ಇಸ್ಲಾಂ ದೇಶ ಸೌದಿ ಅರೇಬಿಯಾದಲ್ಲಿ ಭಾರತದ ಯೋಗಕ್ಕೆ ಭಾರೀ ಬೇಡಿಕೆ

By Web DeskFirst Published Oct 1, 2018, 11:22 AM IST
Highlights

ಹಿಂದು ಆಧ್ಯಾತ್ಮಿಕ ಆಚರಣೆ ಎಂದೇ ಬಿಂಬಿಸಲ್ಪಟ್ಟಿದ್ದ ಯೋಗಕ್ಕೆ ಸೌದಿ ಅರೇಬಿಯಾದಲ್ಲಿ ದಶಕಗಳಿಂದ ನಿಷೇಧ ಹೇರಲಾಗಿತ್ತು. ಆದರೆ, ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌, ಇಸ್ಲಾಂ ಅನ್ನು ಸುಧಾರಣೆಗೆ ತೆರೆದಿಟ್ಟಿದ್ದಾರೆ. 

ಜೆಡ್ಡಾ: ಇಸ್ಲಾಂ ಸಂಪ್ರದಾಯವಾದಿ ಸೌದಿ ಅರೇಬಿಯಾದಲ್ಲಿ ಇದೀಗ ಮಹಳೆಯರಿಯೂ ಯೋಗಾಭ್ಯಾಸ ನಡೆಸಲು ಅವಕಾಶ ನೀಡಲಾಗಿದೆ. ಹಿಂದು ಆಧ್ಯಾತ್ಮಿಕ ಆಚರಣೆ ಎಂದೇ ಬಿಂಬಿಸಲ್ಪಟ್ಟಿದ್ದ ಯೋಗಕ್ಕೆ ಸೌದಿ ಅರೇಬಿಯಾದಲ್ಲಿ ದಶಕಗಳಿಂದ ನಿಷೇಧ ಹೇರಲಾಗಿತ್ತು. ಆದರೆ, ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌, ಇಸ್ಲಾಂ ಅನ್ನು ಸುಧಾರಣೆಗೆ ತೆರೆದಿಟ್ಟಿದ್ದಾರೆ. 

ಕಳೆದ ನವಂಬರ್‌ನಲ್ಲಿ ಯೋಗವನ್ನು ಒಂದು ಕ್ರೀಡೆಯಾಗಿ ಪರಿಗಣಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ಯೋಗ ತರಬೇತಿಯನ್ನು ನೀಡಲು ಯತ್ನಿಸಿ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನೌಫ್‌ ಮಾರ್ವಾಯಿ ಎಂಬ ಮಹಿಳೆ ಅರಬ್‌ ಯೋಗಾ ಫೌಂಡೇಷನ್‌ ಅನ್ನು ಸ್ಥಾಪಿಸಿದ್ದು ನೂರಾರು ಮಂದಿಗೆ ತರಬೇತಿ ನೀಡುತ್ತಿದ್ದಾರೆ.

5 ವರ್ಷಗಳ ಹಿಂದೆ ಯೋಗ ತರಬೇತಿ ನೀಡುವುದು ಸೌದಿ ಅರೇಬಿಯಾದಲ್ಲಿ ಅಸಾಧ್ಯ ಎನಿಸಿತ್ತು. ಆದರೆ, ಇದೀಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.

click me!