
ಮಾನ್ವಿ(ಏ.24): ಕೇಂದ್ರ ಸರಕಾರ ಉದ್ದೇಶಪೂರಕವಾಗಿ ರಾಜ್ಯಕ್ಕೆ ಪದೇ ಪದೆ ಅನ್ಯಾಯ ಮಾಡುತ್ತಿದೆ ಎಂದು ಸಣ್ಣ ನೀರವಾರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಆರೋಪಿಸಿದರು.
ಪಟ್ಟಣದ ಭಾರತ ಜೋಡೋ ಭವನದಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಬಂದಿದ್ದು ಪರಿಹಾರ ನೀಡುವಂತೆ ಕಳೆದ 7 ತಿಂಗಳ ಕೆಳಗೆ ಮನವಿ ಮಾಡಿಕೊಂಡರು, ಕೂಡ ಎನ್‌ಡಿಆರ್‌ಎಫ್ ಸಭೆ ನಡೆಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಹಾರನ್ನು ನಿಗದಿ ಮಾಡದೆ ಚುನಾವಣೆ ನೀತಿಸಂಹಿತೆ ನೆಪ ಹೇಳುತ್ತ ಬಂದಿದ್ದರಿಂದ ರಾಜ್ಯದಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿವ ನೀರಿನ ವ್ಯವಸ್ಥೆ ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕೂಡ ಮಾಡುವುದಕ್ಕೆ ಸಾಧ್ಯವಾಗಿಲ್ಲ. ರಾಜ್ಯಕ್ಕೆ ಬರಬೇಕಾದ ₹18,171 ಕೋಟಿ ಬರಪರಿಹಾರಕ್ಕಾಗಿ ರಾಜ್ಯ ಸರಕಾರ ನಿರ್ದೇಶನ ಕೋರಿ ಸುಪ್ರೀಂ ಕೋರ್ಟ ಮೋರೆ ಹೋದನಂತರ ಕೇಂದ್ರ ಸರಕಾರದ ಪರವಾಗಿ ನ್ಯಾಯವಾದಿಗಳು ಕೇಂದ್ರ ಸರಕಾರ ಬರಪರಿಹಾರ ನೀಡುವುದಕ್ಕೆ ನ್ಯಾಯಾಲಯದಲ್ಲಿ ಸಮಯವಕಾಶ ಕೇಳಿದೆ. ಚುನಾವಣೆ ಆಯೋಗ ಕೂಡ ಬರಪರಿಹಾರ ಬಿಡುಗಡೆ ಮಾಡುವುದಕ್ಕೆ ಅನುಮತಿ ನೀಡಿದ್ದರು, ಇನ್ನು ರಾಜ್ಯಕ್ಕೆ ಬರಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
ರಾಯಚೂರು: ಹನುಮಂತನಿಗೆ ಪೂಜೆ ಮಾಡುತ್ತಿರುವಾಗಲೇ ಮಿನಿ ಲಾರಿ ಗುದ್ದಿ ಮೂವರು ಹನುಮ ಮಾಲಾಧಾರಿಗಳ ಸಾವು
ಏ.26ರಂದು ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರನಾಯಕ ಹಾಗೂ ಮುಖಂಡರಿಂದ ಬೆಳಗ್ಗೆ ಕಲ್ಲೂರು ಗ್ರಾಮ ಹಾಗೂ ಮಾನ್ವಿಯಲ್ಲಿ, ಕವಿತಾಳದಲ್ಲಿ ರೋಡ್ ಶೋ ಮೂಲಕ ಮತಯಾಚನೆ, ಪೋತ್ನಾಳ್ ಹಾಗೂ ಬಗಲವಾಡದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿಸಿದರು. ಶಾಸಕ ಹಂಪಯ್ಯನಾಯಕ ಸೇರಿ ಪಕ್ಷದ ಮುಖಂಡರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.