ಡಸ್ಟ್ ಬಿನ್‌ನಲ್ಲಿ ಸಿಕ್ಕ ಆ ಹಾಳೆಯಲ್ಲಿ ಒಂದು ಪ್ರೀತಿ ಕತೆ ಇತ್ತು!

By Suvarna News  |  First Published Jan 17, 2020, 2:55 PM IST

ಮಂಗಟ್ಟೆಗಳನ್ನು ನಾನು ಬಹಳ ಸಲ ನೋಡಿದ್ದೀನಿ, ಆದರೆ ನೀನು ಹೇಳಿದ ಮೇಲೆ ಅವು ಜಗತ್ತಿನ ಅತಿ ಸುಂದರ ಹಕ್ಕಿಗಳ ಹಾಗೆ ಕಂಡವು. ರಾಫ್ಟಿಂಗ್ ಮಾಡುವಾಗಲೂ ನೀನು ನನ್ನ ಹತ್ರವೇ ಇದ್ದೆ, ಸುಳಿಯೊಳಗೆ ನಮ್ಮ ಬೋಟು ಗಿರಗಿರ ತಿರುಗುವಾಗ ಕಣ್ಮುಚ್ಚಿ ಕುಳಿತದ್ದು ಕಂಡು ಮುದ್ದುಕ್ಕಿ ಬಂದಿತ್ತು. ಹಾಗೇ ತಬ್ಬಿ ನಿನ್ನ ಭಯ ಹೋಗಿಸಲಾ ಅಂತ ತೀವ್ರವಾಗಿ ಅನಿಸುತ್ತಿತ್ತು. ಆದರೆ ಕೈಗಳು ಯಾಕೋ ಸಂಕೋಚದಿಂದ ಮುಂದೆಯೇ ಬರಲಿಲ್ಲ.ನನ್ನೊಳಗೂ ಪ್ರೀತಿ ಚಿಟ್ಟೆ ಫಡಫಡಿಸಿದ್ದನ್ನು ನಿನಗೆ ಹೇಗೆ ಹೇಳಲಿ ಹುಡುಗಿ, ಆದರೆ.. ನೀನೀಗ ಹೊಸ ಹುಡುಗನ ಫ್ರೆಂಡ್ ಶಿಪ್ ಮಾಡಿದ್ದೀ.


ಟ್ರೈನ್ ಬರುವ ಅರ್ಧ ಗಂಟೆ ಮೊದಲು ರೈಲ್ವೇ ಸ್ಟೇಶನ್ನ ಫ್ಲ್ಯಾಟ್ ಫಾರ್ಮ್ನಲ್ಲಿ ಕೂತಿರೋದು ನನ್ನ ಅಭ್ಯಾಸ. ನನಗೀಗ 65ರ ಪ್ರಾಯ. ರಿಟೈರ್ಡ್ ಲೈಫು. ಮೊದಲಿನ ಹಾಗೆ ಏದುಸಿರು ಬಿಡುತ್ತಾ ಓಡೋಡಿ ಬರಲಿಕ್ಕೆ ಆಗುತ್ತಿಲ್ಲ. ನಾಲ್ಕು ಹೆಜ್ಜೆ ಬಿರುಸಿನಿಂದ ನಡೆದರೆ ಎದೆ ನೋಯಲು ಶುರುವಾಗುತ್ತದೆ. ಹಾಗಾಗಿ ರೈಲು ಬರುವ ಅರ್ಧ ಗಂಟೆ ಮೊದಲೇ ಬಂದು ಫ್ಲ್ಯಾಟ್ ಫಾರ್ಮ್ನಲ್ಲಿ ಕಾಯೋದು ರೂಢಿ. ಇದು ನನ್ನ ಖಾಸಗಿ ಸಮಯ. ಮೊಬೈಲ್ ಅನ್ನು ಭದ್ರವಾಗಿ ಬ್ಯಾಗ್ ನಲ್ಲಿಟ್ಟು ಸುತ್ತಮುತ್ತ ಕಣ್ಣು ಹಾಯಿಸುತ್ತಾ ಕೂತರೆ ಸ್ವಲ್ಪ ದೂರದಲ್ಲಿ ಎಳೆಯ ಹುಡುಗರ ಕೇಕೆ, ಹೆಂಗಸರ ಗೊಣಗಾಟ, ಫೋನ್ ನಲ್ಲಿ ಯಾರನ್ನೋ ಬಾಯಿಗೆ ಬಂದ ಹಾಗೆ ಬೈಯ್ಯುವ ಮಧ್ಯ ವಯಸ್ಕ, ಮೌನವಾಗಿ ಮುಖ ಗಂಟು ಹಾಕಿನಿಂತ ಯುವಕ.. ನನ್ನೆದುರೇ ಯಾವುದೂ ಸಿನಿಮಾ ನಡೀತಿದೆಯೇನೋ ಅನಿಸಲು ಶುರುವಾಗುತ್ತದೆ.

ಬ್ರಿಟನ್ ರಾಜಮನೆತನ ಒಡೆದಳಾ ಮೇಗನ್?

Latest Videos

undefined

ಮೊನ್ನೆಯೂ ಹಾಗೇ ಆಯ್ತು. ಕಡ್ಲೆ ಬೀಜ ಸಿಪ್ಪೆ ಬಿಡಿಸಿ ತಿನ್ನುತ್ತಾ ಈ ಎಲ್ಲ ದೃಶ್ಯಗಳನ್ನೂ ನೋಡುತ್ತಾ ಕೂತಿದ್ದೆ. ಟ್ರೈನ್ ಬರಲು ಇನ್ನೂ ಐದು ನಿಮಿಷ ಇತ್ತು. ಕಡ್ಲೆಕಾಯಿ ಸಿಪ್ಪೆಯನ್ನು ಡಸ್ಟ್ಬಿನ್ಗೆ ಹಾಕಬೇಕು ಅನ್ನುವಾಗ ಚೂರು ಚೂರಾದ ಒಂದಿಷ್ಟು ಹಾಳೆಗಳು ಕಣ್ಣಿಗೆ ಬಿದ್ದವು. ಅದರಲ್ಲಿ ಮೋಡಿಯ ಕೈ ಬರಹವಿತ್ತು. ಉಳಿದಂತೆ ಡಸ್ಟ್ಬಿನ್ ಖಾಲಿ. ಆದರೆ ಅದರ ಸುತ್ತಮುತ್ತ ಕಸ ತುಂಬಿತ್ತು. ಡಸ್ಟ್ ಬಿನ್ ಒಳಗಿನ ಧೂಳು ಕೈಗೆ ಹಿಡಿಯದ ಹಾಗೆ ನಾಜೂಕಾಗಿ ಆ ಹಾಳೆ ಎತ್ತಿಕೊಂಡೆ. ಡಿಲ್ಲಿ ತಲುಪಲು ಬಹಳ ಟೈಮ್ ಇದೆ, ಸುಮ್ನೆ ಟೈಮ್ ಪಾಸ್ ಆಗುತ್ತೆ ಅಂತ ಅತ್ತಿತ್ತ ನೋಡಿ ಚೀಟಿಯನ್ನು ಜೇಬಿಗಿಳಿಸಿದೆ. ಒಳಗೊಳಗೇ ಆಶ್ಚರ್ಯವೂ ಆಯ್ತು, ಈ ಮೊಬೈಲ್ ಜಮಾನಾದಲ್ಲಿ ಕೈ ಬರಹದಲ್ಲಿ ಬರೆಯುವವರೂ ಇದ್ದಾರಲ್ಲ..

ಸೀಟಿ ಊದುತ್ತಾ ಬಂದ ಆ ಕೆಂಪು ರೈಲಿನಲ್ಲಿ ನನ್ನ ಸೀಟು ಹುಡುಕಿ ಕೂತು ಉಸಿರೆಳೆದುಕೊಂಡಾಗ ನೆಮ್ಮದಿ. ಜೇಬಿನಲ್ಲಿ ಭದ್ರವಾಗಿದ್ದ ಪತ್ರವನ್ನು ಒಮ್ಮೆ ಮುಟ್ಟಿ ನೋಡಿಕೊಂಡೆ. ಅತ್ತಿತ್ತ ನೋಡಿ ಯಾರೂ ತನ್ನನ್ನು ಗಮನಿಸುತ್ತಿಲ್ಲ ಅನ್ನೋದು ಕನ್‌ಫರ್ಮ್ ಆದ ಮೇಲೆ ಆ ಚೂರುಗಳನ್ನೆಲ್ಲ ಜೋಡಿಸಲಾರಂಭಿಸಿದೆ. ಚಿಕ್ಕ ವಯಸ್ಸಿನಲ್ಲಿ ಈ ಥರದ ಅಕ್ಷರ ಜೋಡಿಸುವ ಆಟ ಆಡುತ್ತಿದ್ದದ್ದು ನೆನಪಾಗಿ ಮನಸೇಕೋ ಆರ್ದ್ರವಾಯಿತು.

*

ನೀನೊಂದು ಕಡಲಿನ ಧ್ಯಾನ, ನಾ ಹೇಗೆ ಬೆರೆಯಲಿ ನಿನ್ನ..

ನಿಮಿಷಾ,

ಇದು ನಿನಗೆ ನನ್ನ ಕೊನೆಯ ಪತ್ರ. ಈ ಕಾಲದಲ್ಲೂ ಲೆಟರ್ ಬರೀತಿಯಲ್ಲೋ ಎಮೋಶನಲ್ ಫೂಲ್ ಅಂತ ನೀನಿನ್ನು ತಮಾಷೆ ಮಾಡೋ ಗೋಜಿಲ್ಲ. ನಾನೂ ಅದಕ್ಕೆ ಬೇಜಾರು ಮಾಡಿಕೊಂಡು ಮೂಡ್ ಆಫ್ ಆಗುವ ಚಾನ್ಸ್ ಇರಲ್ಲ. ಅಷ್ಟಕ್ಕೂ ಈ ಪತ್ರವೂ ನಿನ್ನ ಕೈಗೆ ಸಿಗಲ್ಲ ಬಿಡು. ಆದರೆ ನನ್ನ ಒಳಗೆ ಒಂದು ಸಮಾಧಾನ ಇರುತ್ತೆ, ಈ ಕಾಗದ, ಈ ಇಂಕು ನನ್ನ ಭಾವನೆಗಳನ್ನು ಲೇವಡಿ ಮಾಡಿ ನಗಲ್ಲ. ನನ್ನೊಳಗಿನ ದುಃಖವನ್ನು ಹಂಚಿಕೊಂಡು ಸಮಾಧಾನ ಮಾಡುತ್ತೆ.

ಯಾಕೋ ಈ ಲೆಟರ್ ಮುಂದೆನೇ ಹೋಗ್ತಿಲ್ಲ. ಏನೋ ಬರೀಬೇಕು ಅಂದುಕೊಂಡೆ, ಬಾಯಿಕಟ್ಟಿ ಕಣ್ಣೀರು ಬರ್ತಿದೆ. ನಿಜ ಹೇಳು ನಿಮಿಷಾ, ನಿನಗೆ ನನ್ನ ಪ್ರೀತಿ ಅರ್ಥನೇ ಆಗಿಲ್ವಾ, ಪ್ರತಿಯೊಂದನ್ನೂ ನಿನಗೆ ಬಾಯಿಬಿಟ್ಟೇ ಹೇಳ್ಬೇಕಾ. ಅವತ್ತು ದಾಂಡೇಲಿಯಲ್ಲಿ ಹಾರ್ನ್‌ಬಿಲ್ ಹಕ್ಕಿಗಳನ್ನು ನೋಡುತ್ತಾ ಅರಳಿದ ನಿನ್ನ ಕಣ್ಣುಗಳೇ ನೆನಪಾಗ್ತಿವೆ. ಬಹುಶಃ ನಾನು ನಿನಗೆ ಫಿದಾ ಆದ ಗಳಿಗೆ ಅದೇ ಇರ್ಬೇಕು. ಉಳಿದೆಲ್ಲ ಫ್ರೆಂಡ್ಸ್ ಬಿಟ್ಟು ನನ್ನ ಹತ್ರ ಬಂತು ಕೂತೆ, ನನ್ನ ಕೈಯನ್ನು ಅದಮಿ, ಏನ್ ಚಂದ ಅಲ್ಲಾ ಅಂದೆ. ಆಗ ಉಗುಳು ನುಂಗಿ ಪೆಚ್ಚಾಗಿ ನಗೋದಷ್ಟೇ ಆಗಿದ್ದು. ನಿನ್ನ ಕಣ್ಣಿಗೆ ಅಷ್ಟು ಚೆಂದ ಕಂಡ ಆ ಮಂಗಟ್ಟೆಗಳನ್ನು ನಾನು ಬಹಳ ಸಲ ನೋಡಿದ್ದೀನಿ, ಆದರೆ ನೀನು ಹೇಳಿದ ಮೇಲೆ ಅವು ಜಗತ್ತಿನ ಅತಿ ಸುಂದರ ಹಕ್ಕಿಗಳ ಹಾಗೆ ಕಂಡವು. ರಾಫ್ಟಿಂಗ್ ಮಾಡುವಾಗಲೂ ನೀನು ನನ್ನ ಹತ್ರವೇ ಇದ್ದೆ, ಸುಳಿಯೊಳಗೆ ನಮ್ಮ ಬೋಟು ಗಿರಗಿರ ತಿರುಗುವಾಗ ಕಣ್ಮುಚ್ಚಿ ಕುಳಿತದ್ದು ಕಂಡು ಮುದ್ದುಕ್ಕಿ ಬಂದಿತ್ತು. ಹಾಗೇ ತಬ್ಬಿ ನಿನ್ನ ಭಯ ಹೋಗಿಸಲಾ ಅಂತ ತೀವ್ರವಾಗಿ ಅನಿಸುತ್ತಿತ್ತು. ಆದರೆ ಕೈಗಳು ಯಾಕೋ ಸಂಕೋಚದಿಂದ ಮುಂದೆಯೇ ಬರಲಿಲ್ಲ. ಬೋಟ್ ಕಲ್ಲಿಗೆ ತಾಗಿ ಗಿರಗಿರ ತಿರುಗಿತು, ನೀನು ನನಗೆ ಅಂಟಿ ಕೂತೆ. ನನ್ನ ಹೃದಯವೇ ಬಾಯಿಗೆ ಬಂದ ಗಳಿಗೆ ಅದು.

ಅವತ್ತಿನ ನಿನ್ನ ವರ್ತನೆ ನನ್ನ ಪ್ರೀತಿ ಬಯಸೋ ಹಾಗಿತ್ತು. ಇಷ್ಟೆಲ್ಲ ಮಾಡರ್ನ್ ಆಗಿದ್ದರೂ ನನಗೇನೂ ಮಾಡಲಾಗಲಿಲ್ಲ. ಅಲ್ಲಿಂದ ಬಂದ ಮೇಲೆ ನೀನು ನನ್ನನ್ನು ಆವಾಯ್ಡ್ ಮಾಡತೊಡಗಿದೆ. ಅವನೊಬ್ಬ ಎಮೋಶನಲ್ ಫೂಲ್ ಅಂತ ನನ್ನ ಗೆಳೆಯರ ಹತ್ರವೇ ಗೇಲಿ ಮಾಡೋದೋ ಗೊತ್ತಾಯ್ತು. ಆದರೆ ನನ್ನೊಳಗೂ ಪ್ರೀತಿ ಚಿಟ್ಟೆ ಫಡಫಡಿಸಿದ್ದನ್ನು ನಿನಗೆ ಹೇಗೆ ಹೇಳಲಿ ಹುಡುಗಿ, ಆದರೆ.. ನೀನೀಗ ಹೊಸ ಹುಡುಗನ ಫ್ರೆಂಡ್ ಶಿಪ್ ಮಾಡಿದ್ದೀ. ಅವನ ಜೊತೆಗೇ ವೀಕೆಂಡ್ ಡ್ರೈವ್ ಹೋಗುತ್ತೀ. ಅಷ್ಟೇ ಅಲ್ಲ,

White-Black ಜೋಡಿ ಫುಲ್ ಟ್ರೋಲ್‌; ನೀವ್ ಕೇಳಿ ಇವ್ರ ಲವ್‌ ಸ್ಟೋರಿ!...

ಹಿಂದಿನವರು ವಿಂಡೋ ತೆರೆದಿರಬೇಕು, ಜೋರಾಗಿ ಬೀಸಿದ ಗಾಳಿಗೆ ನನ್ನ ತೊಡೆಯ ಮೇಲಿದ್ದ ಆ ಹಾಳೆ ಹಾರಿ ಹೋಯ್ತು. ಹೆಕ್ಕಲು ಎದ್ದೆ. ರೈಲಿನ ವೇಗಕ್ಕೆ ಅವು ಆಗಲೇ ಐದಾರು ಕಿಮೀ ಹಿಂದೆ ಬಿದ್ದಿರಬೇಕು, ಆ ಹುಡುಗನ ಹಾಗೇ..

click me!