ವೈರಲ್ ಚೆಕ್: ಬಂಡೀಪುರ ಕಾಡ್ಗಿಚ್ಚಿನಲ್ಲಿ ಪ್ರಾಣಿಗಳ ಭಸ್ಮ?

By Web DeskFirst Published Feb 26, 2019, 11:00 AM IST
Highlights

ಬಂಡೀಪುರ ಕಾಡ್ಗಿಚ್ಚಿಗೆ ಇಡೀ ಕಾಡು ಭಸ್ಮ | ವಿವಿಧ ಪ್ರಭೇದದ ಪ್ರಾಣಿ ಸಂಕುಲ ಸುಟ್ಟು ಭಸ್ಮವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಅಸಲಿಯತ್ತು? ಈ ಸುದ್ದಿ ಓದಿ. 

ಚಾಮರಾಜನಗರ (ಫೆ. 26): ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚಿಗೆ ಸಿಲುಕಿ ಅಲ್ಲಿನ ಅನೇಕ ಜೀವರಾಶಿಗಳು ಮೃತಪಟ್ಟಿವೆ ಎಂಬ ಸುದ್ದಿ ವಾಟ್ಸಾ ಪ್‌ನಲ್ಲಿ ಹರಿದಾಡುತ್ತಿದೆ. ಬಂಡೀಪುರ ದ ಚಿತ್ರಗಳು ಎಂದು ಸುಟ್ಟು ಕರಕಲಾದ ಹಾವು, ಮೊಲ,
ಒರಂಗುಟವ್ ಮತ್ತು ಕಾಡು ಕುರಿಗಳ ಚಿತ್ರವಿರುವ 4  ಫೋಟೋಗಳು ಬಾರೀ ವೈರಲ್ ಆಗುತ್ತಿವೆ.

ಆದರೆ ಅವು ಬಂಡೀ ಪುರದ ಕಾಡ್ಗಿಚ್ಚಿನಲ್ಲಿ  ಮೃತಪಟ್ಟ ಪ್ರಾಣಿಗಳ ಫೋಟೋಗಳಲ್ಲ. ಬದಲಾಗಿ ಜಗತ್ತಿನ ವಿವಿಧೆಡೆಯ ಕಾಳ್ಗಿಚ್ಚಿನ ಫೋಟೋ ಗಳೆಂದು ‘ದಿ ನ್ಯೂ ಸ್ ಮಿನಿಟ್’ ಸುದ್ದಿ ಸಂಸ್ಥೆ ಪತ್ತೆ ಹಚ್ಚಿದೆ. 

ಈ ಪ್ರಾಣಿಗಳು ಬಂಡೀಪುರ ಕಾಡ್ಗಿಚ್ಚಿನಲ್ಲಿ ಮೃತಪಟ್ಟ ಪ್ರಾಣಿಗಳಲ್ಲ ಎಂದು ತಿಳಿದು ಬಂದಿದೆ. ಕರ್ನಾಟಕ ಅರಣ್ಯ ಇಲಾಖೆಯು ಇದಕ್ಕೆ ಸ್ಪಷ್ಟೀಕರಣ ನೀಡಿದೆ. 

 

No wild animal death is reported so far in forest fire at BNP. News and photographs of charred animals circulated in the social media and other media are far from truth. No dead animals are seen so far during fire fighting operations.

— Karnataka Forest Department (@aranya_kfd)

- ವೈರಲ್ ಚೆಕ್ 

click me!