ತುಘಲಕ್ ಕೂಡ ನೋಟು ರದ್ದು ಮಾಡಿದ್ದ: ಸಿನ್ಹಾ

By Suvarna Web DeskFirst Published Nov 16, 2017, 12:53 PM IST
Highlights

ಮುಹಮ್ಮದ್ ಬಿನ್ ತುಘಲಕ್ 700 ವರ್ಷಗಳ ಹಿಂದೆಯೇ ನೋಟ್ (ನಾಣ್ಯ) ರದ್ದು ಮಾಡಿದ್ದ ಎನ್ನುವ ಮೂಲಕ ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಹಮದಾಬಾದ್: ಮುಹಮ್ಮದ್ ಬಿನ್ ತುಘಲಕ್ 700 ವರ್ಷಗಳ ಹಿಂದೆಯೇ ನೋಟ್ (ನಾಣ್ಯ) ರದ್ದು ಮಾಡಿದ್ದ ಎನ್ನುವ ಮೂಲಕ ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಪನಗದೀಕರಣದಿಂದ ದೇಶಕ್ಕೆ 3.75 ಲಕ್ಷ ಕೋಟಿ ರು. ನಷ್ಟವಾಗಿದೆ ಎಂದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಹಲವು ದೊರೆಗಳು ತಮ್ಮದೇ ಆದ ಹೊಸ ಕರೆನ್ಸಿ ತಂದರು. ಆದರೆ, ಹಳೆಯ ನೋಟುಗಳನ್ನು ಉಳಿಸಿಕೊಂಡರು. ಆದರೆ 700 ವರ್ಷಗಳ ಹಿಂದೆ ಮುಹಮ್ಮದ್ ಬಿನ್ ತುಘಲಕ್ ಹಳೆಯ ನೋಟು ರದ್ದುಗೊಳಿಸಿ, ತನ್ನದೇ ಆದ ಹೊಸ ನೋಟು ಬಿಡುಗಡೆ ಮಾಡಿದ್ದ ಎಂದರು.

click me!