Preserve Hindu culture : ಪೋರ್ಚುಗೀಸರಿಂದ ಧ್ವಂಸಗೊಂಡ ದೇವಾಲಯಗಳ ಮರುನಿರ್ಮಾಣ!

By Suvarna NewsFirst Published Dec 22, 2021, 6:40 PM IST
Highlights

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆ
ಪೋರ್ಚುಗೀಸ್ ಅವಧಿಯಲ್ಲಿ ಧ್ವಂಸಗೊಂಡಿದ್ದ ದೇವಾಲಯಗಳು
ಗೋವಾ ವಿಮೋಚನೆಯ 60ನೇ ವರ್ಷದಲ್ಲಿ ಈ ದೇವಾಲಯಗಳ ಮರು ನಿರ್ಮಾಣ

ಪಣಜಿ (ಡಿ.22): ಪೋರ್ಚುಗೀಸರ (Portuguese) ಆಳ್ವಿಕೆಯ ಸಮಯದಲ್ಲಿ ಗೋವಾದಲ್ಲಿ ಧ್ವಂಸಗೊಂಡಿದ್ದ ದೇವಾಲಯಗಳ ಮರು ನಿರ್ಮಾಣವೇ, ಗೋವಾ ವಿಮೋಚನೆಯ 60ನೇ ವರ್ಷದಲ್ಲಿ ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ (CM Pramod Sawant) ಹೇಳಿದ್ದಾರೆ. ಪೊಂಡಾದ (Ponda) ಮಂಗೂಶಿಯಲ್ಲಿರುವ (Mangueshi) ಐತಿಹಾಸಿಕ ಶ್ರೀ ಮಂಗೂಶಿ ದೇವಸ್ಥಾನದ ಪ್ರವಾಸೋದ್ಯಮ ಸೌಲಭ್ಯಗಳನ್ನು ನವೀಕರಣ ಮಾಡಿ ಮಾತನಾಡಿದ ಪ್ರಮೋದ್ ಸಾವಂತ್ ಪೋರ್ಚುಗೀಸ್ ಅವಧಿಯಲ್ಲಿ ಧ್ವಂಸಗೊಂಡಿದ್ದ ದೇವಾಲಯಗಳನ್ನು ಮರು ನಿರ್ಮಾಣ ಮಾಡುವುದು ತಮ್ಮ ಗುರಿ ಎಂದು ತಿಳಿಸಿದ್ದಾರೆ.

1561ರಲ್ಲಿ ಗೋವಾದ ಮೇಲೆ ಆಕ್ರಮಣ ಮಾಡಿದ್ದ ಪೋರ್ಚುಗೀಸರು, ತಮ್ಮ ಅವಧಿಯಲ್ಲಿ ಈ ರಾಜ್ಯದಲ್ಲಿದ್ದ 300ಕ್ಕೂ ಅಧಿಕ ದೇವಾಲಯಗಳನ್ನು ಧ್ವಂಸ ಮಾಡಿದ್ದರು. ಪೋರ್ಚುಗೀಸರ ಅವಧಿಯಲ್ಲಿ ನಾಶವಾಗಿದ್ದ ಕೆಲವು ದೇವಾಲಯಗಳನ್ನು ನಮ್ಮ ಪೂರ್ವಜರು ಮರು ನಿರ್ಮಾಣ ಮಾಡಿದ್ದರು. ವೆರ್ನಾದಲ್ಲಿರುವ  (Verna)ಮ್ಹಾಲ್ಸಾ ದೇವಾಲಯದಂತೆ (Mhalsa temple), ನಮ್ಮ ಸರ್ಕಾರವು ಈ ದೇವಾಲಯಗಳನ್ನು ಅಂದಗಾಣಿಸಲು ಪ್ರಯತ್ನ ಪಡುತ್ತಿದೆ. ದೇಶದಲ್ಲಿ ನಾಶವಾದ ದೇವಾಲಯಗಳ ಮರು ನಿರ್ಮಾಣಗೊಂಡ ಪಟ್ಟಿಯಲ್ಲಿ ಮ್ಹಾಲ್ಸಾ ದೇವಾಲಯವೂ ಇದು, ಇದು ಪ್ರತಿ ಗೋವಾದ ಪ್ರಜೆಗಳ ಹೆಮ್ಮೆ ಎನಿಸಿದೆ ಎಂದಿದ್ದಾರೆ. 1543ರಲ್ಲಿ ಪೋರ್ಚುಗೀಸಲು ವಶಪಡಿಸಿಕೊಂಡ, ಕುಶಸ್ಥಲಿ ಅಥವಾ ಆಧುನಿಕ ಕೋರ್ಟಾಲಿಮ್ ನಲ್ಲಿ ಶ್ರೀ ಮಂಗೂಶಿ ದೇವಸ್ಥಾನವು ತನ್ನ ಮೂಲವನ್ನು ಹೊಂದಿದೆ ಎಂದು ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

ನಮ್ಮ ಪೂರ್ವಜರು ಕುಶಸ್ಥಲಿಯಿಂದ ಮೂಲ ಮಂಗೂಶಿ ಲಿಂಗವನ್ನು ಈಗ ಇರುವ ಸ್ಥಳವಾದ ಮಂಗೂಶಿಯಲ್ಲಿ ಸ್ಥಳಾಂತರ ಮಾಡಿದ್ದರು. ಪೋರ್ಚುಗೀಸರು ನಮ್ಮ ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ದೇವಸ್ಥಾನಗಳನ್ನು ಧ್ವಂಸ ಮಾಡಿದ್ದಾರೆ. ಅವೆಲ್ಲವನ್ನೂ ಸರ್ಕಾರ ಗುರುತಿಸಲಿದೆ ಎಂದು ತಿಳಿಸಿದರು.

ಗೋವಾ ಸಿಎಂ ಬಂದ ತಕ್ಷಣ ಓಪನ್ ಆದ ಸವದತ್ತಿ ಯಲ್ಲಮ್ಮ ದೇವಾಲಯ!
ನಮ್ಮ ರಾಜ್ಯದಲ್ಲಿ ಮರು ನಿರ್ಮಾಣಗೊಳ್ಳಬೇಕಾದ ಸಾಕಷ್ಟು ದೇವಸ್ಥಾನಗಳಿವೆ. ಗೋವಾದ ವಿಮೋಚನೆಯ 60ನೇ ವರ್ಷದಲ್ಲಿ (Goa Liberation) ಪೋರ್ಚುಗೀಸರಿಂದ ಧ್ವಂಸಗೊಂಡ ದೇವಾಲಯಗಳ ಮರುನಿರ್ಮಾಣ ಕಾಮಗಾರಿಯನ್ನು ಆರಂಭಿಸಲು ಬಯಸುತ್ತೇವೆ. ಹಿಂದೂ ಸಂಸ್ಕೃತಿ ( Hindu culture) ಹಾಗೂ ಮಂದಿರ ಸಂಸ್ಕೃತಿಯನ್ನು ರಕ್ಷಣೆ ಮಾಡಿ ಎಂದು ನಿಮ್ಮೆಲ್ಲರಲ್ಲಿ ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ. ಈ ದೇವಾಲಯಗಳನ್ನು ಮರು ನಿರ್ಮಿಸಲು ಬೇಕಾದ ಶಕ್ತಿಯನ್ನು ನೀವು ನಮಗೆ ನೀಡಬೇಕು ಎಂದು ಹೇಳಿದರು. ಮಂಗಳವಾರ ದಕ್ಷಿಣ ಗೋವಾದಲ್ಲಿ ಎರಡು ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೋವಾದಲ್ಲಿ ಪಕ್ಷದ ಕಾರ್ಯಕ್ಷಮತೆಯನ್ನು ತೋರಿಸುವ ನಿಟ್ಟಿನಲ್ಲಿ 10 ವರ್ಷಗಳ ರಿಪೋರ್ಟ್ ಕಾರ್ಡ್ ಅನ್ನು ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. 

14 ವರ್ಷದ ಹೆಣ್ಮಕ್ಕಳನ್ನು ರಾತ್ರಿ ಹೊರಗೆ ಕಳಿಸೋದ್ಯಾಕೆ?: ರೇಪ್ ಬಗ್ಗೆ ಸಿಎಂ ಪ್ರತಿಕ್ರಿಯೆ
ಇದಕ್ಕೂ ಒಂದು ದಿನ ಮುನ್ನ ಮಾತನಾಡಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸ್ವಾತಂತ್ರ್ಯ ಭಾರತದಲ್ಲಿ ವಿಶ್ವ ನಾಯಕ ಎಂದು ಗುರುತಿಸಲ್ಪಟ್ಟ ಭಾರತದ ಮೊದಲ ರಾಜಕಾರಣಿ ನರೇಂದ್ರ ಮೋದಿ ಎಂದು ಗುಣಗಾನ ಮಾಡಿದ್ದರು. ಹೊಸ ಭಾರತವನ್ನು ರಚಿಸುವ ನಿಟ್ಟಿಯಲ್ಲಿ ಅವರಿಗೆ ಇರುವ ಗುರಿಗಳು ಬಹಳ ಆಸಕ್ತಿದಾಯಕವಾಗಿದೆ. ಇದೇ ಕಾರಣಕ್ಕೆ ಅವರನ್ನು ವಿಶ್ವ ನಾಯಕ ಎಂದು ಗುರುತಿಸಲಾಗಿದೆ ಎಂದಿದ್ದರು. ಅದರೊಂದಿಗೆ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ವೇಳೆ, ಭಾರತವೂ ವಿಶ್ವ ನಾಯಕನನ್ನು ಹೊಂದಿದೆ ಎನ್ನುವ ಸಂಗತಿಯೇ ಬಹಳ ಖುಷಿಕೊಡುವಂತದ್ಧಾಗಿದೆ ಎಂದಿದ್ದಾರೆ.  40 ಸದಸ್ಯರ ಗೋವಾ ವಿಧಾನಸಭೆಗೆ ಮುಂದಿನ ವರ್ಷದ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್, ಎಂಜಿಪಿ, ಎಐಟಿಸಿ ಮೈತ್ರಿಕೂಟ ಹಾಗೂ ಆಪ್ ಪೈಪೋಟಿ ನೀಡಲಿವೆ.

click me!