ಸಿ.ಟಿ ರವಿ ವಿರುದ್ದ ಲಿಂಗಾಯತ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ದೊಡ್ಡ ತಂತ್ರ!

By Suvarna NewsFirst Published Mar 20, 2023, 7:07 PM IST
Highlights

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಖಾಡ ಕಾವು ಜೋರಾಗಿದೆ. ಕ್ಷೇತ್ರದಲ್ಲಿ ಬಹು ಚರ್ಚೆಗೆ  ಗ್ರಾಸವಾಗಿರುವ ಲಿಂಗಾಯತ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾಗಿರುವ ಕಾಂಗ್ರೆಸ್. ಕಾಂಗ್ರೆಸ್ ಸಗೀರ್ ಅಹ್ಮದ್ ಮೂರು ಭಾರೀ, ಬಿಜೆಪಿಯಿಂದ ಸಿ.ಟಿ ರವಿ 4 ಭಾರೀ ಆಯ್ಕೆ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಚಿಕ್ಕಮಗಳೂರು (ಮಾ.20): ಚುನಾವಣಾ ರಾಜಕೀಯದ ಇತಿಹಾಸದಲ್ಲಿ ಈ ವರೆಗೆ ಜಾತೀಯತೆಗೆ ಮಣೆ ಹಾಕದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪ್ರಯೋಗಿಸುತ್ತಿರುವ ಲಿಂಗಾಯತ ಅಸ್ತ್ರಕ್ಕೆ ಫಲ ಸಿಕ್ಕಿತೆ ಎನ್ನುವುದು ಬಹು ಚರ್ಚಿತ ವಿಷಯವಾಗಿದೆ. 1972ರಿಂದ 2018ರ ವರೆಗಿನ ಚುನಾವಣಾ ಫಲಿತಾಂಶಗಳನ್ನು ಗಮನಿಸಿದರೆ ಮತದಾರ ಯಾವ ಚುನಾವಣೆಯಲ್ಲೂ ಜಾತಿಗೆ ಮಹತ್ವ ಕೊಟ್ಟಿದ್ದು ಕಂಡು ಬರುವುದಿಲ್ಲ.

Latest Videos

ಮುಸ್ಲಿಂ ,ಒಕ್ಕಲಿಗ ಅಭ್ಯರ್ಥಿ ಆಯ್ಕೆ ಆಗಿರುವ ಕ್ಷೇತ್ರ:
ಪರಿಶಿಷ್ಠರ ನಂತರ ಅತೀ ಹೆಚ್ಚು ಮತಗಳನ್ನು ಹೊಂದಿರುವ ಸಮುದಾಯದ ಹುರಿಯಾಳುಗಳನ್ನು ಪ್ರತಿ ಚುನಾವಣೆಯಲ್ಲೂ ಪಕ್ಕಕ್ಕಿಟ್ಟಿರುವ ಮತದಾರ ಅತೀ ಕಡಿಮೆ ಮತಗಳನ್ನು ಹೊಂದಿರುವ ಮುಸ್ಲಿಮರು ಹಾಗೂ ಒಕ್ಕಲಿಗ ಅಭ್ಯರ್ಥಿಗಳನ್ನೇ ಕೈಹಿಡಿಯುತ್ತಾ ಬಂದಿರುವುದು ಗಮನಾರ್ಹ.ಜಾತಿ ಲೆಕ್ಕಾಚಾರದಲ್ಲೇ ಉಮೇದುವಾರರನ್ನು ಕಣಕ್ಕಿಸುವ ಸಂಪ್ರದಾಯವೂ ಯಾವ ಪಕ್ಷದಲ್ಲೂ ಇರಲಿಲ್ಲ ಎನ್ನುವುದನ್ನು ಸಹ ಚುನಾವಣಾ ಫಲಿತಾಂಶಗಳೇ ಸ್ಪಷ್ಟಪಡಿಸುತ್ತವೆ.

ಸಿ.ಟಿ.ರವಿ ವಿರುದ್ಧ ಲಿಂಗಾಯತ ಅಸ್ತ್ರ : 
ಕಾಂಗ್ರೆಸ್ ಪಕ್ಷ ಸಹ ನಾಲ್ಕೈದು ಚುನಾವಣೆಯಲ್ಲಿ ಇದರ ಲಾಭ ಪಡೆದೇ ಆಯ್ಕೆಯಾಗಿದೆ. ಆದರೆ 2004 ರಿಂದ ಬಿಜೆಪಿ ಇಲ್ಲಿ ಸತತವಾಗಿ ಗೆಲುವು ಸಾಧಿಸುತ್ತಿರುವುದರಿಂದ ಕಂಗೆಟ್ಟಂತೆ ಕಾಣುತ್ತಿರುವ ಕಾಂಗ್ರೆಸ್ ಪಕ್ಷ ಈ ಬಾರಿ ಸಿ.ಟಿ.ರವಿ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗಿಸಲು ಮುಂದಾಗುವ ಮೂಲಕ ಕ್ಷೇತ್ರದ ಜಾತ್ಯತೀತ ಚುನಾವಣಾ ರಾಜಕೀಯಕ್ಕೆ ಇತೀಶ್ರೀ ಹಾಡಲು ಹೊರಟಿದೆ.ಹಾಗೆ ನೋಡಿದರೆ ಕಳೆದ ಚುನಾವಣೆಯಲ್ಲೇ ಇಂತಹದ್ದೊಂದು ಪ್ರಯೋಗ ಜೆಡಿಎಸ್ನಿಂದ ನಡೆದಿತ್ತು.

ಆದರೆ ಮತದಾರರ ಆ ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಕಾಂಗ್ರೆಸ್ ಪಕ್ಷ ಈ ಬಾರಿ ಲಿಂಗಾಯತ ಅಸ್ತ್ರವನ್ನು ಇನ್ನಷ್ಟು ಪ್ರಬಲವಾಗಿ ಪ್ರಯೋಗಿಸುವ ಪ್ರಯತ್ನಕ್ಕೆ ಕೈಹಾಕಿರುವುದು ಹಲವು ಬೆಳವಣಿಗೆಗಳಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ.ಇದರ ಭಾಗವಾಗಿಯೇ ಬಿಜೆಪಿಯ ಪ್ರಮುಖ ಲಿಂಗಾಯತ ಮುಖಂಡ ಎಚ್.ಡಿ.ತಮ್ಮಯ್ಯ ಅವರಿಗೆ ಕಾಂಗ್ರೆಸ್ ಗಾಳ ಹಾಕಿತು ಎನ್ನುವುದು ಈಗ ನಡೆಯುತ್ತಿರುವ ಚರ್ಚೆ. ಇದಕ್ಕೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಒಲವು ತೋರಿದರು ಎನ್ನುವ ಮಾತುಗಳು ಕಾಂಗ್ರೆಸ್ ಮೊಗಸಾಲೆಯಲ್ಲೇ ಕೇಳಿಬಂದಿವೆ.

2008ರಲ್ಲೂ ಕಾಂಗ್ರೆಸ್ ಲಿಂಗಾಯುತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಅಂದು ಜೆಡಿಎಸ್ ನಿಂದ ಎಸ್ ಎಲ್ ಭೋಜೇಗೌಡ, ಕಾಂಗ್ರೆಸ್ ನಿಂದ ಕೆ ಬಿ ಮಲ್ಲಿಕಾರ್ಜುನ್ ಹಾಗೂ ಬಿಜೆಪಿ ಪಕ್ಷದಿಂದ ಸಿ.ಟಿ ರವಿ ಸ್ಪರ್ಧೆ ಮಾಡಿದ್ದರು. 2008 ಫಲಿತಾಂಶ ಹೊರಬಂದಾಗ ಕಾಂಗ್ರೆಸ್ ಪಕ್ಷದ ಕೆ ಬಿ ಮಲ್ಲಿಕಾರ್ಜುನ್ ಮೂರನೇ ಸ್ಥಾನಕ್ಕೆ ಹೋಗಿದ್ದರು. ಜೆಡಿಎಸ್ ನ ಎಸ್ ಎಲ್ ಭೋಜೇಗೌಡ 2ನೇ ಸ್ಥಾನವನ್ನು ಪಡೆದು ಸಿ.ಟಿ ರವಿ ಜಯಗಳಿಸಿದರು. 

ಕಾಂಗ್ರೆಸ್ , ಜೆಡಿಎಸ್ ನಿಂದ ತಂತ್ರ:
ಕಳೆದ ಚುನಾವಣೆ ವರೆಗೆ ಕಾಂಗ್ರೆಸ್  ಹಾಗೂ ಜೆಡಿಎಸ್ ಪಕ್ಷ ಕ್ಷೇತ್ರದ ಬಯಲು ಭಾಗಕ್ಕೆ ನೀರಾವರಿ, ಕರಗಡ ಯೋಜನೆ, ಮೆಡಿಕಲ್ ಕಾಲೇಜಿನಂತಹ ಅಭಿವೃದ್ಧಿ ವಿಚಾರಗಳು ಹಾಗೂ ಭ್ರಷ್ಟಾಚಾರ, ಕಳಪೆ ಕಾಮಗಾರಿಯಂತಹ ಸಾಮಾನ್ಯ ವಿಚಾರಗಳನ್ನು ಮುಂದಿಟ್ಟುಕೊಂಡು ಜನರಬಳಿಗೆ ತೆರಳುತ್ತಿತ್ತು. ಆದರೆ ಈ ಬಾರಿ ಚುನಾವಣೆ ಹೊತ್ತಿಗೆ ಕ್ಷೇತ್ರದಾದ್ಯಂತ ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದರೂ ಮೆಡಿಕಲ್ ಕಾಲೇಜು ಮಂಜೂರಾಗಿ ಶೇ.50 ರಷ್ಟು ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಹೊಸದಾಗಿ ಮೆಡಿಕಲ್ ಕಾಲೇಜು ಮಂಜೂರಾಗಿ ತರಗತಿಗಳು ಆರಂಭವಾಗಿದೆ.

 ನಾಲ್ಕೂ ದಿಕ್ಕಿನಲ್ಲಿ ರಸ್ತೆಗಳು ಅಭಿವೃದ್ಧಿ ಹೊಂದಿವೆ. ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಆಗಿದೆ. ಇದರ ನಡುವೆ ಆಗಬೇಕಾದ ಕೆಲಸಗಳೂ ಒಂದಷ್ಟಿವೆ.ಈ ಕಾರಣಕ್ಕೆ ಕಳೆದ ಚುನಾವಣೆಗೆ ಹೋಲಿಸಿದಲ್ಲಿ ಈ ಬಾರಿ ಬಿಜೆಪಿಯನ್ನು ಪ್ರಭಲವಾಗಿ ವಿರೋಧಿಸಲು ಸೂಕ್ತ ವಸ್ತುಗಳು ಕಾಂಗ್ರೆಸ್ಗೆ ಲಭ್ಯವಿಲ್ಲ ಎನ್ನುವುದು ಕಾಂಗ್ರೆಸ್ ನಡೆಯಿಂದಲೇ ವ್ಯಕ್ತವಾಗುತ್ತಿದೆ ಎನ್ನುವುದು ಬಿಜೆಪಿ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಬಲ ಲಿಂಗಾಯತ ಸಮಾಜದ ಮತ ಬುಟ್ಟಿಗೆ ಕೈ ಹಾಕಲು ಇನ್ನಿಲ್ಲದ ತಂತ್ರ ಹೆಣೆಯುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.ಪ್ರತಿ ಬಾರಿಯಂತೆ ಕ್ಷೇತ್ರದ ಎಲ್ಲಾ ಸಮುದಾಯದ ಮತದಾರರು ಜಾತಿ, ಭೀತಿ ಮುಕ, ಅಭಿವೃದ್ಧಿ ಪರ, ಪ್ರೀತಿ ರಾಜಕಾರಣಕ್ಕೆ ಮನ್ನಣೆ ನೀಡುತ್ತಾರೆ ಎನ್ನುವುದು ನಮ್ಮ ಅಚಲ ನಂಬಿಕೆ ಎಂದು ಹೇಳುತ್ತಿದ್ದಾರೆ. ಎಲ್ಲದಕ್ಕೂ ಚುನಾವಣಾ ಫಲಿತಾಂಶವೇ ಉತ್ತರ ಹೇಳಬೇಕಿದೆ.

ಬಿಜೆಪಿ ಟಿಕೆಟ್‌ಗಾಗಿ ರಮೇಶ್ ಜಾರಕಿಹೊಳಿ-ಲಕ್ಷ್ಮಣ್ ಸವದಿ ಪೈಪೋಟಿ: ಅಥಣಿ ಧಣಿ ಯಾರು?

ಜಾತಿ ಲೆಕ್ಕಚಾರ ಹೇಗಿದೆ ?: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ದಲ್ಲಿ  ಒಟ್ಟು ಮತದಾರರು 220532 ಮತದಾನದ ಹಕ್ಕುನ್ನು ಹೊಂದಿದ್ದು ಅದರಲ್ಲಿ 109563 ಪುರುಷಮತದಾರರು, 110946 ಮಹಿಳಾಮತದಾರು ಹಕ್ಕು ಚಲಾಯಿಸಿಲಿದ್ದು 23 ಇತರೆ ಮತದಾರು ಇದ್ದಾರೆ. ಅದರಲ್ಲಿ ಲಿಂಗಾಯತ,ಕುರುಬ ಮುಸ್ಲಿಂ ಮತಗಳೇ ಅಧಿಕವಾಗಿದೆ. 
1 : ಲಿಂಗಾಯಿತರು : 45ಸಾವಿರದ291. 
2 : ಒಕ್ಕಲಿಗರು    :15ಸಾವಿರದ629. 
3 : ಮುಸ್ಲಿಂರು    :35ಸಾವಿರದ 902
4 :ಕುರುಬರು     :42ಸಾವಿರದ 212
5: ಪ.ಜಾತಿ /ಪ.ಪಂ ;68ಸಾವಿರದ 820

ಕಾಂಗ್ರೆಸ್‌ ನಿರುದ್ಯೋಗ ಭತ್ಯೆ ಗ್ಯಾರಂಟಿ ವಿರುದ್ಧ ತೇಜಸ್ವಿಸೂರ್ಯ ಕಿಡಿ: ಇದೊಂದು ವಿಪರ್ಯಾಸ

1972 ರಿಂದ 2018 ರವರೆಗೆ ಕ್ಷೇತ್ರದಿಂದ ಆಯ್ಕೆಯಾದ ಶಾಸಕರುಗಳ ವಿವರ
1972 ಇ.ಇ.ವಾಜ್-ಕಾಂಗ್ರೆಸ್(ಮುಸ್ಲಿಂ)
1978 ಸಿ.ಎ.ಚಂದ್ರೇಗೌಡ-ಕಾಂಗ್ರೆಸ್(ಒಕ್ಕಲಿಗ)
1983 ಎಚ್.ಎ.ನಾರಾಯಣಗೌಡ-ಜನತಾ ಪಕ್ಷ(ಒಕ್ಕಲಿಗ)
1985 ಐ.ಬಿ.ಶಂಕರ್-ಪಕ್ಷೇತರ(ಒಕ್ಕಲಿಗ)
1989 ಸಿ.ಆರ್.ಸಗೀರ್ ಅಹಮದ್-ಕಾಂಗ್ರೆಸ್(ಮುಸ್ಲಿಂ)
1994 ಸಿ.ಆರ್.ಸಗೀರ್ ಅಹಮದ್-ಕಾಂಗ್ರೆಸ್
1999 ಸಿ.ಆರ್.ಸಗೀರ್ ಅಹಮದ್-ಕಾಂಗ್ರೆಸ್
2004 ಸಿ.ಟಿ.ರವಿ-ಬಿಜೆಪಿ(ಒಕ್ಕಲಿಗ)
2008 ಸಿ.ಟಿ.ರವಿ-ಬಿಜೆಪಿ
2013 ಸಿ.ಟಿ.ರವಿ-ಬಿಜೆಪಿ
2018 ಸಿ.ಟಿ.ರವಿ-ಬಿಜೆಪಿ

click me!