ವಿಶ್ವಸಂಸ್ಥೆಯಿಂದ ದೀಪಾವಳಿಯ ವಿಶೇಷ ಅಂಚೆ ಚೀಟಿ ಬಿಡುಗಡೆ!

By Web DeskFirst Published Nov 8, 2018, 9:21 AM IST
Highlights

ಭಾರತದ ಬೆಳಕಿನ ಹಬ್ಬ ದೀಪಾವಳಿಗೆ ವಿಶ್ವ ಸಂಸ್ಥೆ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದೆ.  ಈ ಮೂಲಕ ಸಮಸ್ತ ಭಾರತೀಯರಿಗೆ ಶುಭಾಶಯ ಕೋರಿದೆ. ಇಲ್ಲಿದೆ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಅಂಚೆ ಚೀಟಿ ವಿವರ.

ವಿಶ್ವಸಂಸ್ಥೆ(ನ.08): ಬೆಳಕಿನ ಹಬ್ಬ ದೀಪಾವಳಿಯ ನಿಮಿತ್ತ ವಿಶ್ವಸಂಸ್ಥೆ ವಿಶೇಷ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ. ಅ.19ರಂದು ನಡೆದ ಕಾರ್ಯಕ್ರಮವೊಂದರಲ್ಲಿ ವಿಶ್ವಸಂಸ್ಥೆಯ ಅಂಚೆ ಆಡಳಿತ ವಿಭಾಗ ದೀಪಾವಳಿಯ ನಿಮಿತ್ತ ಈ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ. 

 

Happy Diwali!

During the festival of lights, which is celebrated in India & by followers of many faiths across the world, clay lamps are lit to signify the victory of good over evil. Find Diwali here: https://t.co/jetZGjk2Ar pic.twitter.com/qT6LTXkkAf

— United Nations (@UN)

 

10 ಅಂಚೆ ಚೀಟಿಗಳ ಶೀಟ್‌ಗೆ 1.15 ಡಾಲರ್‌ (83.30 ರು.) ಬೆಲೆಯ ಇದ್ದು, ದೀಪಾಲಂಕಾರ ಹಾಗೂ ಹಣತೆಯನ್ನು ಕಾಣಬಹುದಾಗಿದೆ. ಅಂಚೆ ಚೀಟಿಯ ಹಾಳೆಯ ಹಿಂಭಾಗದಲ್ಲಿ ‘ಶುಭ ದೀಪವಾಳಿ’ ಎಂಬ ಸಂದೇಶವನ್ನು ನೀಡಲಾಗಿದೆ. ದೀಪಾಳಿಯ ನಿಮಿತ್ತ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದ್ದಕ್ಕೆ ಭಾರತ ವಿಶ್ವಸಂಸ್ಥೆಗೆ ಧನ್ಯವಾದ ಅರ್ಪಿಸಿದೆ.

click me!