ಮುಳುಗಲಿವೆಯಾ ಭಾರತದ ಈ ನಗರಗಳು ?

By Web DeskFirst Published Dec 22, 2018, 2:01 PM IST
Highlights

ಭಾರತದ ಕರಾವಳಿ ನಗರಗಳು ದಿನದಿನಕ್ಕೂ ಕೂಡ ಮುಳುಗುತ್ತಿವೆ. ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರ ಮಟ್ಟ ಏರುತ್ತಿದ್ದು, ಕಳೆದ ಒಂದು ಶತಮಾನದಲ್ಲಿ 35 ಇಂಚಿಗೂ ಹೆಚ್ಚು ಏರಿದೆ. 

ನವದೆಹಲಿ : ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರ ಮಟ್ಟದಲ್ಲಿ ದಿನದಿನವೂ ಏರಿಕೆಯಾಗುತ್ತಿದೆ.

ಸಮುದ್ರಮಟ್ಟದಲ್ಲಿ  ಕಳೆದ 1 ಶತಮಾನದಲ್ಲಿ  34 ಇಂಚಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿದೆ ಎಂದು ಸರ್ಕಾರ ಬಿಡುಗಡೆ ಗೊಳಿಸಿದ ವರದಿಯಲ್ಲಿ ಬಹಿರಂಗವಾಗಿದೆ. 

ದೇಶದ ಪ್ರಮುಖ ಕರಾವಳಿ ನಗರಗಳಾದ ಮುಂಬೈ ಹಾಗೂ ಪಶ್ಚಿಮ ವಲಯದ ಕೆಲವು ನಗರಗಳು ಸೇರಿದಂತೆ ವಿವಿಧೆಡೆ ಸಮುದ್ರಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. 

ಹೈದ್ರಾಬಾದ್ ಮೂಲದ ಭಾರತೀಯ ರಾಷ್ಟ್ರೀಯ ಸಮುದ್ರ ಮಾಹಿತಿ ಕೇಂದ್ರ ಈ ಬಗ್ಗೆ ಅಧ್ಯಯನ ನಡೆಸಿದ ವರದಿಯ ಬಗ್ಗೆ ಲೋಕಸಭಾ ಅಧಿವೇಶನದಲ್ಲಿ ಸರ್ಕಾರ ಮಾಹಿತಿ ನೀಡಿದೆ. 

ಗುಜರಾತ್, ಕಚ್, ಕಂಬತ್, ಕೇರಳ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಮುದ್ರ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಸಮುದ್ರ ಮಟ್ಟದ ಏರಿಕೆಯು ಎಚ್ಚರಿಕೆಯ ಕರೆಗಂಟೆಯಾಗಿದೆ ಎನ್ನಲಾಗಿದೆ. 

ಸಮುದ್ರ ಮಟ್ಟದ ಏರಿಕೆಯು ಭಾರತದ ಆಹಾರ ಭದ್ರತೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನೂರಾರು ಮಿಲಿಯನ್ ಜನರು  ನದಿ ನೀರನ್ನು ಅವನಂಬಿಸಿ ಬೆಳೆ ಬೆಳಯುತ್ತಾರೆ.  ಸಮುದ್ರ ಮಟ್ಟ ಏರಿಕೆಯಿಂದ ನದಿ ನೀರಿನ ಮೇಲೆ ಮಾರಕ ಪರಿಣಾಮ ಎದುರಾಗಲಿದೆ. 

ಅಲ್ಲದೇ 2050ರ ವೇಳೆಗೆ ಭಾರತ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರಿಗೂ  ಸಮಸ್ಯೆ ಎದುರಾಗಲಿದೆ. 

click me!