ಹುಡುಗರು (Boys) ಪಾಪ ಹುಡುಗಿಯರನ್ನು (Girls) ಪಟಾಯಿಸೋಕೆ ಇನ್ನಿಲ್ಲದ ಪ್ರಯತ್ನ ಪಡ್ತಾರೆ. ಅವ್ರನ್ನು ಇಂಪ್ರೆಸ್ (Impress) ಮಾಡೋಕೆ ಏನೆಲ್ಲಾ ಸರ್ಕಸ್ ಮಾಡ್ತಾರೆ. ಆದ್ರೆ ಅದಕ್ಕೂ ಮೊದ್ಲು ಏನ್ ಮಾಡಿದ್ರೆ ಹುಡುಗೀರು ಬಲೆಗೆ ಬೀಳ್ತಾರೆ. ಹುಡುಗಿಯರಿಗೆ ಹುಡುಗರಲ್ಲಿ ಸೆಕ್ಸೀ (Sexy) ಅನಿಸೋ ವಿಚಾರಗಳು ಯಾವುವು ತಿಳ್ಕೊಳ್‌ಬೇಕಲ್ಲಾ.
ಮೀನಿನ ಹೆಜ್ಜೆ ಹಾಗೂ ಹೆಣ್ಣಿನ ಮನಸ್ಸೂ ಎರಡೂ ಕೂಡಾ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಅಂತಾರೆ. ಅದು ನಿಜಾನೇ ಬಿಡಿ. ಹೆಣ್ಣು ಏನನ್ನು ಯೋಚಿಸ್ತಾಳೆ, ಯಾವುದನ್ನು ಇಷ್ಟಪಡ್ತಾಳೆ ಎಂದು ಹುಡುಗರಿಗೆ (Boys) ಊಹಿಸಲೇ ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಕೆಲ ಹುಡುಗರು, ವರ್ಷಾನುಗಟ್ಲೆ ಹುಡುಗೀರ (Girls) ಹಿಂದೆ ಸುತ್ತಿದ್ರೂ ಏನೂ ಪ್ರಯೋಜನವಾಗಲ್ಲ. ಸುಮ್ನೆ ನಿರಾಶರಾಗಿ ಹಿಂತಿರುಗಬೇಕಾಗುತ್ತೆ. ಹುಡುಗರು ಹೀಗೆ ಹುಡುಗಿಯರನ್ನು ಇಂಪ್ರೆಸ್ ಮಾಡೋಕೆ ಪಡಬಾರದ ಪಾಡು ಪಡೋ ಬದ್ಲು, ಗರ್ಲ್ಸ್‌ಗೆ ಏನಿಷ್ಟ ಎಂಬುದನ್ನು ಮೊದ್ಲು ತಿಳ್ಕೋಬೇಕು.
ಪ್ರತಿ ಹುಡುಗಿಯರಲ್ಲೂ ಅವರ ಕನಸಿನ ರಾಜಕುಮಾರ ಹಾಗಿರಬೇಕು, ಹೀಗಿರಬೇಕು ಎನ್ನುವ ದೊಡ್ಡ ಪಟ್ಟಿಯೇ ಇರುತ್ತದೆ. ಅದರಲ್ಲೂ ಪುರುಷರ ಕೆಲವೊಂದು ಸಂಗತಿಗಳು ಹುಡುಗಿಯರಿಗೆ ಬಹಳ ಇಷ್ಟವಾಗುತ್ತದೆ. ಹಾಗೆಯೇ ಅಂತಹ ಪುರುಷರ ಕಡೆ ಬಹಳ ಬೇಗ ಆಕರ್ಷಿತರಾಗುತ್ತಾರೆ. ಮಹಿಳೆಯರಿಗೆ ಸೆಕ್ಸಿ (Sexy) ಅನಿಸುತ್ತಂತೆ ಪುರುಷರಲ್ಲಿನ (Men) ಕೆಲವು ಸಂಗತಿಗಳ ಬಗ್ಗೆ ನಾವಿಲ್ಲಿ ತಿಳಿಯೋಣ.
ರೊಮ್ಯಾಂಟಿಕ್ ಹುಡುಗರಂದ್ರೆ ಹೆಣ್ಮಕ್ಕಳಿಗೆ ಇಷ್ಟ: ಹುಡುಗಿಯರನ್ನು ಹೀಗೆ ಇಂಪ್ರೆಸ್ ಮಾಡಿ
ಪರ್ಫೆಕ್ಟ್ ಡ್ರೆಸ್ಸಿಂಗ್: ಯಾರದ್ದೇ ಗಮನವನ್ನು ತಮ್ಮತ್ತ ಸೆಳೆಯಲು ಪರಿಪೂರ್ಣವಾಗಿ ಡ್ರೆಸ್ (Dress) ಮಾಡುವುದು ತುಂಬಾ ಮುಖ್ಯ. ಯಾವಾಗಲೂ ನಾವು ಧರಿಸುವ ಡ್ರೆಸ್ ನಮ್ಮ ಹೈಟ್, ವೈಟ್‌ಗೆ ತಕ್ಕಂತೆ ಇರಬೇಕು. ಆಗಲೇ ಸಂಪೂರ್ಣ ವ್ಯಕ್ತಿತ್ವದ ಬಗ್ಗೆ ಯಾರಿಗಾದರೂ ಆಕರ್ಷಣೆ ಉಂಟಾಗುತ್ತದೆ. ಹುಡುಗರ ವಿಚಾರದಲ್ಲೂ ಇದೇ ವಿಷಯ ಮುಖ್ಯವಾಗುತ್ತದೆ. ನೀಟಾಗಿ ಐರನ್ ಮಾಡಿದ ಶರ್ಟ್-ಪ್ಯಾಂಟ್ ಧರಿಸಿದ ಪುರುಷರನ್ನು ನೋಡಿ ಹುಡುಗಿಯರು ಬೇಗ ಮರುಳಾಗುತ್ತಾರೆ. ಅದರಲ್ಲೂ ಶರ್ಟ್ ಧರಿಸಿ ಮೇಲಿನೆರಡು ಬಟನ್ ಹಾಕದಿರುವುದು, ಅಥವಾ ಶರ್ಟ್‌ನ ಸ್ಲೀವ್ಸ್ ಮೊಣಕೈ ವರೆಗೆ ಮಡಚಿಡುವ ಹುಡುಗರ ಅಭ್ಯಾಸ ಹುಡುಗಿಯರಿಗೆ ಹೆಚ್ಚು ಸೆಕ್ಸೀ ಎನಿಸುತ್ತದೆ.
ಮಾದಕ ನೋಟ: ಮಾದಕ ನೋಟ (Look) ಎಂಥವರಿಗೂ ಇಷ್ಟವಾಗುತ್ತದೆ. ಅದು ಹುಡುಗಿಯರು ನೀಡಿದರೂ ಸರಿ, ಹುಡುಗರು ನೀಡಿದರೂ ಸರಿ ಅದು ತುಂಬಾ ಸ್ಪೆಷಲ್ ಆಗಿರುತ್ತದೆ. ಅದರಲ್ಲೂ ಹುಡುಗರ ಓರೆ ನೋಟ ಹುಡುಗಿಯರಿಗೆ ತುಂಬಾ ಇಷ್ಟವಾಗುತ್ತದೆ. ಕೆಲವರ ಕಣ್ಣು ಎಷ್ಟೊಂದು ಆಕರ್ಷಕವಾಗಿರುತ್ತದೆಯೆಂದರೆ ಅದು ಯಾರನ್ನೂ ಬೇಕಾದರೂ ತನ್ನತ್ತ ಸೆಳೆಯುವಂತಿರುತ್ತದೆ. ಹುಡುಗರ ಇಂಥಾ ನೋಟಕ್ಕೆ ಹುಡುಗೀಯರು ಮರುಳಾಗಿ ಬಿಡುತ್ತಾರೆ. ಅವರ ಕಣ್ಣುಗಳ (Eyes) ಆಕರ್ಷಣೆಯಿಂದಾಗಿ ಅವರ ಪ್ರೀತಿಯಲ್ಲಿ ಬೀಳುತ್ತಾರೆ.
ಹುಡುಗರು ಯಾರೂ ಇಷ್ಟವಾಗ್ತಿಲ್ವಂತೆ ! ವಿಮಾನಾನೇ ಬಾಯ್‌ಫ್ರೆಂಡ್, ಅದನ್ನೇ ಮದ್ವೆಯಾಗ್ತೀನಿ ಅಂತಾಳೆ !
ಮುಖದಲ್ಲಿ ನಗು: ಒಬ್ಬೊಬ್ಬರ ನಗು (Smile) ಒಂದೊಂದು ರೀತಿ ಇರುತ್ತದೆ. ಕೆಲವೊಬ್ಬರು ಅತ್ಯಾಕರ್ಷಕವಾಗಿ ನಗುತ್ತಾರೆ. ಹಾಗೆಯೇ ಕೆಲವೊಬ್ಬ ಹುಡುಗರು ಗುಳಿ ಬೀಳುವಂತೆ ಸುಮದರವಾಗಿ ನಗುತ್ತಾರೆ. ಇಂಥಾ ನಗುವನ್ನು ಹುಡುಗಿಯರು ತುಂಬಾ ಇಷ್ಟ ಪಡುತ್ತಾರೆ. ಹುಡುಗರ ಇಂಥಾ ನಗುವಿಗೆ ಬೇಗ ಬಿದ್ದು ಬಿಡುತ್ತಾರೆ. ಕೆಲವರು ಮನಸ್ಸು ಬಿಚ್ಚಿ ನಕ್ಕರೆ ಇನ್ನೂ ಕೆಲವರು ಮಗುಳು ನಗುತ್ತಾರೆ. ಆ ಮುಖದಲ್ಲಿನ ಕಿರುನಗೆ ಹೆಚ್ಚಿನ ಮಹಿಳೆಯರು ಇಷ್ಟಪಡುತ್ತಾರೆ. ನಗುವು ಸಕಾರಾತ್ಮಕ ಭಾವನೆಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ಪುರುಷರ ಸಂಪೂರ್ಣ ವ್ಯಕ್ತಿತ್ವವನ್ನು ಆಕರ್ಷಕವಾಗಿ ಕಾಣಿಸುತ್ತದೆ. ಹೀಗಾಗಿ ಹುಡುಗರ ನಗು ಹುಡುಗಿಯರಿಗೆ ಸೆಕ್ಸಿ ಎನಿಸುತ್ತದೆ.
ದೇಹದಿಂದ ಬರುವ ಪರಿಮಳ: ಕೆಲವೊಂದು ಪುರುಷರು ತಮ್ಮ ದೇಹದ ಬಗ್ಗೆ, ಲುಕ್ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಾರೆ. ಅಂತಹವರು ಪರ್ಫ್ಯೂಮ್ ಹಾಕದೆ ಅಥವಾ ಬಾಡಿ ಸ್ಪ್ರೇ ಹಾಕದೆ ಮನೆಯಿಂದ ಹೊರಗೆ ಹೋಗಲ್ಲ. ಅಂತಹ ಪುರುಷರು ನಿಮ್ಮ ಬಳಿ ಬಂದಾಗ ಬಾಡಿ ಸ್ಪ್ರೇಯ ಪರಿಮಳ (Smell) ನಿಮ್ಮನ್ನು ಸೆಳೆಯಲು ಆರಂಭಿಸುತ್ತದೆ. ಅಂತಹವರ ಬಳಿ ಕುಳಿತುಕೊಳ್ಳಲು, ಮಾತನಾಡಲು ಮನಸ್ಸು ಬಯಸುತ್ತಿರುತ್ತದೆ. ಹಾಗಾಗಿ ಗುಡ್‌ಲುಕಿಂಗ್ ಜೊತೆ ಗುಡ್ ಗ್ರೂಮಿಂಗ್ ಕೂಡಾ ಮುಖ್ಯವಾಗುತ್ತದೆ.
ಸದಾ ಭುಸ್ ಗುಡುವ ಗಂಡನನ್ನು ಖುಷಿಯಾಗಿಡಲು ಇಲ್ಲಿವೆ ಟಿಪ್ಸ್
ಗಡುಸಾದ ವಾಯ್ಸ್: ಕೆಲವೊಂದು ಪುರುಷರ ವಾಯ್ಸ್ (Voice) ಗಡುಸಾಗಿ ಕೇಳಲು ಬಹಳ ಆನಂದವೆನಿಸುತ್ತದೆ. ದನಿಯಲ್ಲಿರುವ ದೃಢತೆಗೇ ಹುಡುಗಿಯರು ಬಿದ್ದು ಬಿಡುತ್ತಾರೆ. ಗಡುಸುತನವಿದ್ದ ವಾಯ್ಸ್ ಕೇಳಲೇ ಖುಷಿಯೆನಿಸುತ್ತದೆ. ಹೀಗಾಗಿ ಹುಡುಗಿಯರು ಇದನ್ನು ಸೆಕ್ಸೀ ವಾಯ್ಸ್ ಎಂದು ಪರಿಗಣಿಸುತ್ತಾರೆ. ಇಂತಹ ವಾಯ್ಸ್‌ನ್ನು ಬಹಳಷ್ಟು ಹುಡುಗಿಯರು ಇಷ್ಟಪಡುತ್ತಾರೆ. ತಮ್ಮ ಪಾರ್ಟನರ್‌ನಲ್ಲೂ ಅದೇ ಗುಣವನ್ನು ಹುಡುಕುತ್ತಾರೆ.
ಆತ್ಮವಿಶ್ವಾಸ: ಆತ್ಮವಿಶ್ವಾಸ (Confidence) ಎಲ್ಲಾ ವ್ಯಕ್ತಿತ್ವವನ್ನೂ ಪರಿಪೂರ್ಣಗೊಳಿಸುತ್ತದೆ. ಹಾಗೆಯೇ ಹುಡುಗಿಯರು ಸಹ ಹುಡುಗರಲ್ಲಿ ಆತ್ಮವಿಶ್ವಾಸವನ್ನೇ ಹುಡುಕುತ್ತಾರೆ. ಅವರು ಸಂಪೂರ್ಣ ಆತ್ಮವಿಶ್ವಾಸದಿಂದ ವರ್ತಿಸುವಾಗ ಖುಷಿಪಡುತ್ತಾರೆ. ಈ ವಿಚಾರ ಹುಡುಗಿಯರನ್ನು ತುಂಬಾ ಇಂಪ್ರೆಸ್ ಮಾಡುತ್ತದೆ. ಯಾವ ಪುರುಷರಿಗೆ ತಮ್ಮ ಮೇಲೆ ಆತ್ಮವಿಶ್ವಾಸವಿದೆಯೇ, ಯಾವುದೇ ಕೆಲಸವನ್ನು ಸಂಪೂರ್ಣ ಆತ್ಮವಿಶ್ವಾಸದಿಂದ ಮಾಡುತ್ತಾರೋ ಅಂತಹ ಪುರುಷರನ್ನು ಮಹಿಳೆಯರು ಇಷ್ಟಪಡುತ್ತಾರೆ. ಅಂತಹ ವ್ಯಕ್ತಿಗಳು ಎಲ್ಲೇ ಹೋದರೂ ಇತರರ ಗಮನವನ್ನು ತನ್ನೆಡೆ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ.
ಇನ್ಯಾಕೆ ತಡ, ಹುಡುಗೀರ ವೀಕ್‌ನೆಸ್ ಏನೂಂತ ಗೊತ್ತಾಯ್ತಲ್ಲ, ಇನ್ನೇನಿದ್ರೂ ಹುಡುಗಿಯರನ್ನು ಪಟಾಯಿಸೋದು ತುಂಬಾ ಸುಲಭ. ಅವರಿಗೆ ಸೆಕ್ಸೀ ಅನಿಸೋ ರೀತಿಯೇ ಡ್ರೆಸ್ ಮಾಡಿ, ಅದರಂತೆ ವರ್ತಿಸಿ ಸಾಕು.