ಮೋದಿಗೆ ಕೈಕೊಟ್ಟ ಜಿಗರಿ ದೋಸ್ತ್: ಸಚಿವ ಸ್ಥಾನಕ್ಕೆ ರಾಜೀನಾಮೆ!

By Web DeskFirst Published Dec 10, 2018, 1:21 PM IST
Highlights

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರಕ್ಕೆ ಶಾಕ್| ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಉಪೇಂದ್ರ ಖುಷ್ವಾಹ್| ಉಪೇಂದ್ರ ಖುಷ್ಹಾವ್ ಆರ್‌ಎಲ್‌ಎಸ್‌ಪಿ ಪಕ್ಷದ ಸಂಸದ| ಎನ್‌ಡಿಎ ಮೈತ್ರಿಕೂಟದಿಂದಲೂ ಹೊರಬರುವ ಸಾಧ್ಯತೆ| ಬಿಹಾರ ಸೀಟು ಹಂಚಿಕೆ ವಿರೋಧಿಸಿ ರಾಜೀನಾಮೆ| ಪ್ರಧಾನಿ ನರೇಂದ್ರ ಮೋದಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಉಪೇಂದ್ರ ಖುಷ್ವಾಹ್

ನವದೆಹಲಿ(ಡಿ.10): ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರದ ಎನ್‌ಡಿಎ ಭಾಗವಾಗಿದ್ದ ಆರ್‌ಎಲ್‌ಎಸ್‌ಪಿ ನಾಯಕ, ಕೇಂದ್ರ ಸಚಿವ ಉಪೇಂದ್ರ ಖುಷ್ವಾಹ್ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದ ಉಪೇಂದ್ರ ಖುಷ್ವಾಹ್, ಇಂದು ತಮ್ಮ ರಾಜೀನಾಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ ಉಪೇಂದ್ರ ಎನ್‌ಡಿಎ ಮೈತ್ರಿಕೂಟದಿಂದ ಹೊರ ಬರುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

2014ರ ಲೋಕಸಭೆ ಚುನಾವಣೆ ಬಳಿಕ ಕೇಂದ್ರದ ಎನ್‌ಡಿಎ ಗೆ ಬೆಂಬಲ ನೀಡಿ ಸರ್ಕಾರದ ಭಾಗವಾಗಿದ್ದ ಉಪೇಂದ್ರ, ಇದೀಗ ಕೇಂದ್ರ ಸರ್ಕಾರದ ಕಾರ್ಯವೈಖರಿ ಖಂಡಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆದರೆ 2019ರ ಲೋಕಸಭೆ ಚುನಾವಣೆಗಾಗಿ ಬಿಹಾರದಲ್ಲಿ ನಡೆದ ಮೈತ್ರಿಪಕ್ಷದ ಸೀಟು ಹಂಚಿಕೆ ಕುರಿತು ಉಪೇಂದ್ರ ಅವರಿಗೆ ಅಸಮಾಧಾನವಿದ್ದು, ಇದೇ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ನಾಳೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬರಬೇಕಿದ್ದು, ಇದಕ್ಕೂ ಮೊದಲೇ ಕೇಂದ್ರ ಸರ್ಕಾರದ ಸಚಿವರೊಬ್ಬರು ರಾಜೀನಾಮೆ ನೀಡಿದ್ದು, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

click me!