ಗಾಂಧೀಜಿ 150 ನೇ ವರ್ಷಾಚರಣೆ: ರಂಗ ತರಬೇತಿ ಕಾರ್ಯಾಗಾರ

By Web DeskFirst Published Dec 10, 2018, 1:24 PM IST
Highlights

ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಅಂಗವಾಗಿ ಗಾಂಧೀಜಿ ವಿಚಾರಧಾರೆ ಹಾಗೂ ರಂಗತರಬೇತಿ ಕಾರ್ಯಾಗಾರ | ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ‘ಸಬ್ ಕೋ ಸನ್ಮತಿ ದೆ ಭಗವಾನ್’ ನಾಟಕ ಪ್ರಸ್ತುತ 
 

ಬೆಂಗಳೂರು (ಡಿ. 10): ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕರ್ನಾಟಕ ವಾರ್ತಾ ಕೇಂದ್ರದಲ್ಲಿ ‘ಗಾಂಧೀಜಿ ವಿಚಾರಧಾರೆ ಹಾಗೂ ರಂಗತರಬೇತಿ ಕಾರ್ಯಾಗಾರ’ ಹಮ್ಮಿಕೊಳ್ಳಲಾಗಿತ್ತು. 

ಇಲ್ಲಿದೆ ಗಾಂಧೀಜಿ ದೇವಾಲಯ, ಮಹಾತ್ಮನ ಮಾತಿಗೆ ಕೋಣ ಬಲಿ ಬಂದ್

ಈ ಕಾರ್ಯಾಗಾರವನ್ನು ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಾಗೂ ಗುಜರಾತ್ ನ ವಿಶ್ವವಿಖ್ಯಾತ ಸ್ಟ್ಯಾಚು ಆಫ್ ಲಿಬರ್ಟಿ ಶಿಲ್ಪಕಾರರಾದ ರಾಮ ವಿ. ಸುತಾರ್ ಉದ್ಘಾಟಿಸಿದರು.  

ಉಡುಪಿಗೆ ಬಂದಿದ್ದ ಗಾಂಧೀಜಿ ಕೃಷ್ಣಮಠಕ್ಕೆ ಹೋಗಿರಲಿಲ್ಲ !

ಈ ವೇಳೆ ನವದೆಹಲಿಯ ಕರ್ನಾಟಕ ಭವನದ  ನಿವಾಸಿ ಆಯುಕ್ತರಾದ ನಿಲಯ್ ಮಿತಾಶ್, ಕರ್ನಾಟಕ ವಾರ್ತಾ ಕೇಂದ್ರದ ವಾರ್ತಾಧಿಕಾರಿ ಡಾ.ಮೈಸೂರು ಗಿರೀಶ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಕೃಷ್ಣ ಭಟ್, ನವದೆಹಲಿಯ ಗಾಂಧೀ ಪೀಸ್ ಫೌಂಡೇಶನ್ ಸಂಯೋಜಕರಾದ ರೂಪಲ್ ಪ್ರಭಾಕರ್, ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜ್  ಉಪಸ್ಥಿತರಿದ್ದರು. 

ರಾಜ್ಯದಲ್ಲಿದೆ ರಾಷ್ಟ್ರಪಿತನ ರಾಜ್ ಘಾಟ್

ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ‘ಸಬ್ ಕೋ ಸನ್ಮತಿ ದೆ ಭಗವಾನ್’ ನಾಟಕವನ್ನು ಪ್ರಸ್ತುತಪಡಿಸಿದರು.

click me!