ಗಂಡಸರು ಹೀಗ್ ಹೇಳ್ತಾರೆ ಅಂದ್ರೆ ನಿಮ್ಮ ಮೇಲಿದೆ ಕಾಳಜಿ ಎಂದರ್ಥ!

By Suvarna News  |  First Published Feb 6, 2023, 5:25 PM IST

ಪುರುಷರ ಮನಸ್ಸು ಅರಿಯಲು ಸಾಧ್ಯವಿಲ್ಲ. ಭಾವನೆಗಳಿಗೆ ಆಣೆಕಟ್ಟು ಕಟ್ಟುವಲ್ಲಿ ಅವರು ಮುಂದಿರುತ್ತಾರೆ. ಎಷ್ಟೇ ಖುಷಿಯಾದ್ರೂ, ಎಷ್ಟೇ ನೋವಾದ್ರೂ ತೋರಿಸದ ಪುರುಷರ ಬಾಯಿಂದ್ಲೂ ಅನೇಕ ಬಾರಿ ಕಾಳಜಿ ಮಾತುಗಳು ಬರುತ್ವೆ. 
 


ಮಹಿಳೆ ಮನಸ್ಸು ಅರಿಯುವುದು ಕಷ್ಟ ಎನ್ನುವ ಮಾತಿದೆ. ಆದ್ರೆ ಪುರುಷರ ಭಾವನೆಯನ್ನು ಅರ್ಧ ಮಾಡಿಕೊಳ್ಳುವುದು ಕೂಡ ಅಷ್ಟೇ ಕಷ್ಟ. ಪುರುಷರು ತಮ್ಮ ಭಾವನೆಗಳನ್ನು ಎಲ್ಲರ ಮುಂದೆ ವ್ಯಕ್ತಪಡಿಸುವುದಿಲ್ಲ. ಸಂತೋಷವಿರಲಿ, ದುಃಖವಿರಲಿ ಅವರು ಅದನ್ನು ಮುಚ್ಚಿಡುವ ಪ್ರಯತ್ನ ಮಾಡ್ತಾರೆ. ಎಲ್ಲವನ್ನೂ ಅವರು ತೆರೆದಿಡದ ಕಾರಣ ಅವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಹಾಗಾಗಿಯೇ ಅನೇಕ ಮಹಿಳೆಯರು ತಮ್ಮ ಸಂಗಾತಿ ನನ್ನನ್ನು ಪ್ರೀತಿಸುವುದಿಲ್ಲ ಎನ್ನುವ ಭಾವನೆಗೆ ಬರ್ತಾರೆ. 

ಪುರುಷ (Male) ರು ಕೂಡ ಕಾಳಜಿ ಹೊಂದಿರುತ್ತಾರೆ. ಅತಿಯಾಗಿ ಪ್ರೀತಿ (Love) ಮಾಡುವ ವ್ಯಕ್ತಿಯನ್ನು ಅವರು ಹೆಚ್ಚು ಕಾಳಜಿ ಮಾಡ್ತಾರೆ. ನನ್ನ ಸಂಗಾತಿ ನನ್ನ ಮೇಲೆ ಪ್ರೀತಿ ಹೊಂದಿದ್ದಾನೆಯೇ, ಕಾಳಜಿ ತೋರಿಸ್ತಾನೆಯೇ ಎಂಬುದನ್ನು ನೀವು ಪತ್ತೆ ಮಾಡಬಹುದು. ಸಂಗಾತಿ ಬಾಯಿಂದ ಕೆಲ ಶಬ್ಧಗಳು ಆಗಾಗ ಬರ್ತಿದ್ದರೆ ನಿಮ್ಮ ಪತಿ ನಿಮ್ಮನ್ನು ಹೆಚ್ಚು ಪ್ರೀತಿ ಮಾಡ್ತಿದ್ದಾನೆ ಎಂದೇ ಅರ್ಥ. ನಾವಿಂದು ಪುರುಷರು ಪತ್ನಿ ಮೇಲೆ ಯಾವೆಲ್ಲ ಮಾತುಗಳ ಮೂಲಕ ಪ್ರೀತಿ ತೋರಿಸ್ತಾರೆ ಎಂಬುದನ್ನು ನಿಮಗೆ ಹೇಳ್ತೆವೆ.

Tap to resize

Latest Videos

ನಾನು ನಿನ್ನನ್ನು ಮಿಸ್ ಮಾಡ್ಕೊಂಡೆ : ಈ ಮಾತನ್ನು ನಿಮ್ಮ ಮುಂದೆ ಒಬ್ಬ ವ್ಯಕ್ತಿ ಹೇಳ್ತಾನೆ ಅಂದ್ರೆ ಆತ ನಿಮ್ಮ ಮೇಲೆ ಆಳವಾದ ಭಾವನೆ ಹೊಂದಿದ್ದಾನೆ ಎಂದರ್ಥ.  ಈ ಪದದ ಅರ್ಥವನ್ನು ಅರ್ಥ ಮಾಡಿಕೊಳ್ಳದೆ ಆತ ಇದನ್ನು ನಿಮಗೆ ಹೇಳೋದಿಲ್ಲ. ಪ್ರಾಸಂಗಿಕ ಪಯಣಕ್ಕಿಂತ ಹೆಚ್ಚನ್ನು ಬಯಸುವ ವ್ಯಕ್ತಿ ಮಾತ್ರ ಈ ಮಾತು ಹೇಳ್ತಾನೆ. 

ನೀನು ನನ್ನೊಂದಿಗಿರು : ಸ್ನೇಹಿತರ ಜೊತೆಗಿರುವಾಗ ಪುರುಷರು ಸಂಗಾತಿಯನ್ನು ಬಯಸೋದಿಲ್ಲ. ಸ್ನೇಹಿತರ ಜೊತೆ ಏಕಾಂಗಿಯಾಗಿ ಎಂಜಾಯ್ ಮಾಡಲು ಬಯಸ್ತಾರೆ. ಆದ್ರೆ ನಿಮ್ಮ ಸಂಗಾತಿ ಸ್ನೇಹಿತರ ಜೊತೆಗೆ ಹೊರಗೆ ಹೋಗುವಾಗ್ಲೂ ನಿಮ್ಮನ್ನು ಕರೆದ್ರೆ ಅವರು ನಿಮ್ಮನ್ನು ಆಳವಾಗಿ ಪ್ರೀತಿಸುತ್ತಿದ್ದಾರೆ, ಸದಾ ನಿಮ್ಮೊಂದಿಗಿರಲು ಬಯಸ್ತಾರೆ ಎಂದರ್ಥ.

ಇಂದು ಏನಾಯ್ತು ಹೇಳ್ತೆನೆ ಕೇಳು : ಪುರುಷರು ತಮ್ಮ ಭಾವನೆ ಹಂಚಿಕೊಳ್ಳೋದಿಲ್ಲ. ಆದ್ರೆ ನಿಮ್ಮ ಸಂಗಾತಿ ಇಂದು ನಡೆದ ಎಲ್ಲ ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ತಿದ್ದಾರೆ ಅಂದ್ರೆ ಅದು ಒಳ್ಳೆಯ ಸಂಕೇತ. ಪ್ರತಿಯೊಂದು ವಿಷ್ಯದಲ್ಲೂ ನಿಮ್ಮನ್ನು ಸೇರಿಸಿಕೊಳ್ಳಲು ಬಯಸ್ತಾರೆ ಎಂದರ್ಥ.

ಜಗತ್ತಿನಲ್ಲಿ ಎಲ್ಲವೂ ಸುಂದರವಾಗಿಯೇ ಕಾಣಿಸುತ್ತವೆ ಈ Zodiac Signsಗೆ!

ಸಹಾಯ ಮಾಡುವ ವ್ಯಕ್ತಿ : ನಿಮಗೆ ಸಹಾಯ ಮಾಡುವ ಮಾಡಲು ಮುಂದಾಗುವ ನಿಮ್ಮ ಸಂಗಾತಿ ನಿಮ್ಮ ಮೇಲೆ ಕಾಳಜಿ ತೋರಿಸ್ತಾರೆ ಎಂದೇ ಅರ್ಥ.

ನೀನು ನನ್ನ ಕುಟುಂಬವನ್ನು ಭೇಟಿಯಾಗು : ನೀವು ಪ್ರೀತಿಸುವ ವ್ಯಕ್ತಿ ನಿಮ್ಮ ಮುಂದೆ ಈ ಮಾತು ಹೇಳಿದ್ರೆ ನಿಮ್ಮ ಬಗ್ಗೆ ಆತ ಗಂಭೀರವಾಗಿದ್ದಾನೆ ಎಂದರ್ಥ. ಪ್ರೀತಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಇಚ್ಛೆ ಆತನಿಗೆ ಎಂಬುದನ್ನು ಇದು ಸೂಚಿಸುತ್ತದೆ.

ನಿನ್ನ ಜೊತೆ ನಾನಿರ್ತೇನೆ : ನೀನು ಏನು ಬಯಸ್ತಿಯಾ ಎನ್ನುವುದು ನನಗೆ ಮುಖ್ಯವಲ್ಲ. ನಾನು ನಿನ್ನನ್ನು ಕೇರ್ ಮಾಡ್ತೇನೆ. ಅದಕ್ಕೆ ನಾನಿಲ್ಲಿದ್ದೇನೆ ಎಂಬುದನ್ನು ಪುರುಷರು ಹೇಳೋದು ಅಪರೂಪ. ಈ ಮಾತು ಹೇಳಿದರೆಂದ್ರೆ ಅವರು ನಿಮ್ಮ ಜೀವನದ ಭಾಗವಾಗಲು ಬಯಸಿದ್ದಾರೆ ಪ್ರೇಕ್ಷಕರಾಗಲಲ್ಲ ಎಂಬುದನ್ನು ಸೂಚಿಸುತ್ತದೆ. 

ನನ್ನನ್ನು ಕ್ಷಮಿಸು, ಮುಂದೆ ಸುಧಾರಿಸಿಕೊಳ್ತೆನೆ : ಪುರುಷರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡಾಗ, ಕ್ಷಮೆಯಾಚಿಸಿದಾಗ ಮತ್ತು ಸುಧಾರಿಸಲು ಪ್ರಯತ್ನಿಸಿದಾಗ ಅವರು ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ನಿಮಗೆ ತೊಂದರೆಯಾಗುವಂತಹದನ್ನು ನೀವು ಹೇಳಿದಾಗ, ಅವರು ಕೇಳುತ್ತಾರೆ.

ಅದನ್ನು ನೋಡ್ದಾಗ ನಿನ್ನ ನೆನಪಾಯ್ತು : ನಿನ್ನ ನೆನಪಾಯ್ತು ಎನ್ನುವುದು ಅವರು ನಿಮ್ಮನ್ನು ಎಷ್ಟು ಪ್ರೀತಿಸ್ತಾರೆ, ನೀವಿಲ್ಲದ ಸಮಯದಲ್ಲಿ ನಿನ್ನ ನೆನಪು ಅವರನ್ನು ಎಷ್ಟು ಕಾಡುತ್ತದೆ ಎಂಬುದನ್ನು ತೋರಿಸುತ್ತದೆ.

ನೀನು ನನ್ನನ್ನು ಅರ್ಥ ಮಾಡಿಕೊಂಡಿದ್ದೀಯಾ ಎಂದು ಭಾವಿಸ್ತೇನೆ : ಈ ಮಾತು ಪುರುಷರ ಬಾಯಿಂದ ಬಂದಿದೆ ಎಂದಾದ್ರೆ ಅವರು ನಿಮ್ಮನ್ನು ನಂಬುತ್ತಾರೆ ಎಂದರ್ಥ. ಇದು ನಂಬಿಕೆ ಮತ್ತು ಅನ್ಯೋನ್ಯತೆಯನ್ನು ನಿರ್ಮಿಸುತ್ತದೆ. ಅವರು ನಿಜವಾಗಿಯೂ ಕಾಳಜಿ ವಹಿಸುತ್ತಾರೆ ಎಂದು ತೋರಿಸುತ್ತದೆ.

ಆತ್ಮವಿಶ್ವಾಸ ಇರೋ ಗಂಡಸು ಯಾವ ರೀತಿಯ ಜನರಿಂದ ದೂರ ಇರ್ತಾನೆ ಗೊತ್ತಾ?

ನಿನ್ನ ಅಪ್ಪುಗೆ ಬೇಕು : ಪ್ರೀತಿಯನ್ನು ವ್ಯಕ್ತಪಡಿಸುವ ಇನ್ನೊಂದು ಮಾರ್ಗ ಅಪ್ಪುಗೆ. ಪ್ರೀತಿಯಿಲ್ಲದ ಜಾಗದಲ್ಲಿ ಪುರುಷರು ಅಪ್ಪುಗೆ ಬಯಸುವುದಿಲ್ಲ. ನಿಮ್ಮಿಂದ ಅಪ್ಪಿಗೆ ಬಯಸಿದ್ದಾರೆಂದ್ರೆ ನಿಮಗೆ ಇನ್ನಷ್ಟು ಹತ್ತಿರವಾಗಲು ಅವರು ಬಯಸಿದ್ದಾರೆ. 

ನಿನ್ನ ಈ ದಿನ ಹೇಗಿತ್ತು? : ಈ ಪ್ರಶ್ನೆಯನ್ನು ಪುರುಷರು ಕೇಳೋದು ಅಪರೂಪ. ಅವರಿಗೆ ಕೇಳುವ ತಾಳ್ಮೆ ಇರೋದಿಲ್ಲ. ಆದ್ರೆ ಒಬ್ಬ ವ್ಯಕ್ತಿ ನಿಮ್ಮ ದಿನದ ಬಗ್ಗೆ ಕೇಳ್ತಿದ್ದಾನೆ ಅಂದ್ರೆ ಆತ ಕಾಳಜಿವಹಿಸ್ತಿದ್ದಾನೆ ಎಂದೇ ಅರ್ಥ.

ನನ್ನ ನಗುವಿಗೆ ನೀನು ಕಾರಣ : ನಿಮ್ಮ ಸಂಗಾತಿ ಈ ಮಾತನ್ನು ಹೇಳಿದ್ರೆ ನೀವು ಆತನನ್ನು ಗೆದ್ದಿದ್ದೀರಿ ಎಂದೇ ಅರ್ಥ. ನೀವಿದ್ದಾಗ ಅವರಿಗೆ ಸಂತೋಷ ಸಿಗುತ್ತದೆ. 

ಸುಂದರವಾಗಿ ಕಾಣ್ತಿರಿ : ಸಂಗಾತಿ ನಿಮ್ಮನ್ನು ಹೊಗಳಿದಾಗ ಅದರ ಬೇರೆ ಅರ್ಥ ಹುಡುಕಲು ಹೋಗ್ಬೇಡಿ. ಅಭಿನಂದನೆ ಸ್ವೀಕರಿಸಿ. 

ನಿನ್ನ ಈ ವಿಷ್ಯ ಗಮನಿಸಿದ್ದೇನೆ : ಮಾತಿನ ಮಧ್ಯೆ ನಿನ್ನ ಈ ವಿಷ್ಯ ಗಮನಿಸಿದ್ದೇನೆ, ಆ ವಿಷ್ಯ ಗಮನಿಸಿದ್ದೇನೆ ಎನ್ನುತ್ತಿದ್ರೆ ಆತ ನಿಮ್ಮನ್ನು ಆಳವಾಗಿ ಪ್ರೀತಿಸ್ತಿದ್ದಾನೆ ಎಂದರ್ಥೈಸಿಕೊಳ್ಳಿ.

ಸದಾ ನಿಮ್ಮ ಮುಖದಲ್ಲಿ ನಗು ಬಯಸುವ, ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ಬೆಂಬಲಕ್ಕೆ ನಿಲ್ಲುವ, ನಿಮ್ಮ ಆಸೆ, ಗುರಿ ಈಡೇರಿಸಲು ಪ್ರೋತ್ಸಾಹ ನೀಡುವ ಸಂಗಾತಿ ನಿಮ್ಮ ಮೇಲೆ ಕಾಳಜಿವಹಿಸ್ತಾನೆ, ನಿಮ್ಮನ್ನು ಪ್ರೀತಿಸ್ತಾನೆ ಎಂದೇ ಅರ್ಥ. 
 

click me!