ತಂದೆಯ ಆತ್ಮಗೌರವ ಕಾಪಾಡದ ಪ್ರಿಯಾಂಕ್ ಖರ್ಗೆ: ರಾಜೀವ್ ಚಂದ್ರಶೇಖರ್

By Kannadaprabha NewsFirst Published Oct 26, 2024, 6:00 AM IST
Highlights

ಒಳ್ಳೆಯ ಪುತ್ರ ತಂದೆಗೆ ಅವಮಾನ ಆಗದಂತೆ, ಆತ್ಮಗೌರವ ಕಾಪಾಡಲು ಹೋರಾಡುತ್ತಾರೆ. ಆದರೆ 12ನೇ ತರಗತಿ ಅನುತ್ತೀರ್ಣರಾಗಿರುವ ಕಾಂಗ್ರೆಸ್ ವಂಶಪಾರಂಪರ್ಯದ ಕುಡಿ ಪ್ರಿಯಾಂಕ್ ಖರ್ಗೆ ಭಟ್ಟಂಗಿಯಾಗಿದ್ದಾರೆ. ಅವರ ಹಿತಾಸಕ್ತಿ ಖರ್ಗೆಗೆ ಅವಮಾನವಾದರೂ ಪರವಾಗಿಲ್ಲ, ಅವರ ಹುದ್ದೆ ದುರುಪಯೋಗ ಪಡಿಸಿಕೊಂಡು ಭೂಮಿ ಮತ್ತು ಹಣ ಲೂಟಿಯಷ್ಟೇ ಆಗಿದೆ: ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ 

ನವದೆಹಲಿ(ಅ.26):  ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗೆ ನಿಲ್ಲಿಸಿದ ಪ್ರಕರಣದಲ್ಲಿ, ತಂದೆಯ ಆತ್ಮಗೌರವ ಕಾಪಾಡುವಲ್ಲಿ ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ವಿಫಲರಾಗಿದ್ದಾರೆ ಎಂದು ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ವ್ಯಂಗ್ಯವಾಡಿದ್ದಾರೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, 'ಒಳ್ಳೆಯ ಪುತ್ರ ತಂದೆಗೆ ಅವಮಾನ ಆಗದಂತೆ, ಆತ್ಮಗೌರವ ಕಾಪಾಡಲು ಹೋರಾಡುತ್ತಾರೆ. ಆದರೆ 12ನೇ ತರಗತಿ ಅನುತ್ತೀರ್ಣರಾಗಿರುವ ಕಾಂಗ್ರೆಸ್ ವಂಶಪಾರಂಪರ್ಯದ ಕುಡಿ ಪ್ರಿಯಾಂಕ್ ಖರ್ಗೆ ಭಟ್ಟಂಗಿಯಾಗಿದ್ದಾರೆ. 

Latest Videos

ವಕ್ಫ್ ಬೋರ್ಡ್ ಜಿಪಿಸಿ ಸಭೆ ಬಹಿಷ್ಕರಿಸಿದ ವಿಪಕ್ಷಗಳ ಅಜೆಂಡಾ ಬಯಲು ಮಾಡಿದ ರಾಜೀವ್ ಚಂದ್ರಶೇಖರ್!

ಅವರ ಹಿತಾಸಕ್ತಿ ಖರ್ಗೆಗೆ ಅವಮಾನವಾದರೂ ಪರವಾಗಿಲ್ಲ, ಅವರ ಹುದ್ದೆ ದುರುಪಯೋಗ ಪಡಿಸಿಕೊಂಡು ಭೂಮಿ ಮತ್ತು ಹಣ ಲೂಟಿಯಷ್ಟೇ ಆಗಿದೆ' ಎಂದಿದ್ದಾರೆ.

click me!