ಯುವತಿಯರ ಶಾರ್ಟ್ ಡ್ರೆಸ್ ಕಂಡು ಕೆಂಡಾ ಮಂಡಲವಾದ ಮಹಿಳೆ, ವಿಡಿಯೋ ವೈರಲ್

By Web DeskFirst Published May 1, 2019, 6:27 PM IST
Highlights

ಶಾಪಿಂಗ್ ಮಾಲ್ ವೊಂದರಲ್ಲಿ ಈ ಮಹಿಳೆ  ಹೇಳಿದ್ದ ಮಾತುಗಳು  ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೆಣ್ಣು ಮಕ್ಕಳು ಶಾರ್ಟ್ ಡ್ರೆಸ್ ಧರಿಸುವುದೇ ರೇಪ್ ಗೆ ಮೂಲ ಕಾರಣ ಎಂಬ ರೀತಿಯಲ್ಲಿ ಮಾತನಾಡಿದ ಮಧ್ಯ ವಯಸ್ಕ ಮಹಿಳಯನ್ನು ಹೆಣ್ಣು ಮಕ್ಕಳೆ ಬೆನ್ನು ಬಿದ್ದು ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.

ನವದೆಹಲಿ[ಏ. 01] ಹೆಣ್ಣು ಮಕ್ಕಳ ಮೇಲೆ ಅತ್ಯಚಾರ ನಡೆಯಲು ಕಾರಣಗಳು ಏನು ಎಂಬುದನ್ನು ಚರ್ಚೆ ಮಾಡುವ ವೇದಿಕೆಯೂ  ಇದಲ್ಲ. ಆದರೆ ಶಾರ್ಟ್ ಧರಿಸುವುದು ರೇಪ್ ಗೆ ಕಾರಣವಾಗುತ್ತದೆ ಎಂದು ಹೇಳಿದ್ದ ಮಧ್ಯ ವಯಸ್ಕ ಮಹಿಳೆಯನ್ನು ಹೆಣ್ಣು ಮಕ್ಕಳೇ ತರಾಟೆಗೆ ತೆಗೆದುಕೊಂಡಿದ್ದಾರೆ.

ದೆಹಲಿ ಗುರುಗ್ರಾಮದದಲ್ಲಿ ನಡೆದ ಈ ಘಟನಾವಳಿಯನ್ನು ವಿಡಿಯೋ ಸಮೇತ ಶಿವಾನಿ ಗುಪ್ತಾ ಎನ್ನುವ ಯುವತಿ ಪೋಸ್ಟ್ ಮಾಡಿದ್ದಾಳೆ. ಅಲ್ಲದೇ ಮಹಿಳೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾಳೆ.

 

 

click me!