'ಕೆಲಸಕ್ಕೆ ಬಾರದ ಮಂದಿರ ಕಟ್ಟಿದ್ದಾರೆ..' ಎಂದ ಇಂಡಿಯಾ ಮೈತ್ರಿ ಪಕ್ಷದ ಕಾರ್ಯದರ್ಶಿ, ಬಿಜೆಪಿ ತಿರುಗೇಟು!

By Santosh NaikFirst Published May 7, 2024, 4:26 PM IST
Highlights


ರಾಮ ಮಂದಿರ ವಿಚಾರವಾಗಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊಫೆಸರ್ ರಾಮ್ ಗೋಪಾಲ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮ ಮಂದಿರ ನಿಷ್ಪ್ರಯೋಜಕ ಎಂದು ರಾಮ್‌ ಗೋಪಾಲ್‌ ಯಾದವ್‌ ಕರೆದಿದ್ದರು.
 

ನವದೆಹಲಿ (ಮೇ.7): ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುತ್ತಿದೆ. ಉತ್ತರ ಪ್ರದೇಶದ 10 ಲೋಕಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಇದೇ ವೇಳೆ ಇಂಡಿಯಾ ಮೈತ್ರಿಯ ಭಾಗವಾಗಿರುವ ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರು ರಾಮ ಮಂದಿರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದರ ಬೆನ್ನಲ್ಲಿಯೇ ಬಿಜೆಪಿ ಅವರ ವಿರುದ್ಧ ವಾಗ್ದಾಳಿ ನಡೆಸಿದೆ. ಕೆಲಸಕ್ಕೆ ಬಾರದ ಮಂದಿರವನ್ನು ಕಟ್ಟಲಾಗಿದೆ. ಇಂಥ ದೇವಸ್ಥಾನಗಳನ್ನೂ ಯಾರೂ ಕಟ್ಟೋದಿಲ್ಲ ಎಂದು  ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ. ಇವರ ಹೇಳಿಕೆ ಈಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇದೊಂದು ನಿಷ್ಪ್ರಯೋಜಕ  ಮಂದಿರ. ದೇವಸ್ಥಾನವನ್ನು ಹೇಗೆ ನಿರ್ಮಿಸಲಾಗಿದೆ ಅನ್ನೋದನ್ನು ನೋಡಿ. ಯಾವುದೇ ದೇವಸ್ಥಾನವನ್ನು ಹೀಗೆ ಕಟ್ಟೋದಿಲ್ಲ. ದಕ್ಷಿಣದಿಂದ ಉತ್ತರದವರೆಗೆ ಇರೋ ದೇವಸ್ಥಾನಗಳನ್ನೊಮ್ಮೆ ನೋಡಿ. ನಕ್ಷೆಯನ್ನೂ ಕೂಡ ಸರಿಯಾಗಿ ಮಾಡಿಲ್ಲ. ವಾಸ್ತುಶಾಸ್ತ್ರದ ದೃಷ್ಟಿಯಿಂದ ಇದನ್ನು ಸರಿಯಾಗಿ ಮಾಡಲಾಗಿಲ್ಲ ಎಂದು ಹೇಳಿದ್ದು, ಇವರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ರಾಮ್ ಗೋಪಾಲ್ ಯಾದವ್ ಅವರ ಹೇಳಿಕೆ ಹಿಂದೂ ವಿರೋಧಿ ಮತ್ತು ರಾಮ ಭಕ್ತ ಹಿಂದೂ ಸಮಾಜವನ್ನು ಅವಮಾನಿಸಿದ್ದಾರೆ ಎಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ರಾಮ್ ಗೋಪಾಲ್ ಹೇಳಿಕೆ ಸಮಾಜವಾದಿ ಪಕ್ಷದ ಉದ್ದೇಶವನ್ನು ಬಹಿರಂಗಪಡಿಸಿದೆ ಎಂದು ಸಿಎಂ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, 'ಸ್ಮಶಾನ ನಿರ್ಮಾಣ ಮಾಡಿದ್ದು ಚೆನ್ನಾಗಿತ್ತು, ಆದರೆ ದೇವಸ್ಥಾನ ನಿರುಪಯುಕ್ತವಾಗಿದೆ. ಉತ್ತರ ಪ್ರದೇಶವು ಮುಕ್ತಾರ್ ಅನ್ಸಾರಿ, ಅಬು ಸಲೇಂ, ಅತೀಕ್ ಅಹ್ಮದ್ ಮತ್ತು ಛೋಟಾ ಶಕೀಲ್‌ ಇದ್ದಾಗ ಅವರಿಗೆ ಹೆಸರುವಾಸಿಯಾಗಿತ್ತು. ಅವರ ಕಾಲದಲ್ಲಿ ಅಪರಾಧವೇ ಹೈಲೈಟ್‌ ಆಗಿತ್ತು. ಉತ್ತರ ಪ್ರದೇಶದ ಜಿಲ್ಲೆಗಳಾದ ಗಾಜಿಯಾಬಾದ್‌, ಲಕ್ನೋ ಸೆಂಟ್ರಲ್‌, ಮಿರ್ಜಾಪುರ ಕುರಿತಾಗಿ ಎಂಥೆಂಥಾ ಫಿಲ್ಮ್‌ಗಳು ಬರ್ತಿದ್ದವು ಎಂದು ನಾವೆಲ್ಲರೂ ನೋಡಿದ್ದೇವೆ. ಆದರೆ, ಇಂದು ಅಯೋಧ್ಯೆ, ಕಾಶಿ, ಕುಶಿನಗರ, ಪ್ರಯಾಗ ಎನ್ನುವ ಹೆಸರುಗಳೊಂದಿಗೆ ಉತ್ತರ ಪ್ರದೇಶ ಫೇಮಸ್‌ ಆಗಿದೆ. ರಾಮಮಂದಿರದ ಸೂರ್ಯತಿಲಕ ವೈಜ್ಞಾನಿಕವಾಗಿರಲಿಲ್ಲವೇ? ಇದು ನಿರುಪಯುಕ್ತವಾಗಿತ್ತೇ?ದೇವಸ್ಥಾನ ಉದ್ಘಾಟನೆ ವೇಳೆ ಒಂದು ಲಕ್ಷ ಕೋಟಿ ವ್ಯವಹಾರ ನಡೆದಿದೆ. ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದ್ದು ನಿರುಪಯುಕ್ತವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಅಧಿಕಾರಕ್ಕೇರಿದರೆ ರಾಮಮಂದಿರ ತೀರ್ಪು ಬದಲಿಸುತ್ತೇನೆ, ಕಾಂಗ್ರೆಸ್ ಮಾಜಿ ನಾಯಕನಿಂದ ರಾಹುಲ್ ರಹಸ್ಯ ಮಾತು ರಿವೀಲ್!

ಇಂಡಿಯಾ ಮೈತ್ರಿ ಹಾಗೂ ಕಾಂಗ್ರೆಸ್‌ ಒಂದು ವಿಚಾರವನ್ನು ಜನರ ಮುಂದೆ ಸ್ಪಷ್ಟವಾಗಿ ಹೇಳಬೇಕು. ಅವರ ಪ್ರಕಾರ ಈ ಮಂದಿರ ನಿರುಪಯುಕ್ತವೇ? ಅಧಿಕಾರಕ್ಕೆ ಬಂದಲ್ಲಿ ರಾಮ ಮಂದಿರ ಕುರಿತಾಗಿ ಸುಪ್ರೀಂ ಕೋರ್ಟ್‌  ನೀಡಿರುವ ತೀರ್ಪನ್ನು ಬದಲಾಯಿಸಲು ಬಯಸುತ್ತದೆಯೇ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಬೇಕು. 1949ರಲ್ಲಿ ರಾಮ ಮಂದಿರಕ್ಕೆ ಲಾಕ್‌ ಹಾಕಿದಂತೆ, ಈ ಬಾರಿಯೂ ಲಾಕ್‌ಹಾಕಲು ಬಯಸುತ್ತದೆಯೇ ಎಂದು ತಿಳಿಸಬೇಕು ಎಂದು ಸುಧಾಂಶು ತ್ರಿವೇದಿ ಪ್ರಶ್ನೆ ಮಾಡಿದ್ದಾರೆ.

ಪ್ರಾಣಪ್ರತಿಷ್ಠೆ ಬಳಿಕ ಮೊದಲ ಬಾರಿಗೆ ಆಯೋಧ್ಯೆ ರಾಮ ಲಲ್ಲಾ ದರ್ಶನ ಪಡೆದ ಮೋದಿ!

click me!