ನಿಖಿಲ್ ಕಣಕ್ಕಿಳಿಸುವುದಕ್ಕಾಗಿಯೇ ಕುಮಾರಸ್ವಾಮಿ ಇಷ್ಟೆಲ್ಲ ಆಟ: ಡಿ.ಕೆ. ಸುರೇಶ್

By Kannadaprabha News  |  First Published Oct 26, 2024, 6:30 AM IST

ನಿಖಿಲ್‌ಗೆ ಟಿಕೆಟ್ ನೀಡಬೇಕಾದ ಅನಿವಾರ್ಯತೆಯನ್ನು ಕಾಂಗ್ರೆಸ್ ಸೃಷ್ಟಿ ಮಾಡಿತು ಎಂದು ಕುಮಾರಸ್ವಾಮಿ ಹೇಳುತ್ತಾರೆ. ಆದರೆ, ಅವರು ನಿಖಿಲ್‌ಗೆ ಟಿಕೆಟ್ ನೀಡಲೆಂದೇ ಇಷ್ಟೆಲ್ಲ ಆಟವಾಡಿದರು. 40 ವರ್ಷಗಳಿಂದ ಕುಮಾರಸ್ವಾಮಿ ತಂತ್ರಗಾರಿಕೆ ಮಾಡಿಕೊಂಡು ಬಂದಿದ್ದು, ನಿಖಿಲ್‌ಗೆ ಟಿಕೆಟ್ ನೀಡಿರುವುದು ಅದರ ಮುಂದುವರಿದ ಭಾಗ: ಮಾಜಿ ಸಂಸದ ಡಿ.ಕೆ. ಸುರೇಶ್ 


ಬೆಂಗಳೂರು(ಅ.26):  ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್‌ಗೆ ಟಿಕೆಟ್ ಸಿಗುವಂತೆ ಮಾಡುವುದಕ್ಕಾಗಿಯೇ ಎಚ್.ಡಿ.ಕುಮಾರಸ್ವಾಮಿ ಇಷ್ಟೆಲ್ಲ ಆಟವಾಡಿದರು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆರೋಪಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್‌ಗೆ ಟಿಕೆಟ್ ನೀಡಬೇಕಾದ ಅನಿವಾರ್ಯತೆಯನ್ನು ಕಾಂಗ್ರೆಸ್ ಸೃಷ್ಟಿ ಮಾಡಿತು ಎಂದು ಕುಮಾರಸ್ವಾಮಿ ಹೇಳುತ್ತಾರೆ. ಆದರೆ, ಅವರು ನಿಖಿಲ್‌ಗೆ ಟಿಕೆಟ್ ನೀಡಲೆಂದೇ ಇಷ್ಟೆಲ್ಲ ಆಟವಾಡಿದರು. 40 ವರ್ಷಗಳಿಂದ ಕುಮಾರಸ್ವಾಮಿ ತಂತ್ರಗಾರಿಕೆ ಮಾಡಿಕೊಂಡು ಬಂದಿದ್ದು, ನಿಖಿಲ್‌ಗೆ ಟಿಕೆಟ್ ನೀಡಿರುವುದು ಅದರ ಮುಂದುವರಿದ ಭಾಗ ಎಂದರು. 

Tap to resize

Latest Videos

undefined

ಯುವಶಕ್ತಿಯೇ ಕಾಂಗ್ರೆಸ್ ಪಕ್ಷದ ಆಸ್ತಿ: ಮಾಜಿ ಸಂಸದ ಡಿ.ಕೆ.ಸುರೇಶ್

ನಿಖಿಲ್ ಚನ್ನಪಟ್ಟಣಕ್ಕೆ ಅಭ್ಯರ್ಥಿಯಾಗುತ್ತಾರೆ ಎನ್ನುವ ಸತ್ಯ ಎಲ್ಲರಿಗೂ ತಿಳಿದಿತ್ತು. ಆದರೆ, ಬಲವಂತಾಗಿ ಅವರನ್ನು ಚುನಾವಣೆಗೆ ನಿಲ್ಲಿಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಅದೆಲ್ಲವೂ ಸುಳ್ಳು. ಕುಮಾರಸ್ವಾಮಿ ಅವರಿಗೆ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಪ್ರೀತಿ ಎಷ್ಟಿದೆ ಎಂಬುದು ಈಗ ತಿಳಿಯಿತು ಎಂದರು.

click me!