ತವೆ. ಅದೇ ರೀತಿ ಕೆಲ ದಿನಗಳ ಹಿಂದೆ ಆನೆ ಮರಿಯೊಂದು ತನ್ನನ್ನು ನೋಡಿಕೊಳ್ಳುವಾತನ ಜೊತೆ ಮಲಗುವ ಮ್ಯಾಟ್‌ಗಾಗಿ ಜಗಳವಾಡುವ ವಿಡಿಯೋ ವೈರಲ್ ಆಗಿತ್ತು. ಆನೆಗಳು ಮನುಷ್ಯರೊಂದಿಗೆ ಸಾಕಷ್ಟು ಸ್ನೇಹಪರ ಸಂಬಂಧವನ್ನು ಹೊಂದಿರುತ್ತವೆ. ಆದಾಗ್ಯೂ ಆನೆ ಹಾಗೂ ಮಾನವ ನಡುವಿನ ಸಂಘರ್ಷಗಳು ಒಂದು ಕಡೆ ಕಾಡಂಚಿನ ಗ್ರಾಮಗಳನ್ನು ಕಾಡುತ್ತಿವೆ. ಈ ನಡುವೆ ಆನೆ ಹಾಗೂ ಮನುಷ್ಯನ ನಡುವಿನ ಸ್ನೇಹ ಬಾಂಧವ್ಯವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸುತ್ತು ಹೊಡೆಯುತ್ತಿದೆ.

ಮಲಗುವ ಹಾಸಿಗೆಗಾಗಿ ತನ್ನ ನೋಡಿಕೊಳ್ಳುವವನೊಂದಿಗೆ ಆನೆ ಮರಿ ಕಿತ್ತಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಮನಸ್ಸಿಗೆ ಮುದ ನೀಡುವಂತಿದೆ. ಭಾರತೀಯ ಅರಣ್ಯ ಅಧಿಕಾರಿ ಡಾ. ಸಾಮ್ರಾಟ್ ಗೌಡ (Samrat Gowda) ಅವರು ತಮ್ಮ ಟ್ವಿಟರ್ ಖಾತೆಯಿಂದ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ (Twitter Account) ಸಾಕಷ್ಟು ಹೃದಯಸ್ಪರ್ಶಿ ಪ್ರಾಣಿಗಳ ವೀಡಿಯೊಗಳನ್ನು ಹಂಚಿಕೊಳ್ಳುವ ಡಾ.ಗೌಡ, 'ಹೇ ಅದು ನನ್ನ ಹಾಸಿಗೆ ಎದ್ದೇಳು' ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ