ಶ್ರುತಿ ಹರಿಹರನ್‌ ಮಗುವಿನ ಫೋಟೋ ತೆಗೆದ 'Tiny Yawns' ಬಗ್ಗೆ ಇಲ್ಲಿದೆ ನೋಡಿ!

By Kannadaprabha NewsFirst Published Jan 20, 2020, 9:42 AM IST
Highlights

ಟ್ರಾವೆಲ್‌ ಫೋಟೋಗ್ರಾಫರ್‌ ಆಗಿ ಹತ್ತು ವರ್ಷ ಕೆಲಸ ಮಾಡುತ್ತಿದ್ದ ಅಶ್ವಿನಿ ನೀಥನ್‌ ಎನ್ನುವವರು ಈಗ ಬೆಂಗಳೂರಿನ ನಾಗರಬಾವಿಯಲ್ಲಿ ಟೈನಿ ಯಾನ್ಸ್‌ ಫೋಟೋಗ್ರಫಿ ಎನ್ನುವ ಸ್ಟುಡಿಯೋ ಕಟ್ಟಿದ್ದಾರೆ. ಇಲ್ಲಿ ಒಂದು ತಿಂಗಳ ಒಳಗಿನ ನ್ಯೂ ಬಾರ್ನ್‌ ಬೇಬಿಗಳ, ಗರ್ಭಿಣಿಯರ ಮುದ್ದಾದ ಫೋಟೋಶೂಟ್‌ ಮಾಡಲಾಗುತ್ತದೆ. ವಿದೇಶದಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ನ್ಯೂ ಬಾರ್ನ್‌ ಬೇಬಿ ಫೋಟೋಶೂಟ್‌ ಇದೀಗ ಬೆಂಗಳೂರಿಗೂ ಬಂದಿದ್ದು, ಅದನ್ನು ನಮ್ಮವರೇ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

ಕೆಂಡಪ್ರದಿ

ಬೆಂಗಳೂರಿನ ಅಶ್ವಿನಿ ನೀಥನ್‌ ಸಕ್ಸಸ್‌ ಕತೆ

ಇತ್ತೀಚೆಗೆ ಶ್ರುತಿ ಹರಿಹರನ್‌ ಮಗುವಿನ ಫೋಟೋಶೂಟ್‌ ಎಲ್ಲರ ಮನ ಗೆದ್ದಿತ್ತು. ಸೋಷಲ್‌ ಮೀಡಿಯಾದಲ್ಲಿ ಎಲ್ಲರೂ ಶ್ರುತಿ ಮಗುವಿಗೆ ಪ್ರೀತಿಯ ಲೈಕ್‌ ಒತ್ತಿದ್ದರು. ಏನ್‌ ಕ್ಯೂಟ್‌ ಆಗಿದೆ ಪಾಪು ಎಂದು ಮೆಚ್ಚುಗೆ ಸೂಚಿಸಿದ್ದರು. ಜೊತೆಗೆ ಫೋಟೋ ಬದಿಯಲ್ಲಿ ಇದ್ದ ಟೈನಿ ಯಾನ್ಸ್‌ ಫೋಟೋಗ್ರಫಿ ಎನ್ನುವ ವಾಟರ್‌ ಮಾರ್ಕ್ ನೋಡಿ ಏನ್‌ ಚೆಂದ ಫೋಟೋ ತೆಗೆದಿದ್ದಾರೆ ಎಂದುಕೊಂಡಿದ್ದರು. ಹೀಗೆ ಚೆಂದದ ಫೋಟೋ ತೆಗೆದಿದ್ದು ಅಶ್ವಿನಿ ನೀಥನ್‌.

ಅಶ್ವಿನಿ ನೀಥನ್‌ ಎರಡು ವರ್ಷದ ಹಿಂದೆ ಟ್ರಾವೆಲ್‌ ಫೋಟೋಗ್ರಾಫರ್‌. ಹತ್ತು ವರ್ಷಗಳ ಕಾಲ ಇದನ್ನೇ ವೃತ್ತಿಯಾಗಿಸಿಕೊಂಡು ನಾನಾ ಕಡೆ ಸುತ್ತಾಡಿ ವಿವಿಧ ರೀತಿಯ ಫೋಟೋಗಳನ್ನು ತೆಗೆದು ತಮ್ಮ ವೆಬ್‌ಸೈಟ್‌ನಲ್ಲಿ, ವಿವಿಧ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಪ್ರಕಟಿಸುತ್ತಿದ್ದರು. ತಾವಾಯಿತು ತಮ್ಮ ಹವ್ಯಾಸವಾಗಿಯಿತು ಎಂದುಕೊಂಡಿರುವಾಗ ಒಂದು ಪ್ರೀತಿಯ ಕೋರಿಕೆ ಅವರನ್ನು ನ್ಯೂ ಬಾರ್ನ್‌ ಬೇಬಿ ಫೋಟೋಗ್ರಫಿ ಕ್ಷೇತ್ರಕ್ಕೆ ಎಳೆದು ತರುತ್ತದೆ.

ಗ್ರಹಣಕ್ಕೆ ಡೋಂಟ್ ಕೇರ್, ಪ್ರಿ ವೆಡ್ಡಿಂಗ್ ಪೋಟೋ ಶೂಟ್ ಬಲು ಜೋರು!

ಮೊದಲ ಪ್ರಯತ್ನವೇ ಸಕ್ಸಸ್‌

ಅಶ್ವಿನಿ ಅವರು ಚೆನ್ನಾಗಿ ಫೋಟೋ ತೆಗೆಯುತ್ತಾರೆ ಎಂದು ತಿಳಿದಿದ್ದ ಪರಿಚಿತರೊಬ್ಬರು ತಮ್ಮ ನವಜಾತ ಶಿಶುವಿನ ಫೋಟೋ ತೆಗೆದುಕೊಡುವಂತೆ ಕೋರಿಕೆ ಸಲ್ಲಿಸುತ್ತಾರೆ. ಅವರ ಪ್ರೀತಿಗೆ ಇಲ್ಲ ಎನ್ನದೇ ಫೋಟೋ ತೆಗೆದರೆ ಅದು ಮನಸ್ಸಿಗೆ ಒಪ್ಪುವ ರೀತಿ ಬರುತ್ತದೆ. ಇದನ್ನು ನೋಡಿದ ಸ್ನೇಹಿತರು ತಮ್ಮ ಪುಟ್ಟಪುಟ್ಟಮಕ್ಕಳ ಫೋಟೋವನ್ನೂ ತೆಗೆಯಲು ಬೇಡಿಕೆ ಇಡುತ್ತಾರೆ. ಅಲ್ಲಿಂದ ಶುರುವಾಗಿದ್ದು ಅಶ್ವಿನಿ ಅವರ ಜರ್ನಿ. ‘ಪರಿಚಿತರೆಲ್ಲರೂ ಫೋಟೋ ತೆಗೆಯಲು ಕೇಳಿಕೊಂಡಾಗ ಬೇಬಿ ಫೋಟೋಶೂಟ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕುತ್ತಿದೆ ಎನ್ನುವುದು ಗೊತ್ತಾಗಿ ನಾನು ಯಾಕೆ ಇದೇ ಕ್ಷೇತ್ರದಲ್ಲಿ ಇನ್ನು ಮುಂದೆ ತೊಡಗಿಸಿಕೊಳ್ಳಬಾರದು ಎಂದುಕೊಂಡೆ. ಕಳೆದ ಎರಡು ವರ್ಷದಿಂದ ಇದೇ ಕ್ಷೇತ್ರದಲ್ಲಿ ಮುಂದುವರೆದೆ. ಅದಕ್ಕೆ ಬೇಕಾದ ಒಂದಷ್ಟುತರಬೇತಿಯನ್ನೂ ಪಡೆದುಕೊಂಡೆ’ ಎನ್ನುವ ಅಶ್ವಿನಿ ಇಲ್ಲಿಗೆ ಬಂದಿದ್ದು ಆಕಸ್ಮಿಕವೇ ಆದರೂ ತೆಗೆಯುತ್ತಿರುವ ಫೋಟೋಗಳು ಮಾತ್ರ ತುಂಬಾ ಆಕರ್ಷಕ.

ಕೆಸರು ಗದ್ದೆಗೆ ಇಳಿದ ನವಜೋಡಿ, ಇದು ಪ್ರೀ ವೆಡ್ಡಿಂಗ್ ಪೋಟೋಶೂಟಾ... ನೋಡಿ!

ಅಗತ್ಯವಾದ ಕೋರ್ಸ್‌ ಮಾಡಿದೆ

‘ನ್ಯೂಬಾರ್ನ್‌ ಬೇಬಿ ಫೋಟೋಶೂಟ್‌ ಬೇರೆ ಫೋಟೋಗಳನ್ನು ತೆಗೆದಂತಲ್ಲ. ಇದಕ್ಕೆ ಸಾಕಷ್ಟುಪೂರ್ವ ತಯಾರಿ ಬೇಕು. ಲೈಟಿಂಗ್‌ ಹೇಗಿರಬೇಕು, ಯಾವ ಸಮಯದಲ್ಲಿ ಮಕ್ಕಳ ಫೋಟೋಗಳು ಚೆನ್ನಾಗಿ ಬರುತ್ತವೆ, ಆ್ಯಂಗಲ್‌ ಹೇಗಿರಬೇಕು ಎಂಬೆಲ್ಲವೂ ನಾವು ತೆಗೆಯುವ ಫೋಟೋ ಮೇಲೆ ಪ್ರಭಾವ ಬೀರುತ್ತವೆ. ಇದೆಲ್ಲವನ್ನೂ ನಾನು ತಿಳಿಯಬೇಕಿತ್ತು. ನಮ್ಮ ದೇಶದಲ್ಲಿ ಈ ರೀತಿಯ ಕಾನ್ಸೆಪ್ಟ್‌ ತುಂಬಾ ಹೊಸದು. ಯಾರಿಗೂ ಸರಿಯಾದ ಮಾಹಿತಿ ಇಲ್ಲ. ಹೀಗಿರುವಾಗ ನಾನು ಆನ್‌ಲೈನ್‌ ಕೋರ್ಸ್‌ಗಳ ಮೊರೆ ಹೋದೆ. ವಿದೇಶಗಳಲ್ಲಿ ನ್ಯೂ ಬಾರ್ನ್‌ ಬೇಬಿ ಫೋಟೋಶೂಟ್‌ ತುಂಬಾ ಮನ್ನಣೆ ಗಳಿಸಿದೆ. ಅಲ್ಲಿನ ಪ್ರಸಿದ್ಧ ಇಂಟರ್‌ನ್ಯಾಷನಲ್‌ ಫೋಟೋಗ್ರಾಫ​ರ್‍ಸ್ ನಡೆಸುತ್ತಿದ್ದ ಆನ್‌ಲೈನ್‌ ಕೋರ್ಸ್‌ಗಳಿಗೆ ಸೇರಿದೆ. ಅವರ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ಕೊಂಡುಕೊಂಡು ನೋಡಿದೆ. ಒಂದಷ್ಟುಕಾನ್ಫಿಡೆನ್ಸ್‌ ಬಂದಮೇಲೆ ನನ್ನ ಮನೆಯಲ್ಲೇ ಪುಟ್ಟಹೋಂ ಸ್ಟುಡಿಯೋ ರೀತಿ ಕೆಲಸ ಆರಂಭಿಸಿ ಇದೀಗ ನಾಗರಭಾವಿಯಲ್ಲಿ ವ್ಯವಸ್ಥಿತ ಸ್ಟುಡಿಯೋ ಮಾಡಿಕೊಂಡಿದ್ದೇನೆ’ ಎನ್ನುವ ಅಶ್ವಿನಿ ಇದುವರೆಗೂ ಸುಮಾರು ಐವತ್ತಕ್ಕೂ ಹೆಚ್ಚು ನ್ಯೂ ಬಾರ್ನ್‌ ಬೇಬಿಗಳ ಫೋಟೋಶೂಟ್‌ ಮಾಡಿದ್ದಾರೆ. ಜೊತೆಗೆ ಪ್ರೆಗ್ನೆನ್ಸಿ ಫೋಟೋಶೂಟ್‌ ಕೂಡ.

ನ್ಯೂ ಬಾರ್ನ್‌ ಬೇಬಿಗಳೇ ಯಾಕೆ!

ಮಗು ಹುಟ್ಟಿದ ಒಂದು ತಿಂಗಳ ಒಳಗೆ ಮಾತ್ರ ಫೋಟೋಶೂಟ್‌ ಮಾಡುವ ಕಲ್ಪನೆ ಇವರದ್ದು. ಅದಕ್ಕಾಗಿಯೇ ಇದನ್ನು ನ್ಯೂ ಬಾರ್ನ್‌ ಬೇಬಿ ಫೋಟೋಶೂಟ್‌ ಎನ್ನುವುದು. ಅರೆ ಯಾಕೆ ಹುಟ್ಟಿದ ಒಂದು ತಿಂಗಳ ಒಳಗೇ ಫೋಟೋಶೂಟ್‌ ಮಾಡಿಸಬೇಕು, ಎರಡು ತಿಂಗಳು, ಮೂರು ತಿಂಗಳು ಆದರೆ ಸಮಸ್ಯೆ ಏನು ಎನ್ನುವ ಪ್ರಶ್ನೆ ಹುಟ್ಟಬಹುದು. ಅದಕ್ಕೆ ಅಶ್ವಿನಿ ಅವರು ಕೊಡುವ ಉತ್ತರ ಇಲ್ಲಿದೆ. ‘ವೈಜ್ಞಾನಿಕವಾಗಿ ನೋಡಿದಾಗ ಹುಟ್ಟಿದ ಮಗುವಿನ ಬೆಳವಣಿಗೆ ಒಂದು ತಿಂಗಳ ನಂತರ ವೇಗ ಪಡೆದುಕೊಳ್ಳುತ್ತದೆ. ಜೊತೆಗೆ ಒಂದು ತಿಂಗಳ ನಂತರದ ಮಗುವಿನ ಚಟುವಟಿಕೆ ಹೆಚ್ಚಿರುತ್ತದೆ. ಕೈ ಕಾಲು ಅಲುಗಾಡಿಸುವುದು, ಅತ್ತಿತ್ತ ನೋಡುವುದೆಲ್ಲವೂ ಇರುತ್ತದೆ. ಆದರೆ ಒಂದು ತಿಂಗಳ ಒಳಗಿನ ಮಗು ಒಂದು ರೀತಿ ಧ್ಯಾನಸ್ಥ ಸ್ಥಿತಿಯಲ್ಲಿ ಇರುತ್ತದೆ. ಅದು ನಿದ್ದೆಗೆ ಜಾರುವಾಗಿ ಮುಖದಲ್ಲಿ ಒಂದು ಶಾಂತವಾದ ನಗು ಇರುತ್ತದೆ. ಕಣ್ಣು ಮುಚ್ಚಿ ಮಲಗಿದಾಗ ಮಗುವಿನ ಮುಖ ಮುದ್ದಾದ ಹೂವಿನಂತೆ ಕಾಣುತ್ತದೆ. ಹಾಗಾಗಿ ಒಂದು ತಿಂಗಳ ಒಳಗಿನ ಮಗುವಿನ ಫೋಟೋಶೂಟ್‌ ಮಾಡುವುದಕ್ಕೆ ನ್ಯೂ ಬಾರ್ನ್‌ ಬೇಬಿ ಫೋಟೋಶೂಟ್‌ ಎನ್ನುತ್ತಾರೆ’.

ವಿಶ್ವದ ಬೆಸ್ಟ್ ಪತಿರಾಯ: ಪತ್ನಿಗಾಗಿ ತನ್ನದೇ Maternity Photoshoot ಮಾಡಿಸಲು ಮುಂದಾದ!

ಅನುಭವ ಇದ್ದಿದ್ದರಿಂದ ಕಷ್ಟವೆನಿಸಲಿಲ್ಲ

ನ್ಯೂ ಬಾರ್ನ್‌ ಬೇಬಿ ಫೋಟೋಶೂಟ್‌ ಸವಾಲಿನ ಕೆಲಸ. ಪುಟ್ಟಮಕ್ಕಳನ್ನು ತುಂಬಾ ಕೇರ್‌ ಮಾಡಿ ಫೋಟೋ ತೆಗೆಯಬೇಕು. ಇದರಲ್ಲಿ ಅಶ್ವಿನಿ ಸಿದ್ಧಹಸ್ತರು. ‘ನಾನು ಒಂದು ಮಗುವಿನ ತಾಯಿ. ನನ್ನ ಮಗನನ್ನು ನಾನೇ ಹಾರೈಕೆ ಮಾಡಿದ್ದೇನೆ. ಹಾಗಾಗಿ ಪುಟ್ಟಮಕ್ಕಳನ್ನು ಎಷ್ಟುಸೂಕ್ಷ್ಮವಾಗಿ ನೋಡಿಕೊಳ್ಳಬೇಕು ಎನ್ನುವ ಅನುಭವ ನನಗೆ ಇತ್ತು. ಜೊತೆಗೆ ಆನ್‌ಲೈನ್‌ನಲ್ಲೂ ಒಂದಷ್ಟುತಿಳಿದುಕೊಂಡೆ’ ಎನ್ನುವ ಅಶ್ವಿನಿ ಅವರು ಮಕ್ಕಳ ಫೋಟೋ ತೆಗೆಯುವಾಗ ಸಾಕಷ್ಟುಎಚ್ಚರಿಕೆ ವಹಿಸುತ್ತಾರೆ. ‘ಲೈಟಿಂಗ್‌ ತುಂಬಾ ಸಾಫ್ಟ್‌ ಆಗಿರಬೇಕು. ಮಕ್ಕಳ ಮುಖಕ್ಕೆ ನೇರವಾದ ಲೈಟ್‌ ಬೀಳಬಾರದು. ಅವರಿಗೆ ತುಂಬಾ ಮೆತ್ತನೆಯ ಹೊದಿಕೆಗಳನ್ನು ತೊಡಿಸಬೇಕು. ಚೆಂದದ ಫ್ರೇಮ್‌ ಕ್ರಿಯೇಟ್‌ ಮಾಡಿ ಅದರೊಳಗೆ ಮಗುವನ್ನು ಸೇರಿಸಿ ಮೂವ್‌ಮೆಂಟ್‌ ಕ್ಯಾಪ್ಚರ್‌ ಮಾಡಬೇಕು. ಜೊತೆಗೆ ಬೇರೆ ಬೇರೆ ರೀತಿಯ ಫೀಲ್‌ ಬರುವ ಹಾಗೆಯೂ ಫೋಟೋ ತೆಗೆಯಬೇಕು’ ಎನ್ನುವ ಅಶ್ವಿನಿ ಅವರು ತಮ್ಮ ಬಳಿ ಸಾಕಷ್ಟುವೆರೈಟಿ ಡಿಸೈನ್‌ ಕಾನ್ಸೆಪ್ಟ್‌ಗಳನ್ನು ಇಟ್ಟುಕೊಂಡಿದ್ದಾರೆ.

ಇದು ಸೃಜನಾತ್ಮಕ ಕೆಲಸ

ಮಕ್ಕಳ ಫೋಟೋವನ್ನು ಚೆಂದವಾಗಿ ತೆಗೆಯುವುದು ತುಂಬಾ ಕ್ರಿಯೇಟಿವ್‌ ಆದ ಕೆಲಸ. ಇದಕ್ಕೆ ಸಾಕಷ್ಟುತಾಳ್ಮೆ ಬೇಕು. ಭಿನ್ನವಾಗಿ ಯೋಚಿಸುವ ಗುಣ ಬೇಕು. ಪೋಷಕರ ಇಷ್ಟಕ್ಕೆ, ಅವರ ಕನಸಿಗೆ ತಕ್ಕಂತೆ ಫೋಟೋಗಳು ಬರಬೇಕು. ಅದಕ್ಕಿಂತ ಹೆಚ್ಚಾಗಿ ಒಂದಿಡೀ ಕುಟುಂಬದ ಕನಸಾದ ಆ ಪುಟ್ಟಮಗುವಿನ ಚೆಂದವನ್ನು ಶಾಶ್ವತವಾಗಿ ಉಳಿಯುವಂತೆ ಮಾಡಬೇಕು. ಇಷ್ಟೆಲ್ಲಾ ಸವಾಲುಗಳನ್ನು ಎದುರಿಸಲು ಅಶ್ವಿನಿ ಅವರು ಸಾಕಷ್ಟುತಯಾರಿ ಮಾಡಿಕೊಂಡಿದ್ದಾರೆ. ವಿವಿಧ ಬಣ್ಣಗಳು, ವಿವಿಧ ಡಿಸೈನ್‌ಗಳು, ಪೋಷಕರ ಅಭಿರುಚಿಗೆ ತಕ್ಕಂತೆ ಹಿನ್ನೆಲೆ ಸೆಟ್‌ ಮಾಡಿ ಫೋಟೋಶೂಟ್‌ ಮಾಡುವ ಕಲೆ ಅವರಿಗೆ ಸಿದ್ಧಿಯಾಗಿದೆ. ಇದೇ ಕಾರಣಕ್ಕೆ ಇಂದು ಅವರ ಟೈನಿ ಯಾನ್ಸ್‌ (ಪುಟ್ಟಆಕಳಿಕೆ) ಫೋಟೋಗ್ರಫಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು.

ಪತ್ನಿಯನ್ನು ಕಾಡಿದ ಕ್ಯಾನ್ಸರ್: ಫೋಟೋ ಶೂಟ್ ನೋಡಿದವರೆಲ್ಲಾ ಅತ್ತೇ ಬಿಟ್ರು!

ಚೆಂದದ ಫೋಟೋಸ್‌ ನೋಡಿ: Tiny Yawns Photography 

click me!